Tuesday 13 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 ಎಲ್ಲರಿಗೂ ಪ್ಲವನಾಮ ಸಂವತ್ಸರ ಯುಗಾದಿ‌ಹಬ್ಬದ ಹಾರ್ದಿಕ ಶುಭಾಶಯಗಳು...

ಪ್ಲವನಾಮ ಸಂವತ್ಸರವು 60 ಸಂವತ್ಸರಗಳಲ್ಲಿ 35 ನೇ ಸಂವತ್ಸರ.

 ಪ್ಲವನಾಮ‌ ಸಂವತ್ಸರ ನಮ್ಮನ್ನು ಎಲ್ಲಾ ಸಂಕಷ್ಟ ಗಳಿಂದ ದೂರ ಮಾಡುತ್ತದೆ ಎಂದು ಆಶಿಸೋಣ.


ಪ್ಲವ ಪದದ ಅರ್ಥಗಳನ್ನು (ಕೃಪೆ : ವೀಕಿಪೀಡಿಯ , ಹಾಗೂ ಚಕ್ರವರ್ತಿ ಶ್ರೀನಿವಾಸ ಗೋಪಾಲಾಚಾರ್ಯರ ಸಂಸ್ಕೃತ- ಕನ್ನಡ ಶಬ್ದಕೋಶ (ಸಂಪುಟ 4)) ನೋಡಿದಾಗ

  1. ಈಜುವುದು, ತೇಲುವುದು
  2. ಹಾರುವುದು, ನೆಗೆಯುವುದು
  3. ಪ್ರವಾಹ
  4. ತೆಪ್ಪ
  5. ಕಪ್ಪೆ
  6. ಕಪಿ
  7. ಶತ್ರು
  8. ಮೀನಿನ ಬಲೆ
  9. ಮೇಷ, ಟಗರು
  10. ಹಿಂತಿರುಗುವುದು, ಹಿಂದಕ್ಕೆ ಹೋಗುವುದು
  11. ಪ್ರೇರೇಪಿಸುವುದು
  12. ಶಬ್ದ 
  13. ಅಂಜೂರದ ಗಿಡ               ‌
ಇತ್ಯಾದಿ ಅರ್ಥಗಳಿವೆ... 

ಗುಣಪದದಿಸಿ

ಪ್ಲವ

ಉತ್ತಮವಾದ, ಶ್ರೇಷ್ಠವಾದ



ಕಷ್ಟಗಳನ್ನು ಈಜಿ,

ಸುಖಗಳಲ್ಲಿ ತೇಲಿ,

ಸಂತೋಷದಿಂದ ಹಾರಿ, ನೆಗೆದು

ದುಃಖಗಳೆಂಬ ಪ್ರವಾಹಗಳನ್ನು ತಾಳ್ಮೆ ಎಂಬ ತೆಪ್ಪದಲ್ಲಿ ತೇಲಿಸಿ,

ಕಪ್ಪೆಯಂತೆ ಕೂಪಮಂಡೂಕವಾಗದೆ,

ಶತ್ರುಗಳು ನಮಗೆ ಹಾಕುವ ಮೀನಿನ‌ಬಲೆಯಂತಹ ಬಲೆಯಲ್ಲಿ ಬೀಳದೆ,

ಟಗರಿನಂತೆ ಧೈರ್ಯವಾಗಿ ಮುನ್ನುಗ್ಗುತ್ತಾ, ಎಲ್ಲೆಲ್ಲೋ ಹಾರಡುವ ಮನಸ್ಸನ್ನ ನಮ್ಮ ಗುರಿಯೆಡೆಗೆ ಹಿಂದಿರುಗಿಸುತ್ತಾ, ಗೆಲ್ಲಲು ನಮ್ಮನ್ನು ನಾವೇ ಪ್ರೇರೇಪಿಸಿ ಕೊಳ್ಳುತ್ತಾ, ನಮ್ಮ ಸಾಧನೆಗಳು ಶಬ್ದ ಮಾಡಿ, ಅಂಜೂರದ ಗಿಡಗಳ ರೀತಿ ಫಲವನ್ನು ಸಮಾಜಕ್ಕೆ ನೀಡಿ, ಕೋತಿ(ಆಂಜನೇಯನ) ಯ ಪ್ರಭುವನ್ನು ಸ್ಮರಿಸುತ್ತಾ, ಉತ್ತಮವಾದ ಹಾಗೂ ಶ್ರೇಷ್ಠವಾದ ಜೀವನವನ್ನು ನಡೆಸುವ ಶಕ್ತಿ ಈ ಪ್ಲವನಾಮ ಸಂವತ್ಸರ ನಮಗೆಲ್ಲಾ ನೀಡಲಿ...

ಮತ್ತೊಮ್ಮೆ ಎಲ್ಲರಿಗೂ ಯುಗಾದಿಹಬ್ಬದ ಹಾರ್ದಿಕ ಶುಭಾಶಯಗಳು....

-ಶಿವಶಂಕರ್. ಎಸ್.ಎಸ್.

No comments:

Post a Comment

 ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು