ಹಾಗೇ ಸುಮ್ಮನೆ
Sunday, 31 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
*ಹೊಂದಿಕೊಳ್ಳುವಿಕೆ* ಜೀವನದಲ್ಲಿ ಇರಲೇ ಬೇಕು.🙃
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-122
*
🍃
ಅವನು
*
ಕವಿತೆ
*
ಗಳನ್ನು ಬರೆದುಬರೆದು
*
ಕವಿತಾ
*
ಳನ್ನೇ ಕಳೆದುಕೊಂಡ.😔🙃
Saturday, 30 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ನಿಮ್ಮೊಂದಿಗೆ ನೀವು ಪ್ರಾಮಾಣಿಕವಾಗಿರಿ.....
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-121
*
🍃
ಅವರಿಬ್ಬರೂ ಒಂದಾದರು.
ಉಳಿದವರು ಅವರಿಂದ ದೂರಾದರು.
Friday, 29 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಪ್ರತಿಯೊಂದು ಅಸ್ತ್ರಕ್ಕೂ ಪ್ರತ್ಯಾಸ್ತ್ರವಿದ್ದೇ ಇರುತ್ತದೆ; ಯಾವ ಅಸ್ತ್ರಕ್ಕೆ ಪ್ರತಿಯಾಗಿ ಯಾವ ಅಸ್ತ್ರವನ್ನು ಉಪಯೋಗಿಸಬೇಕು ಅನ್ನುವ ಜ್ಞಾನ ಅತಿ ಮುಖ್ಯ...🙃😊
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-120
*
🍃
ನನ್ನ ಕನಸುಗಳಿಗೆ ರೆಕ್ಕೆ ಬಂದು ಹಾರಿಹೋದವು.ಮತ್ತೆ ಹಿಂದಿರುಗಿ ಬರಲೇ ಇಲ್ಲ😊
Thursday, 28 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಗಂಡ - ಹೆಂಡತಿ...
ಅನ್ಯೋನ್ಯವಾಗಿದ್ದರೆ *ಜೋಡಿಪದ*
ಯಾವಾಗಲೂ ಜಗಳವಾಡುತ್ತಿದ್ದರೆ
*ವಿರುದ್ದ ಪದ* .😊
Wednesday, 27 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ನಾವು ಮಾಡುವ ಕೆಲಸದಲ್ಲಿ ಸೋಲೋ ಗೆಲುವೋ ಏನೋ ಒಂದು ಆಗುತ್ತೆ. ಆದರೆ ಕೆಲಸದಲ್ಲಿ ಆಸಕ್ತಿ ಮಾತ್ರ ಕಳೆದು ಕೊಳ್ಳಬಾರದು ಅಷ್ಟೆ.
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-118
*
🍃
ಅವಳಿಂದ ಅವನ ಜೀವನದಲ್ಲಿ ಹಿಡಿದಿದ್ದ ಗ್ರಹಣ ಬಿಟ್ಟಿತು.
Tuesday, 26 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಉದ್ದವನ್ನು ತಕ್ಕಡಿಯಲ್ಲಿ ಅಳೆಯಲು ಆಗುವುದಿಲ್ಲ ಅಂದ ಮಾತ್ರಕ್ಕೆ ತಕ್ಕಡಿ ಪ್ರಯೋಜನವಿಲ್ಲ ಅಂತ ಅರ್ಥವಲ್ಲ.
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-117
*
🍃
ಅವನ ಕಬ್ಬಿಣದಂತ ಹೃದಯ ಅವಳಿಗಾಗಿ ಕಾದು ತುಕ್ಕು ಹಿಡಿದಿತ್ತು.
Monday, 25 May 2020
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-116
*
🍃
ಅವನ ಹೃದಯ ಕಬ್ಬಿಣ, ಆದರೆ ಅವಳು ಅಯಸ್ಕಾಂತ.😊
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಕಾಲು ಎಳೆಯುವವರ ಮಧ್ಯೆ ಕೈ ಹಿಡಿಯುವವರು ಇದ್ದೇ ಇರ್ತಾರೆ.😊
Sunday, 24 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ತಪ್ಪಾಗಿ ಯೋಚಿಸುವುದೇ ಜೀವನದ ಸಮಸ್ಯೆ.
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-115
*
🍃
ಅವನ ಬಾಳಿನ ಕತೆ, ಕವಿತೆ, ಕಾದಂಬರಿ ಎಲ್ಲಾ ಅವಳೇ ಆದಳು.
Saturday, 23 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಅರಿತು, ತಿದ್ದಿಕೊಂಡರೆ ನಮ್ಮ ದೌರ್ಬಲ್ಯ,
ಹೆಚ್ಚಾಗುವುದು ನಮ್ಮ ಮೌಲ್ಯ.
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-114
*
🍃
ಪ್ರೀತಿ ಅನ್ನೋದು ಅಕಾಲದಲ್ಲಿನ ಮಳೆ.
Friday, 22 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ನನ್ನನ್ನು ನಾನು ನನ್ನಂತೆ ಒಪ್ಪಿಕೊಳ್ಳದೇ, ಪ್ರೀತಿಸದೇ, ಬೇರೆಯವರು ನನ್ನನ್ನು ಇಷ್ಟಪಡಲಿ ಎಂದು ಆಶಿಸುವುದು ತಪ್ಪು.
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-113
*
🍃
ಪ್ರೀತಿ ಯನ್ನು Prove ಮಾಡಬೇಕಂತೆ😊.
Thursday, 21 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಟೀಕೆಗಳು ಎಷ್ಟು ವಿಕೃತವೋ, ಅಷ್ಟೇ ಸೃಜನಾತ್ಮಕ.
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-112
*
🍃
ಅವರಿಬ್ಬರ ಕನಸು ನಕ್ಷತ್ರಗಳಂತೆ. ರಾತ್ರಿ ಮಾತ್ರ ಕಾಣುತ್ತಿದ್ದವು.
Wednesday, 20 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಈಗ ಜಗತ್ತೆಲ್ಲಾ ಲೆಕ್ಕಮಯ.
ಶಂಕಿತರ ಲೆಕ್ಕ.😟
ಸೋಂಕಿತರ ಲೆಕ್ಕ.😷
ಅಸು ನೀಗಿದವರ ಲೆಕ್ಕ.😔
🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-111*🍃
ಅವರಿಬ್ಬರು ಒಪ್ಪಿದ್ದರು. ಅವರಿಬ್ಬರ ಮನೆಯವರನ್ನೂ ಒಪ್ಪಿಸಿದ್ದರು. ಆದರೆ ಒಂದು *ಸೈಟಿ* ನಿಂದ ಎಲ್ಲರೂ ದೂರಾದರು.
Tuesday, 19 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಉಪದೇಶ ಮಾಡಬೇಡಿ, ನೀವೇನು ಹೇಳಬೇಕೆಂದಿದ್ದೀರೋ ಹಾಗೆ ಬದುಕಿ ತೋರಿಸಿ.
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-110
*
🍃
ಅವನು ತನ್ನ ಜೀವನದಲ್ಲಿ ಬಿರುಗಾಳಿ ಯಾಗುತ್ತಾನೆ ಅಂದುಕೊಂಡಿದ್ದವಳಿಗೆ ತಂಗಾಳಿಯಾದನು.
Monday, 18 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
99 ರನ್ ಹೊಡೆದ ಬ್ಯಾಟ್ಸಮನ್ ಸಹ ,ಮುಂದಿನ ಎಸೆತ ಮೈಮರೆತರೆ ವಿಕೆಟ್ ಕಳೆದುಕೊಳ್ಳ ಬೇಕಾಗುತ್ತದೆ. ಸೆಂಚುರಿಗೆ ಒಂದು ರನ್ ಕಮ್ಮಿ ಮಾಡಿದರೂ ಅದು ಸೆಂಚುರಿ ಆಗುವುದಿಲ್ಲ.
*ಲಾಕ್ಡೌನ್ ಸಡಿಲವಾಗಿದೆ...ಕೊರೋನ ಅಲ್ಲ...ನೆನಪಿರಲಿ...ಮೈಮರೆಯಬೇಡಿ....*
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-109
*
🍃
ಅವಳ
*
ಅಹಂಕಾರ
*
ಅವಳ
*
ಅಲಂಕಾರ
*
ವನ್ನು ಮುಚ್ಚಿಬಿಟ್ಟಿತ್ತು.
Sunday, 17 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಒಮ್ಮೊಮ್ಮೆ ಸಿಕ್ಕಾಪಟ್ಟೆ ಪ್ರೀತಿ ತೋರಿಸಿದವರು ಇದ್ದಕ್ಕಿದ್ದಂತೆ ತೊರೆದು ಹೋಗುತ್ತಾರೆ. ಆಗ ಏನೂ ಆಗಿಲ್ಲದಂತೆ ನಟಿಸುವ ಕಲೆ ಕಲಿಯಬೇಕು.
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-108
*
🍃
ಅವನ ಬಾಳಿನಲ್ಲಿ
*
ವಿಶೇಷ
*
ವಾಗಿದ್ದವಳು,
*
ಶೇಷ
*
ವನ್ನೂ ಉಳಿಸದೆ ಹೋದಳು.
Saturday, 16 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಜೀವನ....
ಸಂಕಲನ ಮತ್ತು ವ್ಯವಕಲನ.
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-107
*
🍃
ಅವಳೆಂದರೆ ಕವಿತೆ...
ಅರ್ಥ ಆದರೂ,ಅರ್ಥ ಆಗದು.
Friday, 15 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಬದುಕು ಕೂಡ ದಿನದ ಕೊನೆಗೆ, *ಡು ಯೂ ರಿಯಲೀ ವಾಂಟ್ ಟು ಸೇವ್ ಚೇಂಜಸ್* ಎಂದು ಕೇಳುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು.
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-106
*
🍃
ಅವರ ಸ್ನೇಹದ (ಪ್ರೇಮದ) ಕುರುಹಾಗಿ ನೆಟ್ಟ ಸಸಿ ಬೆಳೆದು ಹೆಮ್ಮರವಾಗಿದೆ. ಆದರೆ ಅವರು ಪರಸ್ಪರ ಪ್ರೀತಿ,ನಂಬಿಕೆ ಚಿವುಟಿ ಹಾಕಿದ್ದಾರೆ.
Thursday, 14 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಅವನು, ಜೀವನ ಪೂರ್ತಿ ನಿನ್ನ ಹೃದಯದಲ್ಲಿ ಕ್ವಾರಂಟೈನ್ ಆಗಲೇ ಎಂದ...
ಅವಳು ಸರಿ ಎಂದಳು..
ಅವನು ಒಳಗೆ ಹೋಗಿ ನೋಡಿದರೆ, ಆರು ಜನ ಶಂಕಿತರು, ಮೂರು ಜನ ಸೋಂಕಿತರಿದ್ದರು.😊
🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-105*🍃
ಅವಳಿಗೆ ಅವನು ತಂತಿ ಇಲ್ಲದ ವೀಣೆ.
Wednesday, 13 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಕೊರೋನಾ ಹಾಗೂ ಹೆಂಡತಿ ಇಬ್ಬರೂ ಒಂದೇ....
ಮೊದಲು ನಿಯಂತ್ರಿಸಲು ಪ್ರಯತ್ನಿಸುತ್ತೇವೆ.
ಅದು ಅಸಾಧ್ಯವೆನಿಸಿದಾಗ ಅದರೊಂದಿಗೆ ಬದುಕಲು ಕಲಿಯುತ್ತೇವೆ..
😊 *ಬದುಕು ಬಲು ಸುಲಭ*😊
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-104
*
🍃
ಇಷ್ಟದಿಂದ ಕೆಲಸ ಮಾಡುತ್ತಿದ್ದ ಅವನಿಗೆ ,ಅದೃಷ್ಟ ಎಳ್ಳಷ್ಟೂ ಇರಲಿಲ್ಲ.
Tuesday, 12 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಸಂಬಂಧಗಳನ್ನು, ಸಂದರ್ಭಗಳನ್ನು ಜಾಣ್ಮೆಯಿಂದ ನಿಭಾಯಿಸಿ.
ಲೈಫು ಖುಷಿಯಾಗಿರುತ್ತೆ.
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-103
*
🍃
ಸಮಾಜದ ಓರೆಕೋರೆಗಳನ್ನು ತಿದ್ದುತ್ತಿದ್ದ ಅವನು ಮಕ್ಕಳ ಮೇಲೆ ವಿನಾಕಾರಣ ಸಿಟ್ಟಾಗುತ್ತಿದ್ದ.
Monday, 11 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಎಲ್ಲಾ ದಿನಗಳಲ್ಲೂ ಒಳ್ಳೆಯವರಾಗಿಯೇ ಇರುವುದು ಅಪಾಯಕಾರಿ. ಒಮ್ಮೆಯಾದರೂ ನಿಜವಾದ ಕೋಪವನ್ನು ಪ್ರಕಟಿಸಬೇಕಾಗುತ್ತದೆ, ಮುಂದೆ ಆಗುವ ನೋವಿನಿಂದ ಪಾರಾಗಲು.😊
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-102
*
🍃
ಪ್ರೀತಿಯೊಂದೇ ಮಾಡಲು ತಿಳಿದವಳು ಯಾರ ಪ್ರೀತಿಗೂ ಪಾತ್ರಳಾಗಳಿಲ್ಲ.
Sunday, 10 May 2020
🍂 *ದಿನಕ್ಕೊಂದು ಸಿ ~(ಕ)~ ಹಿ ಮಾತು*🍃
ಜಗತ್ತಿನಲ್ಲಿ ಎಲ್ಲಾ ಭಾವನೆಗಳು ಬದಲಾಗಬಹುದು.ಆದರೆ ತಾಯಿ ಅನ್ನೋ ಭಾವನೆ ಯಾವತ್ತೂ ಬದಲಾಗೋಲ್ಲ.
Happy *Mother's day* to all...😊💐🙏🏻
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-101
*
🍃
ಅವನು ಮಾಡಿದಂತೆಯೇ ಅವಳು ಎಲ್ಲಾ ಮಾಡಿದಳು. ಪ್ರೀತಿಯೊಂದನ್ನು ಬಿಟ್ಟು.
Friday, 8 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಸೋಲನ್ನು ಸೋಲಿಸುವುದೇ ಗೆಲುವಿನ ಗುರಿ.
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-100
*
🍃
ಆ ಸಾಮಾನ್ಯ, ಅಸಾಮಾನ್ಯನಾದ.
Wednesday, 6 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಏಕಾಂತ ಸದಾ ಸಿಗುತ್ತದೆ.
ಅದನ್ನು ಯಾವುದಕ್ಕೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಪಥ ನಿರ್ಧರಿತವಾಗುತ್ತದೆ.
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-99
*
🍃
ಆಕಾಶದಲ್ಲಿ ಕಾಣಲೇ ಬೇಕಿದ್ದ ಚಂದ್ರ ಕಾಣೆಯಾಗಿದ್ದ. ನಕ್ಷತ್ರಗಳೂ ಮಿನುಗಲೆಂದು.
Tuesday, 5 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಹಲವರಿಗೆ...
ಮೊನ್ನೆವರೆಗೂ ಮನೆಯೇ *ಮಂತ್ರಾಲಯ* .🙏🏻
ನೆನ್ನೆಯಿಂದ ಮನೆಯೇ *ಮದ್ಯಾಲಯ* .🍺🍻
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-98
*
🍃
ಅವಳು ಬದಲಾದರೂ, ಅವಳ ನೆನಪುಗಳು ಹಾಗೇ ಉಳಿದವು.
Monday, 4 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
*ಒಂದೇ* ದಿನದಲ್ಲಿ ಗೆಲುವು ಸಿಗೋಲ್ಲ...
ಆದರೆ ಸತತ ಪರಿಶ್ರಮದಿಂದ
*ಒಂದು* ದಿನ ಗೆಲುವು ಸಿಕ್ಕೇ ಸಿಗುತ್ತೆ...
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-97
*
🍃
ಯಾವ ಕವಿಯು ಬರೆಯಲಾರ
ಒಲವಿನಿಂದ , ಕಣ್ಣೋಟದಿಂದ
ಹೃದಯದಲ್ಲಿ ನೀ ಬರೆದ ಈ ಪ್ರೇಮ ಗೀತೆಯ...
Sunday, 3 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಮನಸುಗಳ ಮಧ್ಯೆ ಸಾಮಾಜಿಕ ಅಂತರ ಬೇಡ.
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-96
*
🍃
ದುಡ್ಡು ಅವನನ್ನು ತಿನ್ನಲು ಶುರು ಮಾಡಿತು.
Saturday, 2 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಕಷ್ಟ ಎನ್ನುವುದು ಇಷ್ಟ ಯಾಕಾಗಬಾರದು?
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-95
*
🍃
*
ಆತ
*
ನಿಂದಲೇ ಈಗ ಅವಳಿಗೆ
*
ಆತಂಕ
*
.
Friday, 1 May 2020
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ತಾಳ್ಮೆ ಇದ್ದರೆ ಕೋಪ ಬರೋಲ್ಲ.
ಕೋಪ ಬಂದರೆ ತಾಳ್ಮೆ ಇರೋಲ್ಲ.
🍂
*
ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-94
*
🍃
ಅವಳು ಖುಷಿಯಾಗಿದ್ದಳು.ಆದರೆ ಅವನಲ್ಲ.
Newer Posts
Older Posts
Home
Subscribe to:
Posts (Atom)
ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ
ಎರಡನೇ ವರ್ಷ......
ಹಳೆಯ ದಿನಗಳ ನೆನಪುಗಳೊಂದಿಗೆ ಹೊಸ ನಾಳೆಗಳಿಗೆ ತೆರೆದುಕೊಳ್ಳುವ, ಸಂಭ್ರಮಿಸುವ ನಿಮ್ಮೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ಬರೆದು ಕೊಳ್ಳಲು ಮಾತ್ರ ಎರಡು ವರ...
(no title)
🍂 * ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-91 * 🍃 * ಅಸುರ * ನಾಗಿದ್ದವನು * ಸುರ * ನಾದನು.ಪರಿಸ್ಥಿತಿಗಳಿಂದ.
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
Exam ಲಿ ಎಷ್ಟೇ additional ತಗೊಂಡ್ರೂ *ಒಂದೇ* tag ಕಟ್ಟೋದು.... Life ಲಿ ಎಷ್ಟೇ ಹುಡುಗಿಯರನ್ನ ನೋಡಿದ್ರೂ , *ಒಬ್ಬಳಿಗೆ* ಮಾತ್ರ ತಾಳಿ ಕಟ್ಟೋದು....😊