Sunday 18 March 2018

ಎರಡನೇ ವರ್ಷ......



ಹಳೆಯ ದಿನಗಳ ನೆನಪುಗಳೊಂದಿಗೆ ಹೊಸ ನಾಳೆಗಳಿಗೆ ತೆರೆದುಕೊಳ್ಳುವ, ಸಂಭ್ರಮಿಸುವ ನಿಮ್ಮೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು

      ಬರೆದು ಕೊಳ್ಳಲು ಮಾತ್ರ ಎರಡು ವರ್ಷ ಗಳು ಮುಗಿದು, ಮೂರನೇ ವರ್ಷ ಕ್ಕೆ ನನ್ನ  ' ಹಾಗೇ ಸುಮ್ಮನೆ ' ಬ್ಲಾಗ್ ಕಾಲಿಡುತ್ತಿದೆ.ಆದರೆ ಹೇಳಿ ಕೊಳ್ಳಲು ಏನೂ ಇಲ್ಲ ...ಯಾಕೆಂದರೆ ಕಳೆದ ವರ್ಷ ದಲ್ಲಿ ಒಂದೇ ಒಂದು ಸಾಲು ಬರೆಯಲೂ idea ಬರಲೇ ಇಲ್ಲ..ಕೆಲವು ಸ್ನೇಹಿತರು ಹೇಳಿದರು at least " ದಿನಕ್ಕೊಂದು ಸಿ(ಕ)ಹಿ ಮಾತು " ಇದನ್ನಾದರೂ ನಿನ್ನ ಬ್ಲಾಗಿನಲ್ಲಿ ಹಾಕು ಅಂತ...ಆದರೆ ಏನೋ ಸೋಮಾರಿತನ. ವಿಶೇಷ ಅಂದ್ರೆ ಇತ್ತೀಚೆಗೆ  ದಿನಕ್ಕೊಂದು ಸಿ(ಕ)ಹಿ ಮಾತು ಸಹ ನಿಂತು ಹೋಗಿದೆ..(ಸದ್ಯ ಬಿಡಪ್ಪ ಓದುವುದು ತಪ್ಪಿತು ಅಂದು ಕೊಂಡು ಖುಷಿ ಪಡಬಹುದು..😊 ) .

ನನಗೆ ಕಳೆದ ವರ್ಷ ದಲ್ಲಿ  ಖುಷಿ ಕೊಟ್ಟಂತಹ ಕೆಲವು ಕೆಲಸಗಳ ಬಗ್ಗೆ ಇಲ್ಲಿ ಹೇಳೋಣ ಅನ್ನಿಸ್ತಾ ಇದೆ . ಮೊದಲನೆಯದು ನಮ್ಮ ಲೋಕಸೇವಾನಿರತ ಶ್ರೀ ಕೊಂಗಾಡಿಯಪ್ಪ ಸ್ಮಾರಕ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯ ಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು. ಈ ಕಾರ್ಯಕ್ರಮಕ್ಕಾಗಿ ನಾವು ಮಾಡಿದ ಕೆಲಸಗಳಂತೂ ಮನದಲ್ಲಿ ಯಾವಾಗಲೂ ಹಸಿರಾಗಿರುತ್ತದೆ 😊😊. ಸುವರ್ಣ ಮಹೋತ್ಸವ ಕಾರ್ಯ ಕ್ರಮದಲ್ಲಿ ನಾವು ಸಕ್ರಿಯವಾಗಿ ಪಾಲ್ಗೊಳ್ಳಲು ನಮಗೆ ಅವಕಾಶ ನೀಡಿದ ನಮ್ಮ ಆಡಳಿತ ಮಂಡಲಿ ಹಾಗೂ ಕಾರ್ಯಕ್ರಮ ಸಂಯೋಜಕರಾದ ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಿ ಎನ್  ಶಶಿಧರ್ ಸರ್ ರವರಿಗೆ ಧನ್ಯವಾದಗಳನ್ನು ಅರ್ಪಿಸಲೇಬೇಕು. ಈ ಕಾರ್ಯಕ್ರಮದಲ್ಲಿ ನನಗೆ  ಪ್ರೊ. ಬಿ.ಎನ್.ಶಶಿಧರ್ ಸರ್,  ಪ್ರೊ. ಎಂ.ಜಿ .ಅಮರನಾಥ್ ಸರ್,  ಪ್ರೊ. ಚಂದ್ರಪ್ಪ ಸರ್ ,  ನಮ್ಮ ಎಸ್.ಕೆ.ಪಿ.ಯು.ಸಿ ಯ ಪಿ.ಗೋವಿಂದರಾಜು ಸರ್ , ನಮ್ಮ ಪ್ರೌಢ ಶಾಲೆಯ ಉಪಾಧ್ಯಾಯರಾದ ಶ್ರೀ ಎ.ಜಯರಾಂ ಸರ್,  ಇವರೆಲ್ಲರ ಜೊತೆ ಬಹಳ ಹತ್ತಿರದಿಂದ ಕೆಲಸ ಮಾಡುವ ಅವಕಾಶ ಸಿಕ್ಕಿತು.ಎಲ್ಲರಿಂದ ಕಲಿತದ್ದು ನಿಜವಾಗಲೂ ಬಹಳಷ್ಟಿದೆ. ಸಾಕ್ಷ್ಯ ಚಿತ್ರ ಚಿತ್ರೀಕರಣ ಸಂದರ್ಭಗಳಲ್ಲಿ ನಮ್ಮ ಸಂಸ್ಥೆಯ ಎಲ್ಲಾ ಶಾಲಾ ಕಾಲೇಜುಗಳ  ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೀಡಿದ ಸಹಕಾರ ಮರೆಯಲು ಸಾಧ್ಯವಿಲ್ಲ. ಸಾಕ್ಷ್ಯ ಚಿತ್ರದ ನಿರ್ದೇಶಕರಾದ ಸೂರ್ಯ ಸಾರ್ ,ಕ್ಯಾಮರಮೆನ್ ರತೀಶ್ ಸಾರ್, ಚಂದ್ರು ಸರ್ ನಮ್ಮನ್ನು ಬೇರೆ ಲೋಕಕ್ಕೇ ಕರೆದು ಕೊಂಡು ಹೋಗಿದ್ದರು..😊

ನನಗೆ ಖುಷಿ ನೀಡಿದ ಮತ್ತೊಂದು ಕೆಲಸ (ನನ್ನ ಪಾಲಿಗೆ ಒಂದು ಸಾಧನೆ) ಎಂದರೆ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳಿಗೆ ಗಣಿತ ವಿಷಯದ ಪ್ರಶ್ನೆ ಗಳ ಒಂದು ಪುಸ್ತಕ Question bank of 2 nd pu Mathematics ರೆಡಿ ಮಾಡಿದ್ದು. ಇದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನ ಆಗಿದೆ ಅಂದು ಕೊಂಡಿದ್ದೇನೆ. ಈ ಪ್ರಶ್ನೆ ಪತ್ರಿಕೆಗಳ ಪುಸ್ತಕದಲ್ಲಿ Chapter wise questions , model papers, PU Board Model papers, Previous years Annual and Supplementary Papers ಗಳು ಇದ್ದವು....ಈ ವರ್ಷ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಮೇತ ಪುಸ್ತಕ ರೆಡಿ ಮಾಡಬೇಕು ಎಂಬ ಆಸೆ ಇದೆ😊..

ಇನ್ನು ಕೆಲವೇ ದಿನಗಳಲ್ಲಿ  SSS CIRCLE ಎಂಬ website ಸಹ ಪ್ರಾರಂಭವಾಗಲಿದೆ. ಈ website ಪಿಯು ವಿಜ್ಞಾನ  ವಿದ್ಯಾರ್ಥಿಗಳಿಗೆ ಹೆಚ್ಚು ಉಪಯೋಗ ಆಗುವ ರೀತಿಯಲ್ಲಿ ಇರುತ್ತದೆ.

 ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ಬೆಲೆಯಲ್ಲಿ ಉತ್ತಮವಾದ ಸಿ ಇ ಟಿ ಪುಸ್ತಕಗಳನ್ನು ನೀಡ ಬೇಕೆಂಬ ಆಸೆ ಇದೆ. ಈ ಕೆಲಸಕ್ಕೆ ಬೆನ್ನೆಲುಬಾಗಿ ನವೀನ್, ವೇಣು, ಸುಬ್ರಹ್ಮಣ್ಯ, ಶೇಖರ್, ಶ್ರೀಕಾಂತ್ ನಿಂತಿದ್ದಾರೆ. ಆದಷ್ಟು ಬೇಗ ಈ ಕೆಲಸವನ್ನೂ ಮುಗಿಸುವೆ ಎಂಬ ನಂಬಿಕೆ ಇದೆ....

ಈ ಕೆಲಸಗಳ ಮಧ್ಯೆ ಆಗಾಗ ನಿಮ್ಮ ತಲೆತಿನ್ನುವುದನ್ನು ಖಂಡಿತಾ ಬಿಡುವುದಿಲ್ಲ..🙃..

ಮತ್ತೊಮ್ಮೆ ತಮಗೂ ಹಾಗೂ ತಮ್ಮ ಕುಟುಂಬದವರಿಗೂ ಶ್ರೀ ವಿಳಂಬಿ ನಾಮ ಸಂವತ್ಸರದ ಹಾಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು..

ಧನ್ಯವಾದಗಳು..




26 comments:

  1. Don't look back ...just go ahead.... U

    ReplyDelete

  2. Congratulations sir good luck

    ReplyDelete
  3. Congratulations for having completed 2nd successful year Sir. It's great to hear that you have so many dreams for the welfare of the students community. I hope and wish that you will be surely more active in the coming years. May God bless you and May all your dreams come true.

    ReplyDelete
  4. All the best...
    Many best come ahead in your life

    ReplyDelete
  5. All the very best sir. :-)

    ReplyDelete
  6. ನೆನಪುಗಳಿಗೆ ಸ್ಥಳ ಮಾಡಿಕೊಟ್ಟದ್ದು ಚೆನ್ನಾಗಿದೆ ಸರ್. ನಿಮ್ಮ ವೆಬ್ ಸೈಟ್ ಗಾಗಿ ಕಾಯುವವರ ಸಾಲಿನಲ್ಲಿ ನಾನು ಇದ್ದೇನೆ. ನಿಮ್ಮ ಹಾಗು ನಿಮ್ಮ ತಂಡದ ಪಾಠಗಳನ್ನು ಯೂ ಟ್ಯೂಬ್ ನಲ್ಲಿ ನೋಡಬಯಸುತ್ತೇನೆ. ಆ ರೀತಿಯ ಸಾಹಸಗಳಿಗೆ ಮುಂದಾಗುತ್ತಿರುವುದು ಸಂತಸ ತಂದಿದೆ. ಒಳ್ಳೆಯದಾಗಲಿ ಸರ್. ನಿಮ್ಮ ಉತ್ಸಾಹಕ್ಕೆ ಸದಾ ಯಶಸ್ಸು ಸಿಗುವಂತಾಗಲಿ.
    ಯುಗಾದಿ ವಿನೂತನ ಹಾದಿಗಳನ್ನು ಬಿಚ್ಚಿಡಲು ಮೊದಲಾಗಲಿ ಎಂದು ಹಾರೈಸುತ್ತೇನೆ.ಶುಭವಾಗಲಿ ಸರ್. ನಿಮಗೂ ಯುಗಾದಿಯ ಶುಭಾಶಯ....

    ReplyDelete
    Replies
    1. ಧನ್ಯವಾದಗಳು ನಾಗರಾಜ್....

      Delete
  7. This comment has been removed by the author.

    ReplyDelete

 ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು