Friday, 19 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

ಇನ್ನೊಬ್ಬನ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ , ನಮ್ಮದೇ ಹುಚ್ಚುತನ ನಮಗೆ ಕಾಣಿಸುತ್ತದೆಯೇ ? 😊😊

– ಶಿವರಾಮ ಕಾರಂತ

Thursday, 18 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಸುಖ ಹೆಚ್ಚಾದಂತೆ ಮನುಷ್ಯ ಮೈಮರೆತು‌ ಬಿಡುತ್ತಾನೆ...ಮತ್ತೆ ಅವನನ್ನು ಎಚ್ಚರಿಸಲು ದುಃಖವೇ ಬರಬೇಕು...😊😀

Wednesday, 17 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಾವು FREE ಇದ್ದೀವಿ‌ ಅಂದ ತಕ್ಷಣ ನಮಗೆ ಬೇಕಾದವರೂ FREE ಇರಲೇ ಬೇಕು ಅಂತೇನಿಲ್ಲ...😀😀😀😀

Tuesday, 16 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಸೇಡು ಎಂದರೆ ತಿರುಗಿ ಬೀಳುವುದಲ್ಲ,

ಬೆಳೆದು ನಿಲ್ಲುವುದು...

Monday, 15 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಸೋಲಿನ ಬಗ್ಗೆ ಯೋಚಿಸುವುದು ಕೂಡ ತಪ್ಪು ಎನ್ನುವ ವಾತಾವರಣದಲ್ಲಿ ಬೆಳೆದರೆ ಸೋಲನ್ನು ಅಷ್ಟು ಸುಲಭದಲ್ಲಿ ಸ್ವೀಕರಿಸಲಾಗುವುದಿಲ್ಲ....😊

Sunday, 14 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಪ್ರತಿಫಲ ಅಪೇಕ್ಷಿಸದೆ ಮಾಡಿದ ಸಹಾಯ ಖಂಡಿತಾ ವ್ಯರ್ಥವಾಗುವುದಿಲ್ಲ.ಬದಲಿಗೆ ಭವಿಷ್ಯದಲ್ಲಿ ನಿರೀಕ್ಷೆಗೂ ಮೀರಿದ ಫಲ ಕೊಡುತ್ತದೆ.😊😊😊

Thursday, 11 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಅನ್ಯೋನ್ಯ ದಾಂಪತ್ಯ ಎಂದರೆ ಅದು ಶಿವ–ಪಾರ್ವತಿಯರ ದಾಂಪತ್ಯವೇ ಹೌದು. ಶಿವನು ತನ್ನ ಶರೀರದ ಅರ್ಧಭಾಗವನ್ನೇ ತನ್ನ ಮಡದಿಗೆ ಮೀಸಲಾಗಿರಿಸಿ ಅರ್ಧನಾರೀಶ್ವರನಾದವನು; ದಾಂಪತ್ಯ ಎಂದರೆ ಗಂಡು ಹೆಚ್ಚು, ಹೆಣ್ಣು ಕಡಿಮೆ ಎಂದೋ ಅಥವಾ ಹೆಣ್ಣು ಹೆಚ್ಚು, ಗಂಡು ಕಡಿಮೆ ಎಂದೋ ಲೆಕ್ಕಾಚಾರದ ವ್ಯವಹಾರ ಅಲ್ಲ, ಅದು ಇಬ್ಬರ ಸಮಪಾಲಿನ ಸಮಬಾಳು ಎಂಬುದನ್ನು ಅರ್ಧನಾರೀಶ್ವರನ ಕಲ್ಪನೆಯಲ್ಲಿ ಕಾಣಬಹುದು.

ಶಿವನಿಗೆ ತನ್ನ ಮಡದಿಗೆ ಅರ್ಧಶರೀರವನ್ನೇ ಕೊಡುವಷ್ಟು ಪ್ರೀತಿ ಇದೆ ನಿಜ; ಹೀಗಿದ್ದರೂ ಅವನು ಪರಮವೈರಾಗ್ಯಸ್ವರೂಪಿ. ಅವನು ಕೇವಲ ಭೋಗದಲ್ಲಿಯೇ ಮುಳುಗುವವನೂ ಅಲ್ಲ ಅಥವಾ ಕೇವಲ ತ್ಯಾಗದಲ್ಲಿಯೇ ತಲ್ಲಿನನಾಗುವವನೂ ಅಲ್ಲ; ತ್ಯಾಗಭೋಗದ ಸಮನ್ವಯದ ಸಂಕೇತವೇ ಅವನು.


ಹೀಗೆ ವಿಶಿಷ್ಟ ದೇವತೆಯಾದ ಶಿವನ ಆರಾಧನೆಗೆಂದೇ ಮೀಸಲಾದ ದಿನವೇ ಶಿವರಾತ್ರಿ.


*ತಮಗೆಲ್ಲರಿಗೂ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು*🙏🏻😊💐

 ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ