Friday, 31 July 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ನಿನ್ನ ಬಳಿ ಎಲ್ಲವೂ ಇದ್ದರೂ ನಿನ್ನನ್ನು ಅರ್ಥ ಮಾಡಿಕೊಳ್ಳದವರಿಗೆ ಏನೂ ಕಾಣುವುದಿಲ್ಲ.😊

ವರಲಕ್ಷ್ಮಿ ಹಬ್ಬದ ಶುಭಾಶಯಗಳು....

Wednesday, 29 July 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಸಂಪತ್ತಿನ ಬೆಲೆಯೇ ಬೇರೆ...
ಸಂಸ್ಕಾರದ ಬೆಲೆಯೇ ಬೇರೆ...

Tuesday, 28 July 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಕನ್ನಡಿ ಎಷ್ಟು ಬಾರಿ ನಮ್ಮ ಓರೆಕೋರೆ ಪ್ರತಿಬಿಂಬಿಸಿದರೂ ನಾವು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆಯೇ ಹೊರತು ಯಾವುದೇ ರೀತಿಯ ಸಮಜಾಯಿಷಿ ಕೊಡಲು ಹೋಗುವುದಿಲ್ಲ. ಇದೇ ಧೋರಣೆ ನಮಗೆ ಮನುಷ್ಯರ ಜತೆ ಏಕೆ ಸಾಧ್ಯವಾಗುವುದಿಲ್ಲ? ಎಷ್ಟೋ ಜನ ಸ್ನೇಹಿತರು, ಹಿತೈಷಿಗಳು ನಮ್ಮ ಗುಣಸ್ವಭಾವ ಬದಲಿಸಿಕೊಳ್ಳಲು ಹೇಳುತ್ತಾರಲ್ಲ. ಆಗ ಏಕೆ ನಾವು ಇಷ್ಟೇ ನಿರ್ಲಿಪ್ತವಾಗಿ, ಸ್ವೀಕರಿಸಿ ಸರಿಪಡಿಸಿಕೊಳ್ಳುವುದಿಲ್ಲ.🤔

Monday, 27 July 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಪ್ರೇಮಿಗಳಲ್ಲಿ ಹಲವು ಥರ,
ಪ್ರೇಮಕ್ಕುಂಟು ಹಲವು ಥರ,
ದುರಂತವಿರಲಿ, ಸುಖಾಂತವಿರಲಿ,
ಪ್ರೇಮ ನಿರಂತರ.


-ಬಿ ಅರ್ ಲಕ್ಷ್ಮಣರಾವ್

Sunday, 26 July 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕಷ್ಟ ಬಂತೆದು ಭಯ ಬೀಳಬೇಡಿ.
ನಿಮ್ಮನ್ನು ಕಷ್ಟದಿಂದ‌ ಪಾರು ಮಾಡಲು ಸಾಕ್ಷಾತ್ ದೇವರು ಬರದಿದ್ದರೂ ಮನುಷ್ಯ ರೂಪದಲ್ಲಿ ದೇವರು ಬಂದೇ ಬರುತ್ತಾನೆ.

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕಲ್ಲು ಬಂಡೆ ತಂದವ ನೀನು
ಉಳಿ ಪೆಟ್ಟು ಕೊಟ್ಟವ ನೀನು
ದೇವರು ಮಾಡಿದವ ನೀನು
ದೇವರ ಹೆಸರು ಇಟ್ಟವ ನೀನು
ನನ್ನ ಬಳಿ ಬೇಡುತ್ತಿರುವವನೂ ನೀನು.

Friday, 24 July 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಬಟ್ಟೆ ಒಗೆಯುವ ಕಲ್ಲು ಹೊಳಪಾಯಿತು.
ಉಳಿ ಪೆಟ್ಟು ತಿಂದ‌ ಕಲ್ಲು ದೇವರಾಯಿತು.

Thursday, 23 July 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕಷ್ಟದಲಿ ನೀನೆನ್ನ ಕೈ ಬಿಟ್ಟೆನೆನ್ನದೆಯೆ ಭಜಿಸುವೆನು, 
ನನಗಿಲ್ಲ ಇಷ್ಟು ಕೋಪ.
 ಕೊನೆಯಿರದ ದಾರಿಯಲಿ ನಾನು ಮುಂಬರಿಯುತ್ತ
ನಿನ್ನ ನೆನೆಯುತ್ತೇನೆ ಭಕ್ತಿಯಲ್ಲಿ;
ನಿನ್ನೊಲವು ನನ್ನ ಸಂರಕ್ಷಿಸುತ ಬರುತಿಹುದು,
ನನಗೆ ನಂಬಿಕೆ ನಿನ್ನ ಶಕ್ತಿಯಲ್ಲಿ.

- ಶ್ರೀ ಕೆ ಎಸ್. ನರಸಿಂಹಸ್ವಾಮಿ.

Wednesday, 22 July 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಮೌನದ ಮಾತು ಕೇಳುವವರು ಯಾರು
ಕೋಪದ‌ ಪ್ರೀತಿ ಅರಿತವರು ಯಾರು
ಮನಸ್ಸಿನ ವೀಣೆ ಮೌನ ರಾಗವ ನುಡಿಸುತಿದೆ
ಕನಸಿನ ಏಣಿ ಭವಿಷ್ಯವ ನೆನೆದು ನಡುಗುತಿದೆ.

- ಕೃಷ್ಣ ಚೈತನ್ಯ.

Tuesday, 21 July 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಗಾಜಿನ ಚೂರು ಸುಮ್ನೆ ಬಿದ್ದಿತ್ತು, ನಾನೇ ತುಳಿದು ಗಾಯ ಮಾಡ್ಕೊಂಡಿದ್ದು....
ಗಾಜನ್ನ ಯಾಕೆ ದ್ವೇಷ ಮಾಡ್ಲಿ, ನಾನೇ ನೋಡ್ಕೊಂಡು ಹೆಜ್ಜೆ ‌ಇಡಬೇಕಿತ್ತು...

 ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ