Saturday, 31 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಬದುಕಿನಲ್ಲಿ ಬರೀ ತಿರುವುಗಳೆ...

ಒಂದು ದಾಟಿದರೆ ಮತ್ತೊಂದು...😊😊😊

Friday, 30 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ನಾವೆಲ್ಲರೂ ಏನೋ ಒಂದನ್ನು ಹುಡುಕುತ್ತಿದ್ದೇವೆ. ಅದು ಸಿಕ್ಕುವವರೆಗೂ ನಮಗೆ ತೃಪ್ತಿಯಿಲ್ಲ. ನಾವು ಏನನ್ನು ಹುಡುಕುತ್ತಿದ್ದೇವೆಂಬುದು ನಮ್ಮಲ್ಲನೇಕರಿಗೆ ತಿಳಿದಿರುವುದಿಲ್ಲ....🙃😊



-ಶ್ರೀ ಶ್ರೀ ಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು

Thursday, 29 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


*ವಾಸ್ತು*


ನಮ್ಮ ಮನೆಯ ದೇವಮೂಲೆ,

ಪಕ್ಕದ ಮನೆಗೆ ಅಗ್ನಿಮೂಲೆ.😊😊😄😉

Wednesday, 28 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಬೆಳಗ್ಗೆ ಬಲಗಡೆ ಎದ್ನಾ ಅಥವಾ ಎಡಗಡೆ ಎದ್ನಾ ಅನ್ನೋದಿಕ್ಕಿಂತ, ಮೇಲಕ್ಕೆ ಎದ್ನಾ ಅನ್ನೋದಷ್ಟೇ ಮುಖ್ಯ😊

Tuesday, 27 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 ಅಹಂಕಾರ ಎನ್ನುವುದು ಬೆಳೆಯುವ ಗಿಡಕ್ಕೆ ಅಂಟುವ ರೋಗ.

Monday, 26 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 ನಮ್ಮದೇ *Selfi* ಗೆ *ಮೂರ್ನಾಲ್ಕು Attempt* ಮಾಡೋ ನಾವು; ಇನ್ನೊಬ್ಬರನ್ನು ಒಂದೇ ನೋಟದಲ್ಲಿ *JUDGE* ಮಾಡುತ್ತೇವೆ..‌😄😄😄

Sunday, 25 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 ಇಲ್ಲಸಲ್ಲದ ಕಾಲತೊಡರುಗಳ ಕಡಿದು

ಬಲ್ಲವರು ತೋರಿರುವ ಹಾದಿಯನು ಹಿಡಿದು

ಎಲ್ಲರೂ ಒಂದಾಗಿ ಒಂದಾಗಿ ನಡೆದು

ಹೋಗೋಣ ನಾವೆಲ್ಲ ಸೀಮೆಯನು ದಾಟಿ.



-ಬೇಂದ್ರೆ (ಸೀಮೋಲಂಘನ )

🏹🏹🏹🏹🏹🏹🏹🏹🏹




*||ಶಮೀ ಶಮಯತೇ ಪಾಪಂ ಶಮೀ ಶತ್ರು ವಿನಾಶನಿ||*

*||ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನಿ||*


*ನಿಮಗೂ  ಮತ್ತು ನಿಮ್ಮ ಕುಟುಂಬದವರಿಗೂ ಆಯುಧಪೂಜೆ ಹಾಗೂ ವಿಜಯದಶಮಿಯ ಶುಭಾಶಯಗಳು*😊🙏🏻💐

Saturday, 24 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 ನಿನ್ನ ನೀನು ಮರೆತರೇನು ಸುಖವಿದೆ?????

Friday, 23 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 

ನೋವು ಮತ್ತು ಸೋಲನ್ನು ಸಹಿಸಬಲ್ಲವನು ಜೀವನದಲ್ಲಿ ಎಂದಿಗೂ ಸೋಲಲಾರ.

Thursday, 22 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 

ಕೆಲವೊಂದು ಸಲ ಉದ್ದೇಶಕ್ಕಿಂತ, ಅನಿವಾರ್ಯತೆ ಅನ್ನೋದು ಬದುಕಿನ *ದಿಕ್ಕನ್ನು* ಬದಲಿಸಬಿಡುತ್ತದೆ.

Wednesday, 21 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 ನಾವು ಎತ್ತರಕ್ಕೆ ಬೆಳೆದಷ್ಟೂ ಸ್ನೇಹಜೀವಿ ಆಗಬೇಕೇ ಹೊರತು, ಅಹಂಕಾರಿಯಾಗಬಾರದು. ಏಕೆಂದರೆ ಸ್ನೇಹ ನಮಗೆ ಪ್ರೀತಿ ಕೊಡುತ್ತದೆ. ಅಹಂಕಾರ ನಮ್ಮ ಬುಡವನ್ನೇ ಸುಡುತ್ತದೆ.......😊

Tuesday, 20 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಎಲ್ಲಾ ಸಮಯದಲ್ಲೂ, 
ಎಲ್ಲಾ ವಿಷಯಗಳಲ್ಲೂ 
ಗೆಲ್ಲಲೇ ಬೇಕೆಂದಿಲ್ಲ...
ಕೆಲವೊಮ್ಮೆ 
ಕೆಲವು ವಿಷಯಗಳಲ್ಲಿ 
ಸೋಲುವುದರಲ್ಲೇ ಗೆಲುವು ಲಭಿಸುತ್ತದೆ...

 *ಸೋತು ಗೆದ್ದುಬಿಡೋಣ..* 😊

Monday, 19 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಆಕಾಶದಲ್ಲಿ ಹಾರುವ ಹದ್ದಿನ ಹಾದಿಯನ್ನೂ, 
ನೀರಿನಲ್ಲಿ‌ ಈಜುವ ಮೀನಿನ ಹಾದಿಯನ್ನೂ, 
ಬಂಡೆಗಳ ಮೇಲೆ ಸಾಗುವ ಸರ್ಪದ ಹಾದಿಯನ್ನು ಕಂಡುಹಿಡಿಯುವುದು ಹೇಗೆ ಅಸಾಧ್ಯವೋ 
ಹಾಗೆಯೇ ಕೆಲವರ ಮರ್ಮಗಳನ್ನು ಅರಿಯುವುದೂ ಸಹ ಅಸಾಧ್ಯ😊

Sunday, 18 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಮನುಷ್ಯ ತನ್ನ ಪರಿಶ್ರಮದಿಂದ ಭಾಗ್ಯವನ್ನು ಬದಲಿಸಿಕೊಳ್ಳಬಲ್ಲ.

Friday, 16 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕೆಲಸವನ್ನು ಕಲಿತರಷ್ಟೇ ಸಾಲದು , ಅದನ್ನು ಪ್ರೀತಿಯಿಂದ ಮಾಡಬೇಕು.😊

Thursday, 15 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಅವಕಾಶಗಳ ಹುಡುಕಾಟ ನಿರಂತರ..👍

Wednesday, 14 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಗೆಲುವಿನ ಮೊಟ್ಟೆಗೆ ನಾವು ಸದಾ ಕಾವುಕೊಡುತ್ತಿರಬೇಕು. ಆಗ ಮಾತ್ರ ಯಶಸ್ಸು ನಮ್ಮನ್ನು ಹಿಂಬಾಲಿಸುತ್ತಲೇ ಇರುತ್ತದೆ.


-ರಿಚರ್ಡ್ ಬ್ರಾನ್ಸನ್

Tuesday, 13 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಮಾತನ್ನು ಯಾರಿಂದಲೂ ಮುಟ್ಟಲು ಸಾಧ್ಯವಿಲ್ಲ...

ಆದರೆ ಮಾತುಗಳಿಗೆ ಎಲ್ಲರನ್ನೂ ಮುಟ್ಟುವ ಸಾಮರ್ಥ್ಯವಿದೆ...

Monday, 12 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಈ ಜಗತ್ತೊಂದು ವಿಸ್ಮಯದ ಮೂಟೆ....

ನೋಡುವುದೇ ಒಂದು...

ಕಾಣುವುದೇ ಒಂದು...

ಇರುವುದೇ ಒಂದು...😄

Saturday, 10 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 

ಸೋಲಿಗೆ ಅಹಂಕಾರವೇ ಕಾರಣ,       

ವಿಜಯಕ್ಕೆ ವಿನಯವೇ  ಭೂಷಣ,                       

  ಸ್ನೇಹಕ್ಕೆ ನಂಬಿಕೆಯೇ  ಹೂರಣ...😊

Friday, 9 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಸೋಲಿನ‌ ನೋವಿಗೆ ಗೆಲುವೇ ಮದ್ದು.

ಗೆಲುವಿನ‌ ಅಹಂಕಾರಕ್ಕೆ ಸೋಲೇ ಮದ್ದು.

Thursday, 8 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಬದುಕಿನಲ್ಲಿ ಪ್ರತಿಯೊಬ್ಬರಿಗೂ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಇರಬೇಕು, ಮಹತ್ಕಾರ್ಯಗಳನ್ನು ಮಾಡಬೇಕೆನ್ನುವ ತುಡಿತ ಇರಬೇಕು. ಅದನ್ನು ಕನಸು, ಛಲ, ಸಾಹಸ ಸವಾಲು, ಗಮ್ಯ, ಗುರಿ ಹಾಗೂ ಏನೆಂದು ಬೇಕಾದರೂ ಕರೆಯಿರಿ. ನಮ್ಮ ಆಂತರಿಕ ಶಕ್ತಿಯನ್ನು ಬಡಿದೆಬ್ಬಿಸುವುದೇ ಈ ಸವಾಲುಗಳು. ಗುಡ್ಡ- ಗವಿಯಲ್ಲಿ ಗೆಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಿದ್ದ ಮಾನವನನ್ನು ಚಂದ್ರಲೋಕಕ್ಕೆ ಹೋಗುವಂತೆ ಮಾಡಿದ್ದು ಇದೇ ಸವಾಲುಗಳು. ಪ್ರತಿ ಸವಾಲುಗಳನ್ನು ಮೈಮೇಲೆ ಎಳೆದುಕೊಂಡಂತೆಲ್ಲಾ ನಮ್ಮಲ್ಲಿ ವಿಶ್ವಾಸ ಪುಟಿದೇಳುತ್ತದೆ. ಬದುಕನ್ನು ನೋಡುವ ದೃಷ್ಟಿಕೋನ ವಿಭಿನ್ನವಾಗಿರುತ್ತದೆ. ಕೊನೆಗೆ ಬದುಕೇ ಬದಲಾಗುತ್ತದೆ. ಅಂತೆಯೇ ಮಹೋನ್ನತ ಗುರಿಯನ್ನು ಮುಟ್ಟುವ ಪ್ರಕ್ರಿಯೆ ಸುಲಭವೇನಲ್ಲ. ಹಾಗೆಂದ ಮಾತ್ರಕ್ಕೆ ಮಾಡುವ ಕೆಲಸದಿಂದ ನಾವು ವಿಮುಖರಾಗಬೇಕಿಲ್ಲ. ಭರವಸೆ ಕಳೆದುಕೊಳ್ಳಬೇಕಾಗಿಲ್ಲ. ನಮ್ಮಲ್ಲಿ ಆತ್ಮಸ್ಥೈರ್ಯವೊಂದಿದ್ದರೆ ಜಗತ್ತಿನ ಯಾವ ಶಕ್ತಿಯೂ ನಮ್ಮನ್ನು ತಡೆಯಲಾಗದು. ಹಾಗಾಗಿ ಗುರಿ ಯೊಂದನ್ನು ಕಣ್ಮುಂದೆ ಇಟ್ಟುಕೊಂಡು ಸುಮ್ಮನೆ ಕೆಲಸ ಮಾಡುತ್ತಾ ಹೋಗಿ, ಯಶಸ್ಸು ಸದ್ದಿಲ್ಲದೇ ನಿಮ್ಮನ್ನು ಹಿಂಬಾಲಿಸುತ್ತದೆ. 

ಸದಾ ನಾನು ಎರಡು ರೀತಿಯ ಸವಾಲುಗಳನ್ನು ಬಿಗಿದಪ್ಪಿ ಕೊಳ್ಳುತ್ತೇನೆ. ಮೊದಲನೆಯದು ಮಾಡುವ ಕೆಲಸವನ್ನು ಉತ್ಕೃಷ್ಟ ಮಟ್ಟದಲ್ಲಿ ಮಾಡಿ ಮುಗಿಸುವುದು. ಎರಡನೆಯದು ಹೊಸ ಸಾಹಸಗಳಿಗೆ ಮೈ ಒಡ್ಡುವುದು. ಈ ಎರಡು ನನಗೆ ಅಪ್ಯಾಯಮಾನವಾದದ್ದೇ. ನಿತ್ಯ ಹೊಸ ಸವಾಲುಗಳನ್ನು ಎದುರಿಸುವುದು ನನ್ನ ಹುಟ್ಟು ಗುಣ, ಹೊಸ ಸಾಹಸಗಳನ್ನು ತಬ್ಬಿಕೊಳ್ಳುವುದೇ ನನ್ನ ಜಾಯಮಾನ. ಯಶಸ್ಸಿಗಾಗಿ ದಿಗಂತದೆಡೆಗೆ ಕೈಚಾಚುವುದೇ ನನ್ನ ಪ್ರವೃತ್ತಿ. ಅದೇ ನನಗೆ ಬದುಕು. ಬತ್ತದ ಚೈತನ್ಯದ ಚಿಲುಮೆ.



-ರಿಚರ್ಡ್ ಬ್ರಾನ್ಸನ್

Wednesday, 7 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಪ್ರತಿಯೊಂದು ಕೆಲಸ ಮಾಡುವಾಗಲೂ ನಿಮ್ಮ ಮುಂದೆ ಎರಡು ಆಯ್ಕೆಗಳಿರುತ್ತವೆ. 

ಒಂದು, ಮಂದೆಯಲ್ಲಿ ಕುರಿಯಂತೆ ಯಾರೋ ಮಾಡಿದ ಕೆಲಸವನ್ನು ನಾವೂ ಮಾಡುತ್ತಾ ಅವರನ್ನೇ ಹಿಂಬಾಲಿಸುವುದು. 

ಇನ್ನೊಂದು, ಆನೆ ನಡೆದದ್ದೇ ದಾರಿ ಎಂಬಂತೆ ನಮ್ಮದೇ ಹೊಸ ಮಾರ್ಗದಲ್ಲಿ ಹೆಜ್ಜೆ ಹಾಕುವುದು.


-ರಿಚರ್ಡ್ ಬ್ರಾನ್ಸನ್

Tuesday, 6 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ನಮ್ಮ ಕೆಲಸವನ್ನು ಹೆಚ್ಚು ಶ್ರಮವಿಲ್ಲದೆ, ಉತ್ತಮವಾಗಿ ಮಾಡಿ ಮುಗಿಸುವ ಚಾಕಚಕ್ಯತೆ, ಬುದ್ಧಿವಂತಿಕೆ ಹೊಂದಿದ್ದರೆ ನಮ್ಮ ಬೆಲೆ ಹೆಚ್ಚಾಗುತ್ತಾ ಹೋಗುತ್ತದೆ.

Monday, 5 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನಮ್ಮ ಕೆಲಸಕ್ಕೆ ಸಂಬಂಧಿಸಿದ ಹೊಸ ವಿಚಾರಗಳನ್ನು

ಕಲಿಯದೆ, "ಅದಕ್ಕೆ ಟೈಮಿಲ್ಲ, ನನ್ನಿಂದ ಆಗೋಲ್ಲ" ಅಂತ ಸಬೂಬುಗಳು ಕೊಟ್ಟುಕೊಂಡಲ್ಲಿ ನಮ್ಮ ಬೆಳವಣಿಗೆ ಕುಂಠಿತವಾಗುತ್ತದೆ.

Sunday, 4 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಯಶಸ್ಸನ್ನು ಗಳಿಸುವುದು ಸುಲಭ.ಆದರೆ ಅದನ್ನು ಬಹುಕಾಲ ಹಿಡಿದಿಟ್ಟುಕೊಳ್ಳುವುದು ನಿಜಕ್ಕೂ ಕಷ್ಟದ ಕೆಲಸ


- ರಿಚರ್ಡ್ ಬ್ರಾನ್ಸನ್

Saturday, 3 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಬದುಕು ಕೆಲವೊಮ್ಮೆ ವಿಚಿತ್ರ ಎನಿಸಿಬಿಡುತ್ತದೆ. ಒಮ್ಮೆ ಎಲ್ಲವೂ ಸ್ನೇಹಮಯ, ಪ್ರೇಮಮಯ ಮತ್ತು ಆನಂದಮಯ, ಮತ್ತೊಮ್ಮೆ ಅದೇನೋ ವಿಷಾದ, ನೋವು, ಸಂಕಟ.


-ರಿಚರ್ಡ್ ಬ್ರಾನ್ಸನ್

Thursday, 1 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕಳೆದು ಕೊಂಡಿದ್ದು ನನ್ನದಲ್ಲ.

ಕಳೆದು ಹೋದದ್ದು ನನ್ನದಲ್ಲ.

ಬಿಟ್ಟು ಕೊಟ್ಟದ್ದು ನನ್ನದಲ್ಲ.

ಬಿಟ್ಟು ಹೋದುದೂ ನನ್ನದಲ್ಲ.

ನನ್ನಲ್ಲಿ ನನ್ನದು ಎಂದು ಉಳಿದಿರುವುದೊಂದೆ...

ಈ ಕ್ಷಣ...ಈ ದಿನ...

 ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ