Sunday 1 November 2020

ಕನ್ನಡ ರಾಜ್ಯೋ(ಗಣಿತೋ)ತ್ಸವ

 

 ಆತ್ಮೀಯರೇ, ಬಹಳ ದಿನಗಳಿಂದ 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃....ಕಳಿಸ್ತಾ ಇದ್ದೇನೆ....ನಿಮಗೆ ಇಷ್ಟ ಆಗದೇ ಕಷ್ಟವಾದರೂ...ನೀವು ಓದದೇ ಇದ್ದರೂ ಮೆಸೇಜ್ ಮಾತ್ರ ನಿಮ್ಮ  ಮೊಬೈಲ್‌ ಲ್ಲಿ ಬಂದು ಕುಳಿತಿರುತ್ತದೆ ..😊😊

ಹಾಗೆಯೇ ಒಂದೆರಡು ತಿಂಗಳು,  🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃 ಜೊತೆಗೆ  🌱 *ಕವ‌ನ* 🔗 *(ಅ)ಗಣಿತ*❗ಎಂಬ ಶೀರ್ಷಿಕೆ ಯಡಿಯಲ್ಲಿ ನಮ್ಮ ಕನ್ನಡ ಕವಿಗಳ  ಕವನ ಗಳಲ್ಲಿ ಗಣಿತ ( ಗಣಿತ ಪದಗಳು) ವನ್ನು ಉಪಯೋಗಿಸಿರುವ ಕವನಗಳನ್ನು ಕಳಿಸುವ ಒಂದು ಪ್ರಯತ್ನ ಪಟ್ಟೆ. ಇಷ್ಟ ಪಟ್ಟರೋ ಇಲ್ಲವೋ ಗೊತ್ತಿಲ್ಲ. *ಕವ‌ನ* 🔗 *(ಅ)ಗಣಿತ*❗ ಎಂದರೆ, ಕವನ ದಲ್ಲಿ ಗಣಿತ ಅಂತ...ಹಾಗೆಯೇ ಕವನ ಅಗಣಿತ ಎಂದರೆ, ಆ ಕವನದ ಅರ್ಥ ಅಗಣಿತ, ಅಂದರೆ ಕವನವನ್ನು ಅರ್ಥ ಮಾಡಿಕೊಳ್ಳುವುದು ಅವರವರ ಭಾವಕ್ಕೆ ಎನ್ನುವುದು .. ನನ್ನ ಉದ್ದೇಶವಾಗಿತ್ತು..

ನಂತರದ ದಿನಗಳಲ್ಲಿ, 🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-* ಈ ಶೀರ್ಷಿಕೆ ಯಡಿಯಲ್ಲಿ ಗಣಿತದ ಬಗ್ಗೆ ಹಲವು ಗಣಿತಜ್ಞರ ಮಾತುಗಳು ಮತ್ತು ಅಭಿಪ್ರಾಯ ಗಳನ್ನು  ಕಳಿಸಿದ್ದೆ.. *ದಿನಕ್ಕೊಂದು  ಸಿ(ಕ)ಹಿ MATHS ಮಾತು-* *150* ದಿನ ಕಳಿಸಿದ್ದೆ ಅನ್ನವುದು ಸ್ವಲ್ಪ  ಖುಷಿಯೇ. 
ಹಾಗೆಯೇ,  🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-*🍃 concept ಪ್ರಾರಂಭಿಸಿ, ಸುಮಾರು 137 ದಿನ ಕಳಿಸಿದೆ. 
ಇವೆಲ್ಲವೂ ನಿಮಗೆ ಇಷ್ಟ ಆಯ್ತೋ ಇಲ್ವೋ ಗೊತ್ತಿಲ್ಲ, ಆದರೆ  🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃 ಮಾತ್ರ ಸತತವಾಗಿ ಕಳಿಸುತ್ತಲೇ ಇರುವೆ.

ಇಂದಿನಿಂದ  💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ* 💛❤️  ಎಂಬ ಶೀರ್ಷಿಕೆಯಡಿಯಲ್ಲಿ, ಕನ್ನಡ ರಾಜ್ಯೋತ್ಸವ ದ ಪ್ರಯುಕ್ತ ಗಣಿತ ಪದಗಳು ಇರುವ ಕನ್ನಡ ಕವನಗಳನ್ನು ಕಳಿಸುವ ಪ್ರಯತ್ನ. ಇದು ಈ ನವೆಂಬರ್ ತಿಂಗಳ 30 ದಿನಗಳಲ್ಲೂ ಕಳಿಸಲು ಪ್ರಯತ್ನಿಸುವೆ. ಗಣಿತ ಪದಗಳು ಇರುವ ಕನ್ನಡ ಕವನಗಳು ನಾನು ಖಂಡಿತ ಬರೆದಿರುವುದಲ್ಲ. ಅಂತರ್ಜಾಲದಲ್ಲಿ ಹಾಗೂ ಕೆಲವು ಪುಸ್ತಕದಲ್ಲಿ ಓದಿರುವುದನ್ನು ನಿಮ್ಮ ಮುಂದೆ ಇಡಲು ಪ್ರಯತ್ನ ಅಷ್ಟೇ. *ನೀವೂ ಸಹ ಗಣಿತ ಪದಗಳನ್ನು ಬಳಸಿ ಕವನ ರಚಿಸಿ ಕಳಿಸಿದರೆ ಖುಷಿಯಿಂದ ಅದನ್ನು ಬಳಸಿಕೊಳ್ಳುವೆ* .



💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧*💛❤️



ಗಣೇಶನೇ,

ಗಣಿತಪ್ರಾಜ್ಞಾಯ ನಮಃ

ಗಣಿತಾಗಮಸಾರವಿದೇ ನಮಃ

ಗಣಿತಾಯ ನಮಃ

ಗಣಿತಾಗಮಾಯ ನಮಃ..


ಗಣಗಳ ಅಧಿಪತಿ ಗಣೇಶ.

ವಿಜ್ಞಾನದ ರಾಣಿ ಗಣಿತ.

ಸಕಲ ಕಾರ್ಯ ನಿರ್ವಿಘ್ನ ಗಣೇಶ ಒಲಿದರೆ.

ಸಕಲ ಜ್ಞಾನ ಕೈವಶ ಗಣಿತ ಒಲಿದರೆ.❤️💛😊



No comments:

Post a Comment

 ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು