Thursday 30 April 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಜೀವನದಲ್ಲಿ ಇರುವುದು ಎರಡು ದಿನ.
ಒಂದು ನಿನ್ನ ಪರವಾದ ದಿನ...
ಮತ್ತೊಂದು ನಿನ್ನ ವಿರುದ್ದವಾದ ದಿನ...
ಪರವಾದ ದಿನದಲ್ಲಿ ಅಹಂಕಾರ ತೋರಿಸ ಬೇಡ.
ವಿರುದ್ದವಾದ ದಿನದಲ್ಲಿ ತಾಳ್ಮೆ ಕಳೆದು ಕೊಳ್ಳ ಬೇಡ..

✍ ಎಲ್.ನಾಗರಾಜ್.
ಗಣಿತ ಉಪನ್ಯಾಸಕರು.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-93*🍃
*ಲಾಕ್ ಡೌನ್*
ಅವರಿಬ್ಬರು Mall ಗೆ ಹೋಗಲಿಲ್ಲ.
Film ಗೂ ಹೋಗಲಿಲ್ಲ.

Wednesday 29 April 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನಾವು ನಿದ್ರೆ ಮಾಡುವುದನ್ನು ನಾವೇ ನೋಡೋಲ್ಲ.😄

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-92*🍃
*ಲಾಕ್ ಡೌನ್*
ಅವರಿಬ್ಬರೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುವಂತೆ ಮಾಡಿತು.

Tuesday 28 April 2020


🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-91*🍃
*ಅಸುರ* ನಾಗಿದ್ದವನು *ಸುರ* ನಾದನು.ಪರಿಸ್ಥಿತಿಗಳಿಂದ.

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 *APRIL*

A- All
P- People
R- Rest
I- In
L-Lockdown...
😊😊

Monday 27 April 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕರಿಬಂಡೆಯ ಮೇಲಿನ ಕಪ್ಪು ಕೊಳೆ ತೆಗೆಯಬಹುದೇ ಹೊರತು, ಬಂಡೆಯ ಬಣ್ಣವನ್ನಲ್ಲ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-90*🍃

ಸುರನಾಗಿದ್ದವನು ಅಸುರನಾದನು.ಪರಿಸ್ಥಿತಿಗಳಿಂದ.

Sunday 26 April 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನಾವೆಲ್ಲರೂ *ಬಸವಣ್ಣ* ರವರ ವಚನಗಳನ್ನು ಸರಿಯಾಗಿ ಪಾಲಿಸಿದ್ರೆ, ನಮ್ಮ ಜೀವನದಲ್ಲಿ ನಮಗೆ ಬೇಕಾದ್ದೆಲ್ಲವೂ *ಅಕ್ಷಯ* ವಾಗುವುದರಲ್ಲಿ ಅನುಮಾನವಿಲ್ಲ.😊

*ಎಲ್ಲರಿಗೂ ಬಸವಜಯಂತಿ ಹಾಗೂ ಅಕ್ಷಯ ತೃತೀಯ ದ ಶುಭಾಶಯಗಳು*
🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-89*🍃

 ಅವಳು ರಾತ್ರಿ ಕನಸಲ್ಲಿ ಬಂದಳು ಅಂತ ಅವನು ಹಗಲೆಲ್ಲಾ ಅವಳಿಗಾಗಿ ಕಾಯುತ್ತಾ ಕುಳಿತನು.😊

Saturday 25 April 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

*ಅರ್ಥಾನಾಮರ್ಜನಂ ಕಾರ್ಯಂ ವರ್ಧನಂ ರಕ್ಷಣಂ ತಥಾ |*
*ಭಕ್ಷ್ಯ ಮಾಣೋ ನಿರಾದಾಯಃ ಸುಮೇರುರಪಿ ಹೀಯತೇ ||*


ಹಣ ಸಂಪಾದಿಸಬೇಕು. ಅಷ್ಟೇ ಅಲ್ಲ, ಬೆಳೆಸಬೇಕು ಮತ್ತು ಕಾಪಾಡಬೇಕು. ಆದಾಯವಿಲ್ಲದೆ ತಿಂದುಹಾಕುತ್ತಿದ್ದರೆ ಮೇರು ಪರ್ವತವೂ ಕರಗಿಹೋಗುತ್ತದೆ.

- ಸುಭಾಷಿತರತ್ನಭಾಂಡಾಗಾರ
🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-88*🍃

 ಯಾವ ಹೂವು ಯಾರ ಮುಡಿಗೊ.😊


Friday 24 April 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


*ಕಿಂ ವಾಸಸೈವಂ ನ ವಿಚಾರಣೀಯಂ ವಾಸಃ ಪ್ರಧಾನಂ ಖಲು ಯೋಗ್ಯತಾಯಾಃ |*
*ಪೀತಾಂಬರಂ ವೀಕ್ಷ್ಯ ದದೌ ತನೂಜಾಂ ದಿಗಂಬರಂ ವೀಕ್ಷ್ಯ ವಿಷಂ ಸಮುದ್ರಃ ||*

ಯಾವ ಬಟ್ಟೆ ಹಾಕಿಕೊಂಡರೇನು ಎಂದು ವಿಮರ್ಶಿಸಬಾರದು. ಬಟ್ಟೆಯು ಮಾನವನ ಯೋಗ್ಯತೆಯನ್ನು ನಿರ್ಣಯಿಸುತ್ತದೆ. ಪೀತಾಂಬರನಾದ ವಿಷ್ಣುವಿಗೆ ಸಮುದ್ರರಾಜನು ಮಗಳನ್ನು ಕೊಟ್ಟನು. ದಿಗಂಬರನಾದ ಶಿವನಿಗೆ ವಿಷವನ್ನು ಕೊಟ್ಟನು.

-ಸುಭಾಷಿತ

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-87*🍃

ಅವಳು ಮೋಸ ಮಾಡಿದರೂ, ಅವಳ ನೆನಪುಗಳು ಮೋಸ ಮಾಡಲಿಲ್ಲ

Thursday 23 April 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನಮ್ಮ ಬಳಿ ಎಷ್ಟು ಪುಸ್ತಕ  ಇದೆ ಅನ್ನೋದು ಮುಖ್ಯ ಅಲ್ಲ. ಎಷ್ಟು ಪುಸ್ತಕ ಓದಿ,‌ಜೀವನದಲ್ಲಿ ಏನು ಅಳವಡಿಸಿ ಕೊಂಡಿದ್ದೀವಿ ಅನ್ನೋದು ಮುಖ್ಯ.😊

 *ವಿಶ್ವ ಪುಸ್ತಕ ದಿನದ ಶುಭಾಶಯಗಳು* 🙏🏻😊

Wednesday 22 April 2020


🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-86*🍃


ಅವಳು ಅವನ ಮನಸಿನ ಪುಸ್ತಕ ಓದಲೇ ಇಲ್ಲ.


🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-85*🍃
ಅವನು ಅವಳ ಲಿಸ್ಟ್ ನಲ್ಲಿ Block  ಆಗಿದ್ದ.ಆದರೆ ಅವಳ ತಲೆಯಲ್ಲಿ ಅಲ್ಲ.

Tuesday 21 April 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


*ಆಪತ್ಕಾಲೇ ತು ಸಂಪ್ರಾಪ್ತೇ ಶೌಚಾಚಾರಂ ನ ಚಿಂತಯೇತ್ | ಸ್ವಯಂ ಸಮುದ್ಧರೇತ್ ಪಶ್ಚಾತ್ ಸ್ವಸ್ಥೋ ಧರ್ಮಂ ಸಮಾಚರೇತ್ ||*


ಕಷ್ಟಕಾಲ ಬಂದಾಗ ಶೌಚ ಆಚಾರಗಳನ್ನು ಚಿಂತಿಸಬಾರದು. ಮೊದಲು ತನ್ನನ್ನು ತಾನು ಕಾಪಾಡಿಕೊಂಡು ಆಮೇಲೆ ಧರ್ಮಾಚರಣೆ ಮಾಡಬಹುದು.

-ಪರಾಶರಸ್ಮೃತಿ

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-84*🍃
*ಜೀವನ*
ಮಂಜುಗಡ್ಡೆಯೂ ಆಗಬಾರದು. ಆವಿಯೂ ಆಗಬಾರದು.

Monday 20 April 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಭಾವನೆಗಳೂ ಮನದಲ್ಲಿ ಕ್ವಾರಂಟೈನ್ ಆಗಿವೆ😊

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-83*🍃
ಅವನ ಮೌನದಲ್ಲಿಯೂ ಅವಳದೇ ಧ್ಯಾನ.

Sunday 19 April 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



 *PASSWORD*
 ಕೆಲವರಿಗೆ ಹಲವು ನೆನಪುಗಳನ್ನು ಕೊಡುತ್ತದೆ.😊

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-82*🍃
ತಂದೆ ತಾಯಿಗೆ ಅವಳು ಮಗಳು, ಆದರೆ ಅವನಿಗೆ ಅವಳೇ ಪ್ರಪಂಚ.

Saturday 18 April 2020

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-80*🍃


ಕೊರೋನಾ ಎಫ಼ೆಕ್ಟ್.
ಅವಳಲ್ಲಿ......
ಇವನಿಲ್ಲಿ.....
ಮಾತಿಲ್ಲ....
ಕಥೆಯಿಲ್ಲ......

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಯಾವುದೋ ಕಾರಣದಿಂದಲೇ ಸ್ನೇಹವುಂಟಾಗುತ್ತದೆ. ಅಂಥ ಯಾವುದೋ ಕಾರಣದಿಂದಲೇ ಶತ್ರುತ್ವವುಂಟಾಗುತ್ತದೆ. ಆದುದರಿಂದ ಬುದ್ದಿವಂತನಾದವನು ಸ್ನೇಹವನ್ನೇ ಇಲ್ಲಿ ಸಾಧಿಸಬೇಕು; ದ್ವೇಷವನ್ನಲ್ಲ.

-ಸುಭಾಷಿತ
🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-81*🍃

 ಕೋಪ, ಅವರಿಬ್ಬರ ಪ್ರೀತಿಯನ್ನು ನುಂಗಿಹಾಕಿತು.

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 ಯಾರು ವಿಷಯವನ್ನು ಅಥವಾ ಮಾಡಬೇಕಾದ ಕೆಲಸವನ್ನು ಚೆನ್ನಾಗಿ ತಿಳಿಯದೆ ಮಾತನಾಡುತ್ತಾನೋ ಅವನು ಎಷ್ಟೇ ಉತ್ತಮ ಮಾತುಗಾರನಾಗಿರಲಿ ಅವನ ಮಾತು ವ್ಯರ್ಥ.

 ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು