Friday 20 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ದೀಪವೊಂದು ಹಚ್ಚಬೇಕು 

ಲೋಕ ಬೆಳಗಲಲ್ಲ...

ಕತ್ತಲಲ್ಲೂ ಕಂಗಾಲಾಗದೆ

ಖುಷಿಯಾಗಿ ಕಾಲ ಕಳೆಯಲು..

ಇರುಳಿನಲ್ಲೂ ಬದುಕಿಹೆವೆಂದು

ಜಗಕೆ ತೋರಲು....

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨೦*💛❤️

          

ಕೆಲವರು ಗಣಿತವನ್ನು ಪ್ರೀತಿಸಿದರೂ, 

ಗಣಿತ ಅವರನ್ನು ಪ್ರೀತಿಸುವುದಿಲ್ಲ...😊😀😊

Thursday 19 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಮನೆಗಾಗಿ ಬದುಕನ್ನೇ ಅಡವಿಟ್ಟು

ನಮ್ಮವರಿಗಾಗಿ ಖುಷಿಯನ್ನೆಲ್ಲಾ ಬದಿಗಿಟ್ಟು

ಸೆಟ್ಲಾಗೋದಕ್ಕಾಗಿ ಕನಸಿಗೆಲ್ಲಾ ಕಿಡಿಯಿಟ್ಟು

ಸಂಪಾದನೆಗಾಗಿ ಆಸೆಗಳಿಗೆಲ್ಲಾ ಮಣ್ ಕೊಟ್ಟು

ಸಂಜೆ ಮೂಲೆಯಲಿ ಕೂತು

ಜೀವನ ಯಾಕೆ ಇಂಗಾಯ್ತು ಅಂತ

ತಲೆಗೆ ಕೈ ಕೊಟ್ಟು ತೀರ್ಥ ಬಿಟ್ಟು

ಬದುಕೋ ಪ್ರತಿ ಗಂಡಸಿಗೂ

*ಪುರುಷರ ದಿನಾಚರಣೆಯ ಶುಭಾಶಯಗಳು*😊😊

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧೯*💛❤️

 

          

ಕಾಣುವ ಮನಸ್ಸಿದ್ದರೆ, ಎಲ್ಲೆಡೆಯೂ ಗಣಿತ‌ ಕಾಣುವುದು...😊😀😊

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧೮*💛❤️

 ಅವಳು,

ಕೂಡಿ, ಕಳೆದು, ಏನನ್ನೋ ಗುಣಿಸಿ ಬದುಕ ಭಾಗಿಸುತಿಹಳು...

ಭಾಧಿಸುತಿಹಳು...😊😊

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧೭*💛❤️

 

ಜೀವನವೆಂಬ 

ಕೂಡಿಕಳೆಯುವ ಆಟವನ್ನು ಕೂಡಿ, ಕಳೆಯೋಣ...

Monday 16 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಪ್ರತಿ ಗೆಲುವೂ ಒಂದೊಂದು ಬಲಿ ಕೇಳುತ್ತದೆ. 

*ನಮ್ಮ ನಿದ್ದೆ, ಆಟ, ಹರಟೆ, ತಿರುಗಾಟ, ಬರ್ತಡೇ, ಹಾಲಿಡೇ, ಲವ್,.....* 

ಒಂದೊಂದಾಗಿ ಬಲಿ ಕೊಡುತ್ತಾ ಬನ್ನಿ, ಗೆಲುವು ಹತ್ತಿರವಾಗುತ್ತಾ ಬರುತ್ತದೆ...😊

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧೬*💛❤️


ಪ್ರಕೃತಿಯಲ್ಲಿ ಎಲ್ಲವೂ ಪರಸ್ಪರ ಗಣಿತದ 2=2 ಎಂಬಂತೆ ಸರಿಸಮವಲ್ಲ. ಆದರೆ, ಹೇಗೆ ಗಣಿತದ ಪರಿಪೂರ್ಣತೆಗ 0 ಯಿಂದ ಹಿಡಿದು 1,2,3...ಮುಂತಾದ ಧನಾತ್ಮಕ ಹಾಗೂ -1,-2,-3...ಮುಂತಾದ ಋಣಾತ್ಮಕ, ಭಿನ್ನರಾಶಿ, ದಶಮಾಂಶ, ವರ್ಗಮೂಲ ಮುಂತಾದ ಅನಂತದವರೆಗಿನ ಅಂಕೆ-ಸಂಖ್ಯೆಗಳು ಅಗತ್ಯವೋ, ಹಾಗೆಯೇ *ಸೃಷ್ಟಿಯ ಹಾಗೂ ನಮ್ಮ ಬದುಕಿನ ಪರಿಪೂರ್ಣತೆಗೆ* ಧನಾತ್ಮಕ ಸಜ್ಜನರು, ಗೆಲುವುಗಳು, ಋಣಾತ್ಮಕ ದುರ್ಜನರು, ಸೋಲುಗಳು, ಭಿನ್ನರಾಶಿಗಳಂಥ ಭಿನ್ನ ಭಿನ್ನ ತೆರನಾದ ವೃತ್ತಿ-ಪ್ರವೃತ್ತಿ, ಮನೋಧರ್ಮಗಳಿರುವ ಮಂದಿ, ದಶಮಾಂಶಗಳಂಥ ಅಪರೂಪಕ್ಕೆ ಬೇಕಾಗುವ ಮಂದಿ, ಪೂರ್ಣಾಂಕಗಳಂಥ ಸದಾ ಬೇಕಾದವರು ....ಇವರೆಲ್ಲರ ಅವಶ್ಯಕತೆ ಇದೆ.....😊

Sunday 15 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕಾಯುವವನು ಸುಸ್ತಾಗಬಾರದು,

ಯಾವತ್ತೋ ಒಂದು ದಿನ ಇದ್ದಕ್ಕಿದಂತೆ ಒಳ್ಳೆಯದಾಗಿ ಬಿಡುತ್ತದೆ ಮತ್ತೆ ಅದು ಸಾವಿರ ಕೇಡುಗಳನ್ನು ಸರಿಮಾಡಿಬಿಡುತ್ತದೆ.


-ರವಿಬೆಳಗೆರೆ.

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧೫*💛❤️

          

ಗಣಿತದ ಎಲ್ಲಾ ಲೆಕ್ಕಗಳಿಗೂ ಮತ್ತು ಅವಳ ಎಲ್ಲಾ ಸಮಸ್ಯೆಗಳಿಗೂ ಯಾವಾಗಲೂ ಒಂದೇ Formula ಉಪಯೋಗಿಸಲು ಆಗೋಲ್ಲ...😊😊

Saturday 14 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಸಾಗುತಿದೆ ಸಮಯವು ಮತ್ತೊಮ್ಮೆ ಬರದಂತೆ

ಸವೆಯುತಿದೆ ಆಯುಸ್ಸು ವರುಷಗಳು ಕಳೆದಂತೆ

ಸವೆದು ಹೋಗುವ ಮುನ್ನ, ಜೀವ ಹೋಗುವ ಮುನ್ನ

ಮಾಡಿ ಮುಗಿಸಲೇ ಬೇಕು, ಅಂದುಕೊಂಡದ್ದೆಲ್ಲವನ್ನ...

ಅದಕ್ಕೆ ದಾರಿ ನೋಡಿಸಲಿ ಈ ದೀಪಾವಳಿಯ ದೀಪ...


*ಎಲ್ಲರಿಗೂ ದೀಪಾವಳಿ ಯ ಹಾರ್ದಿಕ ಶುಭಾಶಯಗಳು*

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧೪*💛❤️


        

ಅವನೊಂದು ವೃತ್ತ..

ಅವಳು ಅದರ ಕೇಂದ್ರ ಬಿಂದು..

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧೩*💛❤️

 

          

ಸೊನ್ನೆ ನಿನಗೆ ಬೆಲೆಯೆ ಇಲ್ಲ ಎಂದು ಬರಿದೆ ಬೈವರೆಲ್ಲ ।

ನಿನ್ನ ಹಿಂದೆ ‘ಒಂದು ‘ ನಿಲ್ಲಲು ನಿನಗೆ ಬೆಲೆಯು ಬರುವುದು ।

‘ಒಂದು’ ಬೆಂಬಲವಿರೆ ಸೊನ್ನೆ ಕೋಟಿಗಳನು ತರುವುದು ।


-ಕುವೆಂಪು.

Thursday 12 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಅಹಂಕಾರ ಬಿಟ್ಟರೆ ಎಲ್ಲರಿಂದಲೂ ಸಿಗುವುದು ಸಹಕಾರ...😊

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧೨*💛❤️


         

ಅವಳೊಂದು ಕನ್ನಡ ಶಬ್ದ

ನಾನೊಂದು ಗಣಿತದ ಲೆಕ್ಕ

ನನ್ನ ಉತ್ತರ ಒಂದೇ,

ಆದರೆ ಅವಳ ಅರ್ಥ ಸಾವಿರಾರು..

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕನಸುಗಳ ಕಾಣಬೇಕು

ನನಸಾಗಿಸಿಕೊಳ್ಳುವುದಕ್ಕಲ್ಲ..

ಬೇಸರಿಸದೆ ಜೀವನ ಪಯಣದಲ್ಲಿ

ದಿನವೂ ನಡೆಯಲು!

ಮನಸು ಮುದುಡದಂತೆ

ಮುದಗೊಳಿಸಿ ಮುನ್ನಡೆಯಲು!!

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧೧*💛❤️

      

ಅವಳೊಂದು ಕ್ಲಿಷ್ಟ ಸಮೀಕರಣ...

ಅವನು ಸರಳ ಕವನ...

Tuesday 10 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃 *ನ ಕರ್ಮಣಾ, ನ ಪ್ರಜಯಾ, ನ ಧನೇನ, ತ್ಯಾಗೇನೈಕೇ ಅಮೃತತ್ವ ಮಾನಷುಃ;*

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 *ನ ಕರ್ಮಣಾ, ನ ಪ್ರಜಯಾ, ನ ಧನೇನ, ತ್ಯಾಗೇನೈಕೇ ಅಮೃತತ್ವ ಮಾನಷುಃ;* 


ನಾವು ಮಾಡುವ ಕೆಲಸದಿಂದಲ್ಲ, ನಮ್ಮ ಹಿಂದೆ ಬರುವ ಜನರ ಗುಂಪಿನಿಂದಲ್ಲ ಅಥವಾ ನಾವು ಗಳಿಸಿದ ಸಂಪತ್ತಿನಿಂದಲ್ಲ, ತ್ಯಾಗದಿಂದ ಮಾತ್ರ ಅಮೃತತ್ವ ದೊರೆಯುತ್ತದೆ.


-ಉಪನಿಷತ್ತು.

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧೦*💛❤️

           

ಮನಸಿಟ್ಟು ಹಾಡದಿದ್ದರೆ,

ಯಾವ ಸಾಲೂ ಹಾಡಾಗುವುದಿಲ್ಲ..

ಮನಸ್ಸಿಟ್ಟು ಲೆಕ್ಕ ಮಾಡದಿದ್ದರೆ ,

 ಯಾವ ಲೆಕ್ಕಕ್ಕೂ ಉತ್ತರ ಸಿಗುವುದಿಲ್ಲ..

Monday 9 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 *ಉಸಿರು* 

ಮೌನವಾಗಿ ಕೊನೆಯತನಕ ನಮ್ಮ ಜೊತೆಗಿರುವ ಆಪ್ತ ಗೆಳೆಯ.😊

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೯*💛❤️


 ದೇವರು..

ಒಳಗಿನ ಕಣ್ಣಿಗೆ ಕಾಣುವಾತನು...

ಗಣಿತವೂ

ಒಳಗಿನ ಕಣ್ಣಿಗೆ ಕಾಣುವಂತದ್ದು...😊

Sunday 8 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


 *ಬಾಲ್ಯ* ....

ಮೈಮರೆತು ಆಡುವ ಸ್ವರ್ಗ

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೮*💛❤️


 ಎಲ್ಲಾ ಕವಿತೆಗಳೂ ಎಲ್ಲರಿಗೂ ಇಷ್ಟವಾಗೋಲ್ಲ....

ಎಲ್ಲಾ ಲೆಕ್ಕಗಳೂ ಎಲ್ಲರಿಗೂ ಅರ್ಥವಾಗೋಲ್ಲ....😄😄

Saturday 7 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ನಮ್ಮ ಮನಸ್ಸು ಕೂಡ ಉದ್ಯಾನವನ ...

ನಮ್ಮ ಎಷ್ಟೋ ಕನಸುಗಳ ಬೀಜಗಳನ್ನ ಇಲ್ಲಿ ಬಿತ್ತಿದ್ದೇವೆ..😊😊😊😀

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೭*💛❤️

         

ಒಂದು ಬಿಂದುವಿನಿಂದ ಪ್ರಾರಂಭವಾಗಿ ಅದೇ ಬಿಂದುವಿನಲ್ಲಿ ಕೊನೆಯಾಗುವುದು ವೃತ್ತ....

ನಮ್ಮ ಅಳುವಿನಿಂದ ಪ್ರಾರಂಭವಾಗಿ ಮತ್ತೊಬ್ಬರ ಅಳುವಿನೊಂದಿಗೆ ಕೊನೆಯಾಗುವುದು ಜೀವನ ವೃತ್ತಾಂತ..

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಯೌವ್ವನವೆಂದರೆ, 

ಅರಿವಿದ್ದೂ ಅರಿಯದ ಮಾಯೆ😀😀😀😀

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೬*💛❤️


           

                

ಅದೊಂದು ವಾಸ್ತವತೆಯ ಪ್ರಪಂಚ...

ಅದು ಅಂಕೆ- ಸಂಖ್ಯೆಗಳಿಂದಲೇ ಕಟ್ಟಲ್ಪಟ್ಟ ನಾಡು..‌.

ಊಹೆಗಳಿಂದಲೇ  ಉತ್ತರ ಪಡೆವ ಲೋಕ...

ಉತ್ತರಗಳನ್ನೇ ಓರೆಗೆ ಹಚ್ಚುವ ಸಾಮ್ರಾಜ್ಯ...

ತರ್ಕಗಳನ್ನೇ ತಕ್ಕಡಿಯಲ್ಲಿಟ್ಟು ಅಳೆದು-ತೂಗುವ ಸಂತೆ..

ಅದುವೇ *ಗಣಿತ* ದ ಗಣರಾಜ್ಯ...

ಅನಂತ, ಅಗಣಿತ ವಿಷಯ ಭಂಡಾರ...

Thursday 5 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಮಾತಿಗೆ ಮಾತು ಬೆಳೆಯಿತು...

ಅಲ್ಲಿಗೆ ಎಲ್ಲಾ ಮುಗಿಯಿತು....😀😔😊

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೫*💛❤️


           

                 ಗಣಿತವೆಂದರೆ 

          ಕಬ್ಬಿಣದ ಕಡಲೆಯಲ್ಲ....

                ಗಣಿತವೆಂದರೆ

                 ಒಂದು ಸರಳ ಕಾವ್ಯ.....

Wednesday 4 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಆನಂದವು ಸಿಗುವ ವಸ್ತುವಲ್ಲ. 

ಅದನ್ನು ಅನುಭವಿಸಬೇಕು😊😉😄

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೪*💛❤️

 


              ಗಣಿತವೆಂದರೆ 

               ಕೂಡು, ಕಳೆ ,

     ಗುಣಿಸು, ಭಾಗಿಸು ಎಂದಲ್ಲ...

           ಗಣಿತವೆಂದರೆ 

      ತಿಳುವಳಿಕೆ ಎಂದರ್ಥ....

          ಗಣಿತವೆಂದರೆ 

          ಕಬ್ಬಿಣದ ಕಡಲೆಯಲ್ಲ....

                ಗಣಿತವದು 

         ಬೆಣ್ಣೆಯಷ್ಟೇ ಮೃದು...

Tuesday 3 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



               ಬೇಡ ಎನಿಸಿದಾಗಲೆಲ್ಲ

                    ಬಿಚ್ಚಿಡುವುದಕ್ಕೆ

                ಬದುಕು ಶೂಗಳಲ್ಲ !

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೩*💛❤️


                 ಪ್ರೀತಿಯ ಕೂಡಿಸಿ

                  ಸಂದೇಹ ಕಳೆದು

                   ನಂಬಿಕೆ ಗುಣಿಸಿ

                ಅಹಂ ಭಾಗಿಸಿದಾಗ

                  ಬಂದ ಉತ್ತರವೇ

                          ಜೀವನ.

Monday 2 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕಾಣದಾ ಅಣುವೊಂದು ಭುವಿಯಲ್ಲಿ ಒಂದಾಗಿ

ಸಸಿಯಾಗಿ ಗಿಡವಾಗಿ ಹಿರಿದಾದ ಮರವಾಗಿ

ಹೂಬಿಟ್ಟು ಫಲವಿತ್ತು ನೆಳಲಿತ್ತು ಸಲಹುತಿವೆ

ನೆಳಲಿತ್ತು ಸಲಹುತಿವೆ ಬಿಸಿಗೆ ತಾವ್ ಎದುರಾಗಿ😊

💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೨*💛❤️



ಬದುಕೆಂಬ ಗಣಿತ


ಬದುಕೆಂದರೆ ಇಲ್ಲಿ...

ಅನುದಿನ.. ಅನುಕ್ಷಣ..


ಅನುಭವದ ಸಂಕಲನ

ಆಯಸ್ಸಿನ ವ್ಯವಕಲನ

ಅರಿವಿನ ಗುಣಾಕಾರ

ಕಾಲದ ಭಾಗಾಕಾರ


ಊಹಿಸಲಾಗದ ನೋವು

ನಲಿವುಗಳ ಅಂಕಗಣಿತ

ಅರ್ಥವಾಗದ ಅದೃಷ್ಟ

ದುರದೃಷ್ಟಗಳ ಬೀಜಗಣಿತ


ತಿಳಿಯಲಾಗದ ಹಣೆಬರಹ

ಅಂಗೈಗೆರೆಗಳ ರೇಖಾಗಣಿತ

ನಿತ್ಯ ಅನಿರೀಕ್ಷಿತ ಆಕಸ್ಮಿಕ

ಅತಿವಿಸ್ಮಯಗಳ ಅಗಣಿತ


ನಮಗೆಂದೂ ಬಿಡಿಸಲಾಗದ

ಅನೂಹ್ಯ ಸಮೀಕರಣ

ವಿಧಾತನ ಈ ಜೀವಗಣಿತ

ಅವನಿಗಷ್ಟೇ ಚಿರಪರಿಚಿತ😊


(ಕೃಪೆ- ಅಂತರ್ಜಾಲ)


Sunday 1 November 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ತಿರುವುಗಳಿರದ  ದಾರಿಯಲಿ    ಬೇಸರವಾಗುವುದು ಪಯಣ..

ತಿರುವುಗಳಿರದ  ಜೀವನದಲಿ  ರೋಚಕತೆಯಿರದು.. 

ಜೋಪಾನ.. 😊

ಕನ್ನಡ ರಾಜ್ಯೋ(ಗಣಿತೋ)ತ್ಸವ

 

 ಆತ್ಮೀಯರೇ, ಬಹಳ ದಿನಗಳಿಂದ 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃....ಕಳಿಸ್ತಾ ಇದ್ದೇನೆ....ನಿಮಗೆ ಇಷ್ಟ ಆಗದೇ ಕಷ್ಟವಾದರೂ...ನೀವು ಓದದೇ ಇದ್ದರೂ ಮೆಸೇಜ್ ಮಾತ್ರ ನಿಮ್ಮ  ಮೊಬೈಲ್‌ ಲ್ಲಿ ಬಂದು ಕುಳಿತಿರುತ್ತದೆ ..😊😊

ಹಾಗೆಯೇ ಒಂದೆರಡು ತಿಂಗಳು,  🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃 ಜೊತೆಗೆ  🌱 *ಕವ‌ನ* 🔗 *(ಅ)ಗಣಿತ*❗ಎಂಬ ಶೀರ್ಷಿಕೆ ಯಡಿಯಲ್ಲಿ ನಮ್ಮ ಕನ್ನಡ ಕವಿಗಳ  ಕವನ ಗಳಲ್ಲಿ ಗಣಿತ ( ಗಣಿತ ಪದಗಳು) ವನ್ನು ಉಪಯೋಗಿಸಿರುವ ಕವನಗಳನ್ನು ಕಳಿಸುವ ಒಂದು ಪ್ರಯತ್ನ ಪಟ್ಟೆ. ಇಷ್ಟ ಪಟ್ಟರೋ ಇಲ್ಲವೋ ಗೊತ್ತಿಲ್ಲ. *ಕವ‌ನ* 🔗 *(ಅ)ಗಣಿತ*❗ ಎಂದರೆ, ಕವನ ದಲ್ಲಿ ಗಣಿತ ಅಂತ...ಹಾಗೆಯೇ ಕವನ ಅಗಣಿತ ಎಂದರೆ, ಆ ಕವನದ ಅರ್ಥ ಅಗಣಿತ, ಅಂದರೆ ಕವನವನ್ನು ಅರ್ಥ ಮಾಡಿಕೊಳ್ಳುವುದು ಅವರವರ ಭಾವಕ್ಕೆ ಎನ್ನುವುದು .. ನನ್ನ ಉದ್ದೇಶವಾಗಿತ್ತು..

ನಂತರದ ದಿನಗಳಲ್ಲಿ, 🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-* ಈ ಶೀರ್ಷಿಕೆ ಯಡಿಯಲ್ಲಿ ಗಣಿತದ ಬಗ್ಗೆ ಹಲವು ಗಣಿತಜ್ಞರ ಮಾತುಗಳು ಮತ್ತು ಅಭಿಪ್ರಾಯ ಗಳನ್ನು  ಕಳಿಸಿದ್ದೆ.. *ದಿನಕ್ಕೊಂದು  ಸಿ(ಕ)ಹಿ MATHS ಮಾತು-* *150* ದಿನ ಕಳಿಸಿದ್ದೆ ಅನ್ನವುದು ಸ್ವಲ್ಪ  ಖುಷಿಯೇ. 
ಹಾಗೆಯೇ,  🍂 *ದಿನಕ್ಕೊಂದು ಸಿ(ಕ)ಹಿ ಸಣ್ಣ ಕಥೆ-*🍃 concept ಪ್ರಾರಂಭಿಸಿ, ಸುಮಾರು 137 ದಿನ ಕಳಿಸಿದೆ. 
ಇವೆಲ್ಲವೂ ನಿಮಗೆ ಇಷ್ಟ ಆಯ್ತೋ ಇಲ್ವೋ ಗೊತ್ತಿಲ್ಲ, ಆದರೆ  🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃 ಮಾತ್ರ ಸತತವಾಗಿ ಕಳಿಸುತ್ತಲೇ ಇರುವೆ.

ಇಂದಿನಿಂದ  💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ* 💛❤️  ಎಂಬ ಶೀರ್ಷಿಕೆಯಡಿಯಲ್ಲಿ, ಕನ್ನಡ ರಾಜ್ಯೋತ್ಸವ ದ ಪ್ರಯುಕ್ತ ಗಣಿತ ಪದಗಳು ಇರುವ ಕನ್ನಡ ಕವನಗಳನ್ನು ಕಳಿಸುವ ಪ್ರಯತ್ನ. ಇದು ಈ ನವೆಂಬರ್ ತಿಂಗಳ 30 ದಿನಗಳಲ್ಲೂ ಕಳಿಸಲು ಪ್ರಯತ್ನಿಸುವೆ. ಗಣಿತ ಪದಗಳು ಇರುವ ಕನ್ನಡ ಕವನಗಳು ನಾನು ಖಂಡಿತ ಬರೆದಿರುವುದಲ್ಲ. ಅಂತರ್ಜಾಲದಲ್ಲಿ ಹಾಗೂ ಕೆಲವು ಪುಸ್ತಕದಲ್ಲಿ ಓದಿರುವುದನ್ನು ನಿಮ್ಮ ಮುಂದೆ ಇಡಲು ಪ್ರಯತ್ನ ಅಷ್ಟೇ. *ನೀವೂ ಸಹ ಗಣಿತ ಪದಗಳನ್ನು ಬಳಸಿ ಕವನ ರಚಿಸಿ ಕಳಿಸಿದರೆ ಖುಷಿಯಿಂದ ಅದನ್ನು ಬಳಸಿಕೊಳ್ಳುವೆ* .



💛❤️ *ಕನ್ನಡ ರಾಜ್ಯೋ(ಗಣಿತೋ)ತ್ಸವ-೧*💛❤️



ಗಣೇಶನೇ,

ಗಣಿತಪ್ರಾಜ್ಞಾಯ ನಮಃ

ಗಣಿತಾಗಮಸಾರವಿದೇ ನಮಃ

ಗಣಿತಾಯ ನಮಃ

ಗಣಿತಾಗಮಾಯ ನಮಃ..


ಗಣಗಳ ಅಧಿಪತಿ ಗಣೇಶ.

ವಿಜ್ಞಾನದ ರಾಣಿ ಗಣಿತ.

ಸಕಲ ಕಾರ್ಯ ನಿರ್ವಿಘ್ನ ಗಣೇಶ ಒಲಿದರೆ.

ಸಕಲ ಜ್ಞಾನ ಕೈವಶ ಗಣಿತ ಒಲಿದರೆ.❤️💛😊



 ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು