Thursday 22 August 2019

ಗಣೇಶ ವಿಸರ್ಜನೆ

ಇದು ನನ್ನ ವೈಯಕ್ತಿಕ ಅನಿಸಿಕೆ

ನಾಗರ ಕೆರೆಯಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಹೊಂಡ ಮಾಡಿ ಗಣೇಶ ವಿಸರ್ಜನೆ ಮಾಡಿದ ನೆನಪು ನನಗೂ ಇದೆ...ಹಾಗೆಯೇ ಈಗ ಕಲ್ಯಾಣಿಯಲ್ಲಿ ಗಣೇಶ ವಿಸರ್ಜನೆ ಮಾಡುತ್ತಿರುವ ಅನುಭವವೂ ಇದೆ....
ಪರಿಸರ ರಕ್ಷಣೆ ಎಲ್ಲರ ಕರ್ತವ್ಯ ಇದರಲ್ಲಿ ಎರಡು ಮಾತಿಲ್ಲ...ಪರಿಸರ ಸ್ನೇಹಿ ಗಣಪನನ್ನು ಪೂಜಿಸಿ ವಿಸರ್ಜನೆ ಮಾಡಲೇ ಬೇಕು.
ಮೊದಲು ಮನೆಗಳಲ್ಲಿಗಣೇಶನನ್ನು ಪೂಜಿಸಿ ಸಂಜೆ ಗಣೇಶನ ವಿಸರ್ಜನೆ ಗೆ ಕುಟುಂಬದವರೆಲ್ಲಾ ಹೋಗಿ ವಿಸರ್ಜನೆ ಮಾಡುತ್ತಿದ್ದಾಗಿನ ಖುಷಿ ನನಗಂತೂ ಈಗ ಅನ್ನಿಸುವುದಿಲ್ಲ.ಆಗ ಕೆರೆ ಬಳಿ ಯಾರೂ ಆ ಸ್ಥಳದಲ್ಲಿ ಬೇರೆ ಗಣೇಶನ್ನು ಪೂಜಿಸಿಲ್ಲ ಅಂತ ಖಾತ್ರಿ ಪಡಿಸಿಕೊಂಡು, ನಮ್ಮ  ಗಣೇಶನನ್ನು ಪೂಜಿಸಿ, ನಿಧಾನವಾಗಿ ಕೆರೆಯಲ್ಲಿ ಸ್ವಲ್ಪ ದೂರ ನಡೆದು ಎಲ್ಲಿ ಗಣೇಶನನ್ನು ವಿಸರ್ಜನೆ ಮಾಡ ಬಹುದು ಅಂತ ನೋಡಿ ,ಆ ಸ್ಥಳದಲ್ಲಿ ಪೂರ್ವಾಭಿಮುಖವಾಗಿ ಗಣೇಶನನ್ನು ಎರಡು ಸಲ ಮುಳುಗಿಸಿ ಮೂರನೇ ಸಲ ವಿಸರ್ಜನೆ ಮಾಡಿದಾಗ ಸಿಗುತ್ತಿದ್ದ ಸಂತೋಷ ಈಗ ನಶಿಸಿದೆ. ಯಾಕಂದ್ರೆ ಕಲ್ಯಾಣಿಗಳ ಬಳಿ ಗಣೇಶನನ್ನು ಪೂಜಿಸಲು ಜಾಗ ಜಾಸ್ತಿ ಸಿಗುವುದೇ ಇಲ್ಲ.ಮತ್ತೊಬ್ಬರು ಪೂಜೆ‌ ಮಾಡಿದ ಮೇಲೆ‌ ನಾವು ಅದೇ ಸ್ಥಳದಲ್ಲಿ ಮತ್ತೆ ಪೂಜಿಸ‌ ಬೇಕು. ಇದು ತಪ್ಪು ಅಂತ ನನ್ನ ಭಾವನೆ ಅಲ್ಲ ಆದರೂ ಶಾಲಾ ದಿನಗಳಿಂದಲೂ ಅದೇ ರೀತಿ ನೋಡಿ ಈಗ ಈ ರೀತಿ ಮಾಡುವುದು ಮನಸ್ಸಿಗೆ ಸ್ವಲ್ಪ ಬೇಸರದ ಸಂಗತಿ. ಹಾಗೆಯೇ ನಾವು ಗಣೇಶನನ್ನು ವಿಸರ್ಜನೆ ಮಾಡೋಕೆ‌ ಅವಕಾಶ ಸಿಗುವುದೂ ಇಲ್ಲ.ಕಲ್ಯಾಣಿಗಳ ಬಳಿ ವಿಸರ್ಜನೆ ಗೆ ಅಂತ ಇರುವ ಸಿಬ್ಬಂದಿಗೆ ಗಣೇಶನನ್ನು ಹಸ್ತಾಂತರ ಮಾಡಿ ಬರಬೇಕು. ಶ್ರದ್ದಾ ,ಭಕ್ತಿ ಗಳಿಂದ ಪೂಜಿಸಿ ನಾವೇ ವಿಸರ್ಜನೆ ಮಾಡಲಾಗುವುದಿಲ್ಲ ಅನ್ನೋ ಬೇಸರ. ಇದು ಇಲ್ಲಿ ಪ್ರಸ್ತುತವೋ ಅಲ್ವೋ ಗೊತ್ತಿಲ್ಲ ಆದರೂ ಹೇಳಬೇಕೆನಿಸಿದೆ. ನಮ್ಮ ಮುಂದಿನ ಪೀಳಿಗೆಗೆ ನಾವು ನಮ್ಮ ಸಂಸ್ಕೃತಿಯ ಪರಿಚಯ ಹೇಗೆ ಮಾಡಿಕೊಡುತ್ತಿದ್ದೇವೆ ಅನ್ನೋದನ್ನು ನಾವೆಲ್ಲರೂ ಯೋಚಿಸಲೇ ಬೇಕು.
ಗಣೇಶನ ವಿಷಯದಲ್ಲಿ ಪರಿಸರ ಸ್ನೇಹಿ ಗಣೇಶನನ್ನು ಪೂಜಿಸಿ ಅಂತ ಜನರಿಗೆ ಹೇಳುವುದರ ಜೊತೆಗೆ ಪರಿಸರ ಸ್ನೇಹಿ ಗಣೇಶ ಬಿಟ್ಟು ಬೇರೆ ಗಣೇಶ ಸಿಗದ ಹಾಗೆ ನೋಡಿಕೊಳ್ಳಬಹುದಲ್ವಾ?


" ಯೋಗ್ಯತೆ ಇದ್ದವನಿಗೆ
ಯೋಗ ಬಂದೇ ಬರುತ್ತೆ....!!
ಗೆಲುವಿಗಾಗಿ ಶ್ರಮ ಪಟ್ಟವನಿಗೆ ಲೇಟಾದರೂ               
                     "Latest  "ಆಗಿ
ಗೆಲುವು ಸಿಕ್ಕೇ ಸಿಗುತ್ತೆ.....!!!
   

 ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು