ಗಣಿತವೆಂದರೆ
ಕೂಡು, ಕಳೆ ,
ಗುಣಿಸು, ಭಾಗಿಸು ಎಂದಲ್ಲ...
ಗಣಿತವೆಂದರೆ
ತಿಳುವಳಿಕೆ ಎಂದರ್ಥ....
ಗಣಿತವೆಂದರೆ
ಕಬ್ಬಿಣದ ಕಡಲೆಯಲ್ಲ....
ಗಣಿತವದು
ಬೆಣ್ಣೆಯಷ್ಟೇ ಮೃದು...
ಗಣಿತವೆಂದರೆ
ಕೂಡು, ಕಳೆ ,
ಗುಣಿಸು, ಭಾಗಿಸು ಎಂದಲ್ಲ...
ಗಣಿತವೆಂದರೆ
ತಿಳುವಳಿಕೆ ಎಂದರ್ಥ....
ಗಣಿತವೆಂದರೆ
ಕಬ್ಬಿಣದ ಕಡಲೆಯಲ್ಲ....
ಗಣಿತವದು
ಬೆಣ್ಣೆಯಷ್ಟೇ ಮೃದು...
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಬೇಡ ಎನಿಸಿದಾಗಲೆಲ್ಲ
ಬಿಚ್ಚಿಡುವುದಕ್ಕೆ
ಬದುಕು ಶೂಗಳಲ್ಲ !
ಪ್ರೀತಿಯ ಕೂಡಿಸಿ
ಸಂದೇಹ ಕಳೆದು
ನಂಬಿಕೆ ಗುಣಿಸಿ
ಅಹಂ ಭಾಗಿಸಿದಾಗ
ಬಂದ ಉತ್ತರವೇ
ಜೀವನ.
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಕಾಣದಾ ಅಣುವೊಂದು ಭುವಿಯಲ್ಲಿ ಒಂದಾಗಿ
ಸಸಿಯಾಗಿ ಗಿಡವಾಗಿ ಹಿರಿದಾದ ಮರವಾಗಿ
ಹೂಬಿಟ್ಟು ಫಲವಿತ್ತು ನೆಳಲಿತ್ತು ಸಲಹುತಿವೆ
ನೆಳಲಿತ್ತು ಸಲಹುತಿವೆ ಬಿಸಿಗೆ ತಾವ್ ಎದುರಾಗಿ😊
ಬದುಕೆಂಬ ಗಣಿತ
ಬದುಕೆಂದರೆ ಇಲ್ಲಿ...
ಅನುದಿನ.. ಅನುಕ್ಷಣ..
ಅನುಭವದ ಸಂಕಲನ
ಆಯಸ್ಸಿನ ವ್ಯವಕಲನ
ಅರಿವಿನ ಗುಣಾಕಾರ
ಕಾಲದ ಭಾಗಾಕಾರ
ಊಹಿಸಲಾಗದ ನೋವು
ನಲಿವುಗಳ ಅಂಕಗಣಿತ
ಅರ್ಥವಾಗದ ಅದೃಷ್ಟ
ದುರದೃಷ್ಟಗಳ ಬೀಜಗಣಿತ
ತಿಳಿಯಲಾಗದ ಹಣೆಬರಹ
ಅಂಗೈಗೆರೆಗಳ ರೇಖಾಗಣಿತ
ನಿತ್ಯ ಅನಿರೀಕ್ಷಿತ ಆಕಸ್ಮಿಕ
ಅತಿವಿಸ್ಮಯಗಳ ಅಗಣಿತ
ನಮಗೆಂದೂ ಬಿಡಿಸಲಾಗದ
ಅನೂಹ್ಯ ಸಮೀಕರಣ
ವಿಧಾತನ ಈ ಜೀವಗಣಿತ
ಅವನಿಗಷ್ಟೇ ಚಿರಪರಿಚಿತ😊
(ಕೃಪೆ- ಅಂತರ್ಜಾಲ)
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ತಿರುವುಗಳಿರದ ದಾರಿಯಲಿ ಬೇಸರವಾಗುವುದು ಪಯಣ..
ತಿರುವುಗಳಿರದ ಜೀವನದಲಿ ರೋಚಕತೆಯಿರದು..
ಜೋಪಾನ.. 😊
ಆತ್ಮೀಯರೇ, ಬಹಳ ದಿನಗಳಿಂದ 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃....ಕಳಿಸ್ತಾ ಇದ್ದೇನೆ....ನಿಮಗೆ ಇಷ್ಟ ಆಗದೇ ಕಷ್ಟವಾದರೂ...ನೀವು ಓದದೇ ಇದ್ದರೂ ಮೆಸೇಜ್ ಮಾತ್ರ ನಿಮ್ಮ ಮೊಬೈಲ್ ಲ್ಲಿ ಬಂದು ಕುಳಿತಿರುತ್ತದೆ ..😊😊
ಹಾಗೆಯೇ ಒಂದೆರಡು ತಿಂಗಳು, 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃 ಜೊತೆಗೆ 🌱 *ಕವನ* 🔗 *(ಅ)ಗಣಿತ*❗ಎಂಬ ಶೀರ್ಷಿಕೆ ಯಡಿಯಲ್ಲಿ ನಮ್ಮ ಕನ್ನಡ ಕವಿಗಳ ಕವನ ಗಳಲ್ಲಿ ಗಣಿತ ( ಗಣಿತ ಪದಗಳು) ವನ್ನು ಉಪಯೋಗಿಸಿರುವ ಕವನಗಳನ್ನು ಕಳಿಸುವ ಒಂದು ಪ್ರಯತ್ನ ಪಟ್ಟೆ. ಇಷ್ಟ ಪಟ್ಟರೋ ಇಲ್ಲವೋ ಗೊತ್ತಿಲ್ಲ. *ಕವನ* 🔗 *(ಅ)ಗಣಿತ*❗ ಎಂದರೆ, ಕವನ ದಲ್ಲಿ ಗಣಿತ ಅಂತ...ಹಾಗೆಯೇ ಕವನ ಅಗಣಿತ ಎಂದರೆ, ಆ ಕವನದ ಅರ್ಥ ಅಗಣಿತ, ಅಂದರೆ ಕವನವನ್ನು ಅರ್ಥ ಮಾಡಿಕೊಳ್ಳುವುದು ಅವರವರ ಭಾವಕ್ಕೆ ಎನ್ನುವುದು .. ನನ್ನ ಉದ್ದೇಶವಾಗಿತ್ತು..
ಇಂದಿನಿಂದ 💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ* 💛❤️ ಎಂಬ ಶೀರ್ಷಿಕೆಯಡಿಯಲ್ಲಿ, ಕನ್ನಡ ರಾಜ್ಯೋತ್ಸವ ದ ಪ್ರಯುಕ್ತ ಗಣಿತ ಪದಗಳು ಇರುವ ಕನ್ನಡ ಕವನಗಳನ್ನು ಕಳಿಸುವ ಪ್ರಯತ್ನ. ಇದು ಈ ನವೆಂಬರ್ ತಿಂಗಳ 30 ದಿನಗಳಲ್ಲೂ ಕಳಿಸಲು ಪ್ರಯತ್ನಿಸುವೆ. ಗಣಿತ ಪದಗಳು ಇರುವ ಕನ್ನಡ ಕವನಗಳು ನಾನು ಖಂಡಿತ ಬರೆದಿರುವುದಲ್ಲ. ಅಂತರ್ಜಾಲದಲ್ಲಿ ಹಾಗೂ ಕೆಲವು ಪುಸ್ತಕದಲ್ಲಿ ಓದಿರುವುದನ್ನು ನಿಮ್ಮ ಮುಂದೆ ಇಡಲು ಪ್ರಯತ್ನ ಅಷ್ಟೇ. *ನೀವೂ ಸಹ ಗಣಿತ ಪದಗಳನ್ನು ಬಳಸಿ ಕವನ ರಚಿಸಿ ಕಳಿಸಿದರೆ ಖುಷಿಯಿಂದ ಅದನ್ನು ಬಳಸಿಕೊಳ್ಳುವೆ* .
💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧*💛❤️
ಗಣೇಶನೇ,
ಗಣಿತಪ್ರಾಜ್ಞಾಯ ನಮಃ
ಗಣಿತಾಗಮಸಾರವಿದೇ ನಮಃ
ಗಣಿತಾಯ ನಮಃ
ಗಣಿತಾಗಮಾಯ ನಮಃ..
ಗಣಗಳ ಅಧಿಪತಿ ಗಣೇಶ.
ವಿಜ್ಞಾನದ ರಾಣಿ ಗಣಿತ.
ಸಕಲ ಕಾರ್ಯ ನಿರ್ವಿಘ್ನ ಗಣೇಶ ಒಲಿದರೆ.
ಸಕಲ ಜ್ಞಾನ ಕೈವಶ ಗಣಿತ ಒಲಿದರೆ.❤️💛😊
ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ