🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಕೆಲವರು ತಮ್ಮ ಅಜ್ಞಾನದಿಂದ ಹಾಳಾಗುವರು, ಇನ್ನು ಕೆಲವರು ತಪ್ಪು ಕೆಲಸಗಳನ್ನು ಮಾಡಿ ಹಾಳಾಗುವರು.
ಮತ್ತೆ ಕೆಲವರು ತಾವು ಮಹಾಬುದ್ದಿವಂತರೆಂಬ ಅಹಂಕಾರದಿಂದ ಹಾಳಾಗುವರು.
ಆದರೆ ಅನೇಕ ಜನರು ಇಂಥ ಹಾಳಾದವರ ಬೆನ್ನು ಹತ್ತಿ ಹಾಳಾಗುವರು.
- ಸುಭಾಷಿತ
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಕೆಲವರು ತಮ್ಮ ಅಜ್ಞಾನದಿಂದ ಹಾಳಾಗುವರು, ಇನ್ನು ಕೆಲವರು ತಪ್ಪು ಕೆಲಸಗಳನ್ನು ಮಾಡಿ ಹಾಳಾಗುವರು.
ಮತ್ತೆ ಕೆಲವರು ತಾವು ಮಹಾಬುದ್ದಿವಂತರೆಂಬ ಅಹಂಕಾರದಿಂದ ಹಾಳಾಗುವರು.
ಆದರೆ ಅನೇಕ ಜನರು ಇಂಥ ಹಾಳಾದವರ ಬೆನ್ನು ಹತ್ತಿ ಹಾಳಾಗುವರು.
- ಸುಭಾಷಿತ
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ನಮ್ಮನ್ನ ನಾವು ಗೆಲ್ಲುವುದೇ ನಿಜವಾದ ಗೆಲುವು.....
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಮನುಷ್ಯ ಸಂಬಳದಿಂದ ಪಡೆಯುವ ಸಂತೋಷಕ್ಕಿಂತಲೂ ಕರ್ತವ್ಯ ನಿರ್ವಹಣೆಯಲ್ಲಿ ಕಂಡುಕೊಳ್ಳುವ ಆನಂದವೇ ಅಧಿಕ...
- ಸ್ವಾಮಿ ಪುರುಷೋತ್ತಮಾನಂದ
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಕಾಸಿಲ್ಲದಿದ್ದರೇನು ಕಿಸೆಯಲ್ಲಿ, ನಾ ಸಾಗಿರುವೆ ಕನಸುಗಳ ನನಸಾಗಿಸಿಕೊಳ್ಳುವ ದಾರಿಯಲ್ಲಿ...😊😊😄
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಹೀಗಿದ್ದೆ ಹಾಗಿದ್ದೆ ಎಂದು ಕೊರಗುವೆ ಏಕೆ?
ಮುಡಿದ ಮಲ್ಲಿಗೆ ಒಮ್ಮೆ ಬಾಡುವುದು ಸಹಜ.
ನೆನೆಯುತ್ತ ನಿನ್ನೆಯನೆ ಮರೆಯದಿರು ಈ ದಿನವ ಇಂದು ಎಂದರೆ ಸ್ವರ್ಗ- ಮುದ್ದುರಾಮ
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಕೆಲವು ಸಲ ನಾವು ಆಡುವ ಮಾತುಗಳು ಮುಳ್ಳಿನಂತಿದ್ದರೂ, ಅವು *ಮತ್ತೊಬ್ಬರನ್ನು ಎಚ್ಚರಿಸುವ ಗಡಿಯಾರದ ಮುಳ್ಳುಗಳಾಗ ಬೇಕೇ* ಹೊರತು *ಇನ್ನೊಬ್ಬರ ಮನಸ್ಸನ್ನು ಚುಚ್ಚುವ ಮುಳ್ಳಾಗಬಾರದು..*
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ನಾಳೆ ಏನೋ ಎಂದು ಇಂದೇಕೆ ಅಳುತ್ತಿರುವೆ?
ಇಂದಾಗುವುದರ ಅರಿವು ನಿನ್ನೆ ನಿನಗಿತ್ತೆ?
ಏನಾಗಬೇಕೊ ಅದು ಆಗುವುದು ಅದರಂತೆ;
ಕಾಲ ಪ್ರಶ್ನಾತೀತ! -ಮುದ್ದುರಾಮ.
ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ