Saturday, 5 September 2020

ಗುರು ವಂದನೆ


ಯಾರ್ಯಾರನೆನ್ನಲಿ ನಾ ಗುರು

ಮಾತು ಕಲಿಸಿದ ತಾಯಿ ಗುರು

ಶಿಸ್ತು ಬೋಧಿಸಿದ ತಂದೆ ಗುರು

ಪಾಠ ಹೇಳಿಕೊಟ್ಟವರು ಗುರು

ಸ್ನೇಹಿತರೊಂದರ್ಥದಲಿ ಗುರು

ಪ್ರೀತಿ ಕಣ್ಣಾದ ಸಂಗಾತಿ ಗುರು

ಬೈದು ತಿದ್ದಿತೀಡಿದವರು ಗುರು

ಕಣ್ತೆರಿಸಿದ ಮಕ್ಕಳೂ ಗುರು

ಅನುಭವವಿತ್ತ ಶತೃ ಗುರು

ಕತ್ತಲಲಿ ಕೈಹಿಡಿದ ದೇವ ಗುರು

ಇಂದು ನಾನು ನಾನಾಗಿರಲು

ಸಹಕರಿಸಿದ ಸಮಸ್ತರೂ

ನನ್ನ ಗುರು ಸಮಾನರು

ವಂದನೆಗಳು ಸರ್ವರಿಗೂ,

ಅಭಿನಂದನೆಗಳು..



(ಕೃಪೆ...ಅಂತರ್ಜಾಲ)



No comments:

Post a Comment

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃 *ನಿಮ್ಮನ್ನ ಇಷ್ಟ ಪಡುವವರು ಯಾವಾಗಲೂ ನಿಮ್ಮನ್ನೇ ಇಷ್ಟಪಡಬೇಕಿಲ್ಲ...* *ಬದಲಾವಣೆ ‌ಪ್ರಕೃತಿ ನಿಯಮ*😊