Thursday 31 December 2020

🍂 ದಿನಕ್ಕೊಂದು ಸಿ(ಕ)ಹಿ ಮಾತು 🍃

 🍂 ದಿನಕ್ಕೊಂದು ಸಿ(ಕ)ಹಿ ಮಾತು 🍃

*ಸಿಹಿ ಮಾತು*

ನಾವು ಮತ್ತೊಂದು ಹೊಸ ಕ್ಯಾಲೆಂಡರ್  ವರ್ಷ 2021 ಕ್ಕೆ ಕಾಲಿಡುತ್ತಿದ್ದೇವೆ. ಕಳೆದ ವರುಷಗಳಲ್ಲಿ ನನ್ನೆಲ್ಲಾ ಕಷ್ಟ ಸುಖಗಳಿಗೆ ಜೊತೆಯಾಗಿದ್ದ, ನಾನು ಬಿದ್ದಾಗ ಮೇಲಕ್ಕೆತ್ತಿ ಮುನ್ನಡೆಯಲು ಪ್ರೋತ್ಸಾಹಿಸಿದ, ನನ್ನ ತಪ್ಪುಗಳನ್ನು ತಿದ್ದಿದ ಹಾಗೂ ತಿದ್ದುತ್ತಿರುವ, ಸದಾ ನನ್ನ ಏಳಿಗೆಯನ್ನು ಬಯಸುವ ತಮಗೆಲ್ಲರಿಗೂ ಈ ಶುಭ ಸಂದರ್ಭದಲ್ಲಿ ನಾನು ಧನ್ಯವಾದ ಹೇಳಲು ಬಯಸಿದ್ದೇನೆ ಹಾಗೂ  ತಮ್ಮೆಲರಿಗೂ ಹೊಸ ಕ್ಯಾಲೆಂಡರ್ 2021 ರ ವರ್ಷ ಸುಖ, ಸಂತೋಷ, ಶಾಂತಿ, ಆರೋಗ್ಯ , ಸುಂದರ ಹಾಗೂ ಸುಖಕರವಾಗಿರಲಿ ಎಂದು ಆಶಿಸುತ್ತಾ 2021 ರ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳನ್ನ ನಿಮಗೂ ಹಾಗು ನಿಮ್ಮ ಕುಟುಂಬದವರಿೂ ಕೋರುತ್ತಿದ್ದೇನೆ... 

ತಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು...

-ಶಿವಶಂಕರ್. ಎಸ್.ಎಸ್.


🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 



Wednesday 30 December 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಕೆಲವು ಸಲ, 

ದೇವರು ಎಲ್ಲಾ ತಿಳಿದುಕೊಳ್ಳುವ ಶಕ್ತಿ ಕೊಡುತ್ತಾನೆ...

ಆದರೆ,

ಏನೂ ಮಾಡದ ಸ್ಥಿತಿಯನ್ನೂ ಇಡುತ್ತಾನೆ....😊

Monday 28 December 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


*ತಾಳ್ಮೆ* ಎಲ್ಲರನ್ನೂ ನಮ್ಮೊಂದಿಗೇ ಇರಿಸುತ್ತದೆ....

Sunday 27 December 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಘನತತ್ತ್ವವೊಂದಕ್ಕೆ ದಿನರಾತ್ರಿ ಮನಸೋತು ।
ನೆನೆಯದಿನ್ನೊಂದನೆಲ್ಲವ ನೀಡುತದರಾ ॥
ಅನುಸಂಧಿಯಲಿ ಜೀವಭಾರವನು ಮರೆಯುವುದು ।
ಹನುಮಂತನುಪದೇಶ – ಮಂಕುತಿಮ್ಮ ॥

ಹನುಮಂತ ನಮಗೆ ಇಂದಿಗೂ, ಎಂದಿಗೂ ಏಕೆ ಪ್ರಸ್ತುತ ಎಂಬುದನ್ನು ಈ ಪದ್ಯ ಎತ್ತಿಹಿಡಿಯುತ್ತಿದೆ.

ಜೀವನದಲ್ಲಿ ಒಂದು ಮಹಾತತ್ತ್ವದಲ್ಲಿ ಅಚಲವಾಗಿ ಮನಸ್ಸನ್ನು ನಿಲ್ಲಿಸಬೇಕು; ಅದರ ಸಾಕ್ಷಾತ್ಕಾರಕ್ಕೆ ನಿರಂತರ ಪ್ರಯತ್ನಶೀಲರಾಗತಕ್ಕದ್ದು. ಇಂಥ ಕ್ರಿಯಾಶೀಲತೆಯೇ ನಮ್ಮ ಜೀವನದ ನೆಮ್ಮದಿಗೆ ಕಾರಣವಾಗುವಂಥದ್ದು. ಇದೇ ಹನುಮಂತನ ಉಪದೇಶ.

ಎಲ್ಲರಿಗೂ ಹನುಮಜಯಂತಿಯ ಶುಭಾಶಯಗಳು

Saturday 26 December 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಸೋಲು ಬದುಕಿನಲ್ಲಿ ಅನುಭವ, ಸ್ಥಿತಪ್ರಜ್ಞೆ ತಂದರೆ
ಗೆಲುವು ಆನಂದ ಸಂಭ್ರಮ ತರುವುದು. ಎರಡೂ ಬದುಕಿಗೆ ಅಗತ್ಯ ಅನಿವಾರ್ಯ. ಎರಡನ್ನೂ ಮುಕ್ತವಾಗಿ ಸ್ವೀಕರಿಸುವ
ಗುಣ ನಮ್ಮಲ್ಲಿ ಬೆಳೆದರೆ ಜೀವನ ಆನಂದಮಯ. ಗೆಲುವಿನ ಅಮಲು ಏರಿಸಿಕೊಂಡರೆ ಅದು ನಮ್ಮಿಂದ ದೂರವಾದಾಗ ಜೀವನ ಅಯೋಮಯ.😊😊😊

Friday 25 December 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನಮ್ಮ‌ ಮನದಲ್ಲಿ ಭಕ್ತಿ ಇದ್ದರೆ ಕಲ್ಲಿನಲ್ಲೂ ದೇವರು ಕಾಣುತ್ತಾನೆ...😊

Thursday 24 December 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

*ಸರ್ಪವು ಜೀರ್ಣವಾದ ಪೊರೆಯನ್ನು ಬಿಡುವಂತೆ , ಯಾವನು ತಾಳ್ಮೆಯಿಂದ ಕೋಪವನ್ನು ದೂರಮಾಡುವನೋ ಅವನೇ ಮನುಷ್ಯ*

- ರಾಮಾಯಣ ಸುಂದರ ಕಾಂಡ

Tuesday 22 December 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃 *

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


*An equation has no meaning unless it expresses a thought of God*


*-Srinivasa Ramanujan.* 



➡️ ಅರಿತು ಕೊಳ್ಳುವ ಶಕ್ತಿ ಇದ್ದರೆ, ಗಣಿತದಲ್ಲಿ ಎಲ್ಲವೂ  (ದೇವರೂ) ಕಾಣಿಸುತ್ತದೆ...😊😊

Monday 21 December 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


*ಬೆಳಿಗ್ಗೆ ಮಾಡಿದ ಅಡುಗೆ ಮತ್ತು ಆಹಾರವು  ಹಳಸಿಹೋಗುತ್ತದೆ. ಹೀಗಿರುವಾಗ , ಅದೇ ಅನ್ನರಸದಿಂದ ಬೆಳೆದು ಬಂದ  ಈ ಶರೀರ ಹೇಗೆ ನಿತ್ಯವಾದೀತು.*

 - ಗರುಡ ಪುರಾಣ

Sunday 20 December 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 ನಾವು ಸಕಾಲದಲ್ಲಿ‌ ಪಾಠಗಳನ್ನು ಅರ್ಥ ಮಾಡಿಕೊಳ್ಳಲು ವಿಫಲರಾದಾಗ ಜೀವನವು ಅಕಾಲದಲ್ಲಿ ನಮಗೆ ಅದೇ ಪಾಠಗಳ ಅರ್ಥ ಮಾಡಿಸುತ್ತದೆ‌‌‌...😊😉



Saturday 19 December 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 ಆಗತಾನೆ ಚಪ್ಪಲಿ ಕಳೆದು ಕೊಂಡವರು ಎಲ್ಲರ ಪಾದಗಳನ್ನು ಅನುಮಾನದಿಂದ ನೋಡುವುದಂತೂ ಸತ್ಯ😀😀😀

Friday 18 December 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 ಪ್ರಾರ್ಥನೆ ಮತ್ತು ನಂಬಿಕೆ ಕಣ್ಣಿಗೆ ಕಾಣದೆ ಇರಬಹುದು, ಆದರೆ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಶಕ್ತಿ ಎರಡಕ್ಕೂ ಇದೆ...😊

Thursday 17 December 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

*ಟೈಮ್...*

ಸರಿ ಇದ್ದರೆ ಎಲ್ಲವನ್ನೂ ಕಲಿಸುತ್ತದೆ...
ಕೆಟ್ಟರೆ ಸಮಾಧಿಯನ್ನೂ ಮಾಡುತ್ತದೆ...

Wednesday 16 December 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ನಾವು ನಮ್ಮೊಳಗಿರುವ ಸಂತೋಷವೆಂಬ ಅಮೃತ ಹನಿಯನ್ನು ನಿರ್ಲಕ್ಷಿಸಿ ಮತ್ತೊಬ್ಬರ ಸಂತೋಷದ ವಿಷ ವರ್ತುಲ ಚಕ್ರವ್ಯೂಹದ ಒಳಗೆ ನುಸುಳಿ ನಮ್ಮ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ.

Tuesday 15 December 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಕರಗಳ ಶುದ್ಧಿ ಕರೋನ ಸೋಂಕನ್ನು ತಡೆಯುತ್ತದೆ.
ಕರಣ(ಇಂದ್ರಿಯ) ಗಳ ಶುದ್ಧಿ ನಮ್ಮನ್ನು ಗುರಿಯೆಡೆಗೆ ತಲುಪಿಸುತ್ತದೆ...

Monday 14 December 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 *ಕಣ್ಣೀರಿನ ರುಚಿ*


ಕಣ್ಣಿಗೆ ಸಪ್ಪೆಯಾಗಿ...

ಬಾಯಿಗೆ ಉಪ್ಪಾಗಿ...

ಹೃದಯಕ್ಕೆ ನೋವಾಗಿ...

ಹೃದಯ ಉಳ್ಳವರಿಗೆ ಅನುಕಂಪವಾಗಿ..

ಹೃದಯ ಇಲ್ಲದವರಿಗೆ ತಮಾಷೆಯಾಗಿ..

ಸ್ನೇಹಿತರಿಗೆ ನೋವಾಗಿ..

ವಿರೋಧಿಗಳಿಗೆ ಹೆಮ್ಮೆಯಾಗಿ...


ಕಾಣುತ್ತದೆ....

Sunday 13 December 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

*ಕೆಲವರು* ,
ಯಾರನ್ನೋ ಸೋಲಿಸಲು ಸಂಚು ನಡೆಸುವರು....
ಕೊನೆಗೆ ಅದೇ ಸಂಚಿನಲ್ಲಿ ಅವರೇ ಸಿಲುಕುವರು...😊

Friday 11 December 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃




Time ಸರಿ ಇಲ್ಲ ಅನ್ನೋರು ಸ್ವಲ್ಪ ತಾಳ್ಮೆಯಿಂದ ಇರಬೇಕು...

ಯಾಕಂದ್ರೆ ಅದು ನಮ್ಮ ನಿಜವಾದ ಸಂಬಂಧಗಳ ಬೆಲೆ ಏನೆಂದು ತಿಳಿಸಿ‌ಕೊಡುತ್ತದೆ.😊😊

Wednesday 9 December 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಗಟ್ಟಿಯಾಗಿ ನಿಲ್ಲಬೇಕೆಂದರೆ ಬಂಡೆಯಂತಿರಬೇಕು. ಅದಕ್ಕೆ ದೇವರೂ ಸಹ ಕಲ್ಲನೇ ಆರಿಸಿಕೊಂಡಿದ್ದಾನೆ😀

Tuesday 8 December 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಗುರಿಗೆ ಗುಲಾಮನಾದರೆ, ಯಶಸ್ಸು ನಮ್ಮ ಜೊತೆಯೇ ಇರುತ್ತದೆ.😊😊

Monday 7 December 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಪರಿಚಯವೇ ಇಲ್ಲದ ಗೂಗಲ್ಲೇ ನಮಗೆ ಸರಿಯಾಗಿ ದಾರಿ ತೋರಿಸುತ್ತದೆ ಎಂದ ಮೇಲೆ ನಮ್ಮನ್ನು ಚೆನ್ನಾಗಿ ಅರಿತಿರುವ ಗುರುಗಳು ನಮಗೆ ಸನ್ಮಾರ್ಗ ತೋರಿಸಲಾರರೆ???

Friday 20 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ದೀಪವೊಂದು ಹಚ್ಚಬೇಕು 

ಲೋಕ ಬೆಳಗಲಲ್ಲ...

ಕತ್ತಲಲ್ಲೂ ಕಂಗಾಲಾಗದೆ

ಖುಷಿಯಾಗಿ ಕಾಲ ಕಳೆಯಲು..

ಇರುಳಿನಲ್ಲೂ ಬದುಕಿಹೆವೆಂದು

ಜಗಕೆ ತೋರಲು....

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦*💛❤️

          

ಕೆಲವರು ಗಣಿತವನ್ನು ಪ್ರೀತಿಸಿದರೂ, 

ಗಣಿತ ಅವರನ್ನು ಪ್ರೀತಿಸುವುದಿಲ್ಲ...😊😀😊

Thursday 19 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಮನೆಗಾಗಿ ಬದುಕನ್ನೇ ಅಡವಿಟ್ಟು

ನಮ್ಮವರಿಗಾಗಿ ಖುಷಿಯನ್ನೆಲ್ಲಾ ಬದಿಗಿಟ್ಟು

ಸೆಟ್ಲಾಗೋದಕ್ಕಾಗಿ ಕನಸಿಗೆಲ್ಲಾ ಕಿಡಿಯಿಟ್ಟು

ಸಂಪಾದನೆಗಾಗಿ ಆಸೆಗಳಿಗೆಲ್ಲಾ ಮಣ್ ಕೊಟ್ಟು

ಸಂಜೆ ಮೂಲೆಯಲಿ ಕೂತು

ಜೀವನ ಯಾಕೆ ಇಂಗಾಯ್ತು ಅಂತ

ತಲೆಗೆ ಕೈ ಕೊಟ್ಟು ತೀರ್ಥ ಬಿಟ್ಟು

ಬದುಕೋ ಪ್ರತಿ ಗಂಡಸಿಗೂ

*ಪುರುಷರ ದಿನಾಚರಣೆಯ ಶುಭಾಶಯಗಳು*😊😊

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧೯*💛❤️

 

          

ಕಾಣುವ ಮನಸ್ಸಿದ್ದರೆ, ಎಲ್ಲೆಡೆಯೂ ಗಣಿತ‌ ಕಾಣುವುದು...😊😀😊

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧೮*💛❤️

 ಅವಳು,

ಕೂಡಿ, ಕಳೆದು, ಏನನ್ನೋ ಗುಣಿಸಿ ಬದುಕ ಭಾಗಿಸುತಿಹಳು...

ಭಾಧಿಸುತಿಹಳು...😊😊

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧೭*💛❤️

 

ಜೀವನವೆಂಬ 

ಕೂಡಿಕಳೆಯುವ ಆಟವನ್ನು ಕೂಡಿ, ಕಳೆಯೋಣ...

Monday 16 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಪ್ರತಿ ಗೆಲುವೂ ಒಂದೊಂದು ಬಲಿ ಕೇಳುತ್ತದೆ. 

*ನಮ್ಮ ನಿದ್ದೆ, ಆಟ, ಹರಟೆ, ತಿರುಗಾಟ, ಬರ್ತಡೇ, ಹಾಲಿಡೇ, ಲವ್,.....* 

ಒಂದೊಂದಾಗಿ ಬಲಿ ಕೊಡುತ್ತಾ ಬನ್ನಿ, ಗೆಲುವು ಹತ್ತಿರವಾಗುತ್ತಾ ಬರುತ್ತದೆ...😊

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧೬*💛❤️


ಪ್ರಕೃತಿಯಲ್ಲಿ ಎಲ್ಲವೂ ಪರಸ್ಪರ ಗಣಿತದ 2=2 ಎಂಬಂತೆ ಸರಿಸಮವಲ್ಲ. ಆದರೆ, ಹೇಗೆ ಗಣಿತದ ಪರಿಪೂರ್ಣತೆಗ 0 ಯಿಂದ ಹಿಡಿದು 1,2,3...ಮುಂತಾದ ಧನಾತ್ಮಕ ಹಾಗೂ -1,-2,-3...ಮುಂತಾದ ಋಣಾತ್ಮಕ, ಭಿನ್ನರಾಶಿ, ದಶಮಾಂಶ, ವರ್ಗಮೂಲ ಮುಂತಾದ ಅನಂತದವರೆಗಿನ ಅಂಕೆ-ಸಂಖ್ಯೆಗಳು ಅಗತ್ಯವೋ, ಹಾಗೆಯೇ *ಸೃಷ್ಟಿಯ ಹಾಗೂ ನಮ್ಮ ಬದುಕಿನ ಪರಿಪೂರ್ಣತೆಗೆ* ಧನಾತ್ಮಕ ಸಜ್ಜನರು, ಗೆಲುವುಗಳು, ಋಣಾತ್ಮಕ ದುರ್ಜನರು, ಸೋಲುಗಳು, ಭಿನ್ನರಾಶಿಗಳಂಥ ಭಿನ್ನ ಭಿನ್ನ ತೆರನಾದ ವೃತ್ತಿ-ಪ್ರವೃತ್ತಿ, ಮನೋಧರ್ಮಗಳಿರುವ ಮಂದಿ, ದಶಮಾಂಶಗಳಂಥ ಅಪರೂಪಕ್ಕೆ ಬೇಕಾಗುವ ಮಂದಿ, ಪೂರ್ಣಾಂಕಗಳಂಥ ಸದಾ ಬೇಕಾದವರು ....ಇವರೆಲ್ಲರ ಅವಶ್ಯಕತೆ ಇದೆ.....😊

Sunday 15 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕಾಯುವವನು ಸುಸ್ತಾಗಬಾರದು,

ಯಾವತ್ತೋ ಒಂದು ದಿನ ಇದ್ದಕ್ಕಿದಂತೆ ಒಳ್ಳೆಯದಾಗಿ ಬಿಡುತ್ತದೆ ಮತ್ತೆ ಅದು ಸಾವಿರ ಕೇಡುಗಳನ್ನು ಸರಿಮಾಡಿಬಿಡುತ್ತದೆ.


-ರವಿಬೆಳಗೆರೆ.

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧೫*💛❤️

          

ಗಣಿತದ ಎಲ್ಲಾ ಲೆಕ್ಕಗಳಿಗೂ ಮತ್ತು ಅವಳ ಎಲ್ಲಾ ಸಮಸ್ಯೆಗಳಿಗೂ ಯಾವಾಗಲೂ ಒಂದೇ Formula ಉಪಯೋಗಿಸಲು ಆಗೋಲ್ಲ...😊😊

Saturday 14 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಸಾಗುತಿದೆ ಸಮಯವು ಮತ್ತೊಮ್ಮೆ ಬರದಂತೆ

ಸವೆಯುತಿದೆ ಆಯುಸ್ಸು ವರುಷಗಳು ಕಳೆದಂತೆ

ಸವೆದು ಹೋಗುವ ಮುನ್ನ, ಜೀವ ಹೋಗುವ ಮುನ್ನ

ಮಾಡಿ ಮುಗಿಸಲೇ ಬೇಕು, ಅಂದುಕೊಂಡದ್ದೆಲ್ಲವನ್ನ...

ಅದಕ್ಕೆ ದಾರಿ ನೋಡಿಸಲಿ ಈ ದೀಪಾವಳಿಯ ದೀಪ...


*ಎಲ್ಲರಿಗೂ ದೀಪಾವಳಿ ಯ ಹಾರ್ದಿಕ ಶುಭಾಶಯಗಳು*

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧೪*💛❤️


        

ಅವನೊಂದು ವೃತ್ತ..

ಅವಳು ಅದರ ಕೇಂದ್ರ ಬಿಂದು..

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧೩*💛❤️

 

          

ಸೊನ್ನೆ ನಿನಗೆ ಬೆಲೆಯೆ ಇಲ್ಲ ಎಂದು ಬರಿದೆ ಬೈವರೆಲ್ಲ ।

ನಿನ್ನ ಹಿಂದೆ ‘ಒಂದು ‘ ನಿಲ್ಲಲು ನಿನಗೆ ಬೆಲೆಯು ಬರುವುದು ।

‘ಒಂದು’ ಬೆಂಬಲವಿರೆ ಸೊನ್ನೆ ಕೋಟಿಗಳನು ತರುವುದು ।


-ಕುವೆಂಪು.

Thursday 12 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಅಹಂಕಾರ ಬಿಟ್ಟರೆ ಎಲ್ಲರಿಂದಲೂ ಸಿಗುವುದು ಸಹಕಾರ...😊

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧೨*💛❤️


         

ಅವಳೊಂದು ಕನ್ನಡ ಶಬ್ದ

ನಾನೊಂದು ಗಣಿತದ ಲೆಕ್ಕ

ನನ್ನ ಉತ್ತರ ಒಂದೇ,

ಆದರೆ ಅವಳ ಅರ್ಥ ಸಾವಿರಾರು..

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕನಸುಗಳ ಕಾಣಬೇಕು

ನನಸಾಗಿಸಿಕೊಳ್ಳುವುದಕ್ಕಲ್ಲ..

ಬೇಸರಿಸದೆ ಜೀವನ ಪಯಣದಲ್ಲಿ

ದಿನವೂ ನಡೆಯಲು!

ಮನಸು ಮುದುಡದಂತೆ

ಮುದಗೊಳಿಸಿ ಮುನ್ನಡೆಯಲು!!

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧೧*💛❤️

      

ಅವಳೊಂದು ಕ್ಲಿಷ್ಟ ಸಮೀಕರಣ...

ಅವನು ಸರಳ ಕವನ...

Tuesday 10 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃 *ನ ಕರ್ಮಣಾ, ನ ಪ್ರಜಯಾ, ನ ಧನೇನ, ತ್ಯಾಗೇನೈಕೇ ಅಮೃತತ್ವ ಮಾನಷುಃ;*

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 *ನ ಕರ್ಮಣಾ, ನ ಪ್ರಜಯಾ, ನ ಧನೇನ, ತ್ಯಾಗೇನೈಕೇ ಅಮೃತತ್ವ ಮಾನಷುಃ;* 


ನಾವು ಮಾಡುವ ಕೆಲಸದಿಂದಲ್ಲ, ನಮ್ಮ ಹಿಂದೆ ಬರುವ ಜನರ ಗುಂಪಿನಿಂದಲ್ಲ ಅಥವಾ ನಾವು ಗಳಿಸಿದ ಸಂಪತ್ತಿನಿಂದಲ್ಲ, ತ್ಯಾಗದಿಂದ ಮಾತ್ರ ಅಮೃತತ್ವ ದೊರೆಯುತ್ತದೆ.


-ಉಪನಿಷತ್ತು.

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧೦*💛❤️

           

ಮನಸಿಟ್ಟು ಹಾಡದಿದ್ದರೆ,

ಯಾವ ಸಾಲೂ ಹಾಡಾಗುವುದಿಲ್ಲ..

ಮನಸ್ಸಿಟ್ಟು ಲೆಕ್ಕ ಮಾಡದಿದ್ದರೆ ,

 ಯಾವ ಲೆಕ್ಕಕ್ಕೂ ಉತ್ತರ ಸಿಗುವುದಿಲ್ಲ..

Monday 9 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 *ಉಸಿರು* 

ಮೌನವಾಗಿ ಕೊನೆಯತನಕ ನಮ್ಮ ಜೊತೆಗಿರುವ ಆಪ್ತ ಗೆಳೆಯ.😊

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೯*💛❤️


 ದೇವರು..

ಒಳಗಿನ ಕಣ್ಣಿಗೆ ಕಾಣುವಾತನು...

ಗಣಿತವೂ

ಒಳಗಿನ ಕಣ್ಣಿಗೆ ಕಾಣುವಂತದ್ದು...😊

Sunday 8 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 *ಬಾಲ್ಯ* ....

ಮೈಮರೆತು ಆಡುವ ಸ್ವರ್ಗ

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೮*💛❤️


 ಎಲ್ಲಾ ಕವಿತೆಗಳೂ ಎಲ್ಲರಿಗೂ ಇಷ್ಟವಾಗೋಲ್ಲ....

ಎಲ್ಲಾ ಲೆಕ್ಕಗಳೂ ಎಲ್ಲರಿಗೂ ಅರ್ಥವಾಗೋಲ್ಲ....😄😄

Saturday 7 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನಮ್ಮ ಮನಸ್ಸು ಕೂಡ ಉದ್ಯಾನವನ ...

ನಮ್ಮ ಎಷ್ಟೋ ಕನಸುಗಳ ಬೀಜಗಳನ್ನ ಇಲ್ಲಿ ಬಿತ್ತಿದ್ದೇವೆ..😊😊😊😀

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೭*💛❤️

         

ಒಂದು ಬಿಂದುವಿನಿಂದ ಪ್ರಾರಂಭವಾಗಿ ಅದೇ ಬಿಂದುವಿನಲ್ಲಿ ಕೊನೆಯಾಗುವುದು ವೃತ್ತ....

ನಮ್ಮ ಅಳುವಿನಿಂದ ಪ್ರಾರಂಭವಾಗಿ ಮತ್ತೊಬ್ಬರ ಅಳುವಿನೊಂದಿಗೆ ಕೊನೆಯಾಗುವುದು ಜೀವನ ವೃತ್ತಾಂತ..

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಯೌವ್ವನವೆಂದರೆ, 

ಅರಿವಿದ್ದೂ ಅರಿಯದ ಮಾಯೆ😀😀😀😀

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೬*💛❤️


           

                

ಅದೊಂದು ವಾಸ್ತವತೆಯ ಪ್ರಪಂಚ...

ಅದು ಅಂಕೆ- ಸಂಖ್ಯೆಗಳಿಂದಲೇ ಕಟ್ಟಲ್ಪಟ್ಟ ನಾಡು..‌.

ಊಹೆಗಳಿಂದಲೇ  ಉತ್ತರ ಪಡೆವ ಲೋಕ...

ಉತ್ತರಗಳನ್ನೇ ಓರೆಗೆ ಹಚ್ಚುವ ಸಾಮ್ರಾಜ್ಯ...

ತರ್ಕಗಳನ್ನೇ ತಕ್ಕಡಿಯಲ್ಲಿಟ್ಟು ಅಳೆದು-ತೂಗುವ ಸಂತೆ..

ಅದುವೇ *ಗಣಿತ* ದ ಗಣರಾಜ್ಯ...

ಅನಂತ, ಅಗಣಿತ ವಿಷಯ ಭಂಡಾರ...

Thursday 5 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಮಾತಿಗೆ ಮಾತು ಬೆಳೆಯಿತು...

ಅಲ್ಲಿಗೆ ಎಲ್ಲಾ ಮುಗಿಯಿತು....😀😔😊

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೫*💛❤️


           

                 ಗಣಿತವೆಂದರೆ 

          ಕಬ್ಬಿಣದ ಕಡಲೆಯಲ್ಲ....

                ಗಣಿತವೆಂದರೆ

                 ಒಂದು ಸರಳ ಕಾವ್ಯ.....

Wednesday 4 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಆನಂದವು ಸಿಗುವ ವಸ್ತುವಲ್ಲ. 

ಅದನ್ನು ಅನುಭವಿಸಬೇಕು😊😉😄

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೪*💛❤️

 


              ಗಣಿತವೆಂದರೆ 

               ಕೂಡು, ಕಳೆ ,

     ಗುಣಿಸು, ಭಾಗಿಸು ಎಂದಲ್ಲ...

           ಗಣಿತವೆಂದರೆ 

      ತಿಳುವಳಿಕೆ ಎಂದರ್ಥ....

          ಗಣಿತವೆಂದರೆ 

          ಕಬ್ಬಿಣದ ಕಡಲೆಯಲ್ಲ....

                ಗಣಿತವದು 

         ಬೆಣ್ಣೆಯಷ್ಟೇ ಮೃದು...

Tuesday 3 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



               ಬೇಡ ಎನಿಸಿದಾಗಲೆಲ್ಲ

                    ಬಿಚ್ಚಿಡುವುದಕ್ಕೆ

                ಬದುಕು ಶೂಗಳಲ್ಲ !

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೩*💛❤️


                 ಪ್ರೀತಿಯ ಕೂಡಿಸಿ

                  ಸಂದೇಹ ಕಳೆದು

                   ನಂಬಿಕೆ ಗುಣಿಸಿ

                ಅಹಂ ಭಾಗಿಸಿದಾಗ

                  ಬಂದ ಉತ್ತರವೇ

                          ಜೀವನ.

Monday 2 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕಾಣದಾ ಅಣುವೊಂದು ಭುವಿಯಲ್ಲಿ ಒಂದಾಗಿ

ಸಸಿಯಾಗಿ ಗಿಡವಾಗಿ ಹಿರಿದಾದ ಮರವಾಗಿ

ಹೂಬಿಟ್ಟು ಫಲವಿತ್ತು ನೆಳಲಿತ್ತು ಸಲಹುತಿವೆ

ನೆಳಲಿತ್ತು ಸಲಹುತಿವೆ ಬಿಸಿಗೆ ತಾವ್ ಎದುರಾಗಿ😊

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨*💛❤️



ಬದುಕೆಂಬ ಗಣಿತ


ಬದುಕೆಂದರೆ ಇಲ್ಲಿ...

ಅನುದಿನ.. ಅನುಕ್ಷಣ..


ಅನುಭವದ ಸಂಕಲನ

ಆಯಸ್ಸಿನ ವ್ಯವಕಲನ

ಅರಿವಿನ ಗುಣಾಕಾರ

ಕಾಲದ ಭಾಗಾಕಾರ


ಊಹಿಸಲಾಗದ ನೋವು

ನಲಿವುಗಳ ಅಂಕಗಣಿತ

ಅರ್ಥವಾಗದ ಅದೃಷ್ಟ

ದುರದೃಷ್ಟಗಳ ಬೀಜಗಣಿತ


ತಿಳಿಯಲಾಗದ ಹಣೆಬರಹ

ಅಂಗೈಗೆರೆಗಳ ರೇಖಾಗಣಿತ

ನಿತ್ಯ ಅನಿರೀಕ್ಷಿತ ಆಕಸ್ಮಿಕ

ಅತಿವಿಸ್ಮಯಗಳ ಅಗಣಿತ


ನಮಗೆಂದೂ ಬಿಡಿಸಲಾಗದ

ಅನೂಹ್ಯ ಸಮೀಕರಣ

ವಿಧಾತನ ಈ ಜೀವಗಣಿತ

ಅವನಿಗಷ್ಟೇ ಚಿರಪರಿಚಿತ😊


(ಕೃಪೆ- ಅಂತರ್ಜಾಲ)


Sunday 1 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ತಿರುವುಗಳಿರದ  ದಾರಿಯಲಿ    ಬೇಸರವಾಗುವುದು ಪಯಣ..

ತಿರುವುಗಳಿರದ  ಜೀವನದಲಿ  ರೋಚಕತೆಯಿರದು.. 

ಜೋಪಾನ.. 😊

ಕನ್ನಡ ರಾಜ್ಯೋ(ಗಣಿತೋ)ತ್ಸವ

 

 ಆತ್ಮೀಯರೇ, ಬಹಳ ದಿನಗಳಿಂದ 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃....ಕಳಿಸ್ತಾ ಇದ್ದೇನೆ....ನಿಮಗೆ ಇಷ್ಟ ಆಗದೇ ಕಷ್ಟವಾದರೂ...ನೀವು ಓದದೇ ಇದ್ದರೂ ಮೆಸೇಜ್ ಮಾತ್ರ ನಿಮ್ಮ  ಮೊಬೈಲ್‌ ಲ್ಲಿ ಬಂದು ಕುಳಿತಿರುತ್ತದೆ ..😊😊

ಹಾಗೆಯೇ ಒಂದೆರಡು ತಿಂಗಳು,  🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃 ಜೊತೆಗೆ  🌱 *ಕವ‌ನ* 🔗 *(ಅ)ಗಣಿತ*❗ಎಂಬ ಶೀರ್ಷಿಕೆ ಯಡಿಯಲ್ಲಿ ನಮ್ಮ ಕನ್ನಡ ಕವಿಗಳ  ಕವನ ಗಳಲ್ಲಿ ಗಣಿತ ( ಗಣಿತ ಪದಗಳು) ವನ್ನು ಉಪಯೋಗಿಸಿರುವ ಕವನಗಳನ್ನು ಕಳಿಸುವ ಒಂದು ಪ್ರಯತ್ನ ಪಟ್ಟೆ. ಇಷ್ಟ ಪಟ್ಟರೋ ಇಲ್ಲವೋ ಗೊತ್ತಿಲ್ಲ. *ಕವ‌ನ* 🔗 *(ಅ)ಗಣಿತ*❗ ಎಂದರೆ, ಕವನ ದಲ್ಲಿ ಗಣಿತ ಅಂತ...ಹಾಗೆಯೇ ಕವನ ಅಗಣಿತ ಎಂದರೆ, ಆ ಕವನದ ಅರ್ಥ ಅಗಣಿತ, ಅಂದರೆ ಕವನವನ್ನು ಅರ್ಥ ಮಾಡಿಕೊಳ್ಳುವುದು ಅವರವರ ಭಾವಕ್ಕೆ ಎನ್ನುವುದು .. ನನ್ನ ಉದ್ದೇಶವಾಗಿತ್ತು..

ನಂತರದ ದಿನಗಳಲ್ಲಿ, 🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-* ಈ ಶೀರ್ಷಿಕೆ ಯಡಿಯಲ್ಲಿ ಗಣಿತದ ಬಗ್ಗೆ ಹಲವು ಗಣಿತಜ್ಞರ ಮಾತುಗಳು ಮತ್ತು ಅಭಿಪ್ರಾಯ ಗಳನ್ನು  ಕಳಿಸಿದ್ದೆ.. *ದಿನಕ್ಕೊಂದು  ಸಿ(ಕ)ಹಿ MATHS ಮಾತು-* *150* ದಿನ ಕಳಿಸಿದ್ದೆ ಅನ್ನವುದು ಸ್ವಲ್ಪ  ಖುಷಿಯೇ. 
ಹಾಗೆಯೇ,  🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-*🍃 concept ಪ್ರಾರಂಭಿಸಿ, ಸುಮಾರು 137 ದಿನ ಕಳಿಸಿದೆ. 
ಇವೆಲ್ಲವೂ ನಿಮಗೆ ಇಷ್ಟ ಆಯ್ತೋ ಇಲ್ವೋ ಗೊತ್ತಿಲ್ಲ, ಆದರೆ  🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃 ಮಾತ್ರ ಸತತವಾಗಿ ಕಳಿಸುತ್ತಲೇ ಇರುವೆ.

ಇಂದಿನಿಂದ  💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ* 💛❤️  ಎಂಬ ಶೀರ್ಷಿಕೆಯಡಿಯಲ್ಲಿ, ಕನ್ನಡ ರಾಜ್ಯೋತ್ಸವ ದ ಪ್ರಯುಕ್ತ ಗಣಿತ ಪದಗಳು ಇರುವ ಕನ್ನಡ ಕವನಗಳನ್ನು ಕಳಿಸುವ ಪ್ರಯತ್ನ. ಇದು ಈ ನವೆಂಬರ್ ತಿಂಗಳ 30 ದಿನಗಳಲ್ಲೂ ಕಳಿಸಲು ಪ್ರಯತ್ನಿಸುವೆ. ಗಣಿತ ಪದಗಳು ಇರುವ ಕನ್ನಡ ಕವನಗಳು ನಾನು ಖಂಡಿತ ಬರೆದಿರುವುದಲ್ಲ. ಅಂತರ್ಜಾಲದಲ್ಲಿ ಹಾಗೂ ಕೆಲವು ಪುಸ್ತಕದಲ್ಲಿ ಓದಿರುವುದನ್ನು ನಿಮ್ಮ ಮುಂದೆ ಇಡಲು ಪ್ರಯತ್ನ ಅಷ್ಟೇ. *ನೀವೂ ಸಹ ಗಣಿತ ಪದಗಳನ್ನು ಬಳಸಿ ಕವನ ರಚಿಸಿ ಕಳಿಸಿದರೆ ಖುಷಿಯಿಂದ ಅದನ್ನು ಬಳಸಿಕೊಳ್ಳುವೆ* .



💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧*💛❤️



ಗಣೇಶನೇ,

ಗಣಿತಪ್ರಾಜ್ಞಾಯ ನಮಃ

ಗಣಿತಾಗಮಸಾರವಿದೇ ನಮಃ

ಗಣಿತಾಯ ನಮಃ

ಗಣಿತಾಗಮಾಯ ನಮಃ..


ಗಣಗಳ ಅಧಿಪತಿ ಗಣೇಶ.

ವಿಜ್ಞಾನದ ರಾಣಿ ಗಣಿತ.

ಸಕಲ ಕಾರ್ಯ ನಿರ್ವಿಘ್ನ ಗಣೇಶ ಒಲಿದರೆ.

ಸಕಲ ಜ್ಞಾನ ಕೈವಶ ಗಣಿತ ಒಲಿದರೆ.❤️💛😊



Saturday 31 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಬದುಕಿನಲ್ಲಿ ಬರೀ ತಿರುವುಗಳೆ...

ಒಂದು ದಾಟಿದರೆ ಮತ್ತೊಂದು...😊😊😊

Friday 30 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ನಾವೆಲ್ಲರೂ ಏನೋ ಒಂದನ್ನು ಹುಡುಕುತ್ತಿದ್ದೇವೆ. ಅದು ಸಿಕ್ಕುವವರೆಗೂ ನಮಗೆ ತೃಪ್ತಿಯಿಲ್ಲ. ನಾವು ಏನನ್ನು ಹುಡುಕುತ್ತಿದ್ದೇವೆಂಬುದು ನಮ್ಮಲ್ಲನೇಕರಿಗೆ ತಿಳಿದಿರುವುದಿಲ್ಲ....🙃😊



-ಶ್ರೀ ಶ್ರೀ ಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು

Thursday 29 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


*ವಾಸ್ತು*


ನಮ್ಮ ಮನೆಯ ದೇವಮೂಲೆ,

ಪಕ್ಕದ ಮನೆಗೆ ಅಗ್ನಿಮೂಲೆ.😊😊😄😉

Wednesday 28 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಬೆಳಗ್ಗೆ ಬಲಗಡೆ ಎದ್ನಾ ಅಥವಾ ಎಡಗಡೆ ಎದ್ನಾ ಅನ್ನೋದಿಕ್ಕಿಂತ, ಮೇಲಕ್ಕೆ ಎದ್ನಾ ಅನ್ನೋದಷ್ಟೇ ಮುಖ್ಯ😊

Tuesday 27 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 ಅಹಂಕಾರ ಎನ್ನುವುದು ಬೆಳೆಯುವ ಗಿಡಕ್ಕೆ ಅಂಟುವ ರೋಗ.

Monday 26 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 ನಮ್ಮದೇ *Selfi* ಗೆ *ಮೂರ್ನಾಲ್ಕು Attempt* ಮಾಡೋ ನಾವು; ಇನ್ನೊಬ್ಬರನ್ನು ಒಂದೇ ನೋಟದಲ್ಲಿ *JUDGE* ಮಾಡುತ್ತೇವೆ..‌😄😄😄

Sunday 25 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 ಇಲ್ಲಸಲ್ಲದ ಕಾಲತೊಡರುಗಳ ಕಡಿದು

ಬಲ್ಲವರು ತೋರಿರುವ ಹಾದಿಯನು ಹಿಡಿದು

ಎಲ್ಲರೂ ಒಂದಾಗಿ ಒಂದಾಗಿ ನಡೆದು

ಹೋಗೋಣ ನಾವೆಲ್ಲ ಸೀಮೆಯನು ದಾಟಿ.



-ಬೇಂದ್ರೆ (ಸೀಮೋಲಂಘನ )

🏹🏹🏹🏹🏹🏹🏹🏹🏹




*||ಶಮೀ ಶಮಯತೇ ಪಾಪಂ ಶಮೀ ಶತ್ರು ವಿನಾಶನಿ||*

*||ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನಿ||*


*ನಿಮಗೂ  ಮತ್ತು ನಿಮ್ಮ ಕುಟುಂಬದವರಿಗೂ ಆಯುಧಪೂಜೆ ಹಾಗೂ ವಿಜಯದಶಮಿಯ ಶುಭಾಶಯಗಳು*😊🙏🏻💐

Saturday 24 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 ನಿನ್ನ ನೀನು ಮರೆತರೇನು ಸುಖವಿದೆ?????

Friday 23 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 

ನೋವು ಮತ್ತು ಸೋಲನ್ನು ಸಹಿಸಬಲ್ಲವನು ಜೀವನದಲ್ಲಿ ಎಂದಿಗೂ ಸೋಲಲಾರ.

Thursday 22 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 

ಕೆಲವೊಂದು ಸಲ ಉದ್ದೇಶಕ್ಕಿಂತ, ಅನಿವಾರ್ಯತೆ ಅನ್ನೋದು ಬದುಕಿನ *ದಿಕ್ಕನ್ನು* ಬದಲಿಸಬಿಡುತ್ತದೆ.

Wednesday 21 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 ನಾವು ಎತ್ತರಕ್ಕೆ ಬೆಳೆದಷ್ಟೂ ಸ್ನೇಹಜೀವಿ ಆಗಬೇಕೇ ಹೊರತು, ಅಹಂಕಾರಿಯಾಗಬಾರದು. ಏಕೆಂದರೆ ಸ್ನೇಹ ನಮಗೆ ಪ್ರೀತಿ ಕೊಡುತ್ತದೆ. ಅಹಂಕಾರ ನಮ್ಮ ಬುಡವನ್ನೇ ಸುಡುತ್ತದೆ.......😊

Tuesday 20 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಎಲ್ಲಾ ಸಮಯದಲ್ಲೂ, 
ಎಲ್ಲಾ ವಿಷಯಗಳಲ್ಲೂ 
ಗೆಲ್ಲಲೇ ಬೇಕೆಂದಿಲ್ಲ...
ಕೆಲವೊಮ್ಮೆ 
ಕೆಲವು ವಿಷಯಗಳಲ್ಲಿ 
ಸೋಲುವುದರಲ್ಲೇ ಗೆಲುವು ಲಭಿಸುತ್ತದೆ...

 *ಸೋತು ಗೆದ್ದುಬಿಡೋಣ..* 😊

Monday 19 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಆಕಾಶದಲ್ಲಿ ಹಾರುವ ಹದ್ದಿನ ಹಾದಿಯನ್ನೂ, 
ನೀರಿನಲ್ಲಿ‌ ಈಜುವ ಮೀನಿನ ಹಾದಿಯನ್ನೂ, 
ಬಂಡೆಗಳ ಮೇಲೆ ಸಾಗುವ ಸರ್ಪದ ಹಾದಿಯನ್ನು ಕಂಡುಹಿಡಿಯುವುದು ಹೇಗೆ ಅಸಾಧ್ಯವೋ 
ಹಾಗೆಯೇ ಕೆಲವರ ಮರ್ಮಗಳನ್ನು ಅರಿಯುವುದೂ ಸಹ ಅಸಾಧ್ಯ😊

Sunday 18 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಮನುಷ್ಯ ತನ್ನ ಪರಿಶ್ರಮದಿಂದ ಭಾಗ್ಯವನ್ನು ಬದಲಿಸಿಕೊಳ್ಳಬಲ್ಲ.

Friday 16 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕೆಲಸವನ್ನು ಕಲಿತರಷ್ಟೇ ಸಾಲದು , ಅದನ್ನು ಪ್ರೀತಿಯಿಂದ ಮಾಡಬೇಕು.😊

Thursday 15 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಅವಕಾಶಗಳ ಹುಡುಕಾಟ ನಿರಂತರ..👍

Wednesday 14 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಗೆಲುವಿನ ಮೊಟ್ಟೆಗೆ ನಾವು ಸದಾ ಕಾವುಕೊಡುತ್ತಿರಬೇಕು. ಆಗ ಮಾತ್ರ ಯಶಸ್ಸು ನಮ್ಮನ್ನು ಹಿಂಬಾಲಿಸುತ್ತಲೇ ಇರುತ್ತದೆ.


-ರಿಚರ್ಡ್ ಬ್ರಾನ್ಸನ್

Tuesday 13 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಮಾತನ್ನು ಯಾರಿಂದಲೂ ಮುಟ್ಟಲು ಸಾಧ್ಯವಿಲ್ಲ...

ಆದರೆ ಮಾತುಗಳಿಗೆ ಎಲ್ಲರನ್ನೂ ಮುಟ್ಟುವ ಸಾಮರ್ಥ್ಯವಿದೆ...

Monday 12 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಈ ಜಗತ್ತೊಂದು ವಿಸ್ಮಯದ ಮೂಟೆ....

ನೋಡುವುದೇ ಒಂದು...

ಕಾಣುವುದೇ ಒಂದು...

ಇರುವುದೇ ಒಂದು...😄

Saturday 10 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 

ಸೋಲಿಗೆ ಅಹಂಕಾರವೇ ಕಾರಣ,       

ವಿಜಯಕ್ಕೆ ವಿನಯವೇ  ಭೂಷಣ,                       

  ಸ್ನೇಹಕ್ಕೆ ನಂಬಿಕೆಯೇ  ಹೂರಣ...😊

Friday 9 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಸೋಲಿನ‌ ನೋವಿಗೆ ಗೆಲುವೇ ಮದ್ದು.

ಗೆಲುವಿನ‌ ಅಹಂಕಾರಕ್ಕೆ ಸೋಲೇ ಮದ್ದು.

Thursday 8 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಬದುಕಿನಲ್ಲಿ ಪ್ರತಿಯೊಬ್ಬರಿಗೂ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಇರಬೇಕು, ಮಹತ್ಕಾರ್ಯಗಳನ್ನು ಮಾಡಬೇಕೆನ್ನುವ ತುಡಿತ ಇರಬೇಕು. ಅದನ್ನು ಕನಸು, ಛಲ, ಸಾಹಸ ಸವಾಲು, ಗಮ್ಯ, ಗುರಿ ಹಾಗೂ ಏನೆಂದು ಬೇಕಾದರೂ ಕರೆಯಿರಿ. ನಮ್ಮ ಆಂತರಿಕ ಶಕ್ತಿಯನ್ನು ಬಡಿದೆಬ್ಬಿಸುವುದೇ ಈ ಸವಾಲುಗಳು. ಗುಡ್ಡ- ಗವಿಯಲ್ಲಿ ಗೆಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಿದ್ದ ಮಾನವನನ್ನು ಚಂದ್ರಲೋಕಕ್ಕೆ ಹೋಗುವಂತೆ ಮಾಡಿದ್ದು ಇದೇ ಸವಾಲುಗಳು. ಪ್ರತಿ ಸವಾಲುಗಳನ್ನು ಮೈಮೇಲೆ ಎಳೆದುಕೊಂಡಂತೆಲ್ಲಾ ನಮ್ಮಲ್ಲಿ ವಿಶ್ವಾಸ ಪುಟಿದೇಳುತ್ತದೆ. ಬದುಕನ್ನು ನೋಡುವ ದೃಷ್ಟಿಕೋನ ವಿಭಿನ್ನವಾಗಿರುತ್ತದೆ. ಕೊನೆಗೆ ಬದುಕೇ ಬದಲಾಗುತ್ತದೆ. ಅಂತೆಯೇ ಮಹೋನ್ನತ ಗುರಿಯನ್ನು ಮುಟ್ಟುವ ಪ್ರಕ್ರಿಯೆ ಸುಲಭವೇನಲ್ಲ. ಹಾಗೆಂದ ಮಾತ್ರಕ್ಕೆ ಮಾಡುವ ಕೆಲಸದಿಂದ ನಾವು ವಿಮುಖರಾಗಬೇಕಿಲ್ಲ. ಭರವಸೆ ಕಳೆದುಕೊಳ್ಳಬೇಕಾಗಿಲ್ಲ. ನಮ್ಮಲ್ಲಿ ಆತ್ಮಸ್ಥೈರ್ಯವೊಂದಿದ್ದರೆ ಜಗತ್ತಿನ ಯಾವ ಶಕ್ತಿಯೂ ನಮ್ಮನ್ನು ತಡೆಯಲಾಗದು. ಹಾಗಾಗಿ ಗುರಿ ಯೊಂದನ್ನು ಕಣ್ಮುಂದೆ ಇಟ್ಟುಕೊಂಡು ಸುಮ್ಮನೆ ಕೆಲಸ ಮಾಡುತ್ತಾ ಹೋಗಿ, ಯಶಸ್ಸು ಸದ್ದಿಲ್ಲದೇ ನಿಮ್ಮನ್ನು ಹಿಂಬಾಲಿಸುತ್ತದೆ. 

ಸದಾ ನಾನು ಎರಡು ರೀತಿಯ ಸವಾಲುಗಳನ್ನು ಬಿಗಿದಪ್ಪಿ ಕೊಳ್ಳುತ್ತೇನೆ. ಮೊದಲನೆಯದು ಮಾಡುವ ಕೆಲಸವನ್ನು ಉತ್ಕೃಷ್ಟ ಮಟ್ಟದಲ್ಲಿ ಮಾಡಿ ಮುಗಿಸುವುದು. ಎರಡನೆಯದು ಹೊಸ ಸಾಹಸಗಳಿಗೆ ಮೈ ಒಡ್ಡುವುದು. ಈ ಎರಡು ನನಗೆ ಅಪ್ಯಾಯಮಾನವಾದದ್ದೇ. ನಿತ್ಯ ಹೊಸ ಸವಾಲುಗಳನ್ನು ಎದುರಿಸುವುದು ನನ್ನ ಹುಟ್ಟು ಗುಣ, ಹೊಸ ಸಾಹಸಗಳನ್ನು ತಬ್ಬಿಕೊಳ್ಳುವುದೇ ನನ್ನ ಜಾಯಮಾನ. ಯಶಸ್ಸಿಗಾಗಿ ದಿಗಂತದೆಡೆಗೆ ಕೈಚಾಚುವುದೇ ನನ್ನ ಪ್ರವೃತ್ತಿ. ಅದೇ ನನಗೆ ಬದುಕು. ಬತ್ತದ ಚೈತನ್ಯದ ಚಿಲುಮೆ.



-ರಿಚರ್ಡ್ ಬ್ರಾನ್ಸನ್

Wednesday 7 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಪ್ರತಿಯೊಂದು ಕೆಲಸ ಮಾಡುವಾಗಲೂ ನಿಮ್ಮ ಮುಂದೆ ಎರಡು ಆಯ್ಕೆಗಳಿರುತ್ತವೆ. 

ಒಂದು, ಮಂದೆಯಲ್ಲಿ ಕುರಿಯಂತೆ ಯಾರೋ ಮಾಡಿದ ಕೆಲಸವನ್ನು ನಾವೂ ಮಾಡುತ್ತಾ ಅವರನ್ನೇ ಹಿಂಬಾಲಿಸುವುದು. 

ಇನ್ನೊಂದು, ಆನೆ ನಡೆದದ್ದೇ ದಾರಿ ಎಂಬಂತೆ ನಮ್ಮದೇ ಹೊಸ ಮಾರ್ಗದಲ್ಲಿ ಹೆಜ್ಜೆ ಹಾಕುವುದು.


-ರಿಚರ್ಡ್ ಬ್ರಾನ್ಸನ್

Tuesday 6 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ನಮ್ಮ ಕೆಲಸವನ್ನು ಹೆಚ್ಚು ಶ್ರಮವಿಲ್ಲದೆ, ಉತ್ತಮವಾಗಿ ಮಾಡಿ ಮುಗಿಸುವ ಚಾಕಚಕ್ಯತೆ, ಬುದ್ಧಿವಂತಿಕೆ ಹೊಂದಿದ್ದರೆ ನಮ್ಮ ಬೆಲೆ ಹೆಚ್ಚಾಗುತ್ತಾ ಹೋಗುತ್ತದೆ.

Monday 5 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನಮ್ಮ ಕೆಲಸಕ್ಕೆ ಸಂಬಂಧಿಸಿದ ಹೊಸ ವಿಚಾರಗಳನ್ನು

ಕಲಿಯದೆ, "ಅದಕ್ಕೆ ಟೈಮಿಲ್ಲ, ನನ್ನಿಂದ ಆಗೋಲ್ಲ" ಅಂತ ಸಬೂಬುಗಳು ಕೊಟ್ಟುಕೊಂಡಲ್ಲಿ ನಮ್ಮ ಬೆಳವಣಿಗೆ ಕುಂಠಿತವಾಗುತ್ತದೆ.

Sunday 4 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಯಶಸ್ಸನ್ನು ಗಳಿಸುವುದು ಸುಲಭ.ಆದರೆ ಅದನ್ನು ಬಹುಕಾಲ ಹಿಡಿದಿಟ್ಟುಕೊಳ್ಳುವುದು ನಿಜಕ್ಕೂ ಕಷ್ಟದ ಕೆಲಸ


- ರಿಚರ್ಡ್ ಬ್ರಾನ್ಸನ್

Saturday 3 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಬದುಕು ಕೆಲವೊಮ್ಮೆ ವಿಚಿತ್ರ ಎನಿಸಿಬಿಡುತ್ತದೆ. ಒಮ್ಮೆ ಎಲ್ಲವೂ ಸ್ನೇಹಮಯ, ಪ್ರೇಮಮಯ ಮತ್ತು ಆನಂದಮಯ, ಮತ್ತೊಮ್ಮೆ ಅದೇನೋ ವಿಷಾದ, ನೋವು, ಸಂಕಟ.


-ರಿಚರ್ಡ್ ಬ್ರಾನ್ಸನ್

Thursday 1 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕಳೆದು ಕೊಂಡಿದ್ದು ನನ್ನದಲ್ಲ.

ಕಳೆದು ಹೋದದ್ದು ನನ್ನದಲ್ಲ.

ಬಿಟ್ಟು ಕೊಟ್ಟದ್ದು ನನ್ನದಲ್ಲ.

ಬಿಟ್ಟು ಹೋದುದೂ ನನ್ನದಲ್ಲ.

ನನ್ನಲ್ಲಿ ನನ್ನದು ಎಂದು ಉಳಿದಿರುವುದೊಂದೆ...

ಈ ಕ್ಷಣ...ಈ ದಿನ...

Wednesday 30 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಅನುಭವ ವಯಸ್ಸಿನಿಂದ ಅಲ್ಲ,

 ಪರಿಸ್ಥಿತಿಯಿಂದ ಸಿಗುತ್ತದೆ.😊😊

Tuesday 29 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


*LIFE IS BEAUTIFUL* 

ಅಂತ ಹೇಳೋಕು ಚಂದ, ಕೇಳೋಕು ಚಂದ ಆದರೆ ಅನುಭವಿಸಿದಾಗಲೇ ಇದರ ಅಂದ ಚಂದದ ಬಗ್ಗೆ ಗೊತ್ತಾಗೋದು😊

Monday 28 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕರ್ನಾಟಕ ಬಂದ್....

ಏನಿರುತ್ತೆ? ಏನಿರೋಲ್ಲ?

ಉತ್ತರ:: *ಎಂದಿನಂತೆ ಕರೋನಾ ಇರುತ್ತೆ, ಸಾಮಾಜಿಕ ಅಂತರ ಇರೋಲ್ಲ*.

Wednesday 23 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಮಾಡಿ ಮಾಡಿ ಸಾಕಾಗಿ ಲೆಕ್ಕ

ಬರೆಯಲು ಕುಳಿತೆ ಪದ್ಯ

ಬರೆಯಲಾಗದೆ ಸೋತು ಕುಳಿತಾಗ ನೋಡಿ ನಕ್ಕಿತು ಆ ಅಪೂರ್ಣ ಪದ್ಯ

ಕೊನೆಗೂ ನಿನಗೆ ನಾನೇ ಗತಿ ಎಂದು  ಗೆದ್ದು ಬೀಗಿತು ಲೆಕ್ಕ.....😊

Tuesday 22 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕತ್ತಲು, ಅಂಧಕಾರವಲ್ಲ..

ಬೆಳಕಿನ ಮೌನ.

ಸೋಲು, ಅಂತ್ಯವಲ್ಲ...

ಗೆಲುವಿಗೆ ಬೇಕಾದ ಸಾಧನ.

ಕನಸು, ಬರೀ ಹಂಬಲವಲ್ಲ...

ನನಸು ಎಂಬ ಕಾದಂಬರಿಗೆ ಮುನ್ನುಡಿ.

Monday 21 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕತ್ತೆಗೂ ವಯಸ್ಸಾಗುತ್ತದೆ.😊

Sunday 20 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನೀವು ಬಾಸ್ ಆಗಿದ್ದರೆ, ನಿಮ್ಮ ಸಹೋದ್ಯೋಗಿಗಳನ್ನು 

*ಇವನು ನನ್ನ ಕೈಕೆಳಗೆ ಕೆಲಸ ಮಾಡುವವನು*

 ಎಂದು ಭಾವಿಸಬೇಡಿ. 

*ನಾವು ಜೊತೆಗೆ ಕೆಲಸ ಮಾಡುವವರು* 

ಎಂದು ಭಾವಿಸಿ. ಇವೆರಡರ ವ್ಯತ್ಯಾಸ ನಿಮಗೇ ಅರ್ಥವಾಗುತ್ತದೆ.

Saturday 19 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನಿಮಗೆ ಇಂದ್ರಿಯಗಳಿವೆ. ಅವುಗಳಿಗೆ ಅವುಗಳದೇ ಆದ ಪ್ರಧಾನ ಉಂಟು. ನೀವು ಅವುಗಳ ಮೇಲೆ ಒತ್ತಾಯದಿಂದ ಸವಾರಿ ಮಾಡಿದರೆ ಅವು ಕೊಸರಿಕೊಂಡು ತಮ್ಮದೇ ದಾರಿ ಹಿಡಿಯುತ್ತವೆ. ಯಾವುದನ್ನೂ ನೀವು ನಿಮ್ಮನ್ನು ಕೊಟ್ಟುಕೊಳ್ಳದೆ ಪಡೆದು ಕೊಳ್ಳಲಾರಿರಿ.


- *ಸತ್ಯಕಾಮ*

(ತಂತ್ರಯೋನಿ ಕೃತಿಯಲ್ಲಿ)

Friday 18 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಅವರವರ worry ಅವರವರಿಗೆ ..😊


ಇರುವೆಗೆ ರವೆ ರವಾನಿಸುವ ವರಿ (worry), ರವೆಗೋ ಇರುವೆಯ ವರಿ 

ವರವೀವ ರವಿಗೂ ಇರುಳಾವರಿಸುವ ವರಿ

ಕುವರಗೆ ಮಧುಸವರಿದಧರವ ವರಿಸುವ ವರಿ

ವರಿಸಿದ ವಧುವಿಗೂ ತರುವಾಯದ ವಿರಹದುರಿಯ ವರಿ

ಹರಿವ ’ರಿವರಿ’ ಗೆ ಸಾವಿರ ದೂರ ಹರಿವ ವರಿ

ಸಾವಿರದ (ಸಾವು ಇರದ) ರಣ ವೀರಗೂ ವೈರಿಯಿಂ ಬೆವರುವ ವರಿ

ಬರೆವ ಕವಿರಾಯಗೆ ಕುವರಿಯ ವರಣಿಸುವಾಗ ಉದರ ಮರೆಯುವ ವರಿ

ವೀರ ರಾವಣಗೂ ರಾಮದೇವರ ಶರ-ರವವೇ (ಬಾಣದ ಶಬ್ದ) ವರಿ                                                 ಗುರುವಿಗೆ ಪಾಠ ಮುಗಿಸುವ ವರಿ ವಿದ್ಯಾರ್ಥಿ ಗೆ ಪಾಠ ಓದುವ ವರಿ 

ಜನವರಿಯಿಂ ಜನವರಿಯ ವರೆಗೆ, ರವಿವಾರದಿಂ ರವಿವಾರದ ವರೆಗೆ

ಅವರಿವರಿವರವರಿಗವರವರದೇ ವರಿ ||


ಪರಿ ಪರಿ ವರಿಯಿಂ ನಿಮಗೆ ವರಿಯಾವರಿಸಿದರೆ,

ಐ ಆಮ್ ವೆರಿ ವೆರಿ ಸಾರಿ ...


-(ಅಂತರ್ಜಾಲದಿಂದ)

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನನ್ನ ಜೀವನವನ್ನು ನಾನೇ ಸ್ವತಃ ರೂಪಿಸಿಕೊಂಡಿದ್ದೇನೇ ಎಂದು ಬೀಗುವುದು ಬೇಡ...

ನಮಗೆ ಗೊತ್ತಿಲ್ಲದ ಹಾಗೆ ಎಲ್ಲರೂ ಕಾರಣರಾಗುತ್ತಾರೆ..ಹುಟ್ಟಿನಿಂದ ಹಿಡಿದು ಸಾಯುವವರೆಗೂ ಎಷ್ಟೋ ಜನರ ಆಶ್ರಯದಲ್ಲಿ ಬೆಳೆದಿರುತ್ತೇವೆ..ತಂದೆ ತಾಯಿ, ಗುರು, ಹಿರಿಯರು, ಸಹಪಾಠಿಗಳು,ಸ್ನೇಹಿತರು,ಕುಟುಂಬ ಹೀಗೆ ಇನ್ನೂ ಎಷ್ಟೋ ಪ್ರೀತಿ ಕೊಟ್ಟವರು ನಮ್ಮ ಬಾಳಿಗೆ ಸಹಕಾರಿಯಾಗಿದ್ದಾರೆ..ಇದನ್ನೆಲ್ಲಾ ಮರೆತು ನಾವೇ ಎಲ್ಲಾ ಎನ್ನುವುದು ತಪ್ಪು..ಸರ್ವ ಸ್ವತಂತ್ರರು ಆಗಲಿಕ್ಕೆ ಸಾಧ್ಯವಿಲ್ಲ..ಇವರ್ಯಾರೂ ಇಲ್ಲದ ಜೀವನ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ....

Thursday 17 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನನ್ನ ಜೀವನವನ್ನು ನಾನೇ ಸ್ವತಃ ರೂಪಿಸಿಕೊಂಡಿದ್ದೇನೇ ಎಂದು ಬೀಗುವುದು ಬೇಡ...

ನಮಗೆ ಗೊತ್ತಿಲ್ಲದ ಹಾಗೆ ಎಲ್ಲರೂ ಕಾರಣರಾಗುತ್ತಾರೆ..ಹುಟ್ಟಿನಿಂದ ಹಿಡಿದು ಸಾಯುವವರೆಗೂ ಎಷ್ಟೋ ಜನರ ಆಶ್ರಯದಲ್ಲಿ ಬೆಳೆದಿರುತ್ತೇವೆ..ತಂದೆ ತಾಯಿ, ಗುರು, ಹಿರಿಯರು, ಸಹಪಾಠಿಗಳು,ಸ್ನೇಹಿತರು,ಕುಟುಂಬ ಹೀಗೆ ಇನ್ನೂ ಎಷ್ಟೋ ಪ್ರೀತಿ ಕೊಟ್ಟವರು ನಮ್ಮ ಬಾಳಿಗೆ ಸಹಕಾರಿಯಾಗಿದ್ದಾರೆ..ಇದನ್ನೆಲ್ಲಾ ಮರೆತು ನಾವೇ ಎಲ್ಲಾ ಎನ್ನುವುದು ತಪ್ಪು..ಸರ್ವ ಸ್ವತಂತ್ರರು ಆಗಲಿಕ್ಕೆ ಸಾಧ್ಯವಿಲ್ಲ..ಇವರ್ಯಾರೂ ಇಲ್ಲದ ಜೀವನ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ....

Wednesday 16 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಒಂದು ಹಂತದವರೆಗೂ ನೋವು ಸಹಿಸಿದ ನಂತರ ಮನುಷ್ಯ ಮೌನಿಯಾಗುತ್ತಾನೆ🙃,  ಆಮೇಲೆ‌ ಯಾರನ್ನೂ ದೂಷಿಸುವುದಿಲ್ಲ. ಏನನ್ನೂ ನಿರೀಕ್ಷಿಸುವುದಿಲ್ಲ.😊

🍂 *ದಿನಕ್ಕೊಂದು ಸಿ(ಕ)ಹಿ MATHS ಮಾತು*🍃31 to 35

🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-31*🍃


Life is like Maths Problem...😊

The more you solve it,

the more you understand it...😊😊👍 



🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-32*🍃

If you think Maths is *Difficult*. It is.

If you think Maths is *Easy*. It is.

Maths is not only playing with *Numbers* but also playing with *Mind*😜


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-33*🍃

ಗಣಿತ ತನ್ನದೇ ಆದ ಲೋಕದಲ್ಲಿ ನಾವು ಊಹಿಸಲೂ ಅಸಾಧ್ಯವಾದ ಫಲಿತಾಂಶಗಳನ್ನು ಕೊಡುತ್ತದೆ...😊


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-34*🍃


Do *YOGA* for  Mental and Physical health on  *MAT*...😊

Solve *Problems* for Mental health in *MATHS*...😊


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-35*🍃

If u don't believe that , *Mathematics* is *Simple*, It is only because  you don't realize how *Complicated* life is.😊😊

Tuesday 15 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಆಡು ಮುಟ್ಟದ ಸೊಪ್ಪಿಲ್ಲ...

ಇಂಜಿನಿಯರ್ಸ್ ಇಲ್ಲದೆ ಪ್ರಪಂಚ ಇಷ್ಟು ವೇಗವಾಗುತ್ತಿರಲಿಲ್ಲ...

ಪ್ರಪಂಚ ಇಷ್ಟು Fast ಆಗಲು ತಮ್ಮದೇ ಕಾಣಿಕೆ ನೀಡಿರುವ ಹಾಗು ನೀಡುತ್ತಿರುವ  ಇಂಜಿನಿಯರ್ಗಳಿಗೆಲ್ಲಾ ಇಂಜಿನಿಯರ್ಸ್ ‌ದಿನದ‌ ಶುಭಾಶಯಗಳು😊💐😊👍🙏🏻

🍂 *ದಿನಕ್ಕೊಂದು ಸಿ(ಕ)ಹಿ MATHS ಮಾತು*🍃26 to 30

 🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-26*🍃


*Mathematics is easy when we learn with love and patience but it is too hard for lazy people (pupils)*😜😊


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-27*🍃

*Mathematics is not a subject it's magic, because it motivate and inspiring us to learn More by creating curiosity*🙃


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-28*🍃

ಗಣಿತವನ್ನು ಕಲಿಯುವುದು ಧ್ಯಾನ ಮಾಡಿದಂತೆ😊


 *ದಿನಕ್ಕೊಂದು  ಸಿ(ಕ)ಹಿ MATHS ಮಾತು-29*

ರೇಖಾ ಗಣಿತದ ಮೊದಲ ಪಾಠ, ಚುಕ್ಕಿ ಇಟ್ಟು ಹಾಕುವ ರಂಗೋಲಿ...😊🙂


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-30*🍃


ಮಂತ್ರಗಳು ಗೊತ್ತಿದ್ದ ಮಾತ್ರಕ್ಕೆ ದೇವರು ಒಲಿಯೋಲ್ಲ...😊😊

Formula ಗಳು ಗೊತ್ತಿದ್ದ ಮಾತ್ರಕ್ಕೆ ಗಣಿತ ಒಲಿಯೋಲ್ಲ....😊😊


Monday 14 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಟೀಮ್ ಸದಸ್ಯರ ಮುಂದೆ ತಾನು ದೊಡ್ಡ ಮನುಷ್ಯ ಅಂತ ತೋರಿಸಿಕೊಳ್ಳೋನು ನಾಯಕನಲ್ಲ. ಪ್ರತಿಯೊಬ್ಬರೂ ಸಮರ್ಥರೇ ಅಂತ ತೋರಿಸಿ ಸ್ಪೂರ್ತಿ ತುಂಬುವವನೇ ಲೀಡರ್.

🍂 *ದಿನಕ್ಕೊಂದು ಸಿ(ಕ)ಹಿ MATHS ಮಾತು🍃 21 to 25

 🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-21*🍃


ಗಣಿತದಲ್ಲಿ ಲೆಕ್ಕ ಮಾಡುವಾಗ ಮನಸ್ಸು ತಿಳಿ ಇರದೆ ಹೋದಲ್ಲಿ, ಯೋಚನೆ ಸ್ಪಷ್ಟವಿರದೆ ಹೋದಲ್ಲಿ, ಕೆಸರು ನೀರಿನಲ್ಲಿ ಈಜಾಡಿದಂತೆ....😊


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-22*🍃

ಗಕಾರ ಗಣಪತಿ ಸಹಸ್ರನಾಮದಲ್ಲಿ *ಗಣಿತ* ದಿಂದ ಪ್ರಾರಂಭವಾಗುವ ಗಣೇಶನ ಹೆಸರುಗಳು....

*ಗಣಿತಪ್ರಾಜ್ಞಾಯ ನಮಃ*

*ಗಣಿತಾಗಮಸಾರವಿದೇ ನಮಃ*

*ಗಣಿತಾಯ ನಮಃ*

*ಗಣಿತಾಗಮಾಯ ನಮಃ*

🙏🏻😊


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-23*🍃

*Mathematics is like love; a simple idea, but it can get complicated*😜😊


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-24*🍃

*Mathematics is a great motivator for all humans.. Because its career starts with zero and it never end (infinity).*😊



🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-25*🍃

*Mathematics is the science which uses easy words for hard ideas...*

 — Edward Kasner and James R. Newman.




Sunday 13 September 2020

🍂 *ದಿನಕ್ಕೊಂದು ಸಿ(ಕ)ಹಿ MATHS ಮಾತು-*🍃16 to 20

 🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-16*🍃

ಕೇವಲ ಸ್ವರಗಳೇ ಹೇಗೆ ಸಂಗೀತವಾಗುವುದಿಲ್ಲವೋ ಹಾಗೆ ಕೇವಲ ಅಂಕಿ ಸಂಖ್ಯೆಗಳೇ ಗಣಿತ ಆಗುವುದಿಲ್ಲ....😊

🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-17*🍃

ಒಬ್ಬ ವ್ಯಕ್ತಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಅವನು ಎಲ್ಲ ಪರಿಸ್ಥಿತಿ, ಪದ್ಧತಿಗಳನ್ನು ಗಮನಿಸಿ, ತರ್ಕಿಸಿ ನಂತರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅವನು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವನ ಏಳ್ಗೆ ನಿಂತಿದೆ ಎನ್ನಬಹುದು. ಹಾಗೆ ವಿಶ್ಲೇಷಿಸಿ, ತರ್ಕಿಸುವ ಮನಸ್ಥಿತಿಯನ್ನು *ಗಣಿತ* ನೀಡುತ್ತದೆ.....

🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-18*🍃


https://youtu.be/_UVEF3qXtSo


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-19*🍃

An equation has no meaning unless it expresses a thought of God


-Srinivasa Ramanujan.


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-20*🍃


ಇಂದು ಜಗತ್ತನ್ನು ಆಳುತ್ತಿರುವುದು *ಕಂಪ್ಯೂಟರ್*..😊

ಕಂಪ್ಯೂಟರ್ ನ ಆಳುತ್ತಿರುವುದು *ಗಣಿತ*😊😊


🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಅನಿವಾರ್ಯತೆ ಅನ್ನೋದು ಹೊಸ‌ ಆವಿಷ್ಕಾರಕ್ಕೆ ನಾಂದಿ ಹಾಡುತ್ತದೆ.😊

Saturday 12 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕಲಿಯಬೇಕಿದೆ ನಾನು....

ಸೋಲಿನಲ್ಲಿ ಸಹನೆ

ಸಾಧನೆಯಲ್ಲಿ ತಪನೆ

ಕೋಪದಲ್ಲಿ ಧ್ಯಾನ

ಕಲಹದಲ್ಲಿ ಮೌನ

ಸಂಕಟದಲ್ಲಿ ಸ್ಥೈರ್ಯ

ಸಂಕಷ್ಟದಲ್ಲಿ ಧೈರ್ಯ

ಅನ್ಯರಲ್ಲಿ ನಲ್ಮೆ

ಅನ್ಯಾಯದಲ್ಲೂ ತಾಳ್ಮೆ

ಅವಮಾನದಲ್ಲಿ ಶಾಂತತೆ

ವಿಜಯದಲ್ಲಿ ವಿನಮ್ರತೆ

ಬದುಕಿನಲ್ಲಿ ಸಮಚಿತ್ತತೆ.😊😊

🍂 *ದಿನಕ್ಕೊಂದು ಸಿ(ಕ)ಹಿ MATHS ಮಾತು*🍃 11 to 15

 🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-11*🍃


ಗಣಿತದ ಸಮಸ್ಯೆ ಇರಬಹುದು ಅಥವಾ  ಜೀವನದ ಸಮಸ್ಯೆಯೇ ಇರಬಹುದು , ಉತ್ತರವು ಸಮಸ್ಯೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದರಲ್ಲಿದೆ...😊


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-12*🍃

ಗಣಿತ ಹಲಸಿನ ಹಣ್ಣಿನ ರೀತಿ, ನಾವು ಹೊರಕವಚವನ್ನು ತೆಗೆದು, ತೊಳೆಗಳನ್ನು ಬಿಡಿಸಿ ತಿಂದರೇ ಎಷ್ಟು ರುಚಿ!! ಆದರೆ ಹೊರಕವಚವನ್ನೇ ಕಚ್ಚಿ ತಿನ್ನಲು ಹೋದರೆ!......😊ಗಣಿತ ಕಲಿಕೆಯಲ್ಲೂ ಹಾಗೆಯೇ...😊😊


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-13*🍃


ಗಣಿತದಲ್ಲಿ ಒಂದು ಲೆಕ್ಕವನ್ನು ಬಿಡಿಸುವಾಗ ಕೆಲವೊಮ್ಮೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕು... ಗಾಢವಾಗಿ ಆಲೋಚನೆ ಮಾಡಬೇಕು... So, ಗಣಿತ ತಾಳ್ಮೆಯನ್ನು ಕೇಳುತ್ತದೆ ಮತ್ತು ಕಲಿಸುತ್ತದೆ... 😊


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-14*🍃


This is my trinity:

mathematics,

music,

meditation.

This is my trimurti –

three faces of God.


-Osho



🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-15*🍃


 ಮನೆಯಲ್ಲಿ ಇಬ್ಬರು ಚಿಕ್ಕ ಮಕ್ಕಳಿದ್ದರೆ, ಅವರಿಗೆ ಎರಡು ಕಲ್ಲಂಗಡಿ ಹಣ್ಣಿನ ಚೂರುಗಳನ್ನು ಕತ್ತರಿಸಿ ಕೊಟ್ಟರೆ, ಇಬ್ಬರು ಮಕ್ಕಳೂ ಸಾಮಾನ್ಯವಾಗಿ ದೊಡ್ಡ ಚೂರನ್ನು ಪಡೆಯಲು ಹಟ ಮಾಡುತ್ತವೆಯಲ್ಲವೇ? ಹಾಗಾದರೆ ಅವರಿಗೆ ಭಿನ್ನರಾಶಿಗಳ ಬಗ್ಗೆ ಪಾಠ ಮಾಡಿದವರಾರು!


ಗಣಿತದ ಬಗ್ಗೆ ತಿಳಿವಳಿಕೆ ಮಕ್ಕಳಿಗೆ ಸಹಜವಾಗಿಯೇ ಅಂತರ್ಗತವಾಗಿರುತ್ತದೆ. ಹಾಗೆ ಸಹಜವಾಗಿರುವ ಗಣಿತದ ಆಲೋಚನೆಗಳಿಗೆ ನಿರ್ದಿಷ್ಟ ರೂಪವನ್ನು ಕೊಟ್ಟು ಅವರಲ್ಲಿ ಆಸಕ್ತಿಯನ್ನು ಮೂಡಿಸುವುದೇ ಸರಿಯಾದ ಕಲಿಕೆ.😊🙃

Friday 11 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಈಗ ಅವಳು ಎಲ್ಲಿರುವಳೋ ತಿಳಿಯದು...😊

ಅವಳ ನೆನಪುಗಳು ಮಾತ್ರ ಮನದಿಂದ‌ ಅಳಿಯದು...😉

🍂 *ದಿನಕ್ಕೊಂದು ಸಿ(ಕ)ಹಿ MATHS ಮಾತು*🍃 1 to 10

 🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-1*🍃

Every Diagonal matrix is a Square matrix... 

But every square matrix is need not to be Diagonal matrix...🙃😊


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-2*🍃

“A Man is like a fraction whose numerator is what he is and whose denominator is what he thinks of himself. The larger the denominator, the smaller the fraction.” 

-Tolstoy


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-3*

What is mathematics? 

It is only a systematic effort of solving puzzles posed by nature...

-Shakuntala 


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-4*🍃


Learn to be silent. Let your quiet mind listen and absorb....

~ Pythagoras.


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-5*🍃


ಹೆಚ್ಚಿನವರು ಗಣಿತ ಎಂದರೆ ಅಗಣಿತ ಅಂತರ ಕಾಯ್ದುಕೊಳ್ಳುತ್ತಾರೆ....🙃


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-6*🍃

The book of nature is written in the language of Mathematics...

-Galileo


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-7*🍃

Mathematics is the queen of the science...

– Carl Friedrich Gauss


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-9*🍃


*M* -MEMORY

*A*- ACCURACY

*T* -TALENT

*H* -HARD WORK

*E* -ENTHUSIASM

*M* -MIND

*A* -ATTENTION

*T* -TACT

*I* -INTEREST

*C* -CLEVERNESS

*S* -SINCERITY


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-10*🍃

ಕೇವಲ ಕೆಲವು ಸಂಖ್ಯೆಗಳನ್ನು ವೇಗವಾಗಿ ಕೂಡುವುದೋ ಅಥವಾ ಗುಣಿಸುವುದಷ್ಟೇ ಗಣಿತವಲ್ಲಾ. ಮಕ್ಕಳನ್ನು ಸರಿಯಾಗಿ ಆಲೋಚಿಸುವಂತೆ ಮಾಡುವುದು ಗಣಿತ ಕಲಿಕೆಯ ಮೂಲ ಉದ್ದೇಶಗಳಲ್ಲಿ ಒಂದು...😊

Thursday 10 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಒಬ್ಬರಿಗೆ ಒಳ್ಳೆಯವರಾದವರು ಮತ್ತೊಬ್ಬರಿಗೂ ಒಳ್ಳೆಯವರ ಹಾಗೇ ಕಾಣಬೇಕಿಲ್ಲ. 😀

ಹಾಗೆಯೇ‌

ಒಬ್ಬರಿಗೆ ಕೆಟ್ಟವರಾದವರು ಮತ್ತೊಬ್ಬರಿಗೂ ಕೆಟ್ಟವರ ಹಾಗೇ ಕಾಣಬೇಕಿಲ್ಲ.😀

Wednesday 9 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಗೆದ್ದಾಗ ಹೊತ್ತು ತಿರುಗುವರು ನಿನ್ನ

ಬಿದ್ದಾಗ ನೋಡಿ ನಗುವರು ನಿನ್ನ

ಸೋಲಿಗೆ ಹೆದರಿ ಓಡದಿರು ನೀನು

ಸಾಧಿಸುವ ಹಠವ ಬಿಡದಿರು ನೀನು.


✍️ಕೃಷ್ಣಚೈತನ್ಯ

Tuesday 8 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕೆಲವೊಮ್ಮೆ,

ಮೌನವೇ ಮಾತಾಗುತ್ತೆ.

ಮಾತು ಮೂಕವಾಗುತ್ತೆ.


Saturday 5 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಭಯವೇಕೆ ತಂದೆ ತಾಯಿ ಪ್ರೀತಿ ಇರುವಾಗ

ಮುನ್ನುಗ್ಗು ನೀನು ಗುರು ಹಿಂದೆ ನಿಂತಾಗ

ಸಾಧನೆಯ ಮಾರ್ಗ ಎಂದೂ ಹೂವಿನ ಹಾದಿಯಲ್ಲ

ಸತತ ಪರಿಶ್ರಮಕ್ಕೆ ಎಂದೂ ಸೋಲಿಲ್ಲ..



-ಕೃಷ್ಣಚೈತನ್ಯ.

ಗುರು..

ಅಕ್ಷರ ಕಲಿಸಿದೆ ಎಂಬ ಗರ್ವದಿಂದ ಆದವನಲ್ಲ ಗುರುವು

ನನ್ನ ಜ್ಞಾನ ನನಗೆ ಎಂಬ ಸ್ವಾರ್ಥದಿಂದ ಆದವನಲ್ಲ ಗುರುವು

ನನಗಿಂತ ಎತ್ತರಕ್ಕೆ ಹೋಗದಿರಲಿ ಎಂಬ ಕ್ರೂರ ಮನಸಿನಿಂದ  ಆದವನಲ್ಲ ಗುರುವು

ನನ್ನಿಂದಲೇ ನೀವೆಲ್ಲ ಬೆಳೆದಿದ್ದು ಎಂಬ ಅಹಂಕಾರದಿಂದ ಆದವನಲ್ಲ ಗುರುವು...


ಗುರು ಎಂದರೆ....


ನೀನು ಕಾಣದ ಹಾದಿಗೆ  ದೀಪವಾಗುವ 

ನಿನ್ನ ಸಾಗದ ದೋಣಿಗೆ  ಹುಟ್ಟಾಗುವ 

ನಿನ್ನಲ್ಲಿ ಇರುವ ಶಿಲೆಗೆ ಉಳಿಯ ಪೆಟ್ಟಾಗುವ

ನಿನ್ನ ಸಾಧನೆ ಹಾದಿಯಲ್ಲಿ ತಿಳಿಯದ ಗುಟ್ಟಾಗುವ

ನಿನ್ನ ಕಷ್ಟದಲ್ಲಿ  ಕೈ ಹಿಡಿದು ನಂಟನಾಗುವ

ನೀ ಎಡವಿದಾಗ ಎಚ್ಚರದ  ನಾದನಾಗುವ

ನೀ ಸಾಗುವ  ದಾರಿಯಲ್ಲಿ ಮುಗುಳು ನಗೆಯ ನೀಡುವ

ನಿನ್ನ ಗುರಿಯ ತೋರಿಸಿ  ತಲುಪು ಎಂದು ದೂರ ಸಾಗುವ

   


-ಲಕ್ಷ್ಮೀ ಶ್ರೀನಿವಾಸ್ (ಲಕ್ಷ್)

ಗುರು ವಂದನೆ


ಯಾರ್ಯಾರನೆನ್ನಲಿ ನಾ ಗುರು

ಮಾತು ಕಲಿಸಿದ ತಾಯಿ ಗುರು

ಶಿಸ್ತು ಬೋಧಿಸಿದ ತಂದೆ ಗುರು

ಪಾಠ ಹೇಳಿಕೊಟ್ಟವರು ಗುರು

ಸ್ನೇಹಿತರೊಂದರ್ಥದಲಿ ಗುರು

ಪ್ರೀತಿ ಕಣ್ಣಾದ ಸಂಗಾತಿ ಗುರು

ಬೈದು ತಿದ್ದಿತೀಡಿದವರು ಗುರು

ಕಣ್ತೆರಿಸಿದ ಮಕ್ಕಳೂ ಗುರು

ಅನುಭವವಿತ್ತ ಶತೃ ಗುರು

ಕತ್ತಲಲಿ ಕೈಹಿಡಿದ ದೇವ ಗುರು

ಇಂದು ನಾನು ನಾನಾಗಿರಲು

ಸಹಕರಿಸಿದ ಸಮಸ್ತರೂ

ನನ್ನ ಗುರು ಸಮಾನರು

ವಂದನೆಗಳು ಸರ್ವರಿಗೂ,

ಅಭಿನಂದನೆಗಳು..



(ಕೃಪೆ...ಅಂತರ್ಜಾಲ)



Friday 4 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಸೋಲೂ ನಿನ್ನಲೇ ಗೆಲುವೂ ನಿನ್ನಲೇ

ಎದುರಿಸುವ ಛಲವೂ ನಿನ್ನಲೇ

ಪ್ರಯತ್ನ ಪಡಲು ಅಂಜುತಿರುವೆ ಏಕೆ

ಗೆಲುವಿನ ಹಂಬಲ ಎಂದಿಗೂ ತೀರದ ಬಯಕೆ..


-ಕೃಷ್ಣಚೈತನ್ಯ.

Thursday 3 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ನಾವು ಗೆಲ್ಲುವವರೆಗೂ ನಮ್ಮ ಕಥೆಯನ್ನು ಯಾರೂ ಕೇಳುವುದಿಲ್ಲ.

Wednesday 2 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಮನದ ಮಾತನ್ನು

ಮನದಲ್ಲೇ ಬಚ್ಚಿಟ್ಟುಕೊಂಡ ತಪ್ಪಿಗೆ...

ಇಂದು ಅವಳು ...

ಬೇರೊಬ್ಬನ ಹೆಂಡತಿ..

ಇವನಿಗೆ ನೆನಪುಗಳೇ.. ಸಂಗಾತಿ😊😉

Tuesday 1 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಎಲ್ಲ ಪ್ರಶ್ನೆಗಳಿಗೂ ತಕ್ಷಣವೇ ಉತ್ತರ ಸಿಗೋಲ್ಲ...

Monday 31 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಪರಿಹರಿಸಲಾಗದ ಸಮಸ್ಯೆಯೇ ಇಲ್ಲ..

ಕಾಯುವ ತಾಳ್ಮೆಯು ಎಲ್ಲರಲ್ಲಿ ಏಕಿಲ್ಲ..?

Sunday 30 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಮನದಾಳದ ಮಾತುಗಳನ್ನ 

ಅವಳ ಬಳಿ ಹೇಳಿದೆ ತಪ್ಪಿಗೆ...

ಅವನಿರುವನು ಈಗ ತೆಪ್ಪಗೆ...

ಯಾಕಂದ್ರೆ ಇಂದು ಅವಳು ...

ಅವನ ಹೆಂಡತಿ...😊😊

Saturday 29 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಒಬ್ಬೊಬ್ಬರಿಗೆ ಒಂದೊಂದರಲ್ಲಿ ಸುಖ...😊😊

Thursday 27 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಎಲ್ಲಾ ಕೆಲಸವನ್ನು ನಾನು ಮಾಡಬಲ್ಲೆ ಎಂಬ *ಆತ್ಮವಿಶ್ವಾಸವಿರಲಿ* ...😊

ಆದರೆ , 

ಎಲ್ಲಾ ಕೆಲಸವನ್ನೂ ನಾನೊಬ್ಬನೇ  ಮಾಡಬಲ್ಲೆ ಎಂಬ *ಅಹಂಕಾರ ಬೇಡ*....😊

Wednesday 26 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ನಮ್ಮ ಯೋಗ್ಯತೆಯನ್ನು ಗುರುತಿಸಲು ವಿಫಲವಾದಾಗ....

ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಸಿದ್ದರಾಗಬೇಕು...

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ರೆಕ್ಕೆ ಕಿತ್ತ ಹಕ್ಕಿ, 

ನಂಬಿಕೆ ಕಳೆದುಕೊಂಡ ಪ್ರೀತಿ                        ಎರಡೂ ಒಂದೆ. 

ಅದು ಹಾರೋದಿಲ್ಲ...

ಇದು ಮುಂದೆ ಸಾಗೋದಿಲ್ಲ...😊

Monday 24 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನಗುತ್ತಾ ಮಾಡಿದ ಪಾಪಗಳನ್ನು, ಅಳುತ್ತಾ ಅನುಭವಿಸಲೇ ಬೇಕು.🙃😊

Sunday 23 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಬಲ ಇದೆ ಅಂತ ಅಹಂಕಾರ ಪಡಬೇಡ ಏಕೆಂದರೆ ಕಲ್ಲು ನೀರಲ್ಲಿ ಬಿದ್ದಾಗ ಅದರ ಭಾರದಿಂದಲೇ ನೀರಲ್ಲಿ ಮುಳುಗುತ್ತದೆ.😀

Saturday 22 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಜೀವನದಲ್ಲಿ,

ಯಾವುದೂ ಶಾಶ್ವತವಲ್ಲ 

ಕಾಲವೊಂದೆ ಸತ್ಯ 

ನಾನೆಂಬ ಅಹಂ ಮಿಥ್ಯ 

ಕಾಲದ ಜೊತೆಗೆ ಓಡುವುದಷ್ಟೇ ನಮ್ಮ ಕಾಯಕ.😊

Friday 21 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಹುಡುಕಿದರೆ ಸಿಗುವುವು ನೂರಾರು ನೋವುಗಳು..

ಮಾಡಿದರೆ ಆಗುವುವು ಸಾವಿರಾರು ಸಾಧನೆಗಳು.. 

ಬಿಟ್ಟು ಸಾಧಿಸಿದರೆ ಎಲ್ಲರ ಮೇಲಿನ ನಿರೀಕ್ಷೆ ...

ಇಡೀ ಜಗತ್ತೇ ಮಾಡುವುದು ನಿನ್ನ ಸಾಧನೆಗಳ ಸಮೀಕ್ಷೆ....


*ಎಲ್ಲರಿಗೂ ಗೌರೀ ಹಾಗೂ ಗಣೇಶ ಹಬ್ಬದ ಶುಭಾಶಯಗಳು*

Tuesday 18 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನಾನೊಂದು ತೆರೆದ ಪುಸ್ತಕ ಬಲ್ಲೆಯೇನು..

ನಾ ನೊಂದು ಬರೆದ ಪುಟವ ಕಂಡೆಯೇನು..


✍️ಕೃಷ್ಣ ಚೈತನ್ಯ.

Monday 17 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕನಸಿನಲ್ಲಿ ಕಂಡ ಕನಸೊಂದು ನನಸಾದ ಹಾಗೆ ಕನಸು ಕಾಣುವವರೇ ಜಾಸ್ತಿ.

Sunday 16 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಅಪನಂಬಿಕೆಯೂ ಒಂದು ನಂಬಿಕೆ...😄😄😄

Saturday 15 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಜೀವನದಲ್ಲಿ ಅಂದುಕೊಂಡಿದ್ದೆಲ್ಲಾ ಸಿಗುವುದಿಲ್ಲ.😊

ಆದರೆ, ಮನಸ್ಸು ಮಾಡಿದರೆ ಸಿಗದಿರುವುದು ಯಾವುದೂ ಇಲ್ಲ.😊

Friday 14 August 2020

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನೀನೇ ಹುಡುಕು ನಿನ್ನ ಬದುಕು

ನೀನೇ ಬದುಕು ನಿನ್ನ ಬದುಕು

ಬಂದೇ ಬರುವುದು ಚೂರು ಬೆಳಕು

ಅವನು ಅಳಿಸುವ ಎಲ್ಲಾ ತೊಡಕು

Wednesday 12 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಜೀವಕ್ಕೆ ಸಾವಿದ್ದರೂ, 

ಸಾವಿರದ ಸಂಬಂಧ ಕಟ್ಟಬೇಕು.😊

Tuesday 11 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನೊಂದು ಕೊಳ್ಳದಿರು

ಮಾರುತ್ತರ ನೀಡದಿರು

ಸುಮ್ಮನಿದ್ದು ಬಿಡು

ದೇವರಂತಿದ್ದುಬಿಡು

ದೇವರಾಗಿಬಿಡು.....


ಅವರವರ ಬುತ್ತಿ ಅವರವರ ಹೆಗಲಿಗೆ.


-ಶ್ರೀ ಬಸವಣ್ಣ

Monday 10 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಜೀವನದ ದಾರಿಯಲಿ ಕಾಣುವೆವು ಸ್ವರ್ಗ, ನರಕ. 

ಸೇರುವ ಜಾಗ ಮಾತ್ರ ಪ್ರಶ್ನಾರ್ಥಕ.

Sunday 9 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ತಲೆದಿಂಬಿಗಷ್ಟೇ ಗೊತ್ತು ತಲೆಯೊಳಗಿನ ಭಾವನೆಗಳ ಸಂಘರ್ಷ.....

Friday 7 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಸೇವೆ ಎಲ್ಲರಿಗೂ ಮಾಡಿ, ಆದರೆ ಪ್ರತಿಫಲವನ್ನು ಯಾರಿಂದಲೂ ಬಯಸ ಬೇಡಿ. ಏಕೆಂದರೆ ಪ್ರತಿಫಲ‌ ನೀಡುವುದು ದೇವರೇ ಹೊರತು ಮನುಷ್ಯನಲ್ಲ.

Thursday 6 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ನಾವು ಇನ್ನೊಬ್ಬರ ಪಾಲಿಗಷ್ಟೇ ಒಳ್ಳೆಯವರಾಗಿದ್ದರೆ  ಸಾಲದು.    
ನಮಗೂ ನಾವು ಒಳ್ಳೆಯದು 
ಮಾಡಿಕೊಳ್ಳುತ್ತಿರ ಬೇಕು.

Wednesday 5 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಕಣ್ಣು ಮುಚ್ಚಿ ಕುಳಿತರೆ ಮಾತ್ರ ಅದು ಧ್ಯಾನಸ್ಥ ಸ್ಥಿತಿ ಅಲ್ಲ. ನಾವು ನಮ್ಮ ಕೆಲಸ ಕಾರ್ಯಗಳಲ್ಲಿ ತನ್ಮಯರಾಗಿ ತಲ್ಲೀನರಾಗುವುದೂ ಒಂದು ಧ್ಯಾನಸ್ಥ ಸ್ಥಿತಿಯೆ.😊

Monday 3 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ನಾವು ಒಳ್ಳೆಯದೇ ಮಾಡುತ್ತಿದ್ದರೂ ಕೆಲವರಿಗೆ ಅದು ಕೆಟ್ಟದ್ದು ಅನ್ನಿಸುತ್ತೆ.

🍂 *ದಿನಕ್ಕೊಂದು ಸಿಹಿ ಮಾತು*🍃

🍂 *ದಿನಕ್ಕೊಂದು ಸಿಹಿ ಮಾತು*🍃

*ಮಾತಿಗೆ ಕಿವಿಯಾಗುವ, ದುಃಖಕ್ಕೆ ಮರುಗುವ, ನಗುವಾಗ ನಗುವ, ಅಳುವಾಗ ಕಣ್ಣೊರೆಸುವ, ಬಿದ್ದಾಗ ಎಬ್ಬಿಸುವ, ನೋವಿನಲ್ಲಿರುವಾಗ ಬೆನ್ನು ತಟ್ಟಿ ಸಮಾಧಾನಿಸುವ ಮನಸಿರುವುದು ಗೆಳೆಯರಿಗೆ ಮಾತ್ರ*.

 *ಇಂತಹ ಗೆಳೆಯರನ್ನು ಪಡೆದಿರುವ ನಾನೇ ಧನ್ಯ....😊 ಎಲ್ಲರಿಗೂ ಗೆಳೆಯರ ದಿನದ ಶುಭಾಶಯಗಳು* 💐💐🙏🏻😊😊🙏🏻🙏🏻🙏🏻

Saturday 1 August 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಎಲ್ಲವೂ ನಾವು ಅಂದು ಕೊಂಡಂತೆ ನಡೆಯುತ್ತಿಲ್ಲ ಎಂದರೆ, ನಾವು ಅಂದುಕೊಂಡ ದಾರಿಯಲ್ಲಿ ಸಾಗುತ್ತಿಲ್ಲ ಅಂತ ಅರ್ಥ.

Friday 31 July 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ನಿನ್ನ ಬಳಿ ಎಲ್ಲವೂ ಇದ್ದರೂ ನಿನ್ನನ್ನು ಅರ್ಥ ಮಾಡಿಕೊಳ್ಳದವರಿಗೆ ಏನೂ ಕಾಣುವುದಿಲ್ಲ.😊

ವರಲಕ್ಷ್ಮಿ ಹಬ್ಬದ ಶುಭಾಶಯಗಳು....

Wednesday 29 July 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಸಂಪತ್ತಿನ ಬೆಲೆಯೇ ಬೇರೆ...
ಸಂಸ್ಕಾರದ ಬೆಲೆಯೇ ಬೇರೆ...

Tuesday 28 July 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಕನ್ನಡಿ ಎಷ್ಟು ಬಾರಿ ನಮ್ಮ ಓರೆಕೋರೆ ಪ್ರತಿಬಿಂಬಿಸಿದರೂ ನಾವು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆಯೇ ಹೊರತು ಯಾವುದೇ ರೀತಿಯ ಸಮಜಾಯಿಷಿ ಕೊಡಲು ಹೋಗುವುದಿಲ್ಲ. ಇದೇ ಧೋರಣೆ ನಮಗೆ ಮನುಷ್ಯರ ಜತೆ ಏಕೆ ಸಾಧ್ಯವಾಗುವುದಿಲ್ಲ? ಎಷ್ಟೋ ಜನ ಸ್ನೇಹಿತರು, ಹಿತೈಷಿಗಳು ನಮ್ಮ ಗುಣಸ್ವಭಾವ ಬದಲಿಸಿಕೊಳ್ಳಲು ಹೇಳುತ್ತಾರಲ್ಲ. ಆಗ ಏಕೆ ನಾವು ಇಷ್ಟೇ ನಿರ್ಲಿಪ್ತವಾಗಿ, ಸ್ವೀಕರಿಸಿ ಸರಿಪಡಿಸಿಕೊಳ್ಳುವುದಿಲ್ಲ.🤔

Monday 27 July 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಪ್ರೇಮಿಗಳಲ್ಲಿ ಹಲವು ಥರ,
ಪ್ರೇಮಕ್ಕುಂಟು ಹಲವು ಥರ,
ದುರಂತವಿರಲಿ, ಸುಖಾಂತವಿರಲಿ,
ಪ್ರೇಮ ನಿರಂತರ.


-ಬಿ ಅರ್ ಲಕ್ಷ್ಮಣರಾವ್

Sunday 26 July 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕಷ್ಟ ಬಂತೆದು ಭಯ ಬೀಳಬೇಡಿ.
ನಿಮ್ಮನ್ನು ಕಷ್ಟದಿಂದ‌ ಪಾರು ಮಾಡಲು ಸಾಕ್ಷಾತ್ ದೇವರು ಬರದಿದ್ದರೂ ಮನುಷ್ಯ ರೂಪದಲ್ಲಿ ದೇವರು ಬಂದೇ ಬರುತ್ತಾನೆ.

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕಲ್ಲು ಬಂಡೆ ತಂದವ ನೀನು
ಉಳಿ ಪೆಟ್ಟು ಕೊಟ್ಟವ ನೀನು
ದೇವರು ಮಾಡಿದವ ನೀನು
ದೇವರ ಹೆಸರು ಇಟ್ಟವ ನೀನು
ನನ್ನ ಬಳಿ ಬೇಡುತ್ತಿರುವವನೂ ನೀನು.

Friday 24 July 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಬಟ್ಟೆ ಒಗೆಯುವ ಕಲ್ಲು ಹೊಳಪಾಯಿತು.
ಉಳಿ ಪೆಟ್ಟು ತಿಂದ‌ ಕಲ್ಲು ದೇವರಾಯಿತು.

Thursday 23 July 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕಷ್ಟದಲಿ ನೀನೆನ್ನ ಕೈ ಬಿಟ್ಟೆನೆನ್ನದೆಯೆ ಭಜಿಸುವೆನು, 
ನನಗಿಲ್ಲ ಇಷ್ಟು ಕೋಪ.
 ಕೊನೆಯಿರದ ದಾರಿಯಲಿ ನಾನು ಮುಂಬರಿಯುತ್ತ
ನಿನ್ನ ನೆನೆಯುತ್ತೇನೆ ಭಕ್ತಿಯಲ್ಲಿ;
ನಿನ್ನೊಲವು ನನ್ನ ಸಂರಕ್ಷಿಸುತ ಬರುತಿಹುದು,
ನನಗೆ ನಂಬಿಕೆ ನಿನ್ನ ಶಕ್ತಿಯಲ್ಲಿ.

- ಶ್ರೀ ಕೆ ಎಸ್. ನರಸಿಂಹಸ್ವಾಮಿ.

Wednesday 22 July 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಮೌನದ ಮಾತು ಕೇಳುವವರು ಯಾರು
ಕೋಪದ‌ ಪ್ರೀತಿ ಅರಿತವರು ಯಾರು
ಮನಸ್ಸಿನ ವೀಣೆ ಮೌನ ರಾಗವ ನುಡಿಸುತಿದೆ
ಕನಸಿನ ಏಣಿ ಭವಿಷ್ಯವ ನೆನೆದು ನಡುಗುತಿದೆ.

- ಕೃಷ್ಣ ಚೈತನ್ಯ.

Tuesday 21 July 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಗಾಜಿನ ಚೂರು ಸುಮ್ನೆ ಬಿದ್ದಿತ್ತು, ನಾನೇ ತುಳಿದು ಗಾಯ ಮಾಡ್ಕೊಂಡಿದ್ದು....
ಗಾಜನ್ನ ಯಾಕೆ ದ್ವೇಷ ಮಾಡ್ಲಿ, ನಾನೇ ನೋಡ್ಕೊಂಡು ಹೆಜ್ಜೆ ‌ಇಡಬೇಕಿತ್ತು...

Sunday 21 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 ಅಪ್ಪಂದಿರ ಯೋಗಕ್ಕೆ ಸೂರ್ಯ ಗ್ರಹಣ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-137*🍃

ಸೂರ್ಯ🌞 ಭೂಮಿಯನ್ನು🌎 ನೋಡುತ್ತಲೇ ಇದ್ದಾನೆ ಎಂದು ಕೋಪದಿಂದ ಇವರಿಬ್ಬರ ಮಧ್ಯೆ ಚಂದ್ರ🌙 ಬಂದು ಸೂರ್ಯನಿಗೆ ಗ್ರಹಣ🌒 ಉಂಟುಮಾಡಿದ.


Tuesday 16 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ದೀಪದಲ್ಲಿ ಎಣ್ಣೆ ಮುಗಿದ ಸಮಯಕ್ಕೆ ಗಾಳಿ ಬಂದಾಗ, ದೀಪ ಆರಿದ್ದು ಎಣ್ಣೆಯಿಂದಾನಾ ಅಥವಾ ಗಾಳಿಯಿಂದಾನ ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಜೀವನದಲ್ಲೂ ಹಾಗೆಯೇ ಕೆಲವೊಮ್ಮೆ ನಮ್ಮ ನೋವಿಗೆ ನಾವು ಕಾರಣವ ನಮ್ಮ ಪರಿಸ್ಥಿತಿ ಕಾರಣವ ಎಂಬ ಗೊಂದಲದಲ್ಲಿ ಉತ್ತರ ಸಿಗದೆ ಬರೀ ನೋವಲ್ಲೇ ಬದುಕುತ್ತೇವೆ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-136*🍃

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-136*🍃

ಅವರಿಬ್ಬರು ಶಂಕಿತರು. ಪ್ರೀತಿಯಲ್ಲಿ.


Sunday 14 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಶ್ರಮಕ್ಕೆ ಅದೃಷ್ಟವನ್ನು ಆಕರ್ಷಿಸುವ ಶಕ್ತಿ ಇದೆ.

Saturday 13 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಹಗಲು ರಾತ್ರಿಗಳಿಗೆ 
ಕೊನೆ ಮೊದಲಿಲ್ಲ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-134*🍃

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-134*🍃

ಅವಳು,

ಕೈ ಕೊಡದೆ,
ಕೈ ಕೊಟ್ಟಳು.
ಕೈ ನೀಡಿ,
ಕೈ ಹಿಡಿದೆ.


Thursday 11 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಅವರಿವರ ಮಾತಿಗೆ ಕಾಲ ನಿಲ್ಲುವುದಿಲ್ಲ.
ಹಾಗೆಯೇ ನಡೆಯುವ ಕಾಲೂ ನಿಲ್ಲಬಾರದು.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-133*🍃

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-133*🍃

ಅವನು ತನ್ನ ಸರದಿಗಾಗಿ‌ ಕಾಯುತ್ತಲೇ ಇದ್ದ.


Wednesday 10 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಜನರಿಗೆ ನಾವು ಬದಲಾದದ್ದು ಬೇಗ ಕಾಣಿಸುತ್ತೆ. ಆದರೆ ಅವರ ಯಾವ ಮಾತಿನಿಂದ ನಾವು ಬದಲಾದೆವು ಅನ್ನುವುದು ಮಾತ್ರ ಜನರಿಗೆ ತಿಳಿಯುವುದಿಲ್ಲ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-132*🍃

ಕಾಲಗಳು‌ ಬದಲಾದರೂ ಅವರಿಬ್ಬರ ಮನಸ್ಸುಗಳು ಬದಲಾಗಲಿಲ್ಲ.

Tuesday 9 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಬೀಜದೊಳಗಿದೆ ಎಣ್ಣೆ,
ಹಾಲಿನೊಳಗಿದೆ ಬೆಣ್ಣೆ;
ನಿನ್ನಯ ದೇವ ನಿನ್ನೊಳಗಿಹನೈ, ಕೈಲಾದರೆ ನೋಡೈ!.

- ಸಂತ ಕಬೀರ ದಾಸ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-131*🍃

ಅವನಿಗಾಗಿ ಅವಳು,
ಅವಳಿಗಾಗಿ ಅವನು.
ಕಾಯುತ್ತಲೇ ಇದ್ದರು.

Monday 8 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಎಲ್ಲಾ ಕಲ್ಲುಗಳೂ ಶಿಲ್ಪವಾಗುವ ಯೋಗ್ಯತೆ ಹೊಂದಿರುವುದಿಲ್ಲ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-130*🍃

ವಿಶ್ವಪರಿಸರ ದಿನದಂದು ನೆಟ್ಟ ಸಸಿ ಮಾರನೇ ದಿನವೇ ಮೇಕೆಗೆ ಆಹಾರವಾಗಿತ್ತು.

Sunday 7 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಅಲೆ ಸಮುದ್ರದ್ದು; ಸಮುದ್ರ ಅಲೆಯದ್ದಲ್ಲ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-129*🍃

ವಿಶ್ವಪರಿಸರ ದಿನದಂದು ಗಿಡ ನೆಟ್ಟವನು, ಮಾರನೇ ದಿನ ಅವನ ಮನೆಯ ಮುಂದಿನ ಮರವನ್ನು ಕಡಿಸಿದನು.

Saturday 6 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಹಾಲಿಗೆ ನೀರು ಶತ್ರುವೇ ಆದರೂ, ಹಾಲಿನಿಂದ ಬೆಣ್ಣೆ ತೆಗೆದಾಗ ರಕ್ಷಿಸಲು ನೀರೇ ಬೇಕು.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-128*🍃

*ಮಂಜು* ವನ್ನು ನಂಬಿದ್ದ   *ಮಂಜು* ಳಾ ಳ ಬದುಕಿನಲ್ಲಿ  *ಮಂಜು* ಮುಸುಕಿತ್ತು.

Friday 5 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಪ್ರಕೃತಿ...
ಎಲ್ಲವನ್ನೂ ತಿಳಿಸುತ್ತದೆ.
*ಅರ್ಥಮಾಡಿಕೊಂಡರೆ* .

*ವಿಶ್ವ ಪರಿಸರ ದಿನದ‌ ಶುಭಾಶಯಗಳು*

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-127*🍃

ಅವಳು ಎಲ್ಲವನ್ನೂ ಸಹಿಸಿಕೊಂಡಿದ್ದಳು. ಭೂಮಿಯಂತೆ.

Thursday 4 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಮನಸ್ಸು ಮನೆ ಇದ್ದಂತೆ. ಹೊರಗಿನ‌ ಕಸ ಒಳಸೇರುತ್ತಲೇ ಇರುತ್ತದೆ. ದಿನವೂ ಸ್ವಚ್ಛಗೊಳಿಸುತ್ತಲೇ ಇರಬೇಕು.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-126*🍃
ಅವಳ ಬೈಗುಳ ಅವನಿಗೆ ಪ್ರೀತಿ ಮಾತುಗಳಂತೆ ಕೇಳುತ್ತಿತ್ತು.

Wednesday 3 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಉತ್ಸಾಹವಿರಲಿ....ಸಂಯಮವೂ ಇರಲಿ.😊

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-125*🍃
ಅವಳು ಮಾಡಿದ್ದೆಲ್ಲವೂ ಸರಿ ಕಾಣುತ್ತಿತ್ತು ಅವನಿಗೆ.

Tuesday 2 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಅಂದ್ಕೊಂಡಿಲ್ಲ ಅಂದ್ರೆ.... ಆಗೋದೂ ಇಲ್ಲ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-124*🍃
ಅವಳ ಎಲ್ಲಾ ತಪ್ಪುಗಳನ್ನು ಕ್ಷಮಿಸುತ್ತಿದ್ದದ್ದೇ ಅವನು ಮಾಡಿದ‌ ತಪ್ಪು.

Monday 1 June 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕಣ್ಣಿಗೆ ಕಾಣುವವರೆಲ್ಲಾ ಕೈ ಬಿಟ್ಟಾಗಲೇ...
ಕಣ್ಣಿಗೆ ಕಾಣದಿರುವನೊಬ್ಬ ಕೈ ಹಿಡಿದಿರುತ್ತಾನೆ ಎಂದು ಅರಿವಾಗುವುದು...

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-123*🍃
ಅವಳು, ಅವನು.

Sunday 31 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


*ಹೊಂದಿಕೊಳ್ಳುವಿಕೆ* ಜೀವನದಲ್ಲಿ ಇರಲೇ ಬೇಕು.🙃

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-122*🍃
ಅವನು *ಕವಿತೆ* ಗಳನ್ನು ಬರೆದುಬರೆದು *ಕವಿತಾ* ಳನ್ನೇ ಕಳೆದುಕೊಂಡ.😔🙃

Saturday 30 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ನಿಮ್ಮೊಂದಿಗೆ ನೀವು ಪ್ರಾಮಾಣಿಕವಾಗಿರಿ.....

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-121*🍃
ಅವರಿಬ್ಬರೂ ಒಂದಾದರು.
ಉಳಿದವರು ಅವರಿಂದ ದೂರಾದರು.

Friday 29 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಪ್ರತಿಯೊಂದು ಅಸ್ತ್ರಕ್ಕೂ  ಪ್ರತ್ಯಾಸ್ತ್ರವಿದ್ದೇ ಇರುತ್ತದೆ; ಯಾವ ಅಸ್ತ್ರಕ್ಕೆ ಪ್ರತಿಯಾಗಿ ಯಾವ ಅಸ್ತ್ರವನ್ನು ಉಪಯೋಗಿಸಬೇಕು ಅನ್ನುವ ಜ್ಞಾನ ಅತಿ ಮುಖ್ಯ...🙃😊

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-120*🍃
ನನ್ನ ಕನಸುಗಳಿಗೆ ರೆಕ್ಕೆ ಬಂದು ಹಾರಿಹೋದವು.ಮತ್ತೆ ಹಿಂದಿರುಗಿ ಬರಲೇ ಇಲ್ಲ😊

Thursday 28 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಗಂಡ - ಹೆಂಡತಿ...

ಅನ್ಯೋನ್ಯವಾಗಿದ್ದರೆ *ಜೋಡಿಪದ*
ಯಾವಾಗಲೂ ಜಗಳವಾಡುತ್ತಿದ್ದರೆ
 *ವಿರುದ್ದ ಪದ* .😊

Wednesday 27 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ನಾವು ಮಾಡುವ ಕೆಲಸದಲ್ಲಿ ಸೋಲೋ ಗೆಲುವೋ ಏನೋ ಒಂದು ಆಗುತ್ತೆ. ಆದರೆ ಕೆಲಸದಲ್ಲಿ ಆಸಕ್ತಿ ಮಾತ್ರ ಕಳೆದು ಕೊಳ್ಳಬಾರದು ಅಷ್ಟೆ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-118*🍃
ಅವಳಿಂದ ಅವನ ಜೀವನದಲ್ಲಿ  ಹಿಡಿದಿದ್ದ ಗ್ರಹಣ ಬಿಟ್ಟಿತು.

Tuesday 26 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಉದ್ದವನ್ನು ತಕ್ಕಡಿಯಲ್ಲಿ ಅಳೆಯಲು ಆಗುವುದಿಲ್ಲ ಅಂದ ಮಾತ್ರಕ್ಕೆ ತಕ್ಕಡಿ ಪ್ರಯೋಜನವಿಲ್ಲ ಅಂತ ಅರ್ಥವಲ್ಲ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-117*🍃
ಅವನ ಕಬ್ಬಿಣದಂತ ಹೃದಯ ಅವಳಿಗಾಗಿ ಕಾದು ತುಕ್ಕು ಹಿಡಿದಿತ್ತು.

Monday 25 May 2020


🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-116*🍃
ಅವನ ಹೃದಯ ಕಬ್ಬಿಣ, ಆದರೆ ಅವಳು ಅಯಸ್ಕಾಂತ.😊

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಕಾಲು ಎಳೆಯುವವರ ಮಧ್ಯೆ ಕೈ ಹಿಡಿಯುವವರು ಇದ್ದೇ ಇರ್ತಾರೆ.😊

Sunday 24 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ತಪ್ಪಾಗಿ ಯೋಚಿಸುವುದೇ ಜೀವನದ ಸಮಸ್ಯೆ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-115*🍃
ಅವನ ಬಾಳಿನ ಕತೆ, ಕವಿತೆ, ಕಾದಂಬರಿ ಎಲ್ಲಾ ಅವಳೇ ಆದಳು.

Saturday 23 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಅರಿತು, ತಿದ್ದಿಕೊಂಡರೆ ನಮ್ಮ ದೌರ್ಬಲ್ಯ,
ಹೆಚ್ಚಾಗುವುದು ನಮ್ಮ‌ ಮೌಲ್ಯ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-114*🍃
ಪ್ರೀತಿ ಅನ್ನೋದು ಅಕಾಲದಲ್ಲಿನ‌ ಮಳೆ.

Friday 22 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನನ್ನನ್ನು ನಾನು ನನ್ನಂತೆ ಒಪ್ಪಿಕೊಳ್ಳದೇ, ಪ್ರೀತಿಸದೇ, ಬೇರೆಯವರು ನನ್ನನ್ನು ಇಷ್ಟಪಡಲಿ ಎಂದು ಆಶಿಸುವುದು ತಪ್ಪು.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-113*🍃

ಪ್ರೀತಿ ಯನ್ನು Prove ಮಾಡಬೇಕಂತೆ😊.

Thursday 21 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಟೀಕೆಗಳು ಎಷ್ಟು ವಿಕೃತವೋ, ಅಷ್ಟೇ ಸೃಜನಾತ್ಮಕ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-112*🍃
ಅವರಿಬ್ಬರ ಕನಸು ನಕ್ಷತ್ರಗಳಂತೆ. ರಾತ್ರಿ ಮಾತ್ರ ಕಾಣುತ್ತಿದ್ದವು.

Wednesday 20 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಈಗ ಜಗತ್ತೆಲ್ಲಾ ಲೆಕ್ಕಮಯ.
ಶಂಕಿತರ ಲೆಕ್ಕ.😟
ಸೋಂಕಿತರ ಲೆಕ್ಕ.😷
ಅಸು ನೀಗಿದವರ ಲೆಕ್ಕ.😔
🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-111*🍃

ಅವರಿಬ್ಬರು ಒಪ್ಪಿದ್ದರು.  ಅವರಿಬ್ಬರ ಮನೆಯವರನ್ನೂ ಒಪ್ಪಿಸಿದ್ದರು. ಆದರೆ ಒಂದು *ಸೈಟಿ* ನಿಂದ ಎಲ್ಲರೂ ದೂರಾದರು.

Tuesday 19 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಉಪದೇಶ ಮಾಡಬೇಡಿ, ನೀವೇನು ಹೇಳಬೇಕೆಂದಿದ್ದೀರೋ ಹಾಗೆ ಬದುಕಿ ತೋರಿಸಿ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-110*🍃
ಅವನು ತನ್ನ ಜೀವನದಲ್ಲಿ  ಬಿರುಗಾಳಿ ಯಾಗುತ್ತಾನೆ ಅಂದುಕೊಂಡಿದ್ದವಳಿಗೆ ತಂಗಾಳಿಯಾದನು.

Monday 18 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


99 ರನ್ ಹೊಡೆದ ಬ್ಯಾಟ್ಸಮನ್ ಸಹ ,ಮುಂದಿನ ಎಸೆತ ಮೈಮರೆತರೆ ವಿಕೆಟ್ ಕಳೆದುಕೊಳ್ಳ ಬೇಕಾಗುತ್ತದೆ. ಸೆಂಚುರಿಗೆ ಒಂದು ರನ್ ಕಮ್ಮಿ ಮಾಡಿದರೂ ಅದು ಸೆಂಚುರಿ ಆಗುವುದಿಲ್ಲ.

*ಲಾಕ್ಡೌನ್ ಸಡಿಲವಾಗಿದೆ...ಕೊರೋನ ಅಲ್ಲ...ನೆನಪಿರಲಿ...ಮೈಮರೆಯಬೇಡಿ....*

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-109*🍃
ಅವಳ *ಅಹಂಕಾರ*
ಅವಳ *ಅಲಂಕಾರ* ವನ್ನು ಮುಚ್ಚಿಬಿಟ್ಟಿತ್ತು.

Sunday 17 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಒಮ್ಮೊಮ್ಮೆ ಸಿಕ್ಕಾಪಟ್ಟೆ ಪ್ರೀತಿ ತೋರಿಸಿದವರು ಇದ್ದಕ್ಕಿದ್ದಂತೆ ತೊರೆದು ಹೋಗುತ್ತಾರೆ. ಆಗ ಏನೂ ಆಗಿಲ್ಲದಂತೆ ನಟಿಸುವ ಕಲೆ ಕಲಿಯಬೇಕು.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-108*🍃

ಅವನ ಬಾಳಿನಲ್ಲಿ *ವಿಶೇಷ* ವಾಗಿದ್ದವಳು, *ಶೇಷ* ವನ್ನೂ ಉಳಿಸದೆ ಹೋದಳು.

Saturday 16 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಜೀವನ....
ಸಂಕಲನ  ಮತ್ತು ವ್ಯವಕಲನ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-107*🍃
ಅವಳೆಂದರೆ ಕವಿತೆ... 
ಅರ್ಥ ಆದರೂ,ಅರ್ಥ ಆಗದು.

Friday 15 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಬದುಕು ಕೂಡ ದಿನದ ಕೊನೆಗೆ, *ಡು ಯೂ ರಿಯಲೀ ವಾಂಟ್ ಟು ಸೇವ್ ಚೇಂಜಸ್* ಎಂದು ಕೇಳುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-106*🍃
ಅವರ ಸ್ನೇಹದ (ಪ್ರೇಮದ) ಕುರುಹಾಗಿ ನೆಟ್ಟ ಸಸಿ ಬೆಳೆದು ಹೆಮ್ಮರವಾಗಿದೆ. ಆದರೆ ಅವರು ಪರಸ್ಪರ  ಪ್ರೀತಿ,ನಂಬಿಕೆ ಚಿವುಟಿ ಹಾಕಿದ್ದಾರೆ.

Thursday 14 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಅವನು, ಜೀವನ ಪೂರ್ತಿ ನಿನ್ನ ಹೃದಯದಲ್ಲಿ ಕ್ವಾರಂಟೈನ್ ಆಗಲೇ ಎಂದ...
ಅವಳು ಸರಿ ಎಂದಳು..
ಅವನು ಒಳಗೆ ಹೋಗಿ ನೋಡಿದರೆ,  ಆರು ಜನ ಶಂಕಿತರು, ಮೂರು ಜನ ಸೋಂಕಿತರಿದ್ದರು.😊
🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-105*🍃


ಅವಳಿಗೆ ಅವನು ತಂತಿ ಇಲ್ಲದ ವೀಣೆ.


Wednesday 13 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಕೊರೋನಾ ಹಾಗೂ ಹೆಂಡತಿ ‌ಇಬ್ಬರೂ ಒಂದೇ....
ಮೊದಲು ನಿಯಂತ್ರಿಸಲು ಪ್ರಯತ್ನಿಸುತ್ತೇವೆ.
 ಅದು ಅಸಾಧ್ಯವೆನಿಸಿದಾಗ ಅದರೊಂದಿಗೆ  ಬದುಕಲು ಕಲಿಯುತ್ತೇವೆ..
 😊 *ಬದುಕು ಬಲು ಸುಲಭ*😊

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-104*🍃

ಇಷ್ಟದಿಂದ ಕೆಲಸ ಮಾಡುತ್ತಿದ್ದ ಅವನಿಗೆ ,ಅದೃಷ್ಟ ಎಳ್ಳಷ್ಟೂ ಇರಲಿಲ್ಲ.

Tuesday 12 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಸಂಬಂಧಗಳನ್ನು, ಸಂದರ್ಭಗಳನ್ನು ಜಾಣ್ಮೆಯಿಂದ ನಿಭಾಯಿಸಿ.
ಲೈಫು ಖುಷಿಯಾಗಿರುತ್ತೆ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-103*🍃

ಸಮಾಜದ ಓರೆಕೋರೆಗಳನ್ನು ತಿದ್ದುತ್ತಿದ್ದ ಅವನು ಮಕ್ಕಳ ಮೇಲೆ ವಿನಾಕಾರಣ ಸಿಟ್ಟಾಗುತ್ತಿದ್ದ.

Monday 11 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಎಲ್ಲಾ ದಿನಗಳಲ್ಲೂ ಒಳ್ಳೆಯವರಾಗಿಯೇ ಇರುವುದು ಅಪಾಯಕಾರಿ. ಒಮ್ಮೆಯಾದರೂ ನಿಜವಾದ ಕೋಪವನ್ನು ಪ್ರಕಟಿಸಬೇಕಾಗುತ್ತದೆ, ಮುಂದೆ ಆಗುವ ನೋವಿನಿಂದ ಪಾರಾಗಲು.😊

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-102*🍃

ಪ್ರೀತಿಯೊಂದೇ ಮಾಡಲು ತಿಳಿದವಳು ಯಾರ ಪ್ರೀತಿಗೂ ಪಾತ್ರಳಾಗಳಿಲ್ಲ.

Sunday 10 May 2020

🍂 *ದಿನಕ್ಕೊಂದು ಸಿ ~(ಕ)~ ಹಿ ಮಾತು*🍃

ಜಗತ್ತಿನಲ್ಲಿ ಎಲ್ಲಾ ಭಾವನೆಗಳು ಬದಲಾಗಬಹುದು.ಆದರೆ ತಾಯಿ ಅನ್ನೋ ಭಾವನೆ ಯಾವತ್ತೂ ಬದಲಾಗೋಲ್ಲ.

Happy *Mother's day* to all...😊💐🙏🏻

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-101*🍃

ಅವನು ಮಾಡಿದಂತೆಯೇ ಅವಳು ಎಲ್ಲಾ ಮಾಡಿದಳು. ಪ್ರೀತಿಯೊಂದನ್ನು ಬಿಟ್ಟು.

Friday 8 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಸೋಲನ್ನು ಸೋಲಿಸುವುದೇ ಗೆಲುವಿನ ಗುರಿ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-100*🍃

ಆ ಸಾಮಾನ್ಯ, ಅಸಾಮಾನ್ಯನಾದ.

Wednesday 6 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಏಕಾಂತ ಸದಾ ಸಿಗುತ್ತದೆ.
ಅದನ್ನು ಯಾವುದಕ್ಕೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಪಥ ನಿರ್ಧರಿತವಾಗುತ್ತದೆ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-99*🍃
ಆಕಾಶದಲ್ಲಿ ಕಾಣಲೇ ಬೇಕಿದ್ದ ಚಂದ್ರ ಕಾಣೆಯಾಗಿದ್ದ. ನಕ್ಷತ್ರಗಳೂ ಮಿನುಗಲೆಂದು.

Tuesday 5 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಹಲವರಿಗೆ...

ಮೊನ್ನೆವರೆಗೂ ಮನೆಯೇ‌ *ಮಂತ್ರಾಲಯ* .🙏🏻
ನೆನ್ನೆಯಿಂದ‌ ಮನೆಯೇ *ಮದ್ಯಾಲಯ* .🍺🍻

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-98*🍃

ಅವಳು ಬದಲಾದರೂ, ಅವಳ ನೆನಪುಗಳು ಹಾಗೇ ಉಳಿದವು.

Monday 4 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 *ಒಂದೇ‌* ದಿನದಲ್ಲಿ‌ ಗೆಲುವು ಸಿಗೋಲ್ಲ...
ಆದರೆ ಸತತ ಪರಿಶ್ರಮದಿಂದ
*ಒಂದು* ದಿನ ಗೆಲುವು ಸಿಕ್ಕೇ ಸಿಗುತ್ತೆ...

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-97*🍃
ಯಾವ  ಕವಿಯು  ಬರೆಯಲಾರ
ಒಲವಿನಿಂದ , ಕಣ್ಣೋಟದಿಂದ
ಹೃದಯದಲ್ಲಿ  ನೀ  ಬರೆದ  ಈ  ಪ್ರೇಮ  ಗೀತೆಯ...

Sunday 3 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಮನಸುಗಳ ಮಧ್ಯೆ ಸಾಮಾಜಿಕ ಅಂತರ ಬೇಡ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-96*🍃

ದುಡ್ಡು ಅವನನ್ನು ತಿನ್ನಲು ಶುರು ಮಾಡಿತು.

Saturday 2 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

ಕಷ್ಟ ಎನ್ನುವುದು ಇಷ್ಟ ಯಾಕಾಗಬಾರದು?

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-95*🍃


*ಆತ* ನಿಂದಲೇ ಈಗ ಅವಳಿಗೆ *ಆತಂಕ*.

Friday 1 May 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ತಾಳ್ಮೆ ಇದ್ದರೆ ಕೋಪ ಬರೋಲ್ಲ.
ಕೋಪ ಬಂದರೆ ತಾಳ್ಮೆ ಇರೋಲ್ಲ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-94*🍃

ಅವಳು ಖುಷಿಯಾಗಿದ್ದಳು.ಆದರೆ ಅವನಲ್ಲ.


Thursday 30 April 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಜೀವನದಲ್ಲಿ ಇರುವುದು ಎರಡು ದಿನ.
ಒಂದು ನಿನ್ನ ಪರವಾದ ದಿನ...
ಮತ್ತೊಂದು ನಿನ್ನ ವಿರುದ್ದವಾದ ದಿನ...
ಪರವಾದ ದಿನದಲ್ಲಿ ಅಹಂಕಾರ ತೋರಿಸ ಬೇಡ.
ವಿರುದ್ದವಾದ ದಿನದಲ್ಲಿ ತಾಳ್ಮೆ ಕಳೆದು ಕೊಳ್ಳ ಬೇಡ..

✍ ಎಲ್.ನಾಗರಾಜ್.
ಗಣಿತ ಉಪನ್ಯಾಸಕರು.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-93*🍃
*ಲಾಕ್ ಡೌನ್*
ಅವರಿಬ್ಬರು Mall ಗೆ ಹೋಗಲಿಲ್ಲ.
Film ಗೂ ಹೋಗಲಿಲ್ಲ.

Wednesday 29 April 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನಾವು ನಿದ್ರೆ ಮಾಡುವುದನ್ನು ನಾವೇ ನೋಡೋಲ್ಲ.😄

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-92*🍃
*ಲಾಕ್ ಡೌನ್*
ಅವರಿಬ್ಬರೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುವಂತೆ ಮಾಡಿತು.

Tuesday 28 April 2020


🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-91*🍃
*ಅಸುರ* ನಾಗಿದ್ದವನು *ಸುರ* ನಾದನು.ಪರಿಸ್ಥಿತಿಗಳಿಂದ.

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 *APRIL*

A- All
P- People
R- Rest
I- In
L-Lockdown...
😊😊

Monday 27 April 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕರಿಬಂಡೆಯ ಮೇಲಿನ ಕಪ್ಪು ಕೊಳೆ ತೆಗೆಯಬಹುದೇ ಹೊರತು, ಬಂಡೆಯ ಬಣ್ಣವನ್ನಲ್ಲ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-90*🍃

ಸುರನಾಗಿದ್ದವನು ಅಸುರನಾದನು.ಪರಿಸ್ಥಿತಿಗಳಿಂದ.

Sunday 26 April 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನಾವೆಲ್ಲರೂ *ಬಸವಣ್ಣ* ರವರ ವಚನಗಳನ್ನು ಸರಿಯಾಗಿ ಪಾಲಿಸಿದ್ರೆ, ನಮ್ಮ ಜೀವನದಲ್ಲಿ ನಮಗೆ ಬೇಕಾದ್ದೆಲ್ಲವೂ *ಅಕ್ಷಯ* ವಾಗುವುದರಲ್ಲಿ ಅನುಮಾನವಿಲ್ಲ.😊

*ಎಲ್ಲರಿಗೂ ಬಸವಜಯಂತಿ ಹಾಗೂ ಅಕ್ಷಯ ತೃತೀಯ ದ ಶುಭಾಶಯಗಳು*
🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-89*🍃

 ಅವಳು ರಾತ್ರಿ ಕನಸಲ್ಲಿ ಬಂದಳು ಅಂತ ಅವನು ಹಗಲೆಲ್ಲಾ ಅವಳಿಗಾಗಿ ಕಾಯುತ್ತಾ ಕುಳಿತನು.😊

Saturday 25 April 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

*ಅರ್ಥಾನಾಮರ್ಜನಂ ಕಾರ್ಯಂ ವರ್ಧನಂ ರಕ್ಷಣಂ ತಥಾ |*
*ಭಕ್ಷ್ಯ ಮಾಣೋ ನಿರಾದಾಯಃ ಸುಮೇರುರಪಿ ಹೀಯತೇ ||*


ಹಣ ಸಂಪಾದಿಸಬೇಕು. ಅಷ್ಟೇ ಅಲ್ಲ, ಬೆಳೆಸಬೇಕು ಮತ್ತು ಕಾಪಾಡಬೇಕು. ಆದಾಯವಿಲ್ಲದೆ ತಿಂದುಹಾಕುತ್ತಿದ್ದರೆ ಮೇರು ಪರ್ವತವೂ ಕರಗಿಹೋಗುತ್ತದೆ.

- ಸುಭಾಷಿತರತ್ನಭಾಂಡಾಗಾರ
🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-88*🍃

 ಯಾವ ಹೂವು ಯಾರ ಮುಡಿಗೊ.😊


Friday 24 April 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


*ಕಿಂ ವಾಸಸೈವಂ ನ ವಿಚಾರಣೀಯಂ ವಾಸಃ ಪ್ರಧಾನಂ ಖಲು ಯೋಗ್ಯತಾಯಾಃ |*
*ಪೀತಾಂಬರಂ ವೀಕ್ಷ್ಯ ದದೌ ತನೂಜಾಂ ದಿಗಂಬರಂ ವೀಕ್ಷ್ಯ ವಿಷಂ ಸಮುದ್ರಃ ||*

ಯಾವ ಬಟ್ಟೆ ಹಾಕಿಕೊಂಡರೇನು ಎಂದು ವಿಮರ್ಶಿಸಬಾರದು. ಬಟ್ಟೆಯು ಮಾನವನ ಯೋಗ್ಯತೆಯನ್ನು ನಿರ್ಣಯಿಸುತ್ತದೆ. ಪೀತಾಂಬರನಾದ ವಿಷ್ಣುವಿಗೆ ಸಮುದ್ರರಾಜನು ಮಗಳನ್ನು ಕೊಟ್ಟನು. ದಿಗಂಬರನಾದ ಶಿವನಿಗೆ ವಿಷವನ್ನು ಕೊಟ್ಟನು.

-ಸುಭಾಷಿತ

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-87*🍃

ಅವಳು ಮೋಸ ಮಾಡಿದರೂ, ಅವಳ ನೆನಪುಗಳು ಮೋಸ ಮಾಡಲಿಲ್ಲ

Thursday 23 April 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನಮ್ಮ ಬಳಿ ಎಷ್ಟು ಪುಸ್ತಕ  ಇದೆ ಅನ್ನೋದು ಮುಖ್ಯ ಅಲ್ಲ. ಎಷ್ಟು ಪುಸ್ತಕ ಓದಿ,‌ಜೀವನದಲ್ಲಿ ಏನು ಅಳವಡಿಸಿ ಕೊಂಡಿದ್ದೀವಿ ಅನ್ನೋದು ಮುಖ್ಯ.😊

 *ವಿಶ್ವ ಪುಸ್ತಕ ದಿನದ ಶುಭಾಶಯಗಳು* 🙏🏻😊

Wednesday 22 April 2020


🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-86*🍃


ಅವಳು ಅವನ ಮನಸಿನ ಪುಸ್ತಕ ಓದಲೇ ಇಲ್ಲ.


🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-85*🍃
ಅವನು ಅವಳ ಲಿಸ್ಟ್ ನಲ್ಲಿ Block  ಆಗಿದ್ದ.ಆದರೆ ಅವಳ ತಲೆಯಲ್ಲಿ ಅಲ್ಲ.

Tuesday 21 April 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


*ಆಪತ್ಕಾಲೇ ತು ಸಂಪ್ರಾಪ್ತೇ ಶೌಚಾಚಾರಂ ನ ಚಿಂತಯೇತ್ | ಸ್ವಯಂ ಸಮುದ್ಧರೇತ್ ಪಶ್ಚಾತ್ ಸ್ವಸ್ಥೋ ಧರ್ಮಂ ಸಮಾಚರೇತ್ ||*


ಕಷ್ಟಕಾಲ ಬಂದಾಗ ಶೌಚ ಆಚಾರಗಳನ್ನು ಚಿಂತಿಸಬಾರದು. ಮೊದಲು ತನ್ನನ್ನು ತಾನು ಕಾಪಾಡಿಕೊಂಡು ಆಮೇಲೆ ಧರ್ಮಾಚರಣೆ ಮಾಡಬಹುದು.

-ಪರಾಶರಸ್ಮೃತಿ

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-84*🍃
*ಜೀವನ*
ಮಂಜುಗಡ್ಡೆಯೂ ಆಗಬಾರದು. ಆವಿಯೂ ಆಗಬಾರದು.

Monday 20 April 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಭಾವನೆಗಳೂ ಮನದಲ್ಲಿ ಕ್ವಾರಂಟೈನ್ ಆಗಿವೆ😊

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-83*🍃
ಅವನ ಮೌನದಲ್ಲಿಯೂ ಅವಳದೇ ಧ್ಯಾನ.

Sunday 19 April 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



 *PASSWORD*
 ಕೆಲವರಿಗೆ ಹಲವು ನೆನಪುಗಳನ್ನು ಕೊಡುತ್ತದೆ.😊

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-82*🍃
ತಂದೆ ತಾಯಿಗೆ ಅವಳು ಮಗಳು, ಆದರೆ ಅವನಿಗೆ ಅವಳೇ ಪ್ರಪಂಚ.

Saturday 18 April 2020

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-80*🍃


ಕೊರೋನಾ ಎಫ಼ೆಕ್ಟ್.
ಅವಳಲ್ಲಿ......
ಇವನಿಲ್ಲಿ.....
ಮಾತಿಲ್ಲ....
ಕಥೆಯಿಲ್ಲ......

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಯಾವುದೋ ಕಾರಣದಿಂದಲೇ ಸ್ನೇಹವುಂಟಾಗುತ್ತದೆ. ಅಂಥ ಯಾವುದೋ ಕಾರಣದಿಂದಲೇ ಶತ್ರುತ್ವವುಂಟಾಗುತ್ತದೆ. ಆದುದರಿಂದ ಬುದ್ದಿವಂತನಾದವನು ಸ್ನೇಹವನ್ನೇ ಇಲ್ಲಿ ಸಾಧಿಸಬೇಕು; ದ್ವೇಷವನ್ನಲ್ಲ.

-ಸುಭಾಷಿತ
🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-81*🍃

 ಕೋಪ, ಅವರಿಬ್ಬರ ಪ್ರೀತಿಯನ್ನು ನುಂಗಿಹಾಕಿತು.

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 ಯಾರು ವಿಷಯವನ್ನು ಅಥವಾ ಮಾಡಬೇಕಾದ ಕೆಲಸವನ್ನು ಚೆನ್ನಾಗಿ ತಿಳಿಯದೆ ಮಾತನಾಡುತ್ತಾನೋ ಅವನು ಎಷ್ಟೇ ಉತ್ತಮ ಮಾತುಗಾರನಾಗಿರಲಿ ಅವನ ಮಾತು ವ್ಯರ್ಥ.

Saturday 28 March 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 *ಕೊರೋನಾಗು*
 ಸಿಗಬಹುದು ಔಷಧಿ...

ಆದರೆ

 *ಕೊರಗುವವನಿಗೆ*
ಸಿಗುವುದೇ ಔಷಧಿ???

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-78*🍃
ಜಗತ್ತಿನ ಕಣ್ಣಿಗೆ ಅವರಿಬ್ಬರೂ ಹುಚ್ಚರೇ.

Friday 27 March 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಮಹಾಭಾರತ ದಲ್ಲಿ
*ಆ 18 ದಿನಗಳು*
ಮುಂದಿನ ನಮ್ಮ ಜೀವನದಲ್ಲಿ
*ಆ 21 ದಿನಗಳು*......😊😀

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-77*🍃
ಅವರಿಬ್ಬರ ಪ್ರೀತಿ ಎಲ್ಲಿ ಹೇಗೆ ಪ್ರಾರಂಭವಾಯಿತೋ, ಅಲ್ಲಿ ಹಾಗೆಯೇ ಮುಕ್ತಾಯವಾಯಿತು.

Thursday 26 March 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನಿನ್ನನ್ನು ನೀನು ಹುಡುಕಿಕೊ, ಉಳಿದಿದ್ದಕ್ಕೆ Google ಇದೆ.
🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-76*🍃

ಅವರಿಬ್ಬರೂ ತಮ್ಮ‌ ಪ್ರೀತಿಗಾಗಿ , ತಮ್ಮ ಪ್ರೀತಿಯನ್ನೇ ಬಿಟ್ಟರು.

shorturl.at/fiF27

Wednesday 25 March 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನಮ್ಮೊಳಗೆ ಹುಟ್ಟುವ ಅಸಂಖ್ಯ ತಾಕಲಾಟಗಳಿಗೆ ನಮ್ಮೊಳಗೇ ಸಿಕ್ಕುವ ಉತ್ತರ....ಮೌನ.

🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-75*🍃
ಈಗ ಅವನು,
ಮನೆಯಲಿ, ಜೊತೆಯಲಿ.

 ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು