Tuesday, 28 March 2017

ಒಂದು ವರುಷ........

ಒಂದು ವರುಷದ ಪಯಣ......

ಆತ್ಮೀಯರೇ, ನಾನೂ ಒಂದು ಬ್ಲಾಗ್ ನ ತೆರೆಯ ಬೇಕು,ಅದರಲ್ಲಿ ಮನಸ್ಸಿಗೆ ಹೊಳೆಯುವ ವಿಚಾರಗಳನ್ನು ಬರೆಯ ಬೇಕು ಎಂದು ಬಹಳಷ್ಟು ಆಸೆಗಳೊಂದಿಗೆ ಹರ್ಷ ನ ಬೆನ್ನು ಹತ್ತಿ ಅಂತೂ ಬ್ಲಾಗಿಗ ನಾದೆ....ಬ್ಲಾಗನ್ನು ತೆರೆದು ಒಂದು ವರ್ಷವೂ ಆಯಿತು....(ಯುಗಾದಿ-2016 ಯ ದಿನ)... ಆದರೆ ಬ್ಲಾಗ್ ನ ತೆರೆಯುವ ಮುಂಚೆ ಇದ್ದ ಆಸೆಗಳು ಬ್ಲಾಗ್ ತೆರೆದ ನಂತರ ಏನಾಯಿತೋ ಗೊತ್ತಾಗಲೇ ಇಲ್ಲ....ಆದರೂ ಅಲ್ಲಿ ಇಲ್ಲಿ ಓದಿದ ಕೆಲವು ವಿಚಾರಗಳನ್ನು ಬ್ಲಾಗಿಸಿದೆ.....

   ಈ ಒಂದು ವರ್ಷದ ಅವಧಿಯಲ್ಲಿ ತಿಳಿದು ಕೊಂಡ ಮುಖ್ಯ ವಾದ ವಿಷಯ ಏನೆಂದರೆ, ಮನಸ್ಸಿಗೆ ಬಂದಂತ ಎಲ್ಲಾ ವಿಚಾರಗಳನ್ನು ನನ್ನಂತ ಸಾಮಾನ್ಯನಿಗೆ ಅಕ್ಷರ ರೂಪ ಕೊಡಲು ಖಂಡಿತ ಸಾಧ್ಯವಿಲ್ಲ ಎಂದು....ಎದೆಗೆ ಬಿದ್ದ ಅಕ್ಷರ ಹಾಳೆಯ ಮೇಲೆ ಬೀಳುವುದು ಎಂದರೆ ತಮಾಷೆಯ ಮಾತಲ್ಲ .....
    ಬಹಳಷ್ಟು ವರುಷಗಳಿಂದ (??) ಏನನ್ನಾದರೂ ಬರೆಯಲೇ ಬೇಕು ಎಂಬ ಆಸೆ....ಅದರೆ ಏನು ಬರೆಯ ಬೇಕು ಅನ್ನೋದೆ ಗೊತ್ತಾಗದೆ ಸುಮ್ಮನೆ ಆಗುವುದು ಒಳ್ಳೆಯದು ಅನಿಸುತ್ತೆ ....
   ಒಂದೊಂದು ಸಲ ಅನ್ನಿಸುತ್ತೆ,  ಬರೆಯೋ ಆಸೆ ಬಿಟ್ಟು ಮಾಡೊ ಗಣಿತ ಪಾಠನ ಚೆನ್ನಾಗಿ ಮಾಡೊ ಪ್ರಯತ್ನ ಪಡೋಣ ಅಂತ,  ಯಾಕಂದ್ರೆ ಗಣಿತ ಅರ್ಥ ಮಾಡಿ ಕೊಂಡು, ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸಿದರೆ ಮಹಾ ಕಾದಂಬರಿ ಬರೆದಂತೆ ಅಂತ ....
    ಆದರೂ ಬಿಡೋಲ್ಲ....ಆಗಾಗ ನಿಮಗೆ whattsapp ಲಿ message ಮಾಡ್ತಾ ಇರ್ತೀನಿ.........pls visit my blog ....ಅಂತ ......

ನಿಮ್ಮ ಸಹಕಾರಕ್ಕೆ ಧನ್ಯವಾದಗಳು......☺
    

No comments:

Post a Comment

 ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ