Tuesday 7 November 2017

[11/4, 6:18 PM] ಶಿವಶಂಕರ್ ಎಸ್ ಎಸ್: 🌱 *ಕವ‌ನ* 🔗 *(ಅ)ಗಣಿತ*❗

ಒಂದು  ಎರಡು
ಬಾಳೆಲೆ ಹರಡು
ಮೂರು ನಾಲ್ಕು
ಅನ್ನ ಹಾಕು
ಐದು ಆರು
ಬೆಳೆ ಸಾರು
ಏಳು ಎಂಟು
ಪಲ್ಯಕೆ ದಂಟು
ಒಂಬತ್ತು ಹತ್ತು
ಎಲೆ ಮುದಿರೆತ್ತು
ಒಂದರಿಂದ ಹತ್ತು
ಹೀಗಿತ್ತು
ಊಟದ ಆಟವು
ಮುಗಿದಿತ್ತು

-ಜಿ.ಪಿ.ರಾಜರತ್ನಂ



 *_ಗಣಿತ ಪದ_* -
ಒಂದು  ಎರಡು ಮೂರು ನಾಲ್ಕು ಐದು ಆರು ಏಳು ಎಂಟು ಒಂಬತ್ತು ಹತ್ತು 😊😊😊
[11/6, 12:00 AM] ಶಿವಶಂಕರ್ ಎಸ್ ಎಸ್: 🌱 *ಕವ‌ನ* 🔗 *(ಅ)ಗಣಿತ*❗

ಹತ್ತು ಹತ್ತು ಇಪ್ಪತ್ತು,
ತೋಟಕೆ ಹೋದನು ಸಂಪತ್ತು
ಇಪ್ಪತ್ತು ಹತ್ತು ಮೂವತ್ತು,
 ಕೈಯಲಿ ಒಂದು ಕಲ್ಲಿತ್ತು ।।
ಮೂವತ್ತು ಹತ್ತು ನಲವತ್ತು,
ಎದುರಲಿ ಮಾವಿನ ಮರವಿತ್ತು
ನಲವತ್ತು ಹತ್ತು ಐವತ್ತು,
ಮರದಲಿ ಕಾಯಿ ತುಂಬಿತ್ತು ।।
ಐವತ್ತು ಹತ್ತು ಅರವತ್ತು,
ಕಲ್ಲನು ಬೀರಿದ ಸಂಪತ್ತು|
ಅರವತ್ತು ಹತ್ತು ಎಪ್ಪತ್ತು,
ಕಾಯಿಗಳೆಲ್ಲ ಉದುರಿತ್ತು ।।
ಎಪ್ಪತ್ತು ಹತ್ತು ಎಂಬತ್ತು,
ಮಾಲಿಯ ಕಂಡನು ಸಂಪತ್ತು|
ಎಂಬತ್ತು ಹತ್ತು ತೊಂಬತ್ತು,
ಕಾಲುಗಳೆರಡು ಓಡಿತ್ತು ।।
ತೊಂಬತ್ತು ಹತ್ತು ನೂರಾಯ್ತು,
ತಲುಪಿದ ಮನೆಗೆ ಸಂಪತ್ತು ।।

-ಜಿ.ಪಿ.ರಾಜರತ್ನಂ



 *_ಗಣಿತ ಪದ_* -
ಹತ್ತು ಇಪ್ಪತ್ತು ಮೂವತ್ತು ನಲವತ್ತು ಐವತ್ತು ಅರವತ್ತು ಎಪ್ಪತ್ತು  ಎಂಬತ್ತು ತೊಂಬತ್ತು  ನೂರು
[11/6, 9:42 PM] ಶಿವಶಂಕರ್ ಎಸ್ ಎಸ್: 🌱 *ಕವ‌ನ* 🔗 *(ಅ)ಗಣಿತ*❗

’ನಾನು’ ’ನೀನು’
’ಆನು’ ’ತಾನು’
ನಾಕೆ ನಾಕು ತಂತಿ,

ಸೊಲ್ಲಿಸಿದರು
ನಿಲ್ಲಿಸಿದರು
ಓಂ ಓಂ ದಂತಿ!
ಗಣನಾಯಕ
ಮೈ ಮಾಯಕ
ಸೈ ಸಾಯಕ ಮಾಡಿ
ಗುರಿಯ ತುಂಬಿ
ಕುರಿಯ ಕಣ್ಣು
ಧಾತು ಮಾತು
ಕೂಡಿ.

-ಅಂಬಿಕಾತನಯದತ್ತ ( ನಾಕು ತಂತಿ)

 *_ಗಣಿತ ಪದ_* -

ನಾಕು (ನಾಲ್ಕು)
ಗಣ (set)
ಕೂಡಿ

Wednesday 1 November 2017

🌱 *ಕವ‌ನ* 🔗 *(ಅ)ಗಣಿತ*❗

 ಆತ್ಮೀಯರೇ, ಬಹಳ ದಿನಗಳಿಂದ 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃....ಕಳಿಸ್ತಾ ಇದ್ದೆ....ನಿಮಗೆ ಇಷ್ಟ ಆಗದೇ ಕಷ್ಟವಾದರೂ...ನೀವು ಓದದೇ ಇದ್ದರೂ ಮೆಸೇಜ್ ಮಾತ್ರ ನಿಮ್ಮ  ಮೊಬೈಲ್‌ ಲ್ಲಿ ಬಂದು ಕುಳಿತಿರುತ್ತಿತ್ತು..😊😊

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃 ಜೊತೆಗೆ ಇಂದಿನಿಂದ   🌱 *ಕವ‌ನ* 🔗 *(ಅ)ಗಣಿತ*❗ ಪ್ರಾರಂಭ...ನಮ್ಮ ಕನ್ನಡ ಕವಿಗಳ  ಕವನ ಗಳಲ್ಲಿ ಗಣಿತ ( ಗಣಿತ ಪದಗಳು) ವನ್ನು ಉಪಯೋಗಿಸಿರುವ ಕವನಗಳನ್ನು ಕಳಿಸುವ ಒಂದು ಪ್ರಯತ್ನ..‌🌱 *ಕವ‌ನ* 🔗 *(ಅ)ಗಣಿತ*❗ ಎಂದರೆ, ಕವನ ದಲ್ಲಿ ಗಣಿತ ಅಂತ...ಹಾಗೆಯೇ ಕವನ ಅಗಣಿತ ಎಂದರೆ, ಆ ಕವನದ ಅರ್ಥ ಅಗಣಿತ, ಅಂದರೆ ಕವನವನ್ನು ಅರ್ಥ ಮಾಡಿಕೊಳ್ಳುವುದು ಅವರವರ ಭಾವಕ್ಕೆ ಎನ್ನುವುದು .. ನೋಡೋಣ ಎಷ್ಟು ದಿನ ಮುಂದುವರೆಯುತ್ತೋ....😊😊😊
 🌱*ಕವ‌ನ* 🔗 *(ಅ)ಗಣಿತ*❗

ಬಡವನೊಬ್ಬನು ಇರುತ ಸುಖದಲಿ
ಮಡದಿ ಮಕ್ಕಳ ಕೂಡೆ ನಲಿಯುತ
ನುಡಿದ ಭಾಷೆಗೆ ಎರಡು ಬಗೆಯದೆ
ಪಡೆದನಚ್ಯುತ ಪದವಿಯ.
ಕಡಿದು ಕಷ್ಟದಿ ತರುಗಳೆಲ್ಲವ
ಒಡೆದು ಬುಡಗಳ ಚದುರ ಕೈಯಲಿ
ಬಡವನಾದರು ಪಡುತ ಸುಖವನು
ಪಡೆದನಚ್ಯುತ ಪದವಿಯ.

-ಕುವೆಂಪು


 *_ಗಣಿತ ಪದ_* -
ಒಬ್ಬನು
ಎರಡು

 ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು