Friday 4 June 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಆಸೆ ಎಂಬ ಬಿಸಿಲು ಕುದುರೆ ಏಕೆ ಏರುವೆ,

ಮರಳು ಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ,

ಅವನ ನಿಯಮ ಮೀರಿ ಇಲ್ಲಿ ಏನೂ ಸಾಗದು,

 ನಾವು ನೆನೆಸಿದಂತೆ ಬಾಳಲೇನು ನಡೆಯದು,

ವಿಷಾದವಾಗಲಿ, ವಿನೋದವಾಗಲಿ ಅದೇನೆ ಆಗಲಿ ಅವನೆ ಕಾರಣ ....


ಚಿ|ಉದಯಶಂಕರ್.


ದ್ವಿತೀಯ ಪಿಯುಸಿ ಪರೀಕ್ಷೆ ಚೆನ್ನಾಗಿ ಬರೆಯಬೇಕು, 90+ ಅಂಕ ತೆಗೆದುಕೊಳ್ಳಬೇಕು ಎಂದು ಆಸೆ ಇಟ್ಟುಕೊಂಡು ವರುಷದ ಮೊದಲಿನಿಂದಲೇ ಪ್ರಯತ್ನ ಪಡುತ್ತಿದ್ದ ಹಾಗೂ  ನನ್ನ ಪ್ರಥಮ ಪಿಯು ಅಂಕ‌ ಕಡಿಮೆ‌ ಇದೆ,  ದ್ವಿತೀಯ ಪಿಯು ಪರೀಕ್ಷೆಯನ್ನು challenge ಆಗಿ ತೆಗೆದು ಕೊಂಡಿದ್ದೇನೆ 90+ % ತೆಗೆದುಕೊಂಡೇ ತೆಗೆದುಕೊಳ್ಳುತ್ತೇನೆ  ಅಂತ challenge mood ನಲ್ಲೇ ಓದುತ್ತಿದ್ದ  *ವಿದ್ಯಾರ್ಥಿಗಳಿಗೆ* , ಹಾಗೂ ನಮ್ಮ ವಿದ್ಯಾರ್ಥಿಗಳು ಪರೀಕ್ಷೆ ಚೆನ್ನಾಗಿ ಬರೆಯಬೇಕು , ಒಳ್ಳೆಯ ಅಂಕ ತೆಗೆದು ಕೊಂಡು ಕಾಲೇಜಿಗೆ ಹಾಗೂ ಪೋಷಕರಿಗೆ  ಒಳ್ಳೆಯ ಹೆಸರು ತರಬೇಕು ಎಂದು ತರಗತಿಗಳನ್ನು ಹಾಗೂ ಮುಖ್ಯವಾಗಿ ಯಾವ ರಜಾದಿನಗಳನ್ನು ಬಿಡದೆ, ಹಬ್ಬದ ದಿನಗಳೂ ಸಹ ವಿಶೇಷ ತರಗತಿಗಳನ್ನು ತೆಗೆದುಕೊಂಡು Syllabus ಮುಗಿಸಿ, ಕಿರುಪರೀಕ್ಷೆ, ಪರೀಕ್ಷೆಗಳನ್ನು ಮಾಡಿ , ಅಂಕಗಳ ಆಧಾರದ ಮೇಲೆ ಹೆಚ್ಚು ಅಂಕ ತೆಗೆದುಕೊಳ್ಳಲು ಸಾಧ್ಯವಿರುವ ವಿದ್ಯಾರ್ಥಿಗಳಿಗೆ ಹುರಿದುಂಬಿಸಿ, ಕಡಿಮೆ ಅಂಕಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳ ಕಷ್ಟಗಳನ್ನು ಕೇಳಿ ಅವರಿಗೆ ಸುಲಭವಾದ ರೀತಿಯಲ್ಲಿ ಮತ್ತೆ ಹೇಳಿಕೊಟ್ಟು , ನೀವೂ ಸಹ ಅತಿ ಹೆಚ್ಚು ಅಂಕ ತೆಗೆದು ಕೊಳ್ಳಲು ಸಾಧ್ಯವಾಗುತ್ತದೆ ಅಂತ ಅವರಿಗೆ confidence ಬರಿಸಿ, ಅನುತ್ತೀರ್ಣ ಆಗುವಂತಹ ವಿದ್ಯಾರ್ಥಿಗಳಿಗೆ ಮತ್ತೆ ವಿಶೇಷದಲ್ಲಿ ವಿಶೇಷ ತರಗತಿಗಳನ್ನು ತೆಗೆದುಕೊಂಡು ಅವರಿಗೂ ಸಹ ನೀವು ಕಡಿಮೆ‌ ಎಂದರೆ 50 ಅಂಕ ತೆಗೆದು ಕೊಳ್ಳಬಹುದು ಎಂದು ನಂಬಿಕೆ ಬರಿಸಿ , ನಾವೂ PASS ಆಗ್ತೀವಿ ಅನ್ನೊ ಆತ್ಮವಿಶ್ವಾಸ ಅವರಿಗೆ ಬರಿಸಿದಾಗಲೂ , ಅಯ್ಯೋ ಆ ವಿದ್ಯಾರ್ಥಿ ನನ್ನ Subject ನಲ್ಲಿ pass ಆಗ್ತಾನೋ ಇಲ್ವೋ ಎಂಬ ಭಯವನ್ನು ತಮ್ಮ‌ ಸಹೋದ್ಯೋಗಿ ಮಿತ್ರರೊಂದಿಗೆ ಹಂಚಿಕೊಳ್ಳುತ್ತಾ ,ಹೇಗಾದರೂ ಅವನನ್ನು pass ಮಾಡಿಸಲೇ ಬೇಕು ಅಂ‌ತ ಅವನ ಹಿಂದೆ ಬಿದ್ದು tension ತೆಗೆದುಕೊಂಡು ಓದಿಸಿದ, ಅದೇ ರೀತಿ ಈ ವಿದ್ಯಾರ್ಥಿ ಸ್ವಲ್ಪ efforts ಹಾಕಿದರೆ ನನ್ನ Subject ಲಿ 100ಕ್ಕೆ 100 ಅಂಕ ತೆಗೆದುಕೊಳ್ಳುತ್ತಾನೆ ಅಂತ ಆ ವಿದ್ಯಾರ್ಥಿಗೆ ಒಂದೇ ಒಂದೂ mark miss ಆಗಬಾರದು‌ ಅಂತ ಚಿಕ್ಕ ಚಿಕ್ಕ ಪ್ರಶ್ನೆಗಳನ್ನೂ ಅವರಿಗೆ ಹೇಳಿಕೊಟ್ಟು ಅಕಸ್ಮಾತ್ ನಾನು ಹೇಳಿಕೊಟ್ಟ ಪ್ರಶ್ನೆ ಬರದಿದ್ದರೆ ಎಂಬ ಅನುಮಾನದಲ್ಲಿ ಪದೇ ಪದೇ ಹಿಂದಿನ ವರುಷದ ಪ್ರಶ್ನೆಪತ್ರಿಕೆ, ಬೇರೆ ಬೇರೆ ಜಿಲ್ಲೆಯ ಪ್ರಶ್ನೆಪತ್ರಿಕೆ ನೋಡಿ, ಆಯಾ ವಿಷಯದಲ್ಲಿ ಅನುಭವ ಇರುವ ಹಿರಿಯ ಉಪನ್ಯಾಸಕರ ಬಳಿ ಪ್ರಶ್ನೆಗಳನ್ನು ಕೇಳಿ ಯದ್ವಾತದ್ವಾ tension ತಗೊಂಡು ಹೇಳಿಕೊಟ್ಟಿರುವ ಎಲ್ಲಾ *ಉಪನ್ಯಾಸಕರಿಗೂ* ಈ ದಿನದ 

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃 ಅರ್ಪಿಸುತ್ತಿದ್ದೇನೆ...


ಎಲ್ಲ ವಿದ್ಯಾರ್ಥಿಗಳು ಪಾಸಾಗಿದ್ದಾರೆ ಆದರೆ ಉಪನ್ಯಾಸಕರಿಗೆ ನಿಜವಾದ  ಖುಷಿ ಸಿಕ್ಕಿಲ್ಲ. ಪರಿಸ್ಥಿತಿಗೆ ತಕ್ಕ ಹಾಗೆ ತೆಗೆದುಕೊಂಡಿರುವ ನಿರ್ಧಾರಗಳನ್ನು ಗೌರವಿಸಲೇ ಬೇಕು. ಎಲ್ಲಾ ವಿದ್ಯಾರ್ಥಿಗಳಿಗೂ ಒಳ್ಳೆಯದಾಗಲಿ, ಮುಂದಿನ ಜೀವನ ಸುಖಮಯವಾಗಿರಲಿ ಎಂದು ಆಶಿಸುತ್ತಾ….

 *ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು*. ಎಂಬ ಆಶಾಭಾವನೆಯೊಂದಿಗೆ…..


-ಶಿವಶಂಕರ್.ಎಸ್.ಎಸ್.

No comments:

Post a Comment

 ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು