Wednesday 31 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

ಎಲ್ಲರಿಗೂ ಕನಸುಗಳಿರುತ್ತವೆ. ಆದರೆ ಪರಿಸ್ಥಿತಿಗಳು ಅಥವಾ ತಮ್ಮದೇ ಮಿತಿಗಳಿಂದಾಗಿ ಆ ಕನಸುಗಳು ಚಿಗುರುವುದಕ್ಕೂ ಮುನ್ನವೇ ಕಮರಿ ಹೋಗುತ್ತವೆ..😊🙃

Tuesday 30 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಮಾಯೆಗೆ ಸಿಲುಕಿ ಮರುಳಾದ ಮನುಜಾ,

ದಾರಿ ಅರಿಯದೇ ಮಿಡುಕುವೇ ಏಕೆ,

ಒಳಗಿನ ಕಣ್ಗಳ ತೆರೆದೂ ನೋಡು,

ಜ್ಞಾನ ಜ್ಯೋತಿಯು ಕಾಣುವುದು.


-ಬೇಡರಕಣ್ಣಪ್ಪ.

Monday 29 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಸೋತ ಕಾಲುಗಳಲ್ಲೇ ಗೆಲುವಿನ ಕಡೆ ಓಡಬೇಕು... 

*ಅದೇ ಬದುಕು* ..


-ಭಗವದ್ಗೀತೆ.

Sunday 28 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಬದುಕಲ್ಲಿ ಬಣ್ಣವಿರಲಿ..

ಬಣ್ಣ ಬದಲಿಸುವುದೇ ಬದುಕಾಗದಿರಲಿ....




✍️ವಿನೋದ್ ಸರ್

Saturday 27 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


 ಯಾವುದಕ್ಕೂ ಜಾಸ್ತಿ ತಲೆ ಕೆಡಿಸಿಕೊಳ್ಳಬಾರದು....

ಆಗುವುದು‌ ಆಗುತ್ತದೆ....

ಹೋಗುವುದು ಹೋಗುತ್ತದೆ..😊

Wednesday 24 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

ಯಾರಾದರೂ ನಮಗೆ ಬೈದಾಗ ಮಾತಿನಿಂದಲೇ ಉತ್ತರ ಕೊಡಬೇಕೆಂದೇನೂ ಇಲ್ಲ.

ಸಿಟ್ಟಿನಿಂದ ಉತ್ತರ ಕೊಟ್ಟು ಪರಿಸ್ಥಿತಿಯನ್ನು ಇನ್ನಷ್ಟು ಹಾಳು ಮಾಡುವುದರ ಬದಲು ಆ ಕ್ಷಣದಲ್ಲಿ ಮೌನವಾಗಿರುವುದೇ ಲೇಸು.

Tuesday 23 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಎಂದೋ ಓದಿದ ಪುಸ್ತಕ, ಯಾವತ್ತೋ ಕೇಳಿದ ಕವಿತೆ, ಎಲ್ಲೋ ಕಂಡ ಮುಖ, ಅಪರಾತ್ರಿಯಲ್ಲಿ ಸುರಿದ ಮಳೆ, ಎಲ್ಲೋ ಆದ ಅವಮಾನ ಇವೆಲ್ಲವೂ ಹೀಗೆಯೇ. ನಮ್ಮ ಮನಸ್ಸಿನೊಳಗೆ ಕೂತು ನಮ್ಮನ್ನು ಮುದಗೊಳಿಸುತ್ತಾ, ಗಾಬರಿ ಬೀಳಿಸುತ್ತಾ, ಎಚ್ಚರಿಸುತ್ತಾ, ತಲ್ಲಣಕ್ಕೆ ತಳ್ಳುತ್ತಾ ಇರುತ್ತದೆ. ಕೆಲವೊಮ್ಮೆ ಇವುಗಳ ನೆನಪಿನಲ್ಲಿ ನಾವು ಕಳೆದುಹೋಗುತ್ತೇವೆ.

Monday 22 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಾವು ಮಾಡುವ ಕೆಲಸಗಳನ್ನು ಜನರು ಅವರವರ ಮನಸ್ಸಿನ ಭಾವನೆಗಳಿಗೆ ತಕ್ಕ‌ಹಾಗೆ ಅರ್ಥ ಮಾಡಿಕೊಳ್ಳುತ್ತಾರೆ.😀

Saturday 20 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಮುಚ್ಚು ಮರೆ ಇಲ್ಲದೆಯೇ ನಿನ್ನಮುಂದೆಲ್ಲವನು ಬಿಚ್ಚಿಡುವೇ ಓ ಗುರುವೇ ಅಂತರಾತ್ಮ.. 

ಪಾಪವಿದೆ ಪುಣ್ಯವಿದೆ , ನರಕವಿದೆ ನಾಕವಿದೆ, ಸ್ವೀಕರಿಸು ಓ ಗುರುವೇ ಅಂತರಾತ್ಮ.. 🙏🏻


-ಕುವೆಂಪು

Friday 19 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

ಇನ್ನೊಬ್ಬನ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ , ನಮ್ಮದೇ ಹುಚ್ಚುತನ ನಮಗೆ ಕಾಣಿಸುತ್ತದೆಯೇ ? 😊😊

– ಶಿವರಾಮ ಕಾರಂತ

Thursday 18 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಸುಖ ಹೆಚ್ಚಾದಂತೆ ಮನುಷ್ಯ ಮೈಮರೆತು‌ ಬಿಡುತ್ತಾನೆ...ಮತ್ತೆ ಅವನನ್ನು ಎಚ್ಚರಿಸಲು ದುಃಖವೇ ಬರಬೇಕು...😊😀

Wednesday 17 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ನಾವು FREE ಇದ್ದೀವಿ‌ ಅಂದ ತಕ್ಷಣ ನಮಗೆ ಬೇಕಾದವರೂ FREE ಇರಲೇ ಬೇಕು ಅಂತೇನಿಲ್ಲ...😀😀😀😀

Tuesday 16 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಸೇಡು ಎಂದರೆ ತಿರುಗಿ ಬೀಳುವುದಲ್ಲ,

ಬೆಳೆದು ನಿಲ್ಲುವುದು...

Monday 15 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಸೋಲಿನ ಬಗ್ಗೆ ಯೋಚಿಸುವುದು ಕೂಡ ತಪ್ಪು ಎನ್ನುವ ವಾತಾವರಣದಲ್ಲಿ ಬೆಳೆದರೆ ಸೋಲನ್ನು ಅಷ್ಟು ಸುಲಭದಲ್ಲಿ ಸ್ವೀಕರಿಸಲಾಗುವುದಿಲ್ಲ....😊

Sunday 14 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಪ್ರತಿಫಲ ಅಪೇಕ್ಷಿಸದೆ ಮಾಡಿದ ಸಹಾಯ ಖಂಡಿತಾ ವ್ಯರ್ಥವಾಗುವುದಿಲ್ಲ.ಬದಲಿಗೆ ಭವಿಷ್ಯದಲ್ಲಿ ನಿರೀಕ್ಷೆಗೂ ಮೀರಿದ ಫಲ ಕೊಡುತ್ತದೆ.😊😊😊

Thursday 11 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಅನ್ಯೋನ್ಯ ದಾಂಪತ್ಯ ಎಂದರೆ ಅದು ಶಿವ–ಪಾರ್ವತಿಯರ ದಾಂಪತ್ಯವೇ ಹೌದು. ಶಿವನು ತನ್ನ ಶರೀರದ ಅರ್ಧಭಾಗವನ್ನೇ ತನ್ನ ಮಡದಿಗೆ ಮೀಸಲಾಗಿರಿಸಿ ಅರ್ಧನಾರೀಶ್ವರನಾದವನು; ದಾಂಪತ್ಯ ಎಂದರೆ ಗಂಡು ಹೆಚ್ಚು, ಹೆಣ್ಣು ಕಡಿಮೆ ಎಂದೋ ಅಥವಾ ಹೆಣ್ಣು ಹೆಚ್ಚು, ಗಂಡು ಕಡಿಮೆ ಎಂದೋ ಲೆಕ್ಕಾಚಾರದ ವ್ಯವಹಾರ ಅಲ್ಲ, ಅದು ಇಬ್ಬರ ಸಮಪಾಲಿನ ಸಮಬಾಳು ಎಂಬುದನ್ನು ಅರ್ಧನಾರೀಶ್ವರನ ಕಲ್ಪನೆಯಲ್ಲಿ ಕಾಣಬಹುದು.

ಶಿವನಿಗೆ ತನ್ನ ಮಡದಿಗೆ ಅರ್ಧಶರೀರವನ್ನೇ ಕೊಡುವಷ್ಟು ಪ್ರೀತಿ ಇದೆ ನಿಜ; ಹೀಗಿದ್ದರೂ ಅವನು ಪರಮವೈರಾಗ್ಯಸ್ವರೂಪಿ. ಅವನು ಕೇವಲ ಭೋಗದಲ್ಲಿಯೇ ಮುಳುಗುವವನೂ ಅಲ್ಲ ಅಥವಾ ಕೇವಲ ತ್ಯಾಗದಲ್ಲಿಯೇ ತಲ್ಲಿನನಾಗುವವನೂ ಅಲ್ಲ; ತ್ಯಾಗಭೋಗದ ಸಮನ್ವಯದ ಸಂಕೇತವೇ ಅವನು.


ಹೀಗೆ ವಿಶಿಷ್ಟ ದೇವತೆಯಾದ ಶಿವನ ಆರಾಧನೆಗೆಂದೇ ಮೀಸಲಾದ ದಿನವೇ ಶಿವರಾತ್ರಿ.


*ತಮಗೆಲ್ಲರಿಗೂ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು*🙏🏻😊💐

Wednesday 10 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಕೆಲವು ಬಾರಿ ನಮ್ಮ ಒಳ್ಳೆಯತನವೇ ನಮಗೆ ಮುಳ್ಳಾಗುತ್ತದೆ...😀😀😀

Tuesday 9 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಜೀವನದಲ್ಲಿ ಕೆಲವೊಂದು ನೋವುಗಳು ಬದುಕಲು ಬಿಡುವುದಿಲ್ಲ... 😊😊

              ಮತ್ತು 

ಕೆಲವು ಜವಾಬ್ದಾರಿಗಳು 

ಸಾಯಲು ಬಿಡುವುದಿಲ್ಲ...😊😊

Monday 8 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಹೆಣ್ಣೆಂದರೆ ತಾಯಿ

ಹೆಣ್ಣೆಂದರೆ ಮಗಳು

ಹೆಣ್ಣೆಂದರೆ ಅಕ್ಕ

ಹೆಣ್ಣೆಂದರೆ ತಂಗಿ

ಹೆಣ್ಣೆಂದರೆ ಮಡದಿ

ಹೆಣ್ಣೆಂದರೆ ಅತ್ತೆ

ಹೆಣ್ಣೆಂದರೆ ಸೊಸೆ

ಇವೆಲ್ಲಕ್ಕಿಂತಲೂ ಮಿಗಿಲಾಗಿ

ಹೆಣ್ಣೆಂದರೆ *ಶಕ್ತಿ* .

ಈ *ಮಹಾಶಕ್ತಿಯನ್ನು* ಗೌರವಿಸಲು ಈದಿನ  ಮಾತ್ರ ಸೀಮಿತವಾಗದಿರಲಿ..


 ✍️ ವಿನೋದ್ ಸರ್.


ಎಲ್ಲಾ ಮಹಿಳೆಯರಿಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು...💐😊🙏🏻

Sunday 7 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

ಅವರಿವರ ಕಥೆಗಳಲ್ಲಿ ಅತಿಥಿ ಪಾತ್ರಗಳನ್ನು ಮಾಡುತ್ತಾ ನಮ್ಮ ಕಥೆಯಲ್ಲಿ ನಾವು *ನಾಯಕ* ಅನ್ನುವುದನ್ನೇ ಮರೆತಿರುತ್ತೇವೆ...😊😀

Saturday 6 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಪ್ರೀತಿ, ಕಾಳಜಿ, ಅನುಕಂಪ, ಸಹಾನುಭೂತಿ, ಸ್ಪಂದನೆ - ಇವೆಲ್ಲಾ ಗ್ರಾಂಥಿಕ ಪದಗಳಲ್ಲ. ಮನಸ್ಸಿನ ಗಾಯವನ್ನು ವಾಸಿ ಮಾಡುವ ದಿವ್ಯ ಔಷಧಿಗಳು. ಇವುಗಳ ಬಲದಿಂದ ಎಂಥಾ ನೋವನ್ನೂ ನಿವಾರಿಸಬಹುದು...

Tuesday 2 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಮನುಷ್ಯ ಸಮುದ್ರದ ಹಾಗೆ, ಜನರು ಅದರ ಅಲೆಗಳನ್ನು ಮಾತ್ರ ಗಮನಿಸುತ್ತಾರೆ. ಅದರ ಶಾಂತತೆ, ಶಕ್ತಿ ಮತ್ತು ಅಗಾಧತೆಯನ್ನು ತಿಳಿಯಲು ಬಯಸುವುದಿಲ್ಲ....😊

Monday 1 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಕಂಡದ್ದನ್ನು ಬಯಸುವುದೇ *ಕಾಮ* .  

ಬಯಸಿದ್ದು ದೊರೆಯದಿದ್ದರೆ *ಕ್ರೋಧ* . 

ದೊರೆತರೆ ಇನ್ನಷ್ಟು ದೊರೆಯಲೆಂಬ *ಲೋಭ* .

ಇನ್ನಷ್ಟು ದೊರಕಿತೆಂದರೆ ಅದು ತನ್ನ ಕೈ ಬಿಟ್ಟು ಹೊಗಬಾರದೆಂಬುದೆ *ಮೋಹ* . 

ಅದು ಕೈ ಬಿಟ್ಟು ಹೋಗದೆ ತನ್ನಲ್ಲಿಯೇ ಉಳಿದರೆ ಅದು ತನ್ನೊಬ್ಬನಿಗೆ ಇದೆಯೆಂಬುದು *ಮದ* . 

ತನ್ನಲ್ಲಿರುವುದು ಬೇರೋಬ್ಬನಲ್ಲಿ ಇದೆ ಎಂದು ತಿಳಿದು ಬಂದಾಗ *ಮತ್ಸರ* . 

ಹೀಗೆ ಕಾಮವೊಂದರಿಂದ ಕಾಮವೂ ಸೇರಿ 6 ವೈರಿಗಳು ರಕ್ತ ಬೀಜಾಸುರನ ಸಂತತಿಯಂತೆ ಬೆಳೆಯುತ್ತಾ ಹೋಗುತ್ತದೆ....

 ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು