Thursday 22 August 2019

ಗಣೇಶ ವಿಸರ್ಜನೆ

ಇದು ನನ್ನ ವೈಯಕ್ತಿಕ ಅನಿಸಿಕೆ

ನಾಗರ ಕೆರೆಯಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಹೊಂಡ ಮಾಡಿ ಗಣೇಶ ವಿಸರ್ಜನೆ ಮಾಡಿದ ನೆನಪು ನನಗೂ ಇದೆ...ಹಾಗೆಯೇ ಈಗ ಕಲ್ಯಾಣಿಯಲ್ಲಿ ಗಣೇಶ ವಿಸರ್ಜನೆ ಮಾಡುತ್ತಿರುವ ಅನುಭವವೂ ಇದೆ....
ಪರಿಸರ ರಕ್ಷಣೆ ಎಲ್ಲರ ಕರ್ತವ್ಯ ಇದರಲ್ಲಿ ಎರಡು ಮಾತಿಲ್ಲ...ಪರಿಸರ ಸ್ನೇಹಿ ಗಣಪನನ್ನು ಪೂಜಿಸಿ ವಿಸರ್ಜನೆ ಮಾಡಲೇ ಬೇಕು.
ಮೊದಲು ಮನೆಗಳಲ್ಲಿಗಣೇಶನನ್ನು ಪೂಜಿಸಿ ಸಂಜೆ ಗಣೇಶನ ವಿಸರ್ಜನೆ ಗೆ ಕುಟುಂಬದವರೆಲ್ಲಾ ಹೋಗಿ ವಿಸರ್ಜನೆ ಮಾಡುತ್ತಿದ್ದಾಗಿನ ಖುಷಿ ನನಗಂತೂ ಈಗ ಅನ್ನಿಸುವುದಿಲ್ಲ.ಆಗ ಕೆರೆ ಬಳಿ ಯಾರೂ ಆ ಸ್ಥಳದಲ್ಲಿ ಬೇರೆ ಗಣೇಶನ್ನು ಪೂಜಿಸಿಲ್ಲ ಅಂತ ಖಾತ್ರಿ ಪಡಿಸಿಕೊಂಡು, ನಮ್ಮ  ಗಣೇಶನನ್ನು ಪೂಜಿಸಿ, ನಿಧಾನವಾಗಿ ಕೆರೆಯಲ್ಲಿ ಸ್ವಲ್ಪ ದೂರ ನಡೆದು ಎಲ್ಲಿ ಗಣೇಶನನ್ನು ವಿಸರ್ಜನೆ ಮಾಡ ಬಹುದು ಅಂತ ನೋಡಿ ,ಆ ಸ್ಥಳದಲ್ಲಿ ಪೂರ್ವಾಭಿಮುಖವಾಗಿ ಗಣೇಶನನ್ನು ಎರಡು ಸಲ ಮುಳುಗಿಸಿ ಮೂರನೇ ಸಲ ವಿಸರ್ಜನೆ ಮಾಡಿದಾಗ ಸಿಗುತ್ತಿದ್ದ ಸಂತೋಷ ಈಗ ನಶಿಸಿದೆ. ಯಾಕಂದ್ರೆ ಕಲ್ಯಾಣಿಗಳ ಬಳಿ ಗಣೇಶನನ್ನು ಪೂಜಿಸಲು ಜಾಗ ಜಾಸ್ತಿ ಸಿಗುವುದೇ ಇಲ್ಲ.ಮತ್ತೊಬ್ಬರು ಪೂಜೆ‌ ಮಾಡಿದ ಮೇಲೆ‌ ನಾವು ಅದೇ ಸ್ಥಳದಲ್ಲಿ ಮತ್ತೆ ಪೂಜಿಸ‌ ಬೇಕು. ಇದು ತಪ್ಪು ಅಂತ ನನ್ನ ಭಾವನೆ ಅಲ್ಲ ಆದರೂ ಶಾಲಾ ದಿನಗಳಿಂದಲೂ ಅದೇ ರೀತಿ ನೋಡಿ ಈಗ ಈ ರೀತಿ ಮಾಡುವುದು ಮನಸ್ಸಿಗೆ ಸ್ವಲ್ಪ ಬೇಸರದ ಸಂಗತಿ. ಹಾಗೆಯೇ ನಾವು ಗಣೇಶನನ್ನು ವಿಸರ್ಜನೆ ಮಾಡೋಕೆ‌ ಅವಕಾಶ ಸಿಗುವುದೂ ಇಲ್ಲ.ಕಲ್ಯಾಣಿಗಳ ಬಳಿ ವಿಸರ್ಜನೆ ಗೆ ಅಂತ ಇರುವ ಸಿಬ್ಬಂದಿಗೆ ಗಣೇಶನನ್ನು ಹಸ್ತಾಂತರ ಮಾಡಿ ಬರಬೇಕು. ಶ್ರದ್ದಾ ,ಭಕ್ತಿ ಗಳಿಂದ ಪೂಜಿಸಿ ನಾವೇ ವಿಸರ್ಜನೆ ಮಾಡಲಾಗುವುದಿಲ್ಲ ಅನ್ನೋ ಬೇಸರ. ಇದು ಇಲ್ಲಿ ಪ್ರಸ್ತುತವೋ ಅಲ್ವೋ ಗೊತ್ತಿಲ್ಲ ಆದರೂ ಹೇಳಬೇಕೆನಿಸಿದೆ. ನಮ್ಮ ಮುಂದಿನ ಪೀಳಿಗೆಗೆ ನಾವು ನಮ್ಮ ಸಂಸ್ಕೃತಿಯ ಪರಿಚಯ ಹೇಗೆ ಮಾಡಿಕೊಡುತ್ತಿದ್ದೇವೆ ಅನ್ನೋದನ್ನು ನಾವೆಲ್ಲರೂ ಯೋಚಿಸಲೇ ಬೇಕು.
ಗಣೇಶನ ವಿಷಯದಲ್ಲಿ ಪರಿಸರ ಸ್ನೇಹಿ ಗಣೇಶನನ್ನು ಪೂಜಿಸಿ ಅಂತ ಜನರಿಗೆ ಹೇಳುವುದರ ಜೊತೆಗೆ ಪರಿಸರ ಸ್ನೇಹಿ ಗಣೇಶ ಬಿಟ್ಟು ಬೇರೆ ಗಣೇಶ ಸಿಗದ ಹಾಗೆ ನೋಡಿಕೊಳ್ಳಬಹುದಲ್ವಾ?


" ಯೋಗ್ಯತೆ ಇದ್ದವನಿಗೆ
ಯೋಗ ಬಂದೇ ಬರುತ್ತೆ....!!
ಗೆಲುವಿಗಾಗಿ ಶ್ರಮ ಪಟ್ಟವನಿಗೆ ಲೇಟಾದರೂ               
                     "Latest  "ಆಗಿ
ಗೆಲುವು ಸಿಕ್ಕೇ ಸಿಗುತ್ತೆ.....!!!
   

Friday 17 May 2019

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಪರಿಹಾರ ಇಲ್ಲದ ಸಮಸ್ಯೆಗಳನ್ನು ಪ್ರಪಂಚದಲ್ಲಿ ಇನ್ನೂ ಯಾರೂ ಕಂಡುಹಿಡಿದಿಲ್ಲ...😊😊

Monday 15 April 2019

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ನಾವು ಯಾವುದೇ ಕೆಲಸ ಮಾಡಿದಾಗ ಅದರ ಶ್ರೇಯಸನ್ನು ಇತರರು ನಮಗೆ ಕೊಡಬೇಕೆ ಹೊರತು ನಾವೇ ಅದನ್ನು ತೆಗೆದುಕೊಳ್ಳುವುದಲ್ಲ..... ಮಾಲೆಯನ್ನು ಬೇರೆಯವರು ಹಾಕಿದರೆ ಚೆನ್ನ. ನಮಗೆ ನಾವೇ ಮಾಲೆ ಹಾಕಿಕೊಂಡರೆ ಅದಕ್ಕಿಂತ ಹಾಸ್ಯಾಸ್ಪದ ಸಂಗತಿ ಮತ್ತೊಂದಿಲ್ಲ....😀😀😀😀
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಭಾವನೆಗಳು ಇಂಟರ್ನೆಟ್ನಲ್ಲಿ ಸಿಗುವುದಿಲ್ಲ....
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಶ್ರೀ ರಾಮನಂತ ಆದರ್ಶ ಗುಣಗಳು ನಮ್ಮದಾದರೆ, ಎಂತಹ ಪರಿಸ್ಥಿತಿಯಲ್ಲೂ ಗೆಲುವು ನಮ್ಮದಾಗುತ್ತದೆ....😊😊


 *ಶ್ರೀ ರಾಮ ನ ಕೃಪೆಯಿಂದ ನಮ್ಮೆಲ್ಲರ  ಜೀವನ ಪಾನಕ, ಹೆಸರುಬೇಳೆ ಯಂತೆ ಯಾವಾಗಲೂ ತಂಪಾಗಿರಲಿ*😊😊

*ಎಲ್ಲರಿಗೂ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು*🙏🏻💐😊
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಮಾನವನ ಅವಸಾನಕ್ಕೆ ಮಾನವನ  ಬುದ್ಧಿವಂತಿಕೆಯೇ ಕಾರಣ....😔😊
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಅಷ್ಟದಿಗ್ಗಜವೆ ನೀನ್? ಆದಿಶೇಷನೆ ನೀನು?।
ಕಷ್ಟಭಾರವಿದೆಂದು ನಿಟ್ಟುಸಿರ ಬಿಡುವೆ! ॥
ನಿಷ್ಠುರದ ನಿನ್ನ ಕನಿಕರ ಜಗಕೆ ಬೇಕಿಲ್ಲ।
ಎಷ್ಟಾದರಷ್ಟೆ ಸರಿ  - ಮಂಕುತಿಮ್ಮ ॥


ಬದುಕಿನ ಬವಣೆಯನ್ನು ಪಡುವಾಗ " ಅಯ್ಯೋ ಇದು ಕಷ್ಟ ಮತ್ತು ಇದು ಭಾರ" ಎಂದು ನಿಟ್ಟುಸಿರು ಬಿಡುವೆಯಲ್ಲಾ, ನೀನೇನು ಎಂಟು ದಿಕ್ಕುಗಳನ್ನು ಹೊತ್ತ ಆನೆಗಳಷ್ಟು ಭಾರವನ್ನೂ ಹೊತ್ತಿಲ್ಲ ಅಥವಾ ಆ ಆನೆಗಳನ್ನು ಹೊತ್ತ ಆದಿಶೇಷನಷ್ಟು ಭಾರವನ್ನೂ ಹೊತ್ತಿಲ್ಲವಲ್ಲ. ಸುಮ್ಮನೆ " ನಾನು ಬಹಳ ಕಷ್ಟಪಡುತ್ತಿದ್ದೇನೆ " ಎನ್ನುತ್ತಾ ಅನ್ಯರ ಅನುಕಂಪವನ್ನು ಆಕರ್ಷಿಸುವ ನಿನ್ನನ್ನು ಯಾರೂ ಈ ಜಗತ್ತಿನಲ್ಲಿ ಗಮನಿಸುವುದಿಲ್ಲ. ನಿನಗೆ ಎಷ್ಟು ಹೊರಲಾದರೆ ಅಷ್ಟು ಹೊತ್ತುಕೋ.

-ಡಿ.ವಿ.ಜಿ
🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಕರೆ ಕಳುಹಿಸದೆ ಹೋಗುವುದು ಎಷ್ಟು ತಪ್ಪೋ, ಕೇಳದೇ ಇದ್ದರೂ ಬುದ್ದಿ ಹೇಳುವುದು ಅಷ್ಟೇ ತಪ್ಪು..

-ತರಾಸು

Tuesday 9 April 2019

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನಮ್ಮತನವಿರಲಿ....

Saturday 6 April 2019

ದಿನಕ್ಕೊಂದು ಸಿ(ಕ)ಹಿ ಮಾತು

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃




ಯುಗ-ಯುಗಾದಿಯ ನಡುವೆ ನಿಜಕ್ಕೂ ಹೊಸತಿದೆ....
ಬಾಳ ಪಯಣದಲ್ಲಿ ಜೊತೆಯಾದವರ ಪ್ರೀತಿ,  ಸ್ನೇಹವಿದೆ....

 *ಕಹಿ* ನೆನಪಿನ ಬೇವು ಮನದಲ್ಲಿ ಮಾಡುತ್ತಿದ್ದರೂ ಘಾಸಿ....
*ಸಿಹಿ* ನೆನಪಿನ ಬೆಲ್ಲ ಮಾಡುತಿರಲಿ ನೋವ ವಾಸಿ....

*ಸಿಹಿ-ಕಹಿ* ಹಂಚಿಕೊಂಡು ಬಾಳುವ ಸಮಚಿತ್ತ ಯುಗಾದಿಗಷ್ಟೇ ಸೀಮಿತವಾಗದಿರಲಿ....
ಬಾಳಿನ *ಏಳು ಬೀಳು* ಗಳನ್ನು ಧೈರ್ಯದಿಂದ ಎದುರಿಸುವ ಸಮಚಿತ್ತ ಸದಾ ಇರಲಿ....😊👍😊


ಎಲ್ಲರಿಗೂ ವಿಕಾರಿನಾಮ ಸಂವತ್ಸರದ  ಯುಗಾದಿ ಹಬ್ಬದ ಶುಭಾಶಯಗಳು...

- ಶಿವಶಂಕರ್. ಎಸ್.ಎಸ್.

Friday 5 April 2019

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃




ಯಶಸ್ಸೆನ್ನುವುದು ಅತ್ಯಂತ ಅಪಾಯಕಾರಿ. ಒಮ್ಮೆ ಯಶಸ್ವಿಯಾದೆವೆಂದರೆ ನಮ್ಮನ್ನು ನಾವೇ ನಕಲು ಮಾಡಲು ಆರಂಭಿಸುತ್ತೇವೆ. ನಮ್ಮನ್ನು ನಾವೇ ನಕಲು ಮಾಡುವುದು ಇತರರನ್ನು ನಕಲು ಮಾಡುವುದಕ್ಕಿಂತ ಹೆಚ್ಚು ಆತಂಕಕಾರೀ ಪ್ರಕ್ರಿಯೆ. ಏಕೆಂದರೆ ಅದು ನಮ್ಮ ಭವಿಷ್ಯದ ಬೆಳವಣಿಗೆಯನ್ನು ಸಂಪೂರ್ಣ ಸ್ಥಗಿತಗೊಳಿಸುತ್ತದೆ.

- ಪಾಬ್ಲೊ ಪಿಕಾಸೊ

 ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು