Monday 26 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಸಂಪೂರ್ಣ ಜಗತ್ತನ್ನು ಗೆಲ್ಲಬಹುದು *ಸಂಸ್ಕಾರ* ಒಂದಿದ್ದರೆ...

ಗೆದ್ದ ಜಗತ್ತನ್ನು ಕಳೆದುಕೊಳ್ಳಬಹುದು *ಅಹಂಕಾರ* ಒಂದಿದ್ದರೆ...

*ಆಯ್ಕೆ ಮತ್ತು ಅವಕಾಶ ಎರಡೂ ಕೂಡ ನಮ್ಮದೆ....*

Sunday 25 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


 ಅಜ್ಞಾನದಿಂದ ಬಂದ ಅಹಂಕಾರ ವಿಷಕ್ಕೆ ಸಮಾನ...

ಜ್ಞಾನದಿಂದ ಬಂದ ವಿನಯ ಅಮೃತಕ್ಕೆ ಸಮಾನ...

Saturday 24 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಜನ ನಮ್ಮನ್ನು ಎಷ್ಟು ಚೆನ್ನಾಗಿ ಗುರುತಿಸುತ್ತಾರೆ ಎನ್ನುವುದು ಮುಖ್ಯವಲ್ಲ... ಯಾವ ಕಾರಣಕ್ಕಾಗಿ ನಮ್ಮನ್ನು ಗುರುತಿಸುತ್ತಾರೆ ಎನ್ನುವುದು ಮುಖ್ಯ....😊

Thursday 22 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

ತೆರೆದ ಕಿಟಕಿ ಮನೆಯ ಬೆಳಕಿಗೆ

ತೆರೆದ ಪುಸ್ತಕ ಮನದ ಬೆಳಕಿಗೆ...

-ಡಿ.ವಿ.ಜಿ.


ಎಲ್ಲರಿಗೂ ವಿಶ್ವ ಪುಸ್ತಕ ದಿನದ ಶುಭಾಶಯಗಳು..💐😊

Wednesday 21 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಜೀವನದ ಮೂಲತತ್ತ್ವವೆಂದರೆ ಕಡಿಮೆ ಸುಖಿಸುವುದು, ಹೆಚ್ಚು ಸಹಿಸುವುದು....

-ವಿ. ಹ್ಯಾಸ್ಲಿಟ್ 

( ಇಂಗ್ಲೀಷ್ ಕವಿ)

Monday 19 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 

ಸೂರ್ಯ,ಚಂದ್ರರಿಬ್ಬರೂ ಹೊಳೆಯುತ್ತಾರೆ, ಆದರೆ ಅವರವರ ಸಮಯ ಬಂದಾಗ ಮಾತ್ರ... ಹಾಗೆಯೇ ಜೀವನದಲ್ಲಿ ಕೂಡ. ಕೆಲವು ಬಾರಿ ಕೆಲವು ಸಮಯ- ಸಂದರ್ಭಗಳಲ್ಲಿ ನಾವು ಅಸುಮ್ಮನೆ ಇರುವುದು ತಪ್ಪೇನೂ ಅಲ್ಲ...😊😊

Sunday 18 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 

ಬೊಂಬೆ  ಆಟವಯ್ಯಾ ಬ್ರಹ್ಮಾಂಡವೇ

ಆ ದೇವನಾಡುವ ಬೊಂಬೆ  ಆಟವಯ್ಯಾ

ಅಂಬುಜನಾಭನ ಅಂತ್ಯವಿಲ್ಲದಾತನ

ತುಂಬು ಮಾಯಾವಯ್ಯಾ ಈ ಲೀಲೆಯ

ಬೊಂಬೆ  ಆಟವಯ್ಯಾ ಬ್ರಹ್ಮಾಂಡವೇ

ಆ ದೇವನಾಡುವ ಬೊಂಬೆ  ಆಟವಯ್ಯಾ....



(ಶ್ರೀ ಕೃಷ್ಣ ಗಾರುಡಿ (೧೯೫೮)

 ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ)

Saturday 17 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಮೊದಲು ಹಂಗಿಸ್ತಾರೆ...

ಆಮೇಲೆ‌ ಹೆದರಿಸ್ತಾರೆ...

ನೀವು ಬಗ್ಗಲಿಲ್ಲವೆಂದರೆ, 

ನಿಮ್ಮನೇ ಅನುಸರಿಸುತ್ತಾರೆ...😊😉

Friday 16 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಜೀವ ನಮ್ಮ ಮಾತನ್ನು ಕೇಳುವುದಿಲ್ಲ....ಯಾವಾಗ ಬೇಕಾದರೂ ಹಾರಿ ಹೋಗಬಹುದು...

ಜೀವನ ನಮ್ಮ ಮಾತನ್ನು ಕೇಳುತ್ತದೆ, ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು...😊

Thursday 15 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಹುಡುಕಿದರೆ ದೇವರೇ ಸಿಗುವ ಈ ದೇಶದಲ್ಲಿ, 

ಸಮಸ್ಯೆಗಳಿಗೆ ಪರಿಹಾರ ಸಿಗೋದಿಲ್ಲವೇ...

ಸ್ವಲ್ಪ ತಾಳ್ಮೆ ಮತ್ತು ಪ್ರಯತ್ನ ಬೇಕಷ್ಟೇ...😄😄

Wednesday 14 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಾವು ಈಗಲಾದರೂ ಬದಲಾಗೋಣ. ಹೊಸದಾಗಿ ಯೋಚಿಸತೊಡಗೋಣ ಅಂದರೆ, ಯೋಚಿಸುವ ಧಾಟಿ ಬದಲಿಸೋಣ. ಈಗಿನ್ನೂ ಬದುಕು ಆರಂಭವಾದಂತೆ ಹೊಸ ಯೋಜನೆ ಮಾಡೋಣ. ಹಳೆಯ ಕನಸುಗಳಿಗೆ ನನಸಾಗುವ ಅವಕಾಶ ಕೊಡೋಣ. *ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ* ಎನ್ನುವ ಕವಿ ವಾಣಿಯಲ್ಲಿ ನಮ್ಮನ್ನೂ ಈ ಯುಗಾದಿಯಿಂದಲಾದರೂ ಅಂತರ್ಗತಗೊಳಿಸೋಣ...😊

Tuesday 13 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 ಎಲ್ಲರಿಗೂ ಪ್ಲವನಾಮ ಸಂವತ್ಸರ ಯುಗಾದಿ‌ಹಬ್ಬದ ಹಾರ್ದಿಕ ಶುಭಾಶಯಗಳು...

ಪ್ಲವನಾಮ ಸಂವತ್ಸರವು 60 ಸಂವತ್ಸರಗಳಲ್ಲಿ 35 ನೇ ಸಂವತ್ಸರ.

 ಪ್ಲವನಾಮ‌ ಸಂವತ್ಸರ ನಮ್ಮನ್ನು ಎಲ್ಲಾ ಸಂಕಷ್ಟ ಗಳಿಂದ ದೂರ ಮಾಡುತ್ತದೆ ಎಂದು ಆಶಿಸೋಣ.


ಪ್ಲವ ಪದದ ಅರ್ಥಗಳನ್ನು (ಕೃಪೆ : ವೀಕಿಪೀಡಿಯ , ಹಾಗೂ ಚಕ್ರವರ್ತಿ ಶ್ರೀನಿವಾಸ ಗೋಪಾಲಾಚಾರ್ಯರ ಸಂಸ್ಕೃತ- ಕನ್ನಡ ಶಬ್ದಕೋಶ (ಸಂಪುಟ 4)) ನೋಡಿದಾಗ

  1. ಈಜುವುದು, ತೇಲುವುದು
  2. ಹಾರುವುದು, ನೆಗೆಯುವುದು
  3. ಪ್ರವಾಹ
  4. ತೆಪ್ಪ
  5. ಕಪ್ಪೆ
  6. ಕಪಿ
  7. ಶತ್ರು
  8. ಮೀನಿನ ಬಲೆ
  9. ಮೇಷ, ಟಗರು
  10. ಹಿಂತಿರುಗುವುದು, ಹಿಂದಕ್ಕೆ ಹೋಗುವುದು
  11. ಪ್ರೇರೇಪಿಸುವುದು
  12. ಶಬ್ದ 
  13. ಅಂಜೂರದ ಗಿಡ               ‌
ಇತ್ಯಾದಿ ಅರ್ಥಗಳಿವೆ... 

ಗುಣಪದದಿಸಿ

ಪ್ಲವ

ಉತ್ತಮವಾದ, ಶ್ರೇಷ್ಠವಾದ



ಕಷ್ಟಗಳನ್ನು ಈಜಿ,

ಸುಖಗಳಲ್ಲಿ ತೇಲಿ,

ಸಂತೋಷದಿಂದ ಹಾರಿ, ನೆಗೆದು

ದುಃಖಗಳೆಂಬ ಪ್ರವಾಹಗಳನ್ನು ತಾಳ್ಮೆ ಎಂಬ ತೆಪ್ಪದಲ್ಲಿ ತೇಲಿಸಿ,

ಕಪ್ಪೆಯಂತೆ ಕೂಪಮಂಡೂಕವಾಗದೆ,

ಶತ್ರುಗಳು ನಮಗೆ ಹಾಕುವ ಮೀನಿನ‌ಬಲೆಯಂತಹ ಬಲೆಯಲ್ಲಿ ಬೀಳದೆ,

ಟಗರಿನಂತೆ ಧೈರ್ಯವಾಗಿ ಮುನ್ನುಗ್ಗುತ್ತಾ, ಎಲ್ಲೆಲ್ಲೋ ಹಾರಡುವ ಮನಸ್ಸನ್ನ ನಮ್ಮ ಗುರಿಯೆಡೆಗೆ ಹಿಂದಿರುಗಿಸುತ್ತಾ, ಗೆಲ್ಲಲು ನಮ್ಮನ್ನು ನಾವೇ ಪ್ರೇರೇಪಿಸಿ ಕೊಳ್ಳುತ್ತಾ, ನಮ್ಮ ಸಾಧನೆಗಳು ಶಬ್ದ ಮಾಡಿ, ಅಂಜೂರದ ಗಿಡಗಳ ರೀತಿ ಫಲವನ್ನು ಸಮಾಜಕ್ಕೆ ನೀಡಿ, ಕೋತಿ(ಆಂಜನೇಯನ) ಯ ಪ್ರಭುವನ್ನು ಸ್ಮರಿಸುತ್ತಾ, ಉತ್ತಮವಾದ ಹಾಗೂ ಶ್ರೇಷ್ಠವಾದ ಜೀವನವನ್ನು ನಡೆಸುವ ಶಕ್ತಿ ಈ ಪ್ಲವನಾಮ ಸಂವತ್ಸರ ನಮಗೆಲ್ಲಾ ನೀಡಲಿ...

ಮತ್ತೊಮ್ಮೆ ಎಲ್ಲರಿಗೂ ಯುಗಾದಿಹಬ್ಬದ ಹಾರ್ದಿಕ ಶುಭಾಶಯಗಳು....

-ಶಿವಶಂಕರ್. ಎಸ್.ಎಸ್.

Sunday 11 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ತುಂಬಾ ಸಲ ನಮ್ಮವರು ನಮ್ಮನ್ನು ತುಂಬಾ ಹಚ್ಚಿಕೊಂಡಿರುತ್ತಾರೆ ಅನ್ನುವ ಭಾವನೆ ಇರುತ್ತದೆ.ಆದರೆ ಒಮ್ಮೆ ನಾವು ಅಂದುಕೊಂಡಷ್ಟು ನಮ್ಮನ್ನು ಹಚ್ಚಿಕೊಂಡಿಲ್ಲ ಎಂದು ಗೊತ್ತಾದಾಗ ಆಗುವ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತಾಗುತ್ತದೆ....😄😄😄😄🙃

Saturday 10 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನೆನಪೆಂಬುದು ಯಾವಾಗಲೂ, ಮೃದು ಹೂವಲ್ಲ,

ತೀಕ್ಷ್ಣ ಮುಳ್ಳಿನಂತೆ... ಚುಚ್ಚಿದಷ್ಟೂ ಮನಸ್ಸು ಅಳುವುದು😔🙃

Friday 9 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃



ದೇವ್ರ್ ಏನ್ರ ಕೊಡಲಣ್ಣ

ಕೊಡದಿದ್ರೆ ಬುಡಲಣ್ಣ

ನಾವೆಲ್ಲ ಔನೀಗೆ ಬಚ್ಚ!

ಔನ್ ಆಕಿದ್ ತಾಳ್ದಂಗೆ

ಕಣ್ ಮುಚ್ಚೊಂಡ್ ಯೇಳ್ದಂಗೆ

ಕುಣಿಯಾದೆ ರತ್ನನ್ ಪರ್ಪಂಚ!


--ಜಿ ಪಿ ರಾಜರತ್ನಂ

Thursday 8 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನೆನಪೆಂಬುದು ಯಾವಾಗಲೂ ಸುರಿವ ಮಳೆಯಲ್ಲ,  ಕೆಲವೊಮ್ಮೆ ಸುಡುವ ಬಿಸಿಲಂತೆ ಹೆಚ್ಚಾದಷ್ಟೂ ಮನಸ್ಸು ಸುಡುವುದು...😊😄😔🙃

Wednesday 7 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಮಗೆ ಸಿಗಬೇಕು ಎಂದು ಬಯಸುವ ಪ್ರೀತಿ ನಮ್ಮೊಳಗೆ ಅಡಗಿರುತ್ತದೆ; ಅದನ್ನು ಯಾವ ಪ್ರಮಾಣದಲ್ಲಿ ನಾವು ಹೊರಗೆ ಹಂಚುತ್ತೇವೆಯೋ ಅಷ್ಟೇ ಪ್ರಮಾಣದಲ್ಲಿ ನಮಗೆ ತಿರುಗಿ ಲಭಿಸುತ್ತದೆ...😊

Tuesday 6 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 

ಅವಳ ನೆನಪು ಬಂದೊಡನೆ,

ಒಂಟಿತನವೂ ಹಿತವೆನಿಸಿತು....😊😄😉

Monday 5 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಓದಿದ ಪುಸ್ತಕ ಹಳೆಯದಾಗಬಹುದು, 

ಆದರೆ ಜ್ಞಾನ ಹಳೆಯದಾಗಲಾರದು. 

ದೀಪದ ಬೆಳಕಿನಂತೆ ಪ್ರತಿಕ್ಷಣವೂ 

ಪ್ರಜ್ವಲಿಸುತ್ತಿರುತ್ತದೆ....

Sunday 4 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


 ನಮ್ಮ ಕಥೆಯಲ್ಲಿ ನಾವೇ  *ನಾಯಕ* ಆಗದಿರುವುದೇ ನಮ್ಮ ಪ್ರಥಮ ಸೋಲು...

Friday 2 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಮ್ಮನ್ನು ಪ್ರೀತಿಸುವವರ ಜೀವನದಲ್ಲಿ ನಾವು ಅತ್ಯಂತ ಅನಿವಾರ್ಯವಾದವರು ಎಂದು ನಮ್ಮನ್ನು ನಾವೇ ಮೂರ್ಖರನ್ನಾಗಿಸಿಕೊಳ್ಳುತ್ತಾ, ಕನಸುಗಳ ಬಲಿ ಕೊಡುವುದಕ್ಕಿಂತ ದೊಡ್ಡ

ಕ್ರೌರ್ಯ ಬೇರೆ ಇಲ್ಲ.


-ಪೂರ್ಣಿಮಾ ಮಾಳಗಿಮನಿ 

( *ಇಜಯ* ಕಾದಂಬರಿಯಲ್ಲಿ)

 ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು