Thursday 8 October 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಬದುಕಿನಲ್ಲಿ ಪ್ರತಿಯೊಬ್ಬರಿಗೂ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಇರಬೇಕು, ಮಹತ್ಕಾರ್ಯಗಳನ್ನು ಮಾಡಬೇಕೆನ್ನುವ ತುಡಿತ ಇರಬೇಕು. ಅದನ್ನು ಕನಸು, ಛಲ, ಸಾಹಸ ಸವಾಲು, ಗಮ್ಯ, ಗುರಿ ಹಾಗೂ ಏನೆಂದು ಬೇಕಾದರೂ ಕರೆಯಿರಿ. ನಮ್ಮ ಆಂತರಿಕ ಶಕ್ತಿಯನ್ನು ಬಡಿದೆಬ್ಬಿಸುವುದೇ ಈ ಸವಾಲುಗಳು. ಗುಡ್ಡ- ಗವಿಯಲ್ಲಿ ಗೆಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಿದ್ದ ಮಾನವನನ್ನು ಚಂದ್ರಲೋಕಕ್ಕೆ ಹೋಗುವಂತೆ ಮಾಡಿದ್ದು ಇದೇ ಸವಾಲುಗಳು. ಪ್ರತಿ ಸವಾಲುಗಳನ್ನು ಮೈಮೇಲೆ ಎಳೆದುಕೊಂಡಂತೆಲ್ಲಾ ನಮ್ಮಲ್ಲಿ ವಿಶ್ವಾಸ ಪುಟಿದೇಳುತ್ತದೆ. ಬದುಕನ್ನು ನೋಡುವ ದೃಷ್ಟಿಕೋನ ವಿಭಿನ್ನವಾಗಿರುತ್ತದೆ. ಕೊನೆಗೆ ಬದುಕೇ ಬದಲಾಗುತ್ತದೆ. ಅಂತೆಯೇ ಮಹೋನ್ನತ ಗುರಿಯನ್ನು ಮುಟ್ಟುವ ಪ್ರಕ್ರಿಯೆ ಸುಲಭವೇನಲ್ಲ. ಹಾಗೆಂದ ಮಾತ್ರಕ್ಕೆ ಮಾಡುವ ಕೆಲಸದಿಂದ ನಾವು ವಿಮುಖರಾಗಬೇಕಿಲ್ಲ. ಭರವಸೆ ಕಳೆದುಕೊಳ್ಳಬೇಕಾಗಿಲ್ಲ. ನಮ್ಮಲ್ಲಿ ಆತ್ಮಸ್ಥೈರ್ಯವೊಂದಿದ್ದರೆ ಜಗತ್ತಿನ ಯಾವ ಶಕ್ತಿಯೂ ನಮ್ಮನ್ನು ತಡೆಯಲಾಗದು. ಹಾಗಾಗಿ ಗುರಿ ಯೊಂದನ್ನು ಕಣ್ಮುಂದೆ ಇಟ್ಟುಕೊಂಡು ಸುಮ್ಮನೆ ಕೆಲಸ ಮಾಡುತ್ತಾ ಹೋಗಿ, ಯಶಸ್ಸು ಸದ್ದಿಲ್ಲದೇ ನಿಮ್ಮನ್ನು ಹಿಂಬಾಲಿಸುತ್ತದೆ. 

ಸದಾ ನಾನು ಎರಡು ರೀತಿಯ ಸವಾಲುಗಳನ್ನು ಬಿಗಿದಪ್ಪಿ ಕೊಳ್ಳುತ್ತೇನೆ. ಮೊದಲನೆಯದು ಮಾಡುವ ಕೆಲಸವನ್ನು ಉತ್ಕೃಷ್ಟ ಮಟ್ಟದಲ್ಲಿ ಮಾಡಿ ಮುಗಿಸುವುದು. ಎರಡನೆಯದು ಹೊಸ ಸಾಹಸಗಳಿಗೆ ಮೈ ಒಡ್ಡುವುದು. ಈ ಎರಡು ನನಗೆ ಅಪ್ಯಾಯಮಾನವಾದದ್ದೇ. ನಿತ್ಯ ಹೊಸ ಸವಾಲುಗಳನ್ನು ಎದುರಿಸುವುದು ನನ್ನ ಹುಟ್ಟು ಗುಣ, ಹೊಸ ಸಾಹಸಗಳನ್ನು ತಬ್ಬಿಕೊಳ್ಳುವುದೇ ನನ್ನ ಜಾಯಮಾನ. ಯಶಸ್ಸಿಗಾಗಿ ದಿಗಂತದೆಡೆಗೆ ಕೈಚಾಚುವುದೇ ನನ್ನ ಪ್ರವೃತ್ತಿ. ಅದೇ ನನಗೆ ಬದುಕು. ಬತ್ತದ ಚೈತನ್ಯದ ಚಿಲುಮೆ.



-ರಿಚರ್ಡ್ ಬ್ರಾನ್ಸನ್

2 comments:

 ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು