Saturday 26 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ದೀಪ ಬೆಳಕು ಕೊಡುವುದು ಎನ್ನುವ ಕಾರಣಕ್ಕೆ ಮಾತ್ರ ಹೊಗಳುತ್ತೇವೆ.....

ಆದರೆ ಆ ಬೆಳಕಿಗೋಸ್ಕರ ಮೈಸುಟ್ಟುಕೊಂಡ ಬತ್ತಿ ಯಾರಿಗೂ ಕಾಣಿಸಲಿಲ್ಲ...

ಆ ಬೆಳಕಿಗೋಸ್ಕರ ಅಸ್ತಿತ್ವವನ್ನೇ

ಕಳೆದು ಕೊಂಡ ಎಣ್ಣೆ ಯಾರಿಗೂ

ಕಾಣಿಸಲಿಲ್ಲ....

ಆ ಬೆಳಕಿಗೋಸ್ಕರ ಆಶ್ರಯ ಕೊಟ್ಟ ಹಣತೆ ಯಾರಿಗೂ ಕಾಣಿಸಲಿಲ್ಲ...

ದೀಪಕ್ಕೆ ಬೆಳಕು ಕೊಟ್ಟ ಬೆಂಕಿ

ಯಾರಿಗೂ ಕಾಣಿಸಲಿಲ್ಲ....

 

*ಹಾಗೆಯೇ ಜೀವನದಲ್ಲಿ ಕೆಲವು ಸಲ ನಮ್ಮ ಶ್ರಮ ಇನ್ನೊಬ್ಬರ ಖ್ಯಾತಿಗೆ ಕಾರಣವಾಗುತ್ತದೆ.*

Friday 25 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಸೃಷ್ಟಿಯಲ್ಲಿ ಚಲನವಿದೆ

ಯಾವುದೂ ನಿಲ್ಲಬಾರದು

ಹರಿಯುವ ನದಿ

ಬೀಸುವ ಗಾಳಿ

ತೂಗುವ ಮರ

ಹುಟ್ಟೋ ಸೂರ್ಯ

ಅಂದುಕೊಂಡಿದ್ದನ್ನು ಸಾಧಿಸಬೇಕೆಂದು ನಮ್ಮಲ್ಲಿ ಛಲದಿಂದ ಹರಿಯುವ ರುಧಿರ ಸಹ... 

ಯಾವುದೂ ನಿಲ್ಲಬಾರದು

Thursday 24 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಮ್ಮ ನೆರಳು ನಮ್ಮನ್ನು ಬಿಡುವ ಮುನ್ನ  ನಾವು ಬೆಳಕಿಗೆ ಬರಬೇಕು...😊

Wednesday 23 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃



ಕಿಂಕಿಣಿ : ೧೦. ದಿವ್ಯ ಮಿಥ್ಯೆ


ನಾನು, ನಾನು, ನಾನು! ನನ್ನದು, ನನ್ನದು, ನನ್ನದು! ಎಂತಹ ಸವಿಮಾತುಗಳವು! ಎಂತಹ ಮುದ್ದಿನ ಮಾತದು “ನಾನು!” ಎಂತಹ ಸವಿಸುಳ್ಳದು “ನನ್ನದು!”?


“ನಾನು” ಸೃಷ್ಟಿಗೆ ಕಾರಣ. “ನನ್ನದು” ಸ್ಥಿತಿಗೆ ಕಾರಣ. “ನಾನು” “ನನ್ನದು” ಅಳಿದು “ನೀನು” “ನಿನ್ನದು” ಆಗುವುದೆ ಲಯಕ್ಕೆ ಕಾರಣ.


“ನಾನು” ಎಂಬುದು “ನೀನು” ಎಂದಾಗಿ, ನಾನೆ ನೀನಾಗಿ, ಮಾತು ಮೌನವಾಗಿ, ತನಗೆ ತಾನಾಗಿ, ಕಡೆಗೆಲ್ಲವೂ ಬರಿದಾಗಿ, ಇದು ಅದಾಗಿ ಹೋಗುವುದು!


ಮಾಯಾವಿ, ಇಂತಹ ಮಹಾ ಘನ ವಿಶ್ವವನು ಎಂತಹ ಸವಿಸುಳ್ಳಿನಲಿ ಕೆತ್ತಿರುವೆ!



- ಕುವೆಂಪು

Tuesday 22 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

ಪರಿಸ್ಥಿತಿ ಹೇಗೇ ಇರಲಿ, ಮನಸ್ಥಿತಿ ಮಾತ್ರ‌ ನಮ್ಮ ನಿಯಂತ್ರಣದಲ್ಲಿರಬೇಕು...😊

Monday 21 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ತಿಂದು ಬಿಸಾಡಿದ ಬೀಜದಿಂದ ಮರ‌ ಬೆಳೆಯುವಂತೆ, ಯಾರೋ ನಮ್ಮನ್ನು ತಿರಸ್ಕರಿಸಿದರೆಂದು ಕುಗ್ಗಬಾರದು, ತಿರಸ್ಕರಿಸಿದವರೇ ಪುರಸ್ಕರಿಸುವಂತೆ ಬೆಳೆಯಬೇಕು...

Saturday 19 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಅಮ್ಮನ ಪ್ರೀತಿ, ಅಪ್ಪನ ವಿಶ್ವಾಸ ಎರಡೂ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು..😊😊

Happy Father's day Dad....😊🌷

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಬಹುತೇಕ ಸೋಲುಗಳು ಗೆಲುವಿನಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿ ಕೊಂಡಿರುತ್ತವೆ.ಹಾಗೇ ಬಹುತೇಕ ಗೆಲುವುಗಳು ಸಹ ಸೋಲಿನಿಂದ ಅತಿ ಕಡಿಮೆ ಅಂತರದಲ್ಲಿ ಪಡೆದವಗಳಾಗಿರುತ್ತವೆ. ಹೀಗಾಗಿ ಎಲ್ಲಾ ಸೋಲನ್ನು ಗೆಲುವಾಗಿ ಪರಿವರ್ತಿಸಿಕೊಳ್ಳಬಹುದು.😊

Thursday 17 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಬಿದ್ದೇನೆಂಬ ಭಯವಿಲ್ಲ,

ಬಿದ್ದು ಅಭ್ಯಾಸವಿದೆ.

ಗೆಲ್ಲಲಿಲ್ಲ ಎಂದು ಹತಾಶೆಯಿಲ್ಲ,

 ಗೆದ್ದು ಚರಿತ್ರೆ ಸೃಷ್ಟಿಸುವ ಛಲವಿದೆ...👍😊

-ಕೃಷ್ಣಚೈತನ್ಯ

Wednesday 16 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಗೆಲುವುಗಳನ್ನು ಸಂಭ್ರಮಿಸುತ್ತಾ ಬದುಕ ಬೇಡಿ.

ಸೋಲುಗಳನ್ನು ಮೀರುತ್ತಾ ಬದುಕಿ.

-ಚೇ ಗುವಾರ.

Tuesday 15 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಕತ್ತಲು ಮತ್ತು ಅಹಂಕಾರ ಎರಡೂ ಒಂದೆ..

ಕತ್ತಲಲ್ಲಿ ಬೆಳಕಿರುವುದಿಲ್ಲ. 

ಅಹಂಕಾರದಲ್ಲಿ‌ ಅರಿವು ಇರುವುದಿಲ್ಲ..

Monday 14 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಯಾವ ಕವಿಯು ಬರೆಯಲಾರ,

ಒಲವಿನಿಂದ ಕಣ್ಣೋಟದಿಂದ ....

ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ....


-ಚಿ.ಉದಯಶಂಕರ್

Sunday 13 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಈಗ ಅವಳು ಅದೆಲ್ಲಿರುವಳೋ ನನಗೆ ತಿಳಿಯದು,

ಎಲ್ಲಿದ್ದರೇನು ಅವಳ ನೆನಪುಗಳು ನನ್ನಿಂದ ಅಳಿಯದು...😊😊

Friday 11 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


          ಬದುಕು ಬದಲಾಗುತ್ತದೆ

           ಒಂದಲ್ಲ ಒಂದು‌ ದಿವಸ

           ನಾವು ಅಂದುಕೊಳ್ಳದ

           ಯಾವುದೋ ಒಂದು

                   ರೀತಿಯಲ್ಲಿ....

Thursday 10 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ವರುಷಕೊಂದು ಹೊಸತು ಜನ್ಮ

ಹರುಷಕೊಂದು ಹೊಸತು ನೆಲೆಯು

ಅಖಿಲ ಜೀವಜಾತಕೆ!

ಒಂದೆ ಒಂದು ಜನ್ಮದಲ್ಲಿ

ಒಂದೆ ಬಾಲ್ಯ ಒಂದೆ ಹರೆಯ

ನಮಗದಷ್ಟೆ ಏತಕೆ?...


ದ.ರಾ.ಬೇಂದ್ರೆ.

Wednesday 9 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಮುನ್ನೆಡೆಯುವುದು ಲೋಕ ಯಾರಿರಲಿ ಇರದಿರಲಿ;

ನೀ ಅಳಿದೆ ಎಂದೇನು ರವಿ ಮೂಡದಿಹನೆ? ಬೀಸದೇ ತಂಗಾಳಿ? ಘಮಘಮಿಸದೇ ಹೂವು? 

ಕಾಲ ಕಾಯದು ನಿನಗೆ- ಮುದ್ದುರಾಮ.

Tuesday 8 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಕಹಿ ನೆನಪುಗಳ ಮರೆಯುತಾ..

ಸಿಹಿ ನೆನಪುಗಳ ನೆನೆಯುತಾ..

ಹೊಸ ಕನಸುಗಳ ಕಾಣುತಾ...

ಸಾಗಿದೆ ಜೀವನ ಬಂಡಿ😊😊

Monday 7 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಬೆಂಕಿಯಿಂದ ನೀರು ಕಾಯುತ್ತೆ....

ಅದೇ ನೀರಿನಿಂದ ಬೆಂಕಿ ಆರುತ್ತೆ😊

ಯಾವಾಗ ಏನು ಬೇಕು ಎಂದು ತಿಳಿದು ಉಪಯೋಗಿಸಿ ಕೊಳ್ಳುವುದು ನಮ್ಮ ಕೈಲೇ ಇದೆ...‌😊



Sunday 6 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

ಬದುಕು ಬದಲಾಗಬೇಕಾದರೆ, ಬದುಕುವ ದಾರಿ ಬದಲಾಗಬೇಕು..😊

Saturday 5 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಾವು ಸರಿಯಾದ‌ ಸಮಯದಲ್ಲಿ‌ ತೆಗೆದುಕೊಳ್ಳುವ ಒಂದು ಸರಿಯಾದ ನಿರ್ಧಾರ ನಮ್ಮ ಜೀವನವನ್ನು ಶಾಶ್ವತವಾಗಿ ಬದಲಿಸಬಲ್ಲದು....

Friday 4 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಆಸೆ ಎಂಬ ಬಿಸಿಲು ಕುದುರೆ ಏಕೆ ಏರುವೆ,

ಮರಳು ಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ,

ಅವನ ನಿಯಮ ಮೀರಿ ಇಲ್ಲಿ ಏನೂ ಸಾಗದು,

 ನಾವು ನೆನೆಸಿದಂತೆ ಬಾಳಲೇನು ನಡೆಯದು,

ವಿಷಾದವಾಗಲಿ, ವಿನೋದವಾಗಲಿ ಅದೇನೆ ಆಗಲಿ ಅವನೆ ಕಾರಣ ....


ಚಿ|ಉದಯಶಂಕರ್.


ದ್ವಿತೀಯ ಪಿಯುಸಿ ಪರೀಕ್ಷೆ ಚೆನ್ನಾಗಿ ಬರೆಯಬೇಕು, 90+ ಅಂಕ ತೆಗೆದುಕೊಳ್ಳಬೇಕು ಎಂದು ಆಸೆ ಇಟ್ಟುಕೊಂಡು ವರುಷದ ಮೊದಲಿನಿಂದಲೇ ಪ್ರಯತ್ನ ಪಡುತ್ತಿದ್ದ ಹಾಗೂ  ನನ್ನ ಪ್ರಥಮ ಪಿಯು ಅಂಕ‌ ಕಡಿಮೆ‌ ಇದೆ,  ದ್ವಿತೀಯ ಪಿಯು ಪರೀಕ್ಷೆಯನ್ನು challenge ಆಗಿ ತೆಗೆದು ಕೊಂಡಿದ್ದೇನೆ 90+ % ತೆಗೆದುಕೊಂಡೇ ತೆಗೆದುಕೊಳ್ಳುತ್ತೇನೆ  ಅಂತ challenge mood ನಲ್ಲೇ ಓದುತ್ತಿದ್ದ  *ವಿದ್ಯಾರ್ಥಿಗಳಿಗೆ* , ಹಾಗೂ ನಮ್ಮ ವಿದ್ಯಾರ್ಥಿಗಳು ಪರೀಕ್ಷೆ ಚೆನ್ನಾಗಿ ಬರೆಯಬೇಕು , ಒಳ್ಳೆಯ ಅಂಕ ತೆಗೆದು ಕೊಂಡು ಕಾಲೇಜಿಗೆ ಹಾಗೂ ಪೋಷಕರಿಗೆ  ಒಳ್ಳೆಯ ಹೆಸರು ತರಬೇಕು ಎಂದು ತರಗತಿಗಳನ್ನು ಹಾಗೂ ಮುಖ್ಯವಾಗಿ ಯಾವ ರಜಾದಿನಗಳನ್ನು ಬಿಡದೆ, ಹಬ್ಬದ ದಿನಗಳೂ ಸಹ ವಿಶೇಷ ತರಗತಿಗಳನ್ನು ತೆಗೆದುಕೊಂಡು Syllabus ಮುಗಿಸಿ, ಕಿರುಪರೀಕ್ಷೆ, ಪರೀಕ್ಷೆಗಳನ್ನು ಮಾಡಿ , ಅಂಕಗಳ ಆಧಾರದ ಮೇಲೆ ಹೆಚ್ಚು ಅಂಕ ತೆಗೆದುಕೊಳ್ಳಲು ಸಾಧ್ಯವಿರುವ ವಿದ್ಯಾರ್ಥಿಗಳಿಗೆ ಹುರಿದುಂಬಿಸಿ, ಕಡಿಮೆ ಅಂಕಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳ ಕಷ್ಟಗಳನ್ನು ಕೇಳಿ ಅವರಿಗೆ ಸುಲಭವಾದ ರೀತಿಯಲ್ಲಿ ಮತ್ತೆ ಹೇಳಿಕೊಟ್ಟು , ನೀವೂ ಸಹ ಅತಿ ಹೆಚ್ಚು ಅಂಕ ತೆಗೆದು ಕೊಳ್ಳಲು ಸಾಧ್ಯವಾಗುತ್ತದೆ ಅಂತ ಅವರಿಗೆ confidence ಬರಿಸಿ, ಅನುತ್ತೀರ್ಣ ಆಗುವಂತಹ ವಿದ್ಯಾರ್ಥಿಗಳಿಗೆ ಮತ್ತೆ ವಿಶೇಷದಲ್ಲಿ ವಿಶೇಷ ತರಗತಿಗಳನ್ನು ತೆಗೆದುಕೊಂಡು ಅವರಿಗೂ ಸಹ ನೀವು ಕಡಿಮೆ‌ ಎಂದರೆ 50 ಅಂಕ ತೆಗೆದು ಕೊಳ್ಳಬಹುದು ಎಂದು ನಂಬಿಕೆ ಬರಿಸಿ , ನಾವೂ PASS ಆಗ್ತೀವಿ ಅನ್ನೊ ಆತ್ಮವಿಶ್ವಾಸ ಅವರಿಗೆ ಬರಿಸಿದಾಗಲೂ , ಅಯ್ಯೋ ಆ ವಿದ್ಯಾರ್ಥಿ ನನ್ನ Subject ನಲ್ಲಿ pass ಆಗ್ತಾನೋ ಇಲ್ವೋ ಎಂಬ ಭಯವನ್ನು ತಮ್ಮ‌ ಸಹೋದ್ಯೋಗಿ ಮಿತ್ರರೊಂದಿಗೆ ಹಂಚಿಕೊಳ್ಳುತ್ತಾ ,ಹೇಗಾದರೂ ಅವನನ್ನು pass ಮಾಡಿಸಲೇ ಬೇಕು ಅಂ‌ತ ಅವನ ಹಿಂದೆ ಬಿದ್ದು tension ತೆಗೆದುಕೊಂಡು ಓದಿಸಿದ, ಅದೇ ರೀತಿ ಈ ವಿದ್ಯಾರ್ಥಿ ಸ್ವಲ್ಪ efforts ಹಾಕಿದರೆ ನನ್ನ Subject ಲಿ 100ಕ್ಕೆ 100 ಅಂಕ ತೆಗೆದುಕೊಳ್ಳುತ್ತಾನೆ ಅಂತ ಆ ವಿದ್ಯಾರ್ಥಿಗೆ ಒಂದೇ ಒಂದೂ mark miss ಆಗಬಾರದು‌ ಅಂತ ಚಿಕ್ಕ ಚಿಕ್ಕ ಪ್ರಶ್ನೆಗಳನ್ನೂ ಅವರಿಗೆ ಹೇಳಿಕೊಟ್ಟು ಅಕಸ್ಮಾತ್ ನಾನು ಹೇಳಿಕೊಟ್ಟ ಪ್ರಶ್ನೆ ಬರದಿದ್ದರೆ ಎಂಬ ಅನುಮಾನದಲ್ಲಿ ಪದೇ ಪದೇ ಹಿಂದಿನ ವರುಷದ ಪ್ರಶ್ನೆಪತ್ರಿಕೆ, ಬೇರೆ ಬೇರೆ ಜಿಲ್ಲೆಯ ಪ್ರಶ್ನೆಪತ್ರಿಕೆ ನೋಡಿ, ಆಯಾ ವಿಷಯದಲ್ಲಿ ಅನುಭವ ಇರುವ ಹಿರಿಯ ಉಪನ್ಯಾಸಕರ ಬಳಿ ಪ್ರಶ್ನೆಗಳನ್ನು ಕೇಳಿ ಯದ್ವಾತದ್ವಾ tension ತಗೊಂಡು ಹೇಳಿಕೊಟ್ಟಿರುವ ಎಲ್ಲಾ *ಉಪನ್ಯಾಸಕರಿಗೂ* ಈ ದಿನದ 

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃 ಅರ್ಪಿಸುತ್ತಿದ್ದೇನೆ...


ಎಲ್ಲ ವಿದ್ಯಾರ್ಥಿಗಳು ಪಾಸಾಗಿದ್ದಾರೆ ಆದರೆ ಉಪನ್ಯಾಸಕರಿಗೆ ನಿಜವಾದ  ಖುಷಿ ಸಿಕ್ಕಿಲ್ಲ. ಪರಿಸ್ಥಿತಿಗೆ ತಕ್ಕ ಹಾಗೆ ತೆಗೆದುಕೊಂಡಿರುವ ನಿರ್ಧಾರಗಳನ್ನು ಗೌರವಿಸಲೇ ಬೇಕು. ಎಲ್ಲಾ ವಿದ್ಯಾರ್ಥಿಗಳಿಗೂ ಒಳ್ಳೆಯದಾಗಲಿ, ಮುಂದಿನ ಜೀವನ ಸುಖಮಯವಾಗಿರಲಿ ಎಂದು ಆಶಿಸುತ್ತಾ….

 *ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು*. ಎಂಬ ಆಶಾಭಾವನೆಯೊಂದಿಗೆ…..


-ಶಿವಶಂಕರ್.ಎಸ್.ಎಸ್.

Thursday 3 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಕೆಲವು‌ ಸಂಬಂಧಗಳೇ ಹಾಗೆ.....

ಸಂತೆಯಲ್ಲಿ ಸಿಕ್ಕಿ‌ ಜಾತ್ರೆಯಲ್ಲಿ ಕಳೆದು ಹೋಗುತ್ತವೆ....😊🙃

Wednesday 2 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಜೀವನದಲ್ಲಿ ಏರಿದವನು ಇಳಿಯುತ್ತಾನೆ.ಕೂಡಿದ್ದು ಅಗಲುತ್ತದೆ.ಸಾಮಾನ್ಯರು ಅಸಾಮಾನ್ಯರಾಗುತ್ತಾರೆ.ಒಬ್ಬರು ಕಟ್ಟಿದರೆ ಮತ್ತೊಬ್ಬರು ಕೆಡವುತ್ತಾರೆ. ಸಾಗರದಲ್ಲಿ ಏರಿಳಿಯುವ ತೆರೆಗಳಂತೆ ಜೀವನ ಸಾಗರದಲ್ಲಿ ಬರುವ ಸುಖದುಃಖಗಳ ಅಲೆಗಳು ಶಾಶ್ವತವಲ್ಲ.

Tuesday 1 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಇವಳು ಯಾರು ಬಲ್ಲೆಯೇನು,

ಇವಳ ಹೆಸರ ಹೇಳಲೇನು,

ಇವಳ ದನಿಗೆ ತಿರುಗಲೇನು,

ಇವಳು ಏತಕೋ ಬಂದು ನನ್ನ ಸೆಳೆದಳು...😊😊


- ಕೆ.ಎಸ್.ನರಸಿಂಹಸ್ವಾಮಿ.

 ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು