Sunday 21 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 ಅಪ್ಪಂದಿರ ಯೋಗಕ್ಕೆ ಸೂರ್ಯ ಗ್ರಹಣ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-137*🍃

ಸೂರ್ಯ🌞 ಭೂಮಿಯನ್ನು🌎 ನೋಡುತ್ತಲೇ ಇದ್ದಾನೆ ಎಂದು ಕೋಪದಿಂದ ಇವರಿಬ್ಬರ ಮಧ್ಯೆ ಚಂದ್ರ🌙 ಬಂದು ಸೂರ್ಯನಿಗೆ ಗ್ರಹಣ🌒 ಉಂಟುಮಾಡಿದ.


Tuesday 16 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ದೀಪದಲ್ಲಿ ಎಣ್ಣೆ ಮುಗಿದ ಸಮಯಕ್ಕೆ ಗಾಳಿ ಬಂದಾಗ, ದೀಪ ಆರಿದ್ದು ಎಣ್ಣೆಯಿಂದಾನಾ ಅಥವಾ ಗಾಳಿಯಿಂದಾನ ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಜೀವನದಲ್ಲೂ ಹಾಗೆಯೇ ಕೆಲವೊಮ್ಮೆ ನಮ್ಮ ನೋವಿಗೆ ನಾವು ಕಾರಣವ ನಮ್ಮ ಪರಿಸ್ಥಿತಿ ಕಾರಣವ ಎಂಬ ಗೊಂದಲದಲ್ಲಿ ಉತ್ತರ ಸಿಗದೆ ಬರೀ ನೋವಲ್ಲೇ ಬದುಕುತ್ತೇವೆ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-136*🍃

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-136*🍃

ಅವರಿಬ್ಬರು ಶಂಕಿತರು. ಪ್ರೀತಿಯಲ್ಲಿ.


Sunday 14 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಶ್ರಮಕ್ಕೆ ಅದೃಷ್ಟವನ್ನು ಆಕರ್ಷಿಸುವ ಶಕ್ತಿ ಇದೆ.

Saturday 13 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಹಗಲು ರಾತ್ರಿಗಳಿಗೆ 
ಕೊನೆ ಮೊದಲಿಲ್ಲ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-134*🍃

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-134*🍃

ಅವಳು,

ಕೈ ಕೊಡದೆ,
ಕೈ ಕೊಟ್ಟಳು.
ಕೈ ನೀಡಿ,
ಕೈ ಹಿಡಿದೆ.


Thursday 11 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಅವರಿವರ ಮಾತಿಗೆ ಕಾಲ ನಿಲ್ಲುವುದಿಲ್ಲ.
ಹಾಗೆಯೇ ನಡೆಯುವ ಕಾಲೂ ನಿಲ್ಲಬಾರದು.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-133*🍃

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-133*🍃

ಅವನು ತನ್ನ ಸರದಿಗಾಗಿ‌ ಕಾಯುತ್ತಲೇ ಇದ್ದ.


Wednesday 10 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಜನರಿಗೆ ನಾವು ಬದಲಾದದ್ದು ಬೇಗ ಕಾಣಿಸುತ್ತೆ. ಆದರೆ ಅವರ ಯಾವ ಮಾತಿನಿಂದ ನಾವು ಬದಲಾದೆವು ಅನ್ನುವುದು ಮಾತ್ರ ಜನರಿಗೆ ತಿಳಿಯುವುದಿಲ್ಲ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-132*🍃

ಕಾಲಗಳು‌ ಬದಲಾದರೂ ಅವರಿಬ್ಬರ ಮನಸ್ಸುಗಳು ಬದಲಾಗಲಿಲ್ಲ.

Tuesday 9 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಬೀಜದೊಳಗಿದೆ ಎಣ್ಣೆ,
ಹಾಲಿನೊಳಗಿದೆ ಬೆಣ್ಣೆ;
ನಿನ್ನಯ ದೇವ ನಿನ್ನೊಳಗಿಹನೈ, ಕೈಲಾದರೆ ನೋಡೈ!.

- ಸಂತ ಕಬೀರ ದಾಸ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-131*🍃

ಅವನಿಗಾಗಿ ಅವಳು,
ಅವಳಿಗಾಗಿ ಅವನು.
ಕಾಯುತ್ತಲೇ ಇದ್ದರು.

Monday 8 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಎಲ್ಲಾ ಕಲ್ಲುಗಳೂ ಶಿಲ್ಪವಾಗುವ ಯೋಗ್ಯತೆ ಹೊಂದಿರುವುದಿಲ್ಲ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-130*🍃

ವಿಶ್ವಪರಿಸರ ದಿನದಂದು ನೆಟ್ಟ ಸಸಿ ಮಾರನೇ ದಿನವೇ ಮೇಕೆಗೆ ಆಹಾರವಾಗಿತ್ತು.

Sunday 7 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಅಲೆ ಸಮುದ್ರದ್ದು; ಸಮುದ್ರ ಅಲೆಯದ್ದಲ್ಲ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-129*🍃

ವಿಶ್ವಪರಿಸರ ದಿನದಂದು ಗಿಡ ನೆಟ್ಟವನು, ಮಾರನೇ ದಿನ ಅವನ ಮನೆಯ ಮುಂದಿನ ಮರವನ್ನು ಕಡಿಸಿದನು.

Saturday 6 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಹಾಲಿಗೆ ನೀರು ಶತ್ರುವೇ ಆದರೂ, ಹಾಲಿನಿಂದ ಬೆಣ್ಣೆ ತೆಗೆದಾಗ ರಕ್ಷಿಸಲು ನೀರೇ ಬೇಕು.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-128*🍃

*ಮಂಜು* ವನ್ನು ನಂಬಿದ್ದ   *ಮಂಜು* ಳಾ ಳ ಬದುಕಿನಲ್ಲಿ  *ಮಂಜು* ಮುಸುಕಿತ್ತು.

Friday 5 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಪ್ರಕೃತಿ...
ಎಲ್ಲವನ್ನೂ ತಿಳಿಸುತ್ತದೆ.
*ಅರ್ಥಮಾಡಿಕೊಂಡರೆ* .

*ವಿಶ್ವ ಪರಿಸರ ದಿನದ‌ ಶುಭಾಶಯಗಳು*

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-127*🍃

ಅವಳು ಎಲ್ಲವನ್ನೂ ಸಹಿಸಿಕೊಂಡಿದ್ದಳು. ಭೂಮಿಯಂತೆ.

Thursday 4 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಮನಸ್ಸು ಮನೆ ಇದ್ದಂತೆ. ಹೊರಗಿನ‌ ಕಸ ಒಳಸೇರುತ್ತಲೇ ಇರುತ್ತದೆ. ದಿನವೂ ಸ್ವಚ್ಛಗೊಳಿಸುತ್ತಲೇ ಇರಬೇಕು.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-126*🍃
ಅವಳ ಬೈಗುಳ ಅವನಿಗೆ ಪ್ರೀತಿ ಮಾತುಗಳಂತೆ ಕೇಳುತ್ತಿತ್ತು.

Wednesday 3 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಉತ್ಸಾಹವಿರಲಿ....ಸಂಯಮವೂ ಇರಲಿ.😊

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-125*🍃
ಅವಳು ಮಾಡಿದ್ದೆಲ್ಲವೂ ಸರಿ ಕಾಣುತ್ತಿತ್ತು ಅವನಿಗೆ.

Tuesday 2 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಅಂದ್ಕೊಂಡಿಲ್ಲ ಅಂದ್ರೆ.... ಆಗೋದೂ ಇಲ್ಲ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-124*🍃
ಅವಳ ಎಲ್ಲಾ ತಪ್ಪುಗಳನ್ನು ಕ್ಷಮಿಸುತ್ತಿದ್ದದ್ದೇ ಅವನು ಮಾಡಿದ‌ ತಪ್ಪು.

Monday 1 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕಣ್ಣಿಗೆ ಕಾಣುವವರೆಲ್ಲಾ ಕೈ ಬಿಟ್ಟಾಗಲೇ...
ಕಣ್ಣಿಗೆ ಕಾಣದಿರುವನೊಬ್ಬ ಕೈ ಹಿಡಿದಿರುತ್ತಾನೆ ಎಂದು ಅರಿವಾಗುವುದು...

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-123*🍃
ಅವಳು, ಅವನು.

 ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು