Saturday, 13 November 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಹೇಳಿಮಾಡಿಸಿದಂತ ಜೋಡಿ ಸಿಗುವುದು ಚಪ್ಪಲಿಯಲ್ಲಿ ಮಾತ್ರ...ಉಳಿದಿದ್ದೆಲ್ಲಾ ಹೊಂದಾಣಿಕೆ.....😀😀

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೧೨*💛❤️

 💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೧೨*💛❤️


ಜೀವನದಲ್ಲಿ ಯಾವಾಗ ಹೇಗೆ ಮಾತನಾಡಬೇಕೆಂದು ತಿಳಿದಿರುವಂತೆ, ಗಣಿತದಲ್ಲಿ ಯಾವಾಗ ಯಾವ formula ಉಪಯೋಗಿಸ ಬೇಕು ಎಂದ ತಿಳಿದಿರಬೇಕು

Friday, 12 November 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಬದುಕಿನಲ್ಲಿ ಯಾರು ಗೆಲ್ಲುತ್ತಾರೋ, ಅವರಿಗೇ ಎಲ್ಲವೂ ಸಿಗುತ್ತದೆ.ಆದ್ದರಿಂದ ನಾವು ಸುಮ್ಮನಿರದೆ ಕನಸನ್ನು ಬೆನ್ನತ್ತಿ, ಗೆಲ್ಲಬೇಕು...

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೧೧*💛❤️

 💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೧೧*💛❤️


ಗಣಿತವನ್ನು ಯಾರು ಬೇಕಾದರೂ ಕಲಿಯಬಹುದು ಇದಕ್ಕೆ ಕುಲ, ಗೋತ್ರ,ವಯಸ್ಸು,ಲಿಂಗ, ಅರ್ಹತೆ, ಪದವಿ...ಯಾವುದೂ ಬೇಕಾಗಿಲ್ಲ..ಕಲಿಯುವಂತಹ ಆಸಕ್ತಿ ಒಂದಿದ್ದರೆ ಸಾಕು...😊😊

Wednesday, 10 November 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಎಲ್ಲರೂ ಮಾಡುವ ಕೆಲಸವನ್ನೇ ನಾವು ಮಾಡಿದರೆ, ನಾವು ಉಳಿದವರು ಸಾಧಿಸಿದ್ದನ್ನೇ ಸಾಧಿಸುತ್ತೇವೆ.ಬೇರೆಯವರು ಮಾಡದ ಕೆಲಸವನ್ನು ನಾವು ಮಾಡಿದರೆ, ಬೇರೆಯವರಿಗಿಂತ ನಮ್ಮ ಸಾಧನೆ ವಿಭಿನ್ನವಾಗಿರುತ್ತದೆ.

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೮-೧೦*💛❤️

 💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೧೦*💛❤️

          

ಎಲ್ಲದರ ಉದ್ದ ಅಗಲ ಅಳೆಯುವ ಗಣಿತದ ಉದ್ದ ಅಗಲ ಅಳೆಯಲು ಯಾರಿಂದಲೂ ಸಾಧ್ಯವಿಲ್ಲ...😀😊

Tuesday, 9 November 2021

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೮-೯*💛❤️

 💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೮-೯*💛❤️

          

ಗಣಿತ ಗಣಿ ಇದ್ದಂತೆ....ಅಗೆದಷ್ಟೂ ಸಿಗುತ್ತದೆ...

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಮ್ಮನು ತೆಗೆಳುವವರು( ಟೀಕೆ ಮಾಡುವವರು) ಇಲ್ಲ ಅಂದ್ರೆ, ನಾವು ನಿಷ್ಪ್ರಯೋಜಕರು...😀😀

Sunday, 7 November 2021

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೭*💛❤️

 💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೭*💛❤️

          

ನೀವು ಕಲಿತಿರುವ ಗಣಿತಕ್ಕೆ , ನೀವೇ ಜವಾಬ್ದಾರರು..😊

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಹೋಗೋದೆಲ್ಲಾ ಹೋಗಲಿ...ಹೊಸತು ಬರುವುದಕ್ಕೆ ಅದೇ ದಾರಿ....😊

Saturday, 6 November 2021

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೬*💛❤️

 💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೬*💛❤️

          

ನೀವು ಕಲಿತಿರುವ ಗಣಿತಕ್ಕೆ , ನೀವೇ ಜವಾಬ್ದಾರರು..😊

Friday, 5 November 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಮ್ಮ‌ ಎದುರಾಳಿ Strong ಇದ್ದಷ್ಟೂ ಗೆಲುವಿನ ಬೆಲೆ ಜಾಸ್ತಿ😃😊

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೫*💛❤️

 💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೫*💛❤️

          

ನಿಮ್ಮೊಳಗಿರುವ ಗಣಿತ ಬುದ್ದಿ ನಿಮಗೆ ತಿಳಿದಿದೆಯೇ???😃😊😃

Thursday, 4 November 2021

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೪*💛❤️

 💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೪*💛❤️

          

ಗಣಿತ ಪರಿಮಳವಿದ್ದಂತೆ. ಅದನ್ನು ಅನುಭವಿಸಬೇಕಷ್ಟೆ.

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಮನಸ್ಸು ನಮ್ಮ ಕಣ್ಣಿಗೆ ಕಾಣಿಸದಿದ್ದರೂ ನಮ್ಮನ್ನು ಬಹಳ ಆಟವಾಡಿಸುತ್ತದೆ.

Wednesday, 3 November 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಮನಸ್ಸಿನಲ್ಲಿ ಅಂದುಕೊಂಡಿದ್ದೆಲ್ಲಾ ತನ್ನಿಂತಾನೇ ಆಗುವಂತಿದ್ದರೆ ಪ್ರಪಂಚದಲ್ಲಿ ಸೋಲುವವರೇ ಇರುತ್ತಿರಲಿಲ್ಲ..

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೩*💛❤️

 💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೩*💛❤️

          

ಗಣಿತದಲ್ಲಿ ಸಮಸ್ಯೆಗಳೇ (ಲೆಕ್ಕಗಳೇ) ತುಂಬಿದ್ದರೂ ಅದು ನಗುತ್ತಲೇ ಇರುತ್ತದೆ..ಯಾಕಂದ್ರೆ ಗಣಿತ ಯಾವಾಗಲೂ ಸಮಸ್ಯೆಗಳನ್ನು ಬಿಡಿಸುವುದರತ್ತಲೇ ಗಮನ ನೀಡುತ್ತದೆ.

Tuesday, 2 November 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದು ಮಾತ್ರ ಗೆಲುವಲ್ಲ.ನಮಗೆ ಸಿಕ್ಕ ಅವಕಾಶಗಳಿಗೆ ನಾವು ನಿಷ್ಠೆಯಿಂದ 100% ಶ್ರಮಿಸಿದಾಗ ಮಾತ್ರ ಜಯಶಾಲಿಗಳಾಗುತ್ತೇವೆ.

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೨*💛❤️

 💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೨*💛❤️

          

ಗಣಿತದ ಸೌಂದರ್ಯ ಪದಗಳಿಗೆ ನಿಲುಕುವುದಿಲ್ಲ...

Monday, 1 November 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಯಾರಿಗೆ ಯಾವುದನ್ನು ತಿಳಿದು ಕೊಳ್ಳುವುದಕ್ಕೆ ತುಂಬಾ ಕಷ್ಟವಾಗುತ್ತೋ, ಅವರು, ಅದು ಸರಿಯಾಗೇ ಇಲ್ಲ ಎಂದು ವಾದಿಸುತ್ತಾರೆ.😃😃


*ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು*💐😊🙏

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೧*💛❤️

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦೨೧-೧*💛❤️

          

ಪ್ರಕೃತಿಯ ಭಾಷೆ ಗಣಿತ...

ಪ್ರಕೃತಿಯಲ್ಲಿನ ವಿಸ್ಮಯ ಅಗಣಿತ...



*ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು*💐😊🙏

Friday, 10 September 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಪ್ರಾಮಾಣಿಕವಾಗಿ ಮಾಡಿದರೆ ನಮ್ಮ ಕಾಯಕ...

ನಮ್ಮನ್ನೆಲ್ಲಾ ರಕ್ಷಿಸುವನು ವಿನಾಯಕ...


*ಎಲ್ಲರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು*💐💐😊🙏

Saturday, 17 July 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಸೂರ್ಯ ಪ್ರತಿ ಮುಂಜಾನೆ ಉದಿಸದಿರೆ ಮೂಡಲಲಿ  ಎಷ್ಟೊಂದು ಪರದಾಟ ಈ ಮನುಜಕುಲಕೆ? ಬರಬಾರದೇಕೆ ಆ ಶಿಸ್ತು ದಿನದಿನ ನಮಗೆ? ಶಿಸ್ತಿದ್ದರಿದೆ ಹುರುಪು- ಮುದ್ದುರಾಮ.

Friday, 16 July 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಪ್ರಪಂಚವನ್ನೇ ಮುಳುಗಿಸಬಲ್ಲೆ ಎಂದು *ಸಾಗರ* ಮೆರೆಯುತ್ತಿತ್ತು ಆದರೆ ಒಂದು ಹನಿ *ಎಣ್ಣಿ* ಸಾಗರದಲ್ಲಿ ತೇಲಾಡುವುದು ನೋಡಿ ಮೌನವಾಯಿತು...

Thursday, 15 July 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* ?.

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಸಾವಿರ ಇಂದ್ರರನ್ನು ಗೆಲ್ಲಬಹುದು, ಇಂದ್ರಿಯಗಳನ್ನು ಗೆಲ್ಲು ನೋಡೋಣ.


-ಬುದ್ದ

Wednesday, 14 July 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು*

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಾವು ಯಾವುದರ ಬಗ್ಗೆ ಬುದ್ದಿವಂತಿಕೆಯಿಂದ ಮಾತನಾಡಲಾರೆವೋ ಅದರ ಬಗ್ಗೆ ಮೌನವಾಗಿರಲೇ ಬೇಕು.ಆದರದು ಜ್ಞಾನಾರ್ಜನೆಗಾಗಿ ತಳೆದ ಮೌನವಾಗಿರಬೇಕೇ ಹೊರತು ಅಜ್ಞಾನದ ಮೌನವಾಗಿರಬಾರದು.


-ಸ್ವಾಮಿ ವೀರೇಶಾನಂದ ಸರಸ್ವತಿ.

Tuesday, 13 July 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಗುತಿರು ನೀನು ಹೂವಿನ‌ ಹಾಗೆ       

ಮುಳ್ಳಿನೊಂದಿಗೆ ಬದುಕುವುದನ್ನು ಕಲಿತು

ಸಾಗುತಿರು ನೀನು ನದಿಯ ಹಾಗೆ           

ಪ್ರಕೃತಿಯಲ್ಲಿ ನಿನ್ನನ್ನು ನೀನು ಮರೆತು.

-ಕೃಷ್ಣಚೈತನ್ಯ.


-ಕೃಷ್ಣಚೈತನ್ಯ.

Monday, 12 July 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಎತ್ತರಕ್ಕೆ ಏರಬೇಕು ಅಂದರೆ ಆಳವಾದ ಜ್ಞಾನ ಇರಬೇಕು...

Sunday, 11 July 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಯಾವುದೇ ಉದ್ಯೋಗಕ್ಕೆ ಸ್ವಂತ ಭವಿಷ್ಯ ಇರುವುದಿಲ್ಲ, ಬದಲಾಗಿ ಅದಕ್ಕೆ ಭವಿಷ್ಯ ಬರುವುದು ಆ ಉದ್ಯೋಗ ಮಾಡುವ ವ್ಯಕ್ತಿಯಿಂದ.


-ಸ್ವಾಮಿ ವೀರೇಶಾನಂದ ಸರಸ್ವತೀ.

Saturday, 10 July 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಅವಶ್ಯಕತೆ ಇದ್ದಾಗ ಸೇವೆ ಮಾಡಬೇಕು.ಪುರುಸೊತ್ತಾದಾಗ ಅಲ್ಲ.

Thursday, 8 July 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಮಗೆ ಬರುವ ಒಳ್ಳೆಯ ಯೋಚನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬೇಕು..ಹೆಚ್ಚೆಂದರೆ ಸೋಲಬಹುದಷ್ಟೇ.ಸಾಯುವುದಿಲ್ಲ.


-ಶ್ರೀಭಾಸ್ಕರ್.

Wednesday, 7 July 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಬದುಕಿಗೆ ಕಾವು ಬೇಕು ನಿಜ...

ಹಾಗಂತ ಅವಸರ ಪಡಬಾರದು..

ಹೆಚ್ಚಾದ್ರೆ ತಳ ಸೀಯುತ್ತೆ, 

ಕಮ್ಮಿ ಆದ್ರೆ ಮೇಲೆ ಬೇಯೋಲ್ಲ...

ಹದವಾಗಿದ್ರೇನೇ ಚಂದ...

Monday, 5 July 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಕಾಲ ಬದಲಾಗಿದೆ...


ಅನ್ನ ಬೆಳೆಯೋ ಜಮೀನಿನಲ್ಲಿ ಪ಼್ಯಾಕ್ಟರಿ ಕಟ್ತೀವಿ...

ಮನೆ ಮೇಲೆ POT ನಲ್ಲಿ ತರಕಾರಿ ಬೆಳಿತೀವಿ...

Sunday, 4 July 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ದೇವರನ್ನು ಬಿಟ್ಟು ಬೇರೆ ಯಾರೂ ನಮ್ಮ‌ ಜೊತೆ ಇಲ್ಲ ಎಂದು ಅರ್ಥ ಮಾಡಿಸೋಕೆ ಕೆಲವೊಮ್ಮೆ ದೇವರು ನಮ್ಮನ್ನು ಒಬ್ಬಂಟಿಯಾಗಿರಿಸುತ್ತಾನೆ...😊😄

Saturday, 3 July 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ತಾನು ಮೆಚ್ಚಿಕೊಂಡ ಗುರುವಿನ ಒಂದು ಪ್ರಶಂಸಾವಾಕ್ಯದಿಂದ ಶಿಷ್ಯನು ಸಿಂಹದಂತಾಗುತ್ತಾನೆ. ಸ್ಪೂರ್ತಿಯ ಸೆಲೆ ಯಾವುದೇ ಇದ್ದರೂ ಮೆಚ್ಚಿಕೊಂಡ ಗುರುವಿನಿಂದ ಬಂದಾಗ ಅದು ಬೇರೆಯೇ. ಅದ್ದರಿಂದಲೇ ಯಾವುದೇ ವಿದ್ಯಾರ್ಥಿ ಅತಿ ಹೆಚ್ಚು ಅಂಕ ಪಡೆಯುವುದು ತನ್ನ ನೆಚ್ಚಿನ ಶಿಕ್ಷಕ ಬೊಧಿಸುವ ವಿಷಯದಲ್ಲೇ!!!

Friday, 2 July 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಆಸೆ ರಾಜನನ್ನೂ ಗುಲಾಮನನ್ನಾಗಿಸುತ್ತದೆ.

ತಾಳ್ಮೆ ಗುಲಾಮನನ್ನೂ ರಾಜನನ್ನಾಗಿಸುತ್ತದೆ.

Thursday, 1 July 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


 ಆರೋಗ್ಯ ಕೆಟ್ಟೋಗಿ ನಾವು ಜೀವನ್ಮರಣದ ನಡುವೆ ಬದುಕಲು ಹೆಣಗಾಡುತ್ತಿರುವಾಗ ನೋವು ಶಮನಗೊಳಿಸಿ, ಧೈರ್ಯ ತುಂಬಿ, ಆತ್ಮವಿಶ್ವಾಸ ತುಂಬಿ ಬಾಳಿಗೆ ಬೆಳಕು ನೀಡಿ ಹೊಸ ಜೀವನ ರೂಪಿಸಿಕೊಡುವ ಶಕ್ತಿ ಇರುವ  ವೈದ್ಯರು , ನಿಜವಾಗಲೂ ದೇವರ ಸಮಾನ....😊🙏🏻💐


 🙏🏻💐 *_Happy Doctor's day to all Doctors_*💐🙏🏻

Saturday, 26 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ದೀಪ ಬೆಳಕು ಕೊಡುವುದು ಎನ್ನುವ ಕಾರಣಕ್ಕೆ ಮಾತ್ರ ಹೊಗಳುತ್ತೇವೆ.....

ಆದರೆ ಆ ಬೆಳಕಿಗೋಸ್ಕರ ಮೈಸುಟ್ಟುಕೊಂಡ ಬತ್ತಿ ಯಾರಿಗೂ ಕಾಣಿಸಲಿಲ್ಲ...

ಆ ಬೆಳಕಿಗೋಸ್ಕರ ಅಸ್ತಿತ್ವವನ್ನೇ

ಕಳೆದು ಕೊಂಡ ಎಣ್ಣೆ ಯಾರಿಗೂ

ಕಾಣಿಸಲಿಲ್ಲ....

ಆ ಬೆಳಕಿಗೋಸ್ಕರ ಆಶ್ರಯ ಕೊಟ್ಟ ಹಣತೆ ಯಾರಿಗೂ ಕಾಣಿಸಲಿಲ್ಲ...

ದೀಪಕ್ಕೆ ಬೆಳಕು ಕೊಟ್ಟ ಬೆಂಕಿ

ಯಾರಿಗೂ ಕಾಣಿಸಲಿಲ್ಲ....

 

*ಹಾಗೆಯೇ ಜೀವನದಲ್ಲಿ ಕೆಲವು ಸಲ ನಮ್ಮ ಶ್ರಮ ಇನ್ನೊಬ್ಬರ ಖ್ಯಾತಿಗೆ ಕಾರಣವಾಗುತ್ತದೆ.*

Friday, 25 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಸೃಷ್ಟಿಯಲ್ಲಿ ಚಲನವಿದೆ

ಯಾವುದೂ ನಿಲ್ಲಬಾರದು

ಹರಿಯುವ ನದಿ

ಬೀಸುವ ಗಾಳಿ

ತೂಗುವ ಮರ

ಹುಟ್ಟೋ ಸೂರ್ಯ

ಅಂದುಕೊಂಡಿದ್ದನ್ನು ಸಾಧಿಸಬೇಕೆಂದು ನಮ್ಮಲ್ಲಿ ಛಲದಿಂದ ಹರಿಯುವ ರುಧಿರ ಸಹ... 

ಯಾವುದೂ ನಿಲ್ಲಬಾರದು

Thursday, 24 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಮ್ಮ ನೆರಳು ನಮ್ಮನ್ನು ಬಿಡುವ ಮುನ್ನ  ನಾವು ಬೆಳಕಿಗೆ ಬರಬೇಕು...😊

Wednesday, 23 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃



ಕಿಂಕಿಣಿ : ೧೦. ದಿವ್ಯ ಮಿಥ್ಯೆ


ನಾನು, ನಾನು, ನಾನು! ನನ್ನದು, ನನ್ನದು, ನನ್ನದು! ಎಂತಹ ಸವಿಮಾತುಗಳವು! ಎಂತಹ ಮುದ್ದಿನ ಮಾತದು “ನಾನು!” ಎಂತಹ ಸವಿಸುಳ್ಳದು “ನನ್ನದು!”?


“ನಾನು” ಸೃಷ್ಟಿಗೆ ಕಾರಣ. “ನನ್ನದು” ಸ್ಥಿತಿಗೆ ಕಾರಣ. “ನಾನು” “ನನ್ನದು” ಅಳಿದು “ನೀನು” “ನಿನ್ನದು” ಆಗುವುದೆ ಲಯಕ್ಕೆ ಕಾರಣ.


“ನಾನು” ಎಂಬುದು “ನೀನು” ಎಂದಾಗಿ, ನಾನೆ ನೀನಾಗಿ, ಮಾತು ಮೌನವಾಗಿ, ತನಗೆ ತಾನಾಗಿ, ಕಡೆಗೆಲ್ಲವೂ ಬರಿದಾಗಿ, ಇದು ಅದಾಗಿ ಹೋಗುವುದು!


ಮಾಯಾವಿ, ಇಂತಹ ಮಹಾ ಘನ ವಿಶ್ವವನು ಎಂತಹ ಸವಿಸುಳ್ಳಿನಲಿ ಕೆತ್ತಿರುವೆ!



- ಕುವೆಂಪು

Tuesday, 22 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

ಪರಿಸ್ಥಿತಿ ಹೇಗೇ ಇರಲಿ, ಮನಸ್ಥಿತಿ ಮಾತ್ರ‌ ನಮ್ಮ ನಿಯಂತ್ರಣದಲ್ಲಿರಬೇಕು...😊

Monday, 21 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ತಿಂದು ಬಿಸಾಡಿದ ಬೀಜದಿಂದ ಮರ‌ ಬೆಳೆಯುವಂತೆ, ಯಾರೋ ನಮ್ಮನ್ನು ತಿರಸ್ಕರಿಸಿದರೆಂದು ಕುಗ್ಗಬಾರದು, ತಿರಸ್ಕರಿಸಿದವರೇ ಪುರಸ್ಕರಿಸುವಂತೆ ಬೆಳೆಯಬೇಕು...

Saturday, 19 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಅಮ್ಮನ ಪ್ರೀತಿ, ಅಪ್ಪನ ವಿಶ್ವಾಸ ಎರಡೂ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು..😊😊

Happy Father's day Dad....😊🌷

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಬಹುತೇಕ ಸೋಲುಗಳು ಗೆಲುವಿನಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿ ಕೊಂಡಿರುತ್ತವೆ.ಹಾಗೇ ಬಹುತೇಕ ಗೆಲುವುಗಳು ಸಹ ಸೋಲಿನಿಂದ ಅತಿ ಕಡಿಮೆ ಅಂತರದಲ್ಲಿ ಪಡೆದವಗಳಾಗಿರುತ್ತವೆ. ಹೀಗಾಗಿ ಎಲ್ಲಾ ಸೋಲನ್ನು ಗೆಲುವಾಗಿ ಪರಿವರ್ತಿಸಿಕೊಳ್ಳಬಹುದು.😊

Thursday, 17 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಬಿದ್ದೇನೆಂಬ ಭಯವಿಲ್ಲ,

ಬಿದ್ದು ಅಭ್ಯಾಸವಿದೆ.

ಗೆಲ್ಲಲಿಲ್ಲ ಎಂದು ಹತಾಶೆಯಿಲ್ಲ,

 ಗೆದ್ದು ಚರಿತ್ರೆ ಸೃಷ್ಟಿಸುವ ಛಲವಿದೆ...👍😊

-ಕೃಷ್ಣಚೈತನ್ಯ

Wednesday, 16 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಗೆಲುವುಗಳನ್ನು ಸಂಭ್ರಮಿಸುತ್ತಾ ಬದುಕ ಬೇಡಿ.

ಸೋಲುಗಳನ್ನು ಮೀರುತ್ತಾ ಬದುಕಿ.

-ಚೇ ಗುವಾರ.

Tuesday, 15 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಕತ್ತಲು ಮತ್ತು ಅಹಂಕಾರ ಎರಡೂ ಒಂದೆ..

ಕತ್ತಲಲ್ಲಿ ಬೆಳಕಿರುವುದಿಲ್ಲ. 

ಅಹಂಕಾರದಲ್ಲಿ‌ ಅರಿವು ಇರುವುದಿಲ್ಲ..

Monday, 14 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಯಾವ ಕವಿಯು ಬರೆಯಲಾರ,

ಒಲವಿನಿಂದ ಕಣ್ಣೋಟದಿಂದ ....

ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ....


-ಚಿ.ಉದಯಶಂಕರ್

Sunday, 13 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಈಗ ಅವಳು ಅದೆಲ್ಲಿರುವಳೋ ನನಗೆ ತಿಳಿಯದು,

ಎಲ್ಲಿದ್ದರೇನು ಅವಳ ನೆನಪುಗಳು ನನ್ನಿಂದ ಅಳಿಯದು...😊😊

Friday, 11 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


          ಬದುಕು ಬದಲಾಗುತ್ತದೆ

           ಒಂದಲ್ಲ ಒಂದು‌ ದಿವಸ

           ನಾವು ಅಂದುಕೊಳ್ಳದ

           ಯಾವುದೋ ಒಂದು

                   ರೀತಿಯಲ್ಲಿ....

Thursday, 10 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ವರುಷಕೊಂದು ಹೊಸತು ಜನ್ಮ

ಹರುಷಕೊಂದು ಹೊಸತು ನೆಲೆಯು

ಅಖಿಲ ಜೀವಜಾತಕೆ!

ಒಂದೆ ಒಂದು ಜನ್ಮದಲ್ಲಿ

ಒಂದೆ ಬಾಲ್ಯ ಒಂದೆ ಹರೆಯ

ನಮಗದಷ್ಟೆ ಏತಕೆ?...


ದ.ರಾ.ಬೇಂದ್ರೆ.

Wednesday, 9 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಮುನ್ನೆಡೆಯುವುದು ಲೋಕ ಯಾರಿರಲಿ ಇರದಿರಲಿ;

ನೀ ಅಳಿದೆ ಎಂದೇನು ರವಿ ಮೂಡದಿಹನೆ? ಬೀಸದೇ ತಂಗಾಳಿ? ಘಮಘಮಿಸದೇ ಹೂವು? 

ಕಾಲ ಕಾಯದು ನಿನಗೆ- ಮುದ್ದುರಾಮ.

Tuesday, 8 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಕಹಿ ನೆನಪುಗಳ ಮರೆಯುತಾ..

ಸಿಹಿ ನೆನಪುಗಳ ನೆನೆಯುತಾ..

ಹೊಸ ಕನಸುಗಳ ಕಾಣುತಾ...

ಸಾಗಿದೆ ಜೀವನ ಬಂಡಿ😊😊

Monday, 7 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಬೆಂಕಿಯಿಂದ ನೀರು ಕಾಯುತ್ತೆ....

ಅದೇ ನೀರಿನಿಂದ ಬೆಂಕಿ ಆರುತ್ತೆ😊

ಯಾವಾಗ ಏನು ಬೇಕು ಎಂದು ತಿಳಿದು ಉಪಯೋಗಿಸಿ ಕೊಳ್ಳುವುದು ನಮ್ಮ ಕೈಲೇ ಇದೆ...‌😊



Sunday, 6 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

ಬದುಕು ಬದಲಾಗಬೇಕಾದರೆ, ಬದುಕುವ ದಾರಿ ಬದಲಾಗಬೇಕು..😊

Saturday, 5 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಾವು ಸರಿಯಾದ‌ ಸಮಯದಲ್ಲಿ‌ ತೆಗೆದುಕೊಳ್ಳುವ ಒಂದು ಸರಿಯಾದ ನಿರ್ಧಾರ ನಮ್ಮ ಜೀವನವನ್ನು ಶಾಶ್ವತವಾಗಿ ಬದಲಿಸಬಲ್ಲದು....

Friday, 4 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಆಸೆ ಎಂಬ ಬಿಸಿಲು ಕುದುರೆ ಏಕೆ ಏರುವೆ,

ಮರಳು ಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ,

ಅವನ ನಿಯಮ ಮೀರಿ ಇಲ್ಲಿ ಏನೂ ಸಾಗದು,

 ನಾವು ನೆನೆಸಿದಂತೆ ಬಾಳಲೇನು ನಡೆಯದು,

ವಿಷಾದವಾಗಲಿ, ವಿನೋದವಾಗಲಿ ಅದೇನೆ ಆಗಲಿ ಅವನೆ ಕಾರಣ ....


ಚಿ|ಉದಯಶಂಕರ್.


ದ್ವಿತೀಯ ಪಿಯುಸಿ ಪರೀಕ್ಷೆ ಚೆನ್ನಾಗಿ ಬರೆಯಬೇಕು, 90+ ಅಂಕ ತೆಗೆದುಕೊಳ್ಳಬೇಕು ಎಂದು ಆಸೆ ಇಟ್ಟುಕೊಂಡು ವರುಷದ ಮೊದಲಿನಿಂದಲೇ ಪ್ರಯತ್ನ ಪಡುತ್ತಿದ್ದ ಹಾಗೂ  ನನ್ನ ಪ್ರಥಮ ಪಿಯು ಅಂಕ‌ ಕಡಿಮೆ‌ ಇದೆ,  ದ್ವಿತೀಯ ಪಿಯು ಪರೀಕ್ಷೆಯನ್ನು challenge ಆಗಿ ತೆಗೆದು ಕೊಂಡಿದ್ದೇನೆ 90+ % ತೆಗೆದುಕೊಂಡೇ ತೆಗೆದುಕೊಳ್ಳುತ್ತೇನೆ  ಅಂತ challenge mood ನಲ್ಲೇ ಓದುತ್ತಿದ್ದ  *ವಿದ್ಯಾರ್ಥಿಗಳಿಗೆ* , ಹಾಗೂ ನಮ್ಮ ವಿದ್ಯಾರ್ಥಿಗಳು ಪರೀಕ್ಷೆ ಚೆನ್ನಾಗಿ ಬರೆಯಬೇಕು , ಒಳ್ಳೆಯ ಅಂಕ ತೆಗೆದು ಕೊಂಡು ಕಾಲೇಜಿಗೆ ಹಾಗೂ ಪೋಷಕರಿಗೆ  ಒಳ್ಳೆಯ ಹೆಸರು ತರಬೇಕು ಎಂದು ತರಗತಿಗಳನ್ನು ಹಾಗೂ ಮುಖ್ಯವಾಗಿ ಯಾವ ರಜಾದಿನಗಳನ್ನು ಬಿಡದೆ, ಹಬ್ಬದ ದಿನಗಳೂ ಸಹ ವಿಶೇಷ ತರಗತಿಗಳನ್ನು ತೆಗೆದುಕೊಂಡು Syllabus ಮುಗಿಸಿ, ಕಿರುಪರೀಕ್ಷೆ, ಪರೀಕ್ಷೆಗಳನ್ನು ಮಾಡಿ , ಅಂಕಗಳ ಆಧಾರದ ಮೇಲೆ ಹೆಚ್ಚು ಅಂಕ ತೆಗೆದುಕೊಳ್ಳಲು ಸಾಧ್ಯವಿರುವ ವಿದ್ಯಾರ್ಥಿಗಳಿಗೆ ಹುರಿದುಂಬಿಸಿ, ಕಡಿಮೆ ಅಂಕಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳ ಕಷ್ಟಗಳನ್ನು ಕೇಳಿ ಅವರಿಗೆ ಸುಲಭವಾದ ರೀತಿಯಲ್ಲಿ ಮತ್ತೆ ಹೇಳಿಕೊಟ್ಟು , ನೀವೂ ಸಹ ಅತಿ ಹೆಚ್ಚು ಅಂಕ ತೆಗೆದು ಕೊಳ್ಳಲು ಸಾಧ್ಯವಾಗುತ್ತದೆ ಅಂತ ಅವರಿಗೆ confidence ಬರಿಸಿ, ಅನುತ್ತೀರ್ಣ ಆಗುವಂತಹ ವಿದ್ಯಾರ್ಥಿಗಳಿಗೆ ಮತ್ತೆ ವಿಶೇಷದಲ್ಲಿ ವಿಶೇಷ ತರಗತಿಗಳನ್ನು ತೆಗೆದುಕೊಂಡು ಅವರಿಗೂ ಸಹ ನೀವು ಕಡಿಮೆ‌ ಎಂದರೆ 50 ಅಂಕ ತೆಗೆದು ಕೊಳ್ಳಬಹುದು ಎಂದು ನಂಬಿಕೆ ಬರಿಸಿ , ನಾವೂ PASS ಆಗ್ತೀವಿ ಅನ್ನೊ ಆತ್ಮವಿಶ್ವಾಸ ಅವರಿಗೆ ಬರಿಸಿದಾಗಲೂ , ಅಯ್ಯೋ ಆ ವಿದ್ಯಾರ್ಥಿ ನನ್ನ Subject ನಲ್ಲಿ pass ಆಗ್ತಾನೋ ಇಲ್ವೋ ಎಂಬ ಭಯವನ್ನು ತಮ್ಮ‌ ಸಹೋದ್ಯೋಗಿ ಮಿತ್ರರೊಂದಿಗೆ ಹಂಚಿಕೊಳ್ಳುತ್ತಾ ,ಹೇಗಾದರೂ ಅವನನ್ನು pass ಮಾಡಿಸಲೇ ಬೇಕು ಅಂ‌ತ ಅವನ ಹಿಂದೆ ಬಿದ್ದು tension ತೆಗೆದುಕೊಂಡು ಓದಿಸಿದ, ಅದೇ ರೀತಿ ಈ ವಿದ್ಯಾರ್ಥಿ ಸ್ವಲ್ಪ efforts ಹಾಕಿದರೆ ನನ್ನ Subject ಲಿ 100ಕ್ಕೆ 100 ಅಂಕ ತೆಗೆದುಕೊಳ್ಳುತ್ತಾನೆ ಅಂತ ಆ ವಿದ್ಯಾರ್ಥಿಗೆ ಒಂದೇ ಒಂದೂ mark miss ಆಗಬಾರದು‌ ಅಂತ ಚಿಕ್ಕ ಚಿಕ್ಕ ಪ್ರಶ್ನೆಗಳನ್ನೂ ಅವರಿಗೆ ಹೇಳಿಕೊಟ್ಟು ಅಕಸ್ಮಾತ್ ನಾನು ಹೇಳಿಕೊಟ್ಟ ಪ್ರಶ್ನೆ ಬರದಿದ್ದರೆ ಎಂಬ ಅನುಮಾನದಲ್ಲಿ ಪದೇ ಪದೇ ಹಿಂದಿನ ವರುಷದ ಪ್ರಶ್ನೆಪತ್ರಿಕೆ, ಬೇರೆ ಬೇರೆ ಜಿಲ್ಲೆಯ ಪ್ರಶ್ನೆಪತ್ರಿಕೆ ನೋಡಿ, ಆಯಾ ವಿಷಯದಲ್ಲಿ ಅನುಭವ ಇರುವ ಹಿರಿಯ ಉಪನ್ಯಾಸಕರ ಬಳಿ ಪ್ರಶ್ನೆಗಳನ್ನು ಕೇಳಿ ಯದ್ವಾತದ್ವಾ tension ತಗೊಂಡು ಹೇಳಿಕೊಟ್ಟಿರುವ ಎಲ್ಲಾ *ಉಪನ್ಯಾಸಕರಿಗೂ* ಈ ದಿನದ 

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃 ಅರ್ಪಿಸುತ್ತಿದ್ದೇನೆ...


ಎಲ್ಲ ವಿದ್ಯಾರ್ಥಿಗಳು ಪಾಸಾಗಿದ್ದಾರೆ ಆದರೆ ಉಪನ್ಯಾಸಕರಿಗೆ ನಿಜವಾದ  ಖುಷಿ ಸಿಕ್ಕಿಲ್ಲ. ಪರಿಸ್ಥಿತಿಗೆ ತಕ್ಕ ಹಾಗೆ ತೆಗೆದುಕೊಂಡಿರುವ ನಿರ್ಧಾರಗಳನ್ನು ಗೌರವಿಸಲೇ ಬೇಕು. ಎಲ್ಲಾ ವಿದ್ಯಾರ್ಥಿಗಳಿಗೂ ಒಳ್ಳೆಯದಾಗಲಿ, ಮುಂದಿನ ಜೀವನ ಸುಖಮಯವಾಗಿರಲಿ ಎಂದು ಆಶಿಸುತ್ತಾ….

 *ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು*. ಎಂಬ ಆಶಾಭಾವನೆಯೊಂದಿಗೆ…..


-ಶಿವಶಂಕರ್.ಎಸ್.ಎಸ್.

Thursday, 3 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಕೆಲವು‌ ಸಂಬಂಧಗಳೇ ಹಾಗೆ.....

ಸಂತೆಯಲ್ಲಿ ಸಿಕ್ಕಿ‌ ಜಾತ್ರೆಯಲ್ಲಿ ಕಳೆದು ಹೋಗುತ್ತವೆ....😊🙃

Wednesday, 2 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಜೀವನದಲ್ಲಿ ಏರಿದವನು ಇಳಿಯುತ್ತಾನೆ.ಕೂಡಿದ್ದು ಅಗಲುತ್ತದೆ.ಸಾಮಾನ್ಯರು ಅಸಾಮಾನ್ಯರಾಗುತ್ತಾರೆ.ಒಬ್ಬರು ಕಟ್ಟಿದರೆ ಮತ್ತೊಬ್ಬರು ಕೆಡವುತ್ತಾರೆ. ಸಾಗರದಲ್ಲಿ ಏರಿಳಿಯುವ ತೆರೆಗಳಂತೆ ಜೀವನ ಸಾಗರದಲ್ಲಿ ಬರುವ ಸುಖದುಃಖಗಳ ಅಲೆಗಳು ಶಾಶ್ವತವಲ್ಲ.

Tuesday, 1 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಇವಳು ಯಾರು ಬಲ್ಲೆಯೇನು,

ಇವಳ ಹೆಸರ ಹೇಳಲೇನು,

ಇವಳ ದನಿಗೆ ತಿರುಗಲೇನು,

ಇವಳು ಏತಕೋ ಬಂದು ನನ್ನ ಸೆಳೆದಳು...😊😊


- ಕೆ.ಎಸ್.ನರಸಿಂಹಸ್ವಾಮಿ.

Monday, 31 May 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಕೆಲವರು ತಮ್ಮ ಅಜ್ಞಾನದಿಂದ ಹಾಳಾಗುವರು, ಇನ್ನು ಕೆಲವರು ತಪ್ಪು ಕೆಲಸಗಳನ್ನು ಮಾಡಿ ಹಾಳಾಗುವರು.

ಮತ್ತೆ ಕೆಲವರು ತಾವು ಮಹಾಬುದ್ದಿವಂತರೆಂಬ ಅಹಂಕಾರದಿಂದ ಹಾಳಾಗುವರು.

ಆದರೆ ಅನೇಕ ಜನರು ಇಂಥ ಹಾಳಾದವರ ಬೆನ್ನು ಹತ್ತಿ ಹಾಳಾಗುವರು.


- ಸುಭಾಷಿತ

Sunday, 30 May 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಮ್ಮನ್ನ ನಾವು ಗೆಲ್ಲುವುದೇ ನಿಜವಾದ ಗೆಲುವು.....

Saturday, 29 May 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಮನುಷ್ಯ ಸಂಬಳದಿಂದ ಪಡೆಯುವ ಸಂತೋಷಕ್ಕಿಂತಲೂ ಕರ್ತವ್ಯ ನಿರ್ವಹಣೆಯಲ್ಲಿ ಕಂಡುಕೊಳ್ಳುವ ಆನಂದವೇ ಅಧಿಕ...

- ಸ್ವಾಮಿ ಪುರುಷೋತ್ತಮಾನಂದ

Friday, 28 May 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಕಾಸಿಲ್ಲದಿದ್ದರೇನು ಕಿಸೆಯಲ್ಲಿ, ನಾ ಸಾಗಿರುವೆ ಕನಸುಗಳ ನನಸಾಗಿಸಿಕೊಳ್ಳುವ ದಾರಿಯಲ್ಲಿ...😊😊😄

Tuesday, 25 May 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಹೀಗಿದ್ದೆ ಹಾಗಿದ್ದೆ ಎಂದು ಕೊರಗುವೆ ಏಕೆ? 

ಮುಡಿದ ಮಲ್ಲಿಗೆ ಒಮ್ಮೆ ಬಾಡುವುದು ಸಹಜ. 

ನೆನೆಯುತ್ತ ನಿನ್ನೆಯನೆ ಮರೆಯದಿರು ಈ ದಿನವ ಇಂದು ಎಂದರೆ ಸ್ವರ್ಗ- ಮುದ್ದುರಾಮ

Monday, 24 May 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಕೆಲವು ಸಲ ನಾವು ಆಡುವ ಮಾತುಗಳು ಮುಳ್ಳಿನಂತಿದ್ದರೂ, ಅವು *ಮತ್ತೊಬ್ಬರನ್ನು ಎಚ್ಚರಿಸುವ ಗಡಿಯಾರದ ಮುಳ್ಳುಗಳಾಗ ಬೇಕೇ* ಹೊರತು *ಇನ್ನೊಬ್ಬರ ಮನಸ್ಸನ್ನು ಚುಚ್ಚುವ ಮುಳ್ಳಾಗಬಾರದು..*

Sunday, 23 May 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಾಳೆ ಏನೋ ಎಂದು ಇಂದೇಕೆ ಅಳುತ್ತಿರುವೆ?

ಇಂದಾಗುವುದರ ಅರಿವು ನಿನ್ನೆ ನಿನಗಿತ್ತೆ? 

ಏನಾಗಬೇಕೊ ಅದು ಆಗುವುದು ಅದರಂತೆ; 

ಕಾಲ ಪ್ರಶ್ನಾತೀತ! -ಮುದ್ದುರಾಮ.

Saturday, 22 May 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಇದುವರೆಗೆ ನೀನೆನ್ನ ಕೈ ಹಿಡಿದು ನಡೆಸಿರುವೆ ಇನ್ನಾದರೂ ನನ್ನ ಕೈ ಬಿಡದಿರು ಅಂದಿನಂತೆಯೆ ಇಂದು ನಾನೊಂದು ಶಿಶು ಎಂದು ಎಂದಿಗೂ ಕೈ ಬಿಡದೆ ಸಲಹೈ ಗುರೂ ...


-ಕುವೆಂಪು

Friday, 21 May 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ದೇವರು ಅದಾಗಲೇ ನಮ್ಮಲ್ಲಿ ಇಟ್ಟಿರುವ ಜ್ಞಾನಶಕ್ತಿ, ಇಚ್ಚಾಶಕ್ತಿ ಹಾಗೂ ಕ್ರಿಯಾಶಕ್ತಿಯನ್ನು ಯಾರ್ಯಾರು ಎಷ್ಟೆಷ್ಟು ಬೆಳೆಸಿಕೊಂಡಿರುವರೋ ಅವರು ಅಷ್ಟರಮಟ್ಟಿನ ಮಹಾ ಕಾರ್ಯಗಳನ್ನು ಮಾಡುವುದು ಖಂಡಿತಾ.


- ಸ್ವಾಮಿ ಪುರುಷೋತ್ತಮಾನಂದರು.

Thursday, 20 May 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಜೀವನದಲ್ಲಿ ನಾವು ಏನೇನೋ ಕಾರಣದಿಂದ ಉತ್ಸಾಹ ಕಳೆದುಕೊಳ್ಳುವ ಸಂದರ್ಭ ಬರಬಹುದು. ಬೇಸರಗೊಳ್ಳಲು ಕಾರಣಗಳೂ ಇರಬಹುದು. ಇಂತಹ ಸಮಯದಲ್ಲಿ ನಾವು ಮುಂದೆ ಮಾಡಬೇಕಾದ ಕೆಲಸಗಳ ಕಡೆ ಗಮನ ಕೊಟ್ಟು ನಮ್ಮನ್ನು ನಾವೇ ಸಮಾಧಾನ ಪಡಿಸಿಕೊಳ್ಳಬೇಕು...👍😊

Wednesday, 19 May 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃



ಕಾಲನ ಓಟವ 

ತಡೆಯುವರುಂಟೇ....

ಸಂಭ್ರಮವು, ಸೂತಕವು,‌

ಎಲ್ಲವೂ ಅವನ ನಂಟೇ....

Tuesday, 18 May 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


 *ಕರೋನಾ....* 



ದೂರದಿಂದಲೇ ನೋಡುತ್ತಿರುವವರು.....

ಅನುಭವಿಸುತ್ತಿರುವವರು....

ಅನುಭವಿಸಿ ಹೊರಬಂದಿರುವವರು...


ಮೂವರದೂ ಒಂದೊಂದು ಕಥೆ ಇರುತ್ತೆ....

Monday, 17 May 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಅವನ ಜೊತೆಗೆ ಸಾವಿರ ಮಾತಾಡಲು ಕಾಯುತ್ತಿದ್ದವಳು, ಅವನು ಬಂದೊಡನೆ ಸಾವಿರದ ನಗುವಿನಲ್ಲಿ ಬೆರೆತುಹೋದಳು...

Sunday, 16 May 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


 *ಅವರವರ ಮನಸ್ಸಿನ ಭಾವನೆಗೆ....* 


ದೇವರೇ ಪ್ರಕೃತಿ...

ಪ್ರಕೃತಿಯೇ ದೇವರು...

Saturday, 15 May 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಕೆಲವೊಬ್ಬರ ಜೊತೆ ತುಂಬಾ ಮಾತಾಡಬೇಕು ಅನ್ನಿಸಿದರೂ, ಮಾತಾಡದೇ ಸುಮ್ಮನಿರುತ್ತೇವೆ.

ಯಾಕೆಂದರೆ ......

 *ಮತ್ತೆಲ್ಲಿ ಮಾತು ಮನಕೆಡಿಸಿತೋ ಎಂಬ ಭಯದಲ್ಲಿ...*

Monday, 26 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಸಂಪೂರ್ಣ ಜಗತ್ತನ್ನು ಗೆಲ್ಲಬಹುದು *ಸಂಸ್ಕಾರ* ಒಂದಿದ್ದರೆ...

ಗೆದ್ದ ಜಗತ್ತನ್ನು ಕಳೆದುಕೊಳ್ಳಬಹುದು *ಅಹಂಕಾರ* ಒಂದಿದ್ದರೆ...

*ಆಯ್ಕೆ ಮತ್ತು ಅವಕಾಶ ಎರಡೂ ಕೂಡ ನಮ್ಮದೆ....*

Sunday, 25 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


 ಅಜ್ಞಾನದಿಂದ ಬಂದ ಅಹಂಕಾರ ವಿಷಕ್ಕೆ ಸಮಾನ...

ಜ್ಞಾನದಿಂದ ಬಂದ ವಿನಯ ಅಮೃತಕ್ಕೆ ಸಮಾನ...

Saturday, 24 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಜನ ನಮ್ಮನ್ನು ಎಷ್ಟು ಚೆನ್ನಾಗಿ ಗುರುತಿಸುತ್ತಾರೆ ಎನ್ನುವುದು ಮುಖ್ಯವಲ್ಲ... ಯಾವ ಕಾರಣಕ್ಕಾಗಿ ನಮ್ಮನ್ನು ಗುರುತಿಸುತ್ತಾರೆ ಎನ್ನುವುದು ಮುಖ್ಯ....😊

Thursday, 22 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

ತೆರೆದ ಕಿಟಕಿ ಮನೆಯ ಬೆಳಕಿಗೆ

ತೆರೆದ ಪುಸ್ತಕ ಮನದ ಬೆಳಕಿಗೆ...

-ಡಿ.ವಿ.ಜಿ.


ಎಲ್ಲರಿಗೂ ವಿಶ್ವ ಪುಸ್ತಕ ದಿನದ ಶುಭಾಶಯಗಳು..💐😊

Wednesday, 21 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಜೀವನದ ಮೂಲತತ್ತ್ವವೆಂದರೆ ಕಡಿಮೆ ಸುಖಿಸುವುದು, ಹೆಚ್ಚು ಸಹಿಸುವುದು....

-ವಿ. ಹ್ಯಾಸ್ಲಿಟ್ 

( ಇಂಗ್ಲೀಷ್ ಕವಿ)

Monday, 19 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 

ಸೂರ್ಯ,ಚಂದ್ರರಿಬ್ಬರೂ ಹೊಳೆಯುತ್ತಾರೆ, ಆದರೆ ಅವರವರ ಸಮಯ ಬಂದಾಗ ಮಾತ್ರ... ಹಾಗೆಯೇ ಜೀವನದಲ್ಲಿ ಕೂಡ. ಕೆಲವು ಬಾರಿ ಕೆಲವು ಸಮಯ- ಸಂದರ್ಭಗಳಲ್ಲಿ ನಾವು ಅಸುಮ್ಮನೆ ಇರುವುದು ತಪ್ಪೇನೂ ಅಲ್ಲ...😊😊

Sunday, 18 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 

ಬೊಂಬೆ  ಆಟವಯ್ಯಾ ಬ್ರಹ್ಮಾಂಡವೇ

ಆ ದೇವನಾಡುವ ಬೊಂಬೆ  ಆಟವಯ್ಯಾ

ಅಂಬುಜನಾಭನ ಅಂತ್ಯವಿಲ್ಲದಾತನ

ತುಂಬು ಮಾಯಾವಯ್ಯಾ ಈ ಲೀಲೆಯ

ಬೊಂಬೆ  ಆಟವಯ್ಯಾ ಬ್ರಹ್ಮಾಂಡವೇ

ಆ ದೇವನಾಡುವ ಬೊಂಬೆ  ಆಟವಯ್ಯಾ....



(ಶ್ರೀ ಕೃಷ್ಣ ಗಾರುಡಿ (೧೯೫೮)

 ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ)

Saturday, 17 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಮೊದಲು ಹಂಗಿಸ್ತಾರೆ...

ಆಮೇಲೆ‌ ಹೆದರಿಸ್ತಾರೆ...

ನೀವು ಬಗ್ಗಲಿಲ್ಲವೆಂದರೆ, 

ನಿಮ್ಮನೇ ಅನುಸರಿಸುತ್ತಾರೆ...😊😉

Friday, 16 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಜೀವ ನಮ್ಮ ಮಾತನ್ನು ಕೇಳುವುದಿಲ್ಲ....ಯಾವಾಗ ಬೇಕಾದರೂ ಹಾರಿ ಹೋಗಬಹುದು...

ಜೀವನ ನಮ್ಮ ಮಾತನ್ನು ಕೇಳುತ್ತದೆ, ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು...😊

Thursday, 15 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಹುಡುಕಿದರೆ ದೇವರೇ ಸಿಗುವ ಈ ದೇಶದಲ್ಲಿ, 

ಸಮಸ್ಯೆಗಳಿಗೆ ಪರಿಹಾರ ಸಿಗೋದಿಲ್ಲವೇ...

ಸ್ವಲ್ಪ ತಾಳ್ಮೆ ಮತ್ತು ಪ್ರಯತ್ನ ಬೇಕಷ್ಟೇ...😄😄

Wednesday, 14 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಾವು ಈಗಲಾದರೂ ಬದಲಾಗೋಣ. ಹೊಸದಾಗಿ ಯೋಚಿಸತೊಡಗೋಣ ಅಂದರೆ, ಯೋಚಿಸುವ ಧಾಟಿ ಬದಲಿಸೋಣ. ಈಗಿನ್ನೂ ಬದುಕು ಆರಂಭವಾದಂತೆ ಹೊಸ ಯೋಜನೆ ಮಾಡೋಣ. ಹಳೆಯ ಕನಸುಗಳಿಗೆ ನನಸಾಗುವ ಅವಕಾಶ ಕೊಡೋಣ. *ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ* ಎನ್ನುವ ಕವಿ ವಾಣಿಯಲ್ಲಿ ನಮ್ಮನ್ನೂ ಈ ಯುಗಾದಿಯಿಂದಲಾದರೂ ಅಂತರ್ಗತಗೊಳಿಸೋಣ...😊

Tuesday, 13 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 ಎಲ್ಲರಿಗೂ ಪ್ಲವನಾಮ ಸಂವತ್ಸರ ಯುಗಾದಿ‌ಹಬ್ಬದ ಹಾರ್ದಿಕ ಶುಭಾಶಯಗಳು...

ಪ್ಲವನಾಮ ಸಂವತ್ಸರವು 60 ಸಂವತ್ಸರಗಳಲ್ಲಿ 35 ನೇ ಸಂವತ್ಸರ.

 ಪ್ಲವನಾಮ‌ ಸಂವತ್ಸರ ನಮ್ಮನ್ನು ಎಲ್ಲಾ ಸಂಕಷ್ಟ ಗಳಿಂದ ದೂರ ಮಾಡುತ್ತದೆ ಎಂದು ಆಶಿಸೋಣ.


ಪ್ಲವ ಪದದ ಅರ್ಥಗಳನ್ನು (ಕೃಪೆ : ವೀಕಿಪೀಡಿಯ , ಹಾಗೂ ಚಕ್ರವರ್ತಿ ಶ್ರೀನಿವಾಸ ಗೋಪಾಲಾಚಾರ್ಯರ ಸಂಸ್ಕೃತ- ಕನ್ನಡ ಶಬ್ದಕೋಶ (ಸಂಪುಟ 4)) ನೋಡಿದಾಗ

  1. ಈಜುವುದು, ತೇಲುವುದು
  2. ಹಾರುವುದು, ನೆಗೆಯುವುದು
  3. ಪ್ರವಾಹ
  4. ತೆಪ್ಪ
  5. ಕಪ್ಪೆ
  6. ಕಪಿ
  7. ಶತ್ರು
  8. ಮೀನಿನ ಬಲೆ
  9. ಮೇಷ, ಟಗರು
  10. ಹಿಂತಿರುಗುವುದು, ಹಿಂದಕ್ಕೆ ಹೋಗುವುದು
  11. ಪ್ರೇರೇಪಿಸುವುದು
  12. ಶಬ್ದ 
  13. ಅಂಜೂರದ ಗಿಡ               ‌
ಇತ್ಯಾದಿ ಅರ್ಥಗಳಿವೆ... 

ಗುಣಪದದಿಸಿ

ಪ್ಲವ

ಉತ್ತಮವಾದ, ಶ್ರೇಷ್ಠವಾದ



ಕಷ್ಟಗಳನ್ನು ಈಜಿ,

ಸುಖಗಳಲ್ಲಿ ತೇಲಿ,

ಸಂತೋಷದಿಂದ ಹಾರಿ, ನೆಗೆದು

ದುಃಖಗಳೆಂಬ ಪ್ರವಾಹಗಳನ್ನು ತಾಳ್ಮೆ ಎಂಬ ತೆಪ್ಪದಲ್ಲಿ ತೇಲಿಸಿ,

ಕಪ್ಪೆಯಂತೆ ಕೂಪಮಂಡೂಕವಾಗದೆ,

ಶತ್ರುಗಳು ನಮಗೆ ಹಾಕುವ ಮೀನಿನ‌ಬಲೆಯಂತಹ ಬಲೆಯಲ್ಲಿ ಬೀಳದೆ,

ಟಗರಿನಂತೆ ಧೈರ್ಯವಾಗಿ ಮುನ್ನುಗ್ಗುತ್ತಾ, ಎಲ್ಲೆಲ್ಲೋ ಹಾರಡುವ ಮನಸ್ಸನ್ನ ನಮ್ಮ ಗುರಿಯೆಡೆಗೆ ಹಿಂದಿರುಗಿಸುತ್ತಾ, ಗೆಲ್ಲಲು ನಮ್ಮನ್ನು ನಾವೇ ಪ್ರೇರೇಪಿಸಿ ಕೊಳ್ಳುತ್ತಾ, ನಮ್ಮ ಸಾಧನೆಗಳು ಶಬ್ದ ಮಾಡಿ, ಅಂಜೂರದ ಗಿಡಗಳ ರೀತಿ ಫಲವನ್ನು ಸಮಾಜಕ್ಕೆ ನೀಡಿ, ಕೋತಿ(ಆಂಜನೇಯನ) ಯ ಪ್ರಭುವನ್ನು ಸ್ಮರಿಸುತ್ತಾ, ಉತ್ತಮವಾದ ಹಾಗೂ ಶ್ರೇಷ್ಠವಾದ ಜೀವನವನ್ನು ನಡೆಸುವ ಶಕ್ತಿ ಈ ಪ್ಲವನಾಮ ಸಂವತ್ಸರ ನಮಗೆಲ್ಲಾ ನೀಡಲಿ...

ಮತ್ತೊಮ್ಮೆ ಎಲ್ಲರಿಗೂ ಯುಗಾದಿಹಬ್ಬದ ಹಾರ್ದಿಕ ಶುಭಾಶಯಗಳು....

-ಶಿವಶಂಕರ್. ಎಸ್.ಎಸ್.

Sunday, 11 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ತುಂಬಾ ಸಲ ನಮ್ಮವರು ನಮ್ಮನ್ನು ತುಂಬಾ ಹಚ್ಚಿಕೊಂಡಿರುತ್ತಾರೆ ಅನ್ನುವ ಭಾವನೆ ಇರುತ್ತದೆ.ಆದರೆ ಒಮ್ಮೆ ನಾವು ಅಂದುಕೊಂಡಷ್ಟು ನಮ್ಮನ್ನು ಹಚ್ಚಿಕೊಂಡಿಲ್ಲ ಎಂದು ಗೊತ್ತಾದಾಗ ಆಗುವ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತಾಗುತ್ತದೆ....😄😄😄😄🙃

Saturday, 10 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನೆನಪೆಂಬುದು ಯಾವಾಗಲೂ, ಮೃದು ಹೂವಲ್ಲ,

ತೀಕ್ಷ್ಣ ಮುಳ್ಳಿನಂತೆ... ಚುಚ್ಚಿದಷ್ಟೂ ಮನಸ್ಸು ಅಳುವುದು😔🙃

Friday, 9 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃



ದೇವ್ರ್ ಏನ್ರ ಕೊಡಲಣ್ಣ

ಕೊಡದಿದ್ರೆ ಬುಡಲಣ್ಣ

ನಾವೆಲ್ಲ ಔನೀಗೆ ಬಚ್ಚ!

ಔನ್ ಆಕಿದ್ ತಾಳ್ದಂಗೆ

ಕಣ್ ಮುಚ್ಚೊಂಡ್ ಯೇಳ್ದಂಗೆ

ಕುಣಿಯಾದೆ ರತ್ನನ್ ಪರ್ಪಂಚ!


--ಜಿ ಪಿ ರಾಜರತ್ನಂ

Thursday, 8 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನೆನಪೆಂಬುದು ಯಾವಾಗಲೂ ಸುರಿವ ಮಳೆಯಲ್ಲ,  ಕೆಲವೊಮ್ಮೆ ಸುಡುವ ಬಿಸಿಲಂತೆ ಹೆಚ್ಚಾದಷ್ಟೂ ಮನಸ್ಸು ಸುಡುವುದು...😊😄😔🙃

Wednesday, 7 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಮಗೆ ಸಿಗಬೇಕು ಎಂದು ಬಯಸುವ ಪ್ರೀತಿ ನಮ್ಮೊಳಗೆ ಅಡಗಿರುತ್ತದೆ; ಅದನ್ನು ಯಾವ ಪ್ರಮಾಣದಲ್ಲಿ ನಾವು ಹೊರಗೆ ಹಂಚುತ್ತೇವೆಯೋ ಅಷ್ಟೇ ಪ್ರಮಾಣದಲ್ಲಿ ನಮಗೆ ತಿರುಗಿ ಲಭಿಸುತ್ತದೆ...😊

Tuesday, 6 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 

ಅವಳ ನೆನಪು ಬಂದೊಡನೆ,

ಒಂಟಿತನವೂ ಹಿತವೆನಿಸಿತು....😊😄😉

Monday, 5 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಓದಿದ ಪುಸ್ತಕ ಹಳೆಯದಾಗಬಹುದು, 

ಆದರೆ ಜ್ಞಾನ ಹಳೆಯದಾಗಲಾರದು. 

ದೀಪದ ಬೆಳಕಿನಂತೆ ಪ್ರತಿಕ್ಷಣವೂ 

ಪ್ರಜ್ವಲಿಸುತ್ತಿರುತ್ತದೆ....

Sunday, 4 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


 ನಮ್ಮ ಕಥೆಯಲ್ಲಿ ನಾವೇ  *ನಾಯಕ* ಆಗದಿರುವುದೇ ನಮ್ಮ ಪ್ರಥಮ ಸೋಲು...

Friday, 2 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಮ್ಮನ್ನು ಪ್ರೀತಿಸುವವರ ಜೀವನದಲ್ಲಿ ನಾವು ಅತ್ಯಂತ ಅನಿವಾರ್ಯವಾದವರು ಎಂದು ನಮ್ಮನ್ನು ನಾವೇ ಮೂರ್ಖರನ್ನಾಗಿಸಿಕೊಳ್ಳುತ್ತಾ, ಕನಸುಗಳ ಬಲಿ ಕೊಡುವುದಕ್ಕಿಂತ ದೊಡ್ಡ

ಕ್ರೌರ್ಯ ಬೇರೆ ಇಲ್ಲ.


-ಪೂರ್ಣಿಮಾ ಮಾಳಗಿಮನಿ 

( *ಇಜಯ* ಕಾದಂಬರಿಯಲ್ಲಿ)

Wednesday, 31 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

ಎಲ್ಲರಿಗೂ ಕನಸುಗಳಿರುತ್ತವೆ. ಆದರೆ ಪರಿಸ್ಥಿತಿಗಳು ಅಥವಾ ತಮ್ಮದೇ ಮಿತಿಗಳಿಂದಾಗಿ ಆ ಕನಸುಗಳು ಚಿಗುರುವುದಕ್ಕೂ ಮುನ್ನವೇ ಕಮರಿ ಹೋಗುತ್ತವೆ..😊🙃

Tuesday, 30 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಮಾಯೆಗೆ ಸಿಲುಕಿ ಮರುಳಾದ ಮನುಜಾ,

ದಾರಿ ಅರಿಯದೇ ಮಿಡುಕುವೇ ಏಕೆ,

ಒಳಗಿನ ಕಣ್ಗಳ ತೆರೆದೂ ನೋಡು,

ಜ್ಞಾನ ಜ್ಯೋತಿಯು ಕಾಣುವುದು.


-ಬೇಡರಕಣ್ಣಪ್ಪ.

Monday, 29 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಸೋತ ಕಾಲುಗಳಲ್ಲೇ ಗೆಲುವಿನ ಕಡೆ ಓಡಬೇಕು... 

*ಅದೇ ಬದುಕು* ..


-ಭಗವದ್ಗೀತೆ.

Sunday, 28 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಬದುಕಲ್ಲಿ ಬಣ್ಣವಿರಲಿ..

ಬಣ್ಣ ಬದಲಿಸುವುದೇ ಬದುಕಾಗದಿರಲಿ....




✍️ವಿನೋದ್ ಸರ್

Saturday, 27 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


 ಯಾವುದಕ್ಕೂ ಜಾಸ್ತಿ ತಲೆ ಕೆಡಿಸಿಕೊಳ್ಳಬಾರದು....

ಆಗುವುದು‌ ಆಗುತ್ತದೆ....

ಹೋಗುವುದು ಹೋಗುತ್ತದೆ..😊

Wednesday, 24 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

ಯಾರಾದರೂ ನಮಗೆ ಬೈದಾಗ ಮಾತಿನಿಂದಲೇ ಉತ್ತರ ಕೊಡಬೇಕೆಂದೇನೂ ಇಲ್ಲ.

ಸಿಟ್ಟಿನಿಂದ ಉತ್ತರ ಕೊಟ್ಟು ಪರಿಸ್ಥಿತಿಯನ್ನು ಇನ್ನಷ್ಟು ಹಾಳು ಮಾಡುವುದರ ಬದಲು ಆ ಕ್ಷಣದಲ್ಲಿ ಮೌನವಾಗಿರುವುದೇ ಲೇಸು.

Tuesday, 23 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಎಂದೋ ಓದಿದ ಪುಸ್ತಕ, ಯಾವತ್ತೋ ಕೇಳಿದ ಕವಿತೆ, ಎಲ್ಲೋ ಕಂಡ ಮುಖ, ಅಪರಾತ್ರಿಯಲ್ಲಿ ಸುರಿದ ಮಳೆ, ಎಲ್ಲೋ ಆದ ಅವಮಾನ ಇವೆಲ್ಲವೂ ಹೀಗೆಯೇ. ನಮ್ಮ ಮನಸ್ಸಿನೊಳಗೆ ಕೂತು ನಮ್ಮನ್ನು ಮುದಗೊಳಿಸುತ್ತಾ, ಗಾಬರಿ ಬೀಳಿಸುತ್ತಾ, ಎಚ್ಚರಿಸುತ್ತಾ, ತಲ್ಲಣಕ್ಕೆ ತಳ್ಳುತ್ತಾ ಇರುತ್ತದೆ. ಕೆಲವೊಮ್ಮೆ ಇವುಗಳ ನೆನಪಿನಲ್ಲಿ ನಾವು ಕಳೆದುಹೋಗುತ್ತೇವೆ.

Monday, 22 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಾವು ಮಾಡುವ ಕೆಲಸಗಳನ್ನು ಜನರು ಅವರವರ ಮನಸ್ಸಿನ ಭಾವನೆಗಳಿಗೆ ತಕ್ಕ‌ಹಾಗೆ ಅರ್ಥ ಮಾಡಿಕೊಳ್ಳುತ್ತಾರೆ.😀

Saturday, 20 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಮುಚ್ಚು ಮರೆ ಇಲ್ಲದೆಯೇ ನಿನ್ನಮುಂದೆಲ್ಲವನು ಬಿಚ್ಚಿಡುವೇ ಓ ಗುರುವೇ ಅಂತರಾತ್ಮ.. 

ಪಾಪವಿದೆ ಪುಣ್ಯವಿದೆ , ನರಕವಿದೆ ನಾಕವಿದೆ, ಸ್ವೀಕರಿಸು ಓ ಗುರುವೇ ಅಂತರಾತ್ಮ.. 🙏🏻


-ಕುವೆಂಪು

Friday, 19 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

ಇನ್ನೊಬ್ಬನ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ , ನಮ್ಮದೇ ಹುಚ್ಚುತನ ನಮಗೆ ಕಾಣಿಸುತ್ತದೆಯೇ ? 😊😊

– ಶಿವರಾಮ ಕಾರಂತ

Thursday, 18 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಸುಖ ಹೆಚ್ಚಾದಂತೆ ಮನುಷ್ಯ ಮೈಮರೆತು‌ ಬಿಡುತ್ತಾನೆ...ಮತ್ತೆ ಅವನನ್ನು ಎಚ್ಚರಿಸಲು ದುಃಖವೇ ಬರಬೇಕು...😊😀

Wednesday, 17 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಾವು FREE ಇದ್ದೀವಿ‌ ಅಂದ ತಕ್ಷಣ ನಮಗೆ ಬೇಕಾದವರೂ FREE ಇರಲೇ ಬೇಕು ಅಂತೇನಿಲ್ಲ...😀😀😀😀

Tuesday, 16 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಸೇಡು ಎಂದರೆ ತಿರುಗಿ ಬೀಳುವುದಲ್ಲ,

ಬೆಳೆದು ನಿಲ್ಲುವುದು...

Monday, 15 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಸೋಲಿನ ಬಗ್ಗೆ ಯೋಚಿಸುವುದು ಕೂಡ ತಪ್ಪು ಎನ್ನುವ ವಾತಾವರಣದಲ್ಲಿ ಬೆಳೆದರೆ ಸೋಲನ್ನು ಅಷ್ಟು ಸುಲಭದಲ್ಲಿ ಸ್ವೀಕರಿಸಲಾಗುವುದಿಲ್ಲ....😊

Sunday, 14 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಪ್ರತಿಫಲ ಅಪೇಕ್ಷಿಸದೆ ಮಾಡಿದ ಸಹಾಯ ಖಂಡಿತಾ ವ್ಯರ್ಥವಾಗುವುದಿಲ್ಲ.ಬದಲಿಗೆ ಭವಿಷ್ಯದಲ್ಲಿ ನಿರೀಕ್ಷೆಗೂ ಮೀರಿದ ಫಲ ಕೊಡುತ್ತದೆ.😊😊😊

Thursday, 11 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಅನ್ಯೋನ್ಯ ದಾಂಪತ್ಯ ಎಂದರೆ ಅದು ಶಿವ–ಪಾರ್ವತಿಯರ ದಾಂಪತ್ಯವೇ ಹೌದು. ಶಿವನು ತನ್ನ ಶರೀರದ ಅರ್ಧಭಾಗವನ್ನೇ ತನ್ನ ಮಡದಿಗೆ ಮೀಸಲಾಗಿರಿಸಿ ಅರ್ಧನಾರೀಶ್ವರನಾದವನು; ದಾಂಪತ್ಯ ಎಂದರೆ ಗಂಡು ಹೆಚ್ಚು, ಹೆಣ್ಣು ಕಡಿಮೆ ಎಂದೋ ಅಥವಾ ಹೆಣ್ಣು ಹೆಚ್ಚು, ಗಂಡು ಕಡಿಮೆ ಎಂದೋ ಲೆಕ್ಕಾಚಾರದ ವ್ಯವಹಾರ ಅಲ್ಲ, ಅದು ಇಬ್ಬರ ಸಮಪಾಲಿನ ಸಮಬಾಳು ಎಂಬುದನ್ನು ಅರ್ಧನಾರೀಶ್ವರನ ಕಲ್ಪನೆಯಲ್ಲಿ ಕಾಣಬಹುದು.

ಶಿವನಿಗೆ ತನ್ನ ಮಡದಿಗೆ ಅರ್ಧಶರೀರವನ್ನೇ ಕೊಡುವಷ್ಟು ಪ್ರೀತಿ ಇದೆ ನಿಜ; ಹೀಗಿದ್ದರೂ ಅವನು ಪರಮವೈರಾಗ್ಯಸ್ವರೂಪಿ. ಅವನು ಕೇವಲ ಭೋಗದಲ್ಲಿಯೇ ಮುಳುಗುವವನೂ ಅಲ್ಲ ಅಥವಾ ಕೇವಲ ತ್ಯಾಗದಲ್ಲಿಯೇ ತಲ್ಲಿನನಾಗುವವನೂ ಅಲ್ಲ; ತ್ಯಾಗಭೋಗದ ಸಮನ್ವಯದ ಸಂಕೇತವೇ ಅವನು.


ಹೀಗೆ ವಿಶಿಷ್ಟ ದೇವತೆಯಾದ ಶಿವನ ಆರಾಧನೆಗೆಂದೇ ಮೀಸಲಾದ ದಿನವೇ ಶಿವರಾತ್ರಿ.


*ತಮಗೆಲ್ಲರಿಗೂ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು*🙏🏻😊💐

Wednesday, 10 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಕೆಲವು ಬಾರಿ ನಮ್ಮ ಒಳ್ಳೆಯತನವೇ ನಮಗೆ ಮುಳ್ಳಾಗುತ್ತದೆ...😀😀😀

Tuesday, 9 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಜೀವನದಲ್ಲಿ ಕೆಲವೊಂದು ನೋವುಗಳು ಬದುಕಲು ಬಿಡುವುದಿಲ್ಲ... 😊😊

              ಮತ್ತು 

ಕೆಲವು ಜವಾಬ್ದಾರಿಗಳು 

ಸಾಯಲು ಬಿಡುವುದಿಲ್ಲ...😊😊

Monday, 8 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಹೆಣ್ಣೆಂದರೆ ತಾಯಿ

ಹೆಣ್ಣೆಂದರೆ ಮಗಳು

ಹೆಣ್ಣೆಂದರೆ ಅಕ್ಕ

ಹೆಣ್ಣೆಂದರೆ ತಂಗಿ

ಹೆಣ್ಣೆಂದರೆ ಮಡದಿ

ಹೆಣ್ಣೆಂದರೆ ಅತ್ತೆ

ಹೆಣ್ಣೆಂದರೆ ಸೊಸೆ

ಇವೆಲ್ಲಕ್ಕಿಂತಲೂ ಮಿಗಿಲಾಗಿ

ಹೆಣ್ಣೆಂದರೆ *ಶಕ್ತಿ* .

ಈ *ಮಹಾಶಕ್ತಿಯನ್ನು* ಗೌರವಿಸಲು ಈದಿನ  ಮಾತ್ರ ಸೀಮಿತವಾಗದಿರಲಿ..


 ✍️ ವಿನೋದ್ ಸರ್.


ಎಲ್ಲಾ ಮಹಿಳೆಯರಿಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು...💐😊🙏🏻

Sunday, 7 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

ಅವರಿವರ ಕಥೆಗಳಲ್ಲಿ ಅತಿಥಿ ಪಾತ್ರಗಳನ್ನು ಮಾಡುತ್ತಾ ನಮ್ಮ ಕಥೆಯಲ್ಲಿ ನಾವು *ನಾಯಕ* ಅನ್ನುವುದನ್ನೇ ಮರೆತಿರುತ್ತೇವೆ...😊😀

Saturday, 6 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಪ್ರೀತಿ, ಕಾಳಜಿ, ಅನುಕಂಪ, ಸಹಾನುಭೂತಿ, ಸ್ಪಂದನೆ - ಇವೆಲ್ಲಾ ಗ್ರಾಂಥಿಕ ಪದಗಳಲ್ಲ. ಮನಸ್ಸಿನ ಗಾಯವನ್ನು ವಾಸಿ ಮಾಡುವ ದಿವ್ಯ ಔಷಧಿಗಳು. ಇವುಗಳ ಬಲದಿಂದ ಎಂಥಾ ನೋವನ್ನೂ ನಿವಾರಿಸಬಹುದು...

Tuesday, 2 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಮನುಷ್ಯ ಸಮುದ್ರದ ಹಾಗೆ, ಜನರು ಅದರ ಅಲೆಗಳನ್ನು ಮಾತ್ರ ಗಮನಿಸುತ್ತಾರೆ. ಅದರ ಶಾಂತತೆ, ಶಕ್ತಿ ಮತ್ತು ಅಗಾಧತೆಯನ್ನು ತಿಳಿಯಲು ಬಯಸುವುದಿಲ್ಲ....😊

Monday, 1 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಕಂಡದ್ದನ್ನು ಬಯಸುವುದೇ *ಕಾಮ* .  

ಬಯಸಿದ್ದು ದೊರೆಯದಿದ್ದರೆ *ಕ್ರೋಧ* . 

ದೊರೆತರೆ ಇನ್ನಷ್ಟು ದೊರೆಯಲೆಂಬ *ಲೋಭ* .

ಇನ್ನಷ್ಟು ದೊರಕಿತೆಂದರೆ ಅದು ತನ್ನ ಕೈ ಬಿಟ್ಟು ಹೊಗಬಾರದೆಂಬುದೆ *ಮೋಹ* . 

ಅದು ಕೈ ಬಿಟ್ಟು ಹೋಗದೆ ತನ್ನಲ್ಲಿಯೇ ಉಳಿದರೆ ಅದು ತನ್ನೊಬ್ಬನಿಗೆ ಇದೆಯೆಂಬುದು *ಮದ* . 

ತನ್ನಲ್ಲಿರುವುದು ಬೇರೋಬ್ಬನಲ್ಲಿ ಇದೆ ಎಂದು ತಿಳಿದು ಬಂದಾಗ *ಮತ್ಸರ* . 

ಹೀಗೆ ಕಾಮವೊಂದರಿಂದ ಕಾಮವೂ ಸೇರಿ 6 ವೈರಿಗಳು ರಕ್ತ ಬೀಜಾಸುರನ ಸಂತತಿಯಂತೆ ಬೆಳೆಯುತ್ತಾ ಹೋಗುತ್ತದೆ....

Saturday, 20 February 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಭಯ ಬೀಳಿಸೋ ಜನ ಜಾಸ್ತಿ ಆದಂತೆಲ್ಲಾ ಮನುಷ್ಯನಿಗೆ ಧೈರ್ಯ ಹೆಚ್ಚಾಗುತ್ತದೆ....😊😊😄

Wednesday, 17 February 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಎಲ್ಲಾ ಕಡೆ ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಶ್ಯಕತೆ ಇರುವುದಿಲ್ಲ.😊😊😊

Tuesday, 16 February 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಮ್ಮ watch ನಿಂತಿದೆ ಅಂತ ಕಾಲ ನಿಲ್ಲುವುದಿಲ್ಲ..

Monday, 15 February 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


*ದೃಷ್ಟಿಪೂತಂ ನ್ಯಸೇತ್ ಪಾದಂ”* 

(ಕಾಲಿಡುವಲ್ಲಿ ಮೊದಲು ಕಣ್ಣಿಡು)

ಕಾಲುಗಳ ಪಥದಲ್ಲಿ ಕಲ್ಲು-ಮುಳ್ಳುಗಳಿರಬಹುದು,

ಹಳ್ಳ-ದಿಣ್ಣೆಗಳಿರಬಹುದು, ಕವಲುದಾರಿಗಳಿರಬಹುದು.

ಆದುದರಿಂದ, ಕಾಲು ಸಂಚರಿಸಬೇಕಾದ ಪ್ರದೇಶವನ್ನು ಕಣ್ಣು ಮೊದಲು ಪರೀಕ್ಷಿಸಿ – “Tested OK“ಎಂದು certify ಮಾಡಿದ ಮೇಲೆ ತಾನೇ ಹೆಜ್ಜೆಯಿಡಬೇಕಾದದ್ದು..!

ಈ ಮಾತುಗಳು ಜೀವನ ಪಥದಲ್ಲಿಡುವ ಹೆಜ್ಜೆಗಳಿಗೂ ಅನ್ವಯವಾಗುತ್ತವೆ..😊😊


-ಶ್ರೀಶ್ರೀಶ್ರೀ ರಾಘವೇಶ್ವರ ಸ್ವಾಮೀಜಿ

Sunday, 14 February 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃



ಸೋಲು ಎನ್ನುವುದು ಜೀವನದ ಅವಿಭಾಜ್ಯ ಅಂಗ. ಸೋಲದಿದ್ದರೆ ನಾವೆಂದೂ ಕಲಿಯುವುದಿಲ್ಲ.ಕಲಿಯದಿದ್ದರೆ,ನಾವೆಂದೂ ಬದಲಾಗುವುದಿಲ್ಲ.ಬದಲಾಗದಿದ್ದರೆ ನಿಂತ ನೀರಾಗಿರುತ್ತೇವೆ. ಸೋಲು ಬದುಕಿನ ಅಂತ್ಯವಲ್ಲ. ಅದರಿಂದ ಉತ್ತಮ ಅನುಭವ ಪಡೆಯಬಹುದು...😊😊

Saturday, 13 February 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಕೆಲವು ಕಥೆಗಳು, ಆರಂಭದಲ್ಲೇ ಅಂತ್ಯ ಕಾಣುತ್ತವೆ...

Thursday, 11 February 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ದೂರದಿಂದ ಎಲ್ಲವೂ *ಸೂಪರ್* 😊

Wednesday, 10 February 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಮನುಷ್ಯನ ಅಂತ್ಯ ಹತ್ತಿರವಾಗುತ್ತಾ ಬಂದತೆಲ್ಲಾ, ತಾನು ನಡೆದು ಬಂದ‌ ಹಾದಿ ಮರೆತು ಅಹಂಕಾರದಿಂದ‌ ವರ್ತಿಸಲು ಪ್ರಾರಂಭಿಸುತ್ತಾನೆ..😊😊😊😀

Tuesday, 9 February 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಯಾರೆದುರು ಸೋತೆ ಎನ್ನುವುದಕ್ಕಿಂತ, ಯಾಕೆ ಸೋತೆ ಎನ್ನುವುದು ಮುಖ್ಯ.

Monday, 8 February 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಗುರಿ ಎಂಬುದು ಒಂದು ನಕ್ಷತ್ರವಿದ್ದಂತೆ;ಅದನ್ನು ದಾರಿದೀಪ ಎಂದುಕೊಂಡು  ಹಿಂಬಾಲಿಸಿ ನಡೆದರೆ ಗುರಿ ಮುಟ್ಟುವೆವು...😊

Sunday, 7 February 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

*ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ*  ಎನ್ನುವ ಶರಣಾರ್ಥಿ ಭಾವ ನಮ್ಮಲ್ಲಿರಬೇಕು.

ಎಲ್ಲರಿಗಿಂತ ಮೇಲೆ ಅವನೊಬ್ಬನಿದ್ದಾನೆ. ಅವನು

*ಎಲ್ಲರನ್ನೂ , ಎಲ್ಲವನ್ನೂ* ನೋಡುತ್ತಿದ್ದಾನೆ ಎನ್ನುವ ಅರಿವು ನಮ್ಮಲ್ಲಿರಬೇಕು...😊

Friday, 5 February 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

  🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಕೆಲವರು ಒಂದಾಗಲ್ಲ ಅಂತ ಗೊತ್ತಿದ್ರೂ, ದೇವರು ಯಾಕೆ ಆ ಸುಂದರ ಸಂಬಂಧವನ್ನು ಪರಿಚಯ ಮಾಡಿಸುತ್ತಾನೋ ಗೊತ್ತಿಲ್ಲ...😊🙃

Wednesday, 3 February 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಒಬ್ಬ ಮನುಷ್ಯನಿಗೆ ಅವನ ಮೇಲೆ ಅವನಿಗೆ ನಂಬಿಕೆ ಇಲ್ಲ ಎಂದರೆ, ಬೇರೆಯವರ ಮೇಲೆ ನಂಬಿಕೆ ಬರಲು ಹೇಗೆ ಸಾಧ್ಯ???😊😊😀

Tuesday, 2 February 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

ಎಷ್ಟು ಬೇಕೋ ಅಷ್ಟು ಮಾತ್ರ ಮಾತಾಡಿದಾಗ, ನಮ್ಮ ಮಾತಿನ ಬೆಲೆಯೂ ಹೆಚ್ಚುತ್ತದೆ...😊

Sunday, 31 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃



ಓದಿದ್ದು....😀😀


ನಾವು ಪಿಯೂಸಿ ಓದುತ್ತಿದ್ದಾಗ ನಮ್ಮ ಕಣ್ಣೆದುರು ಸುಳಿದಾಡಿ ಒಂಥರ ಖುಷಿ ಕೊಡುತ್ತಿದ್ದ ನಮ್ಮ ತರಗತಿಯ ಹುಡುಗಿಯನ್ನು ನಾವು ಆಮೇಲೆ ಭೇಟಿಯಾಗಲೇ ಇಲ್ಲ. ಆದರೆ ಈಗಲೂ ಅವಳ ಅದೇ ಮುಖ ಕಣ್ಮುಂದೆ ಸುಳಿಯುತ್ತದೆ. *ಆಕೆಗೆ ನಮ್ಮ ನೆನಪಿನಲ್ಲಿ ವಯಸ್ಸೇ ಆಗಿಲ್ಲ.* ಈಗಲೂ ಅವಳ ಹೊಳೆಯುವ ಕಣ್ಣುಗಳು, ತುಟಿಯಂಚಿನಲ್ಲಿ ಕಂಡೂ ಕಾಣದಂತಿದ್ದ ನಗು ಯಾವುದನ್ನೂ ಕಾಲ ಅಳಿಸಿಹಾಕಿಲ್ಲ....😊😊

Saturday, 30 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಾವಿದ್ದ ಪರಿಸರ, ಪರಿಸ್ಥಿತಿ ಎರಡೂ ಬದಲಾದಾಗ ತುಂಬಿಕೊಳ್ಳುವ ಅಗತ್ಯ ಅನಿವಾರ್ಯ *ಮೌನ*..

Thursday, 28 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಮನದಲ್ಲಿನ ಎಷ್ಟೋ ಪ್ರಶ್ನೆಗಳಿಗೆ, 

ಪ್ರಶ್ನೆಗಳೇ ಪ್ರತ್ಯುತ್ತರ...😊🙃

Wednesday, 27 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಶ್ರಮ ಅನ್ನೋ ಆಳಕ್ಕೆ ಬೇರುಗಳು ತಲುಪಿದಾಗಲೇ,

 ಆಕಾಶ ಅನ್ನೋ ಎತ್ತರಕ್ಕೆ ಮರವು ಬೆಳೆಯುವುದು...

Tuesday, 26 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃



ಹೇಳಿ ಕಳೆದುಕೊಂಡ ಪ್ರೀತಿಗಿಂತ, ಹೇಳದೇ ಮನದಲ್ಲೇ ಉಳಿಸಿಕೊಂಡ ಪ್ರೀತಿ ಬಹಳ ಕಾಡಿಸುತ್ತೆ....😄😊😀

Monday, 25 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಸೋಲು ಕೂಡ ಒಂದು ಸಾಧ್ಯತೆ ಎನ್ನುವುದನ್ನು ಅರಿತೇ ಸಾಧನೆಯ ಮೆಟ್ಟಿಲೇರುವ ತಯಾರಿ ನಡೆಸುತ್ತಿರಬೇಕು...

Sunday, 24 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


 *ದೇಹವೇ ರಥ, ಪಂಚೇದ್ರಿಯಗಳೇ ಕುದುರೆಗಳು, ಮನಸ್ಸೇ ಲಗಾಮು,ಬುದ್ದಿಯೇ ಸಾರಥಿ,ಆತ್ಮವೇ ಪ್ರಯಾಣಿಕ.* 


 *-ಭಗವದ್ಗೀತೆ*

Saturday, 23 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಾವು ಗೆಲುವಿನ ಹಿಂದೆ ಅದೆಷ್ಟು ಬಿದ್ದಿದ್ದೀವೆಂದರೆ, ನಮಗೆ ಸಿನೆಮಾದಲ್ಲಿ ಹೀರೋ ಕೂಡ ಕೊನೆಯಲ್ಲಿ ಗೆಲ್ಲಬೇಕು, ಸೋತರೆ ರುಚಿಸುವುದಿಲ್ಲ.😀😀😀

Friday, 22 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಇರಲಿ ಗುರಿಯ ಹಂಬಲ..

ಕಳೆದುಕೊಳ್ಳದಿರಿ‌ ಆತ್ಮಬಲ..

ಸಿಗದಿದ್ದರೇನು ಯಾರ ಬೆಂಬಲ,

ಒಂದು ಬಾರಿ ಸಿಕ್ಕರೆ ಸಾಕು ಭಗವಂತನ ಬಲ....

Thursday, 21 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

ದೇವರು ಕಷ್ಟ ಕೊಟ್ಟೂ ಕಾಪಾಡುತ್ತಿದ್ದಾನೆ ಎಂದರೆ, ನೀವು ಯಾರಿಗೂ ಕೆಟ್ಟದ್ದು ಬಯಸಿಲ್ಲ ಎಂದರ್ಥ...😊

Wednesday, 20 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

ಮೌನ ಎನ್ನುವುದು ಖಾಲಿತನವಲ್ಲ..

Tuesday, 19 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಕೆಲವೇ ಗಂಟೆಗಳಲ್ಲಿ ಮನುಷ್ಯನ ಮನಸ್ಸಿನ ಮೇಲೆ ಪ್ರಭಾವ ಬೀರಿ ಬದುಕಿನ ದಿಕ್ಕು ಬದಲಾಯಿಸುವ ಶಕ್ತಿ ಪುಸ್ತಕ ಓದುವುದರಲ್ಲಿದೆ....

Monday, 18 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


 ನಮ್ಮ ಕೋಪ, ಮನಸ್ಸಿನ ತಳಮಳ, ಬೇಸರ ಎಲ್ಲವನ್ನೂ ನಿವಾರಿಸುವ ಶಕ್ತಿ ಮೌನಕ್ಕಿದೆ...

Sunday, 17 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 *ಇಂದು* ಪ್ರಯತ್ನಪಟ್ಟರೆ, 

 *ನೆನ್ನೆ* ಗಳ ಕನಸುಗಳು,

 *ನಾಳೆ* ಗಾದರೂ ನನಸಾಗುತ್ತವೆ....😊😊

Saturday, 16 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಮೌನ ಎಂದರೆ ನನ್ನ ಜೊತೆಗಷ್ಟೇ ನಾನು ಮಾಡುವ ಸಂಭಾಷಣೆ....😊😊

Wednesday, 13 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


*ಬದಲಾಯಿತು ಸೂರ್ಯನ ಪಥವು...*

*ಮುಂದುವರೆಯಲಿ ನಮ್ಮೆಲ್ಲರ ನಲಿವು-ಗೆಲುವಿನ ರಥವು...*

*ಸಂಕ್ರಾಂತಿಯ ನಂತರ ಎಲ್ಲರ ಮನಗಳಲ್ಲೂ ಆಗಲಿ SOMEಕ್ರಾಂತಿ..*

*ಎಲ್ಲರಿಗೂ ಸಿಗಲಿ ಸುಖಶಾಂತಿ...*

 *ಎಲ್ಲರಿಗೂ ಮಕರ ಸಂಕ್ರಾತಿಯ ಶುಭಾಶಯಗಳು💐💐🙏🏻🙏🏻😊😊😊😊*

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಬಾಯಿ ಸುಮ್ಮನಿದ್ದರೆ ಮೌನ,

ಮನಸ್ಸು ಸುಮ್ಮನಿದ್ದರೆ ಧ್ಯಾನ...😊😊

Tuesday, 12 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

ದೇವರ ಆಟ ಬಲ್ಲವರಾರು..
ಆತನ ಎದಿರು ನಿಲ್ಲುವರಾರು..
ಕೇಳದೆ ಸುಖವ ತರುವ..
ಹೇಳದೆ ದುಃಖವ ಕೊಡುವ..
ತನ್ನ ಮನದಂತೆ ಕುಣಿಸಿ ಆಡುವ..😄😄😊

Monday, 11 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಯಾರು ಏನು ಬೇಕಾದರೂ ಯೋಚಿಸಿಕೊಳ್ಳಲಿ, ನಿಮ್ಮ ಪವಿತ್ರತೆ, ನೈತಿಕತೆ, ಪ್ರಾಮಾಣಿಕತೆ ಹಾಗೂ ಭಗವದ್ಭಕ್ತಿಯ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬೇಡಿ...👍

Sunday, 10 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಮೌನವಾಗಿರುವ ಮೋಡಗಳು‌ ಮಾತ್ರ ಮಳೆ ಸುರಿಸುತ್ತವೆಯೇ ಹೊರತು, ಬಡಾಯಿಕೊಚ್ಚಿಕೊಳ್ಳುವ ಗುಡುಗು-ಸಿಡಿಲುಗಳಲ್ಲ..😊😊

Saturday, 9 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಅಜ್ಞಾನವಿದ್ದಾಗಲೇ ಜ್ಞಾನದ ಮಹತ್ವದ ಅರಿವಾಗುವುದು. ಜ್ಞಾನಗಳಿಕೆಗೆ ಮೂಲ ಅಜ್ಞಾನವೇ. ಅಜ್ಞಾನವನ್ನು ಗುರುತಿಸುವುದು ಕೂಡ ಜ್ಞಾನವೇ...😊

Friday, 8 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಮತ್ತೆ ಮತ್ತೆ ಕತ್ತಲು ಆವರಿಸಿದಂತೆ ಅಜ್ಞಾನವೂ ಆವರಿಸುತ್ತಲೇ ಇರುತ್ತದೆ. ಹಾಗೆ ಆವರಿಸಿದಾಗಲೆಲ್ಲಾ ಬೆಳಕೆಂಬ ಜ್ಞಾನದೀಪವನ್ನು ಹಚ್ಚುತ್ತಲೇ ಇರಬೇಕು...

Wednesday, 6 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

ಪ್ರಕೃತಿಗಿಂತ ಸುಂದರವಾದ,
ಶಾಂತವಾದ,ಅಷ್ಟೇ ಭೀಕರವೂ ಆಗಬಲ್ಲದ್ದು ಬೇರೊಂದಿಲ್ಲ...

Tuesday, 5 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಸೋಲು ಯಾರಿಗಿಲ್ಲ.! ನೋವು , ಅವಮಾನ , ಸನ್ಮಾನ ಸಹಜ. ಇವೆಲ್ಲಗಳನ್ನು ಮುಕ್ತವಾಗಿ ಸ್ವೀಕರಿಸಿ ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಮುನ್ನಡೆಯಬೇಕು.😊

Monday, 4 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ  ಸೋಲು, ಗೆಲುವು ಚಕ್ರಗಳಂತೆ ಸದಾ ತಿರುಗುತ್ತಿರುತ್ತವೆ. ಹಗಲು ರಾತ್ರಿಗಳಂತೆ ಬಂದು ಹೋಗುತ್ತಿರುವೆ. ನನ್ನ ಬದುಕಿನ ಉದ್ದಕ್ಕೂ ಗೆಲುವೇ ಕಂಡಿರುವೆ, ನಾನೆಂದೂ ಸೋತೆ ಇಲ್ಲ ಎನ್ನುವ ಯಾವ ಒಬ್ಬ ವ್ಯಕ್ತಿಯನ್ನು ಈ ಜಗತ್ತಿನಲ್ಲಿ ಕಾಣಲಾರೆವು...😊😊

Sunday, 3 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಜೀವನಕ್ಕೂ– ಗಣಿತಕ್ಕೂ ಸಂಬಂಧವಿದೆ. ಏಕೆಂದರೆ, ಜೀವನದಲ್ಲೂ ಕಳೆದುಕೊಳ್ಳುವುದು ಹಾಗೂ ಪಡೆದುಕೊಳ್ಳುವುದು ಇರುತ್ತದೆ. ನಮ್ಮ ಪ್ರತಿಷ್ಠೆಗಳನ್ನು ಕಳೆದುಕೊಳ್ಳಬೇಕು ಹಾಗೂ ಜ್ಞಾನವನ್ನು ಪಡೆದುಕೊಳ್ಳಬೇಕು. ಒಳಿತು, ಕೆಡಕುಗಳನ್ನು ಲೆಕ್ಕಾಚಾರ ಮಾಡಿ ಒಳಿತಿನ ಹಾದಿಯಲ್ಲಿ ಸಾಗಬೇಕು....

Saturday, 2 January 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಸ್ಪರ್ಧೆ ಬದುಕಿನ ಒಂದು ಭಾಗವಷ್ಟೇ. ಸ್ಪರ್ಧೆಯೇ ಬದುಕಲ್ಲ. ಸ್ಪಷ್ಟವಾಗಿ ಇದನ್ನು ಅರಿತು ಮುನ್ನಡೆಯಬೇಕು..😊

 ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ