Saturday 5 September 2020

ಗುರು..

ಅಕ್ಷರ ಕಲಿಸಿದೆ ಎಂಬ ಗರ್ವದಿಂದ ಆದವನಲ್ಲ ಗುರುವು

ನನ್ನ ಜ್ಞಾನ ನನಗೆ ಎಂಬ ಸ್ವಾರ್ಥದಿಂದ ಆದವನಲ್ಲ ಗುರುವು

ನನಗಿಂತ ಎತ್ತರಕ್ಕೆ ಹೋಗದಿರಲಿ ಎಂಬ ಕ್ರೂರ ಮನಸಿನಿಂದ  ಆದವನಲ್ಲ ಗುರುವು

ನನ್ನಿಂದಲೇ ನೀವೆಲ್ಲ ಬೆಳೆದಿದ್ದು ಎಂಬ ಅಹಂಕಾರದಿಂದ ಆದವನಲ್ಲ ಗುರುವು...


ಗುರು ಎಂದರೆ....


ನೀನು ಕಾಣದ ಹಾದಿಗೆ  ದೀಪವಾಗುವ 

ನಿನ್ನ ಸಾಗದ ದೋಣಿಗೆ  ಹುಟ್ಟಾಗುವ 

ನಿನ್ನಲ್ಲಿ ಇರುವ ಶಿಲೆಗೆ ಉಳಿಯ ಪೆಟ್ಟಾಗುವ

ನಿನ್ನ ಸಾಧನೆ ಹಾದಿಯಲ್ಲಿ ತಿಳಿಯದ ಗುಟ್ಟಾಗುವ

ನಿನ್ನ ಕಷ್ಟದಲ್ಲಿ  ಕೈ ಹಿಡಿದು ನಂಟನಾಗುವ

ನೀ ಎಡವಿದಾಗ ಎಚ್ಚರದ  ನಾದನಾಗುವ

ನೀ ಸಾಗುವ  ದಾರಿಯಲ್ಲಿ ಮುಗುಳು ನಗೆಯ ನೀಡುವ

ನಿನ್ನ ಗುರಿಯ ತೋರಿಸಿ  ತಲುಪು ಎಂದು ದೂರ ಸಾಗುವ

   


-ಲಕ್ಷ್ಮೀ ಶ್ರೀನಿವಾಸ್ (ಲಕ್ಷ್)

No comments:

Post a Comment

 ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು