Wednesday, 5 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಕಣ್ಣು ಮುಚ್ಚಿ ಕುಳಿತರೆ ಮಾತ್ರ ಅದು ಧ್ಯಾನಸ್ಥ ಸ್ಥಿತಿ ಅಲ್ಲ. ನಾವು ನಮ್ಮ ಕೆಲಸ ಕಾರ್ಯಗಳಲ್ಲಿ ತನ್ಮಯರಾಗಿ ತಲ್ಲೀನರಾಗುವುದೂ ಒಂದು ಧ್ಯಾನಸ್ಥ ಸ್ಥಿತಿಯೆ.😊

Monday, 3 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ನಾವು ಒಳ್ಳೆಯದೇ ಮಾಡುತ್ತಿದ್ದರೂ ಕೆಲವರಿಗೆ ಅದು ಕೆಟ್ಟದ್ದು ಅನ್ನಿಸುತ್ತೆ.

🍂 *ದಿನಕ್ಕೊಂದು ಸಿಹಿ ಮಾತು*🍃

🍂 *ದಿನಕ್ಕೊಂದು ಸಿಹಿ ಮಾತು*🍃

*ಮಾತಿಗೆ ಕಿವಿಯಾಗುವ, ದುಃಖಕ್ಕೆ ಮರುಗುವ, ನಗುವಾಗ ನಗುವ, ಅಳುವಾಗ ಕಣ್ಣೊರೆಸುವ, ಬಿದ್ದಾಗ ಎಬ್ಬಿಸುವ, ನೋವಿನಲ್ಲಿರುವಾಗ ಬೆನ್ನು ತಟ್ಟಿ ಸಮಾಧಾನಿಸುವ ಮನಸಿರುವುದು ಗೆಳೆಯರಿಗೆ ಮಾತ್ರ*.

 *ಇಂತಹ ಗೆಳೆಯರನ್ನು ಪಡೆದಿರುವ ನಾನೇ ಧನ್ಯ....😊 ಎಲ್ಲರಿಗೂ ಗೆಳೆಯರ ದಿನದ ಶುಭಾಶಯಗಳು* 💐💐🙏🏻😊😊🙏🏻🙏🏻🙏🏻

Saturday, 1 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಎಲ್ಲವೂ ನಾವು ಅಂದು ಕೊಂಡಂತೆ ನಡೆಯುತ್ತಿಲ್ಲ ಎಂದರೆ, ನಾವು ಅಂದುಕೊಂಡ ದಾರಿಯಲ್ಲಿ ಸಾಗುತ್ತಿಲ್ಲ ಅಂತ ಅರ್ಥ.

Friday, 31 July 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ನಿನ್ನ ಬಳಿ ಎಲ್ಲವೂ ಇದ್ದರೂ ನಿನ್ನನ್ನು ಅರ್ಥ ಮಾಡಿಕೊಳ್ಳದವರಿಗೆ ಏನೂ ಕಾಣುವುದಿಲ್ಲ.😊

ವರಲಕ್ಷ್ಮಿ ಹಬ್ಬದ ಶುಭಾಶಯಗಳು....

Wednesday, 29 July 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಸಂಪತ್ತಿನ ಬೆಲೆಯೇ ಬೇರೆ...
ಸಂಸ್ಕಾರದ ಬೆಲೆಯೇ ಬೇರೆ...

Tuesday, 28 July 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಕನ್ನಡಿ ಎಷ್ಟು ಬಾರಿ ನಮ್ಮ ಓರೆಕೋರೆ ಪ್ರತಿಬಿಂಬಿಸಿದರೂ ನಾವು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆಯೇ ಹೊರತು ಯಾವುದೇ ರೀತಿಯ ಸಮಜಾಯಿಷಿ ಕೊಡಲು ಹೋಗುವುದಿಲ್ಲ. ಇದೇ ಧೋರಣೆ ನಮಗೆ ಮನುಷ್ಯರ ಜತೆ ಏಕೆ ಸಾಧ್ಯವಾಗುವುದಿಲ್ಲ? ಎಷ್ಟೋ ಜನ ಸ್ನೇಹಿತರು, ಹಿತೈಷಿಗಳು ನಮ್ಮ ಗುಣಸ್ವಭಾವ ಬದಲಿಸಿಕೊಳ್ಳಲು ಹೇಳುತ್ತಾರಲ್ಲ. ಆಗ ಏಕೆ ನಾವು ಇಷ್ಟೇ ನಿರ್ಲಿಪ್ತವಾಗಿ, ಸ್ವೀಕರಿಸಿ ಸರಿಪಡಿಸಿಕೊಳ್ಳುವುದಿಲ್ಲ.🤔

 ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ