Saturday 12 September 2020

🍂 *ದಿನಕ್ಕೊಂದು ಸಿ(ಕ)ಹಿ MATHS ಮಾತು*🍃 11 to 15

 🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-11*🍃


ಗಣಿತದ ಸಮಸ್ಯೆ ಇರಬಹುದು ಅಥವಾ  ಜೀವನದ ಸಮಸ್ಯೆಯೇ ಇರಬಹುದು , ಉತ್ತರವು ಸಮಸ್ಯೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದರಲ್ಲಿದೆ...😊


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-12*🍃

ಗಣಿತ ಹಲಸಿನ ಹಣ್ಣಿನ ರೀತಿ, ನಾವು ಹೊರಕವಚವನ್ನು ತೆಗೆದು, ತೊಳೆಗಳನ್ನು ಬಿಡಿಸಿ ತಿಂದರೇ ಎಷ್ಟು ರುಚಿ!! ಆದರೆ ಹೊರಕವಚವನ್ನೇ ಕಚ್ಚಿ ತಿನ್ನಲು ಹೋದರೆ!......😊ಗಣಿತ ಕಲಿಕೆಯಲ್ಲೂ ಹಾಗೆಯೇ...😊😊


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-13*🍃


ಗಣಿತದಲ್ಲಿ ಒಂದು ಲೆಕ್ಕವನ್ನು ಬಿಡಿಸುವಾಗ ಕೆಲವೊಮ್ಮೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕು... ಗಾಢವಾಗಿ ಆಲೋಚನೆ ಮಾಡಬೇಕು... So, ಗಣಿತ ತಾಳ್ಮೆಯನ್ನು ಕೇಳುತ್ತದೆ ಮತ್ತು ಕಲಿಸುತ್ತದೆ... 😊


🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-14*🍃


This is my trinity:

mathematics,

music,

meditation.

This is my trimurti –

three faces of God.


-Osho



🍂 *ದಿನಕ್ಕೊಂದು  ಸಿ(ಕ)ಹಿ MATHS ಮಾತು-15*🍃


 ಮನೆಯಲ್ಲಿ ಇಬ್ಬರು ಚಿಕ್ಕ ಮಕ್ಕಳಿದ್ದರೆ, ಅವರಿಗೆ ಎರಡು ಕಲ್ಲಂಗಡಿ ಹಣ್ಣಿನ ಚೂರುಗಳನ್ನು ಕತ್ತರಿಸಿ ಕೊಟ್ಟರೆ, ಇಬ್ಬರು ಮಕ್ಕಳೂ ಸಾಮಾನ್ಯವಾಗಿ ದೊಡ್ಡ ಚೂರನ್ನು ಪಡೆಯಲು ಹಟ ಮಾಡುತ್ತವೆಯಲ್ಲವೇ? ಹಾಗಾದರೆ ಅವರಿಗೆ ಭಿನ್ನರಾಶಿಗಳ ಬಗ್ಗೆ ಪಾಠ ಮಾಡಿದವರಾರು!


ಗಣಿತದ ಬಗ್ಗೆ ತಿಳಿವಳಿಕೆ ಮಕ್ಕಳಿಗೆ ಸಹಜವಾಗಿಯೇ ಅಂತರ್ಗತವಾಗಿರುತ್ತದೆ. ಹಾಗೆ ಸಹಜವಾಗಿರುವ ಗಣಿತದ ಆಲೋಚನೆಗಳಿಗೆ ನಿರ್ದಿಷ್ಟ ರೂಪವನ್ನು ಕೊಟ್ಟು ಅವರಲ್ಲಿ ಆಸಕ್ತಿಯನ್ನು ಮೂಡಿಸುವುದೇ ಸರಿಯಾದ ಕಲಿಕೆ.😊🙃

No comments:

Post a Comment

 ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು